twitter
    For Quick Alerts
    ALLOW NOTIFICATIONS  
    For Daily Alerts

    ನನ್ನ ವಿರುದ್ಧ ಸಾಕ್ಷ್ಯವೇ ಇಲ್ಲವೆಂದ ರಾಜ್ ಕುಂದ್ರಾ, ಜಾಮೀನಿಗೆ ಮನವಿ

    |

    ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಕೆಲವು ದಿನಗಳ ಹಿಂದಷ್ಟೆ ಮುಂಬೈ ಪೊಲೀಸರು ರಾಜ್ ಕುಂದ್ರಾ ವಿರುದ್ಧ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

    ದೋಷಾರೋಪ ಪಟ್ಟಿ ಸಲ್ಲಿಸಿದ ಬಳಕ ಪ್ರಕರಣದ ಬಗ್ಗೆ ಹಲವು ವಿಷಯಗಳು ಬಹಿರಂಗಗೊಳ್ಳುತ್ತಿವೆ. 43 ಮಂದಿ ಪ್ರಕರಣದ ಕುರಿತು ಹೇಳಿಕೆಗಳನ್ನು ನೀಡಿದ್ದು, ಅದರಲ್ಲಿ ಶಿಲ್ಪಾ ಶೆಟ್ಟಿ ಹೇಳಿಕೆಯೂ ಸೇರಿದೆ.

    ದೋಷಾರೋಪ ಪಟ್ಟಿ ಸಲ್ಲಿಕೆ ಆಗುತ್ತಿದ್ದರಂತೆ ರಾಜ್ ಕುಂದ್ರಾ ಮರಳಿ ನ್ಯಾಯಾಲಯದ ಮೊರೆ ಹೋಗಿದ್ದು, ತಮಗೆ ಜಾಮೀನು ನೀಡಬೇಕೆಂದು ಮನವಿ ಮಾಡಿದ್ದಾರೆ. ದೋಷಾರೋಪ ಪಟ್ಟಿಯಲ್ಲಿ ಪೊಲೀಸರು ದಾಖಲಿಸಿರುವ ಅಂಶಗಳ ಆಧಾರದ ಮೇಲೆಯೇ ರಾಜ್ ಕುಂದ್ರಾ ಜಾಮೀನಿಗೆ ಮನವಿ ಸಲ್ಲಿಸಿದ್ದು, ನನ್ನ ಮೇಲೆ ಸಾಕ್ಷ್ಯಗಳೇ ಇಲ್ಲ ಎಂದಿದ್ದಾರೆ.

    ''ನನ್ನ ವಿರುದ್ಧದ ತನಿಖೆ ಪೂರ್ಣಗೊಳಿಸಿ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ ಹಾಗಾಗಿ ನನಗೆ ಜಾಮೀನು ನೀಡಬೇಕು'' ಎಂದು ಮುಂಬೈ ಹೈಕೋರ್ಟ್ ಅನ್ನು ರಾಜ್ ಕುಂದ್ರಾ ಮನವಿ ಮಾಡಿದ್ದಾರೆ.

    ಈಗ ಸಲ್ಲಿಸಲಾಗಿರುವ ಜಾಮೀನು ಅರ್ಜಿಯಲ್ಲಿ, 'ಹಾಟ್ಸ್‌ಶಾಟ್ಸ್ ಅಪ್ಲಿಕೇಶನ್‌ಗೆ ಸಂಬಂಧಿಸಿದ ಸಂಸ್ಥೆಯಲ್ಲಿ ರಾಜ್ ಕುಂದ್ರಾ ಕೇವಲ ಹತ್ತು ತಿಂಗಳಷ್ಟೆ ಇದ್ದರು. ಆ ಸಮಯದಲ್ಲಿ ಕುಂದ್ರಾ ಯಾರನ್ನು ಭೇಟಿಯಾಗಿಲ್ಲ. ಸಂಸ್ಥೆಗೆ, ಅಪ್ಲಿಕೇಶನ್‌ಗೆ ಸಂಬಂಧಿಸಿದ ಯಾರೊಬ್ಬರನ್ನೂ ಭೇಟಿಯಾಗಿಲ್ಲ'' ಎಂದಿದ್ದಾರೆ.

    ಒಪ್ಪಿಗೆ ಇಲ್ಲದೆ ವಿಡಿಯೋ ಚಿತ್ರೀಕರಣ ಮಾಡಿಲ್ಲ: ಕುಂದ್ರಾ

    ಒಪ್ಪಿಗೆ ಇಲ್ಲದೆ ವಿಡಿಯೋ ಚಿತ್ರೀಕರಣ ಮಾಡಿಲ್ಲ: ಕುಂದ್ರಾ

    ಅಶ್ಲೀಲ ವಿಡಿಯೋ ಚಿತ್ರೀಕರಣದ ಬಗ್ಗೆಯೂ ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದ್ದು, ದೋಷಾರೋಪ ಪಟ್ಟಿಯಲ್ಲಿ 'ಸಂತ್ರಸ್ತೆ'ಯರು ಎಂದು ಹೇಳಲಾಗಿರುವ ನಟಿಯರು ವಯಸ್ಕರು, ಅಪ್ರಾಪ್ತರಲ್ಲ. ಅವರ ಅನುಮತಿ ಪಡೆದೇ ವಿಡಿಯೋ ಮಾಡಿರುವುದು. ಹಾಗು ಅವು ಯಾವುವೂ ಅಶ್ಲೀಲ ವಿಡಿಯೋಗಳಲ್ಲ'' ಎಂದು ಹೇಳಲಾಗಿದೆ. ಅಲ್ಲದೆ ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ರಾಜ್ ಕುಂದ್ರಾ ವಿರುದ್ಧ ವ್ಯಕ್ತಿಗಳ ಹೇಳಿಕೆ ಹೊರತುಪಡಿಸಿದರೆ ಯಾವುದೇ ಸಾಕ್ಷ್ಯ ಇಲ್ಲ'' ಎಂದಿದ್ದಾರೆ.

    ಶಿಲ್ಪಾ ಶೆಟ್ಟಿ ಬಳಿ ಕುಂದ್ರಾ ಏನು ಹೇಳಿದ್ದರು?

    ಶಿಲ್ಪಾ ಶೆಟ್ಟಿ ಬಳಿ ಕುಂದ್ರಾ ಏನು ಹೇಳಿದ್ದರು?

    ಮುಂಬೈ ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಉದ್ಯಮ ಪಾಲುದಾರ ಸೌರಭ್, ರಾಜ್ ಕುಂದ್ರಾ ನಿರ್ಮಿಸಿದ್ದ ಅಶ್ಲೀಲ ವಿಡಿಯೋದಲ್ಲಿ ನಟಿಸಿರುವ ನಟಿಯರು ಇನ್ನೂ ಹಲವರು ಹೇಳಿಕೆಗಳನ್ನು ನೀಡಿದ್ದಾರೆ. ಪ್ರಕರಣದ ಬಗ್ಗೆ ಹೇಳಿಕೆ ನೀಡಿರುವ ಶಿಲ್ಪಾ ಶೆಟ್ಟಿ, ''ನಾನು 2020ರಲ್ಲಿಯೇ ವೈಯಕ್ತಿಕ ಕಾರಣಗಳಿಂದಾಗಿ ವಿಯಾನ್ ಸಂಸ್ಥೆಯಿಂದ ರಾಜೀನಾಮೆ ನೀಡಿ ಹೊರಗೆ ಬಂದೆ. ನನಗೆ ಹಾಟ್‌ಶಾಟ್ಸ್ ಅಥವಾ ಬಾಲಿಲೈಫ್ ಅಪ್ಲಿಕೇಶನ್‌ಗಳ ಬಗ್ಗೆ ಗೊತ್ತಿಲ್ಲ. ಗೆಹನಾ ವಸಿಷ್ಠ ಬಂಧನವಾದಾಗ ನಾನು ರಾಜ್ ಕುಂದ್ರಾ ಅನ್ನು ಪ್ರಶ್ನೆ ಮಾಡಿದೆ. ಆಗ ಕುಂದ್ರಾ, 'ಗೆಹನಾ ಮತ್ತು ಕೆಲವು ನಟಿಯರು ಯಾವುದೋ ವಿಡಿಯೋ ತೆಗೆದುಕೊಂಡಿದ್ದ ಕಾರಣ ಬಂಧವಾಗಿದೆ'' ಎಂದಷ್ಟೆ ಹೇಳಿದ್ದರು ಎಂದಿದ್ದಾರೆ.

    ಪೋರ್ನ್‌ ವಿಡಿಯೋಗಾಗಿಯೇ ಅಪ್ಲಿಕೇಶನ್ ನಿರ್ಮಾಣ

    ಪೋರ್ನ್‌ ವಿಡಿಯೋಗಾಗಿಯೇ ಅಪ್ಲಿಕೇಶನ್ ನಿರ್ಮಾಣ

    ರಾಜ್ ಕುಂದ್ರಾರ ಉದ್ಯಮ ಪಾಲುದಾರನಾಗಿದ್ದ ಸೌರಭ್ ಕುಶ್ವಾ ಪೊಲೀಸರಿಗೆ ಹೇಳಿಕೆ ನೀಡಿದ್ದು, ''ಆರ್ಮ್ಸ್ ಪ್ರೈಂ ಲಿಮಿಟೆಡ್‌ನಲ್ಲಿ 35 ರಷ್ಟು ಪಾಲುದಾರಿಕೆ ನನಗೆ ಇತ್ತು. ಅದೇ ಸಂಸ್ಥೆಯ ಮೂಲಕ ಹಾಟ್‌ಶಾಟ್ಸ್‌ ಅಪ್ಲಿಕೇಶನ್ ನಿರ್ಮಿಸಲಾಯ್ತು. ಆ ಅಪ್ಲಿಕೇಶನ್ ಅನ್ನು ರಾಜ್ ಕುಂದ್ರಾ ಪ್ರಾರಂಭ ಮಾಡಿದ್ದೇ ಪೋರ್ನ್ ವಿಡಿಯೋ ನಿರ್ಮಿಸಿ ಮಾರಾಟ ಮಾಡಲೆಂದು'' ಎಂದಿದ್ದಾರೆ. ''ಸಂಸ್ಥೆಯಲ್ಲಿ ನನ್ನದು ಪಾಲುದಾರಿಕೆ ಇತ್ತಾದರೂ ಹಾಟ್‌ಶಾಟ್ಸ್‌ಗೆ ವಿಡಿಯೋ ಅಪ್‌ಲೋಡ್ ಮಾಡುವುದು ಅದನ್ನು ಬದಲಾಯಿಸುವುದು ಇನ್ನಿತರೆ ನಿಯಂತ್ರಣಗಳು ರಾಜ್ ಕುಂದ್ರಾ ಕೈಯಲ್ಲಿಯೇ ಇದ್ದವು'' ಎಂದಿದ್ದಾರೆ ಸೌರಭ್.

    ಇನ್ನಷ್ಟು ವಿಷಯಗಳು ಹೊರಗೆ ಬರಲಿವೆ

    ಇನ್ನಷ್ಟು ವಿಷಯಗಳು ಹೊರಗೆ ಬರಲಿವೆ

    'ಹಾಟ್‌ಶಾಟ್ಸ್‌ನಿಂದ ಬರುತ್ತಿದ್ದ ಲಾಭವನ್ನು ಕುಂದ್ರಾ ಲಂಡನ್‌ನ ಸಂಸ್ಥೆಯೊಂದಕ್ಕೆ ವರ್ಗಾವಣೆ ಮಾಡುತ್ತಿದ್ದಿದ್ದು, ಲಾಭ ಹಂಚಿಕೆ ಮಾಡುತ್ತಿದ್ದಿದ್ದು, ಹಾಟ್‌ಶಾಟ್ಸ್ ಅನ್ನು ಲಂಡನ್‌ನ ತನ್ನದೇ ಸೋದರ ಸಂಬಂಧಿಯ ಸಂಸ್ಥೆಗೆ ಮಾರಾಟ ಮಾಡುವ ಹಿಂದಿನ ದಿನ ತನ್ನ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು, ರಾಜ್ ಕುಂದ್ರಾ, ಸೌರಭ್‌ಗೆ ಬರೆದ ಇ-ಮೇಲ್‌ಗಳು, ಮಾಡಿದ ಹಣಕಾಸು ವ್ಯವಹಾರ ಇನ್ನೂ ಹಲವು ವಿಷಯಗಳು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿಷಯಗಳು ಹೊರಗೆ ಬರಲಿವೆ.

    English summary
    Businessman Raj Kundra approched court for bail in indecent video case. He said there is no evidence against me, all videos were shot with the actors consent.
    Sunday, September 19, 2021, 17:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X