ಶ್ರೀಕೃಷ್ಣ ಜನ್ಮಸ್ಥಾನ ಮಥುರಾದಲ್ಲಿ ಕುಣಿಯಲು ರೆಡಿಯಾದ ಸನ್ನಿ ಲಿಯೋನ್, ಕೆರಳಿ ಕೆಂಡವಾದ ಸಾಧು ಸಂತರು
ಸನ್ನಿ ಲಿಯೋನ್ ಎಂಬ ಹೆಸರಿಗೆ ಸಮ್ಮೋಹಕವಾದೊಂದು ಸೆಳೆತವಿದೆ. ಅದಕ್ಕೆ ಕಾರಣವಾದ ಏನೇ ಇರಬಹುದು. ಆದರೆ ಇವತ್ತು ಸನ್ನಿ ಲಿಯೋನ್ ಬಾಲಿವುಡ್‌ನಲ್ಲಿ ಅಷ್ಟೇ ಅಲ್ಲದೇ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಕೂಡ ತಮ್ಮ ಅಸ್ತಿತ್ವವನ್ನ ಕಂಡುಕೊಂಡಿದ್ದಾರೆ. ನಾಯಕಿಯಾಗಿ ನೆಲೆಯೂರಿದ್ದಾರೆ. ಇವತ್ತು ಸನ್ನಿ ಲಿಯೋನ್ ಬಳಿ ಕೈ ತುಂಬಾ ಅವಕಾಶಗಳಿವೆ. ದಕ್ಷಿಣದಿಂದ ಉತ್ತರದವರೆಗೆ ಅಭಿಮಾನಿ ಬಳಗ ಇದೆ.
ಇಂಥಾ ಸನ್ನಿ ಲಿಯೋನ್ ಅವರ ವಿರುದ್ಧ ಸದ್ಯ ಆಕ್ರೋಶದ ಅಲೆ ಎದ್ದಿದೆ. ಹೌದು, ಸದ್ಯ ಭಾರತದೆಲ್ಲೆಡೆ ಹೊಸ ವರ್ಷದ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. 2026 ವೆಲ್‌ಕಂ ಮಾಡಲು ಬಹುದೊಡ್ಡ ಸಮೂಹ ತುದಿಗಾಲಿನಲ್ಲಿ ನಿಂತಿದೆ. ಹಲವರು ಈಗಾಗಲೇ ಪಾರ್ಟಿ ಮೂಡಿನಲ್ಲಿದ್ದಾರೆ. ತಮ್ಮ ತಮ್ಮ ಸ್ನೇಹಿತರ ಜೊತೆ ಮನೆಯವರ ಜೊತೆ ಕುಣಿದು ಕುಪ್ಪಳಿಸಲು ರೆಡಿಯಾಗಿದ್ದಾರೆ.

ಇನ್ನು .. ಎಲ್ಲರಿಗೆ ಗೊತ್ತಿರುವಂತೆ ಹಣ ಎಂದರೆ ಹೆಣ ಕೂಡ ಬಾಯಿ ಬೀಡುವ ಕಾಲ ಇದು. ಇಂತಹ ಕಾಲದಲ್ಲಿ ಚಿತ್ರರಂಗದವರು ಕೂರುವುದಕ್ಕೆ, ನಿಲ್ಲುವುದಕ್ಕೆ ಹಣ ಪಡೆಯುತ್ತಾರೆ. ಕೇಳಿದಷ್ಟು ದುಡ್ಡು ನೀಡಿದರೆ ಸಾಕು, ಹೇಳಿದ ಸಮಯಕ್ಕೆ ಸರಿಯಾಗಿ ಬಂದು ಸಭೆ-ಸಮಾರಂಭದಲ್ಲಿ ಡ್ಯಾನ್ಸ್ ಕೂಡ ಮಾಡಿ ಹೋಗುತ್ತಾರೆ. ಹಣದಾಸೆಗೆ ಅಪರಿಚಿತರ ಮುಂದೆ ಕುಣಿಯುತ್ತಾರೆ. ಅದರಲ್ಲಿಯೂ ಬಾಲಿವುಡ್‌ನಲ್ಲಿ ಈ ಸಂಪ್ರದಾಯ ತುಸು ಹೆಚ್ಚೇ ಇದೆ.
ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ಸದ್ಯ ಹೊಸ ವರ್ಷಕ್ಕೆ ಬಂದು ಕುಣಿಯುವಂತೆ ಮಥುರಾದಲ್ಲಿ ಸನ್ನಿ ಲಿಯೋನ್ ಅವರಿಗೆ ಆಹ್ವಾನವನ್ನು ನೀಡಲಾಗಿದೆ. ಸನ್ನಿ ಲಿಯೋನ್ ಕೂಡ ಖುಷಿ ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಆದರೆ ಈ ಕಾರ್ಯಕ್ರಮಕ್ಕೆ ಸಾಧು ಸಂತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಹೌದು, ಶ್ರೀಕೃಷ್ಣ ಜನ್ಮಭೂಮಿಯಲ್ಲಿ ಮಥುರಾದಲ್ಲಿ ಹೊಸ ವರ್ಷಕ್ಕೆ ನಟಿ ಸನ್ನಿ ಲಿಯೋನ್ ಅವರ ಕಾರ್ಯಕ್ರಮಕ್ಕೆ ಸಾಧು ಸಂತರು ವಿರೋಧ ವ್ಯಕ್ತಪಡಿಸಿದ್ದಾರೆ. ಮಥುರಾದ ಹೋಟೆಲ್ ಲಲಿತಾ ಗ್ರೌಂಡ್ ಮತ್ತು ಹೋಟೆಲ್ ಟಾ ಟ್ರಕ್‌ನಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಈ ಕೂಡಲೇ ರದ್ದುಗೊಳಿಸಬೇಕೆಂದು ಒತ್ತಾಯಿಸಿ ಜಿಲ್ಲಾಡಿಳತಕ್ಕೆ ಪತ್ರವನ್ನು ಕೂಡ ಬರೆದಿದ್ದಾರೆ.
ಈ ಕುರಿತು ಮಾತನಾಡಿರುವ ಮುಖ್ಯ ಅರ್ಜಿದಾರರಾದ ದಿನೇಶ್ ಫಲಾಹಾರಿ ಮಹಾರಾಜ್, ಈ ಧರ್ಮಕ್ಷೇತ್ರವನ್ನು ಸನ್ನಿ ಲಿಯೋನ್ ಅವರ ಅಸಭ್ಯ ಮತ್ತು ಅಶ್ಲೀಲ ಕಾರ್ಯಕ್ರಮದ ಮೂಲಕ ಕಳಂಕಿತಗೊಳಿಸಲು ನಾವು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಛೋಟೆ ಪುಂಡರೀಕ್ ಮಹಾರಾಜ್ ಕೂಡ ಸನ್ನಿ ಲಿಯೋನ್ ಮತ್ತು ಕಾರ್ಯಕ್ರಮದ ಆಯೋಜಕರ ವಿರುದ್ದ ಕಿಡಿ ಕಾರಿದ್ದು ಧಾರ್ಮಿಕ ಭಾವನೆಗಳನ್ನು ಪ್ರಚೋದಿಸಲು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಸಂಚು ರೂಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ನಮ್ಮ ಆರಾಧ್ಯ ದೈವ ಶ್ರೀಕೃಷ್ಣನ ಜನ್ಮ ಭೂಮಿ ಇದು, ಈ ನೆಲದಲ್ಲಿ ಹಲವು ಪವಾಡಗಳನ್ನು ಮಾಡಿದ್ದಾರೆ. ಇಡೀ ವಿಶ್ವದೆಲ್ಲೆಡೆ ಇರುವ ಸನಾತನಿಗಳು ಇಲ್ಲಿ ಬಂದು ಪೂಜೆ-ಭಜನೆ ಮಾಡುತ್ತಾರೆ, ಪೂಜೆ ಮಾಡುತ್ತಾರೆ, ಎಂದು ಜಿಲ್ಲಾಡಿಳಿತಕ್ಕೆ ಬರೆದ ಪತ್ರದಲ್ಲಿ ಉಲ್ಲೇಖಿಸಿರುವ ದಿನೇಶ್ ಫಲಾಹಾರಿ ಮಹಾರಾಜ್ಇಂತಹ ಪವಿತ್ರ ನೆಲದಲ್ಲಿ ಇಂತಹ ಅಶ್ಲೀಲ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.ಸನ್ನಿ ಲಿಯೋನ್ ಒಬ್ಬ ನೀಲಿ ತಾರೆಯಾಗಿದ್ದು ಈ ಕಾರ್ಯಕ್ರಮವನ್ನು ಕೂಡಲೇ ರದ್ದುಗೊಳಿಸಿ ಕಾರ್ಯಕ್ರಮದ ಆಯೋಜಕರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಮನವಿಯನ್ನು ಮಾಡಿದ್ದಾರೆ.
ಸದ್ಯ ವಿರೋಧದ ನಡುವೆಯೂ ಕಾರ್ಯಕ್ರಮದ ಕುರಿತು ಪ್ರಚಾರವನ್ನು ಆಯೋಜಕರು ಮಾಡುತ್ತಿದ್ದಾರೆ. ಮುಂದೇನಾಗುತ್ತೆ..? ಸನ್ನಿ ಲಿಯೋನ್ ಅವರ ಈ ಕಾರ್ಯಕ್ರಮ ವಿರೋಧದ ನಡುವೆ ನಡೆಯುತ್ತಾ..? ಅಥವಾ ರದ್ದಾಗುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











