»   » ದಯವಿಟ್ಟು ನನ್ನ ಸಿನಿಮಾ ನೋಡಿ, ನಾನು ತಪ್ಪು ಮಾಡಿಲ್ಲ: ಶಾರುಖ್

ದಯವಿಟ್ಟು ನನ್ನ ಸಿನಿಮಾ ನೋಡಿ, ನಾನು ತಪ್ಪು ಮಾಡಿಲ್ಲ: ಶಾರುಖ್

Posted By:
Subscribe to Filmibeat Kannada

ನಿರ್ದೇಶಕ ರೋಹಿತ್ ಶೆಟ್ಟಿ ಆಕ್ಷನ್-ಕಟ್ ಹೇಳಿರುವ 'ದಿಲ್ವಾಲೆ' ಸಿನಿಮಾಕ್ಕೆ ತಡೆ ಒಡ್ಡಿದ್ದು, ಮಾತ್ರವಲ್ಲದೇ ಸಿನಿಮಾ ನೋಡಲು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಬಾರದೇ ಇರೋದನ್ನು ನೋಡಿ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಅವರು ಭಾರಿ ಬೇಸರ ವ್ಯಕ್ತಪಡಿಸಿದ್ದಾರೆ.

'ನಾನು ಕ್ಷಮೆ ಕೋರಬೇಕಾದಂತಹ ಯಾವುದೇ ಹೇಳಿಕೆ ನೀಡಿಲ್ಲ. 'ಸಹಿಷ್ಣುತೆ' ಕುರಿತ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡವರು ಹಾಗೂ ತಪ್ಪಾಗಿ ಗ್ರಹಿಸಿದವರು ನಡೆಸಿದ ಪ್ರತಿಭಟನೆಯಿಂದ ಚಿತ್ರಕ್ಕೆ ಹೊಡೆತ ಬಿದ್ದಿದೆ' ಎಂದು ಬಾಲಿವುಡ್ ನಟ ಶಾರುಖ್ ಖಾನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.[ದಿಲ್ವಾಲೆ: ಶಾರುಖ್ ಚಿತ್ರಕ್ಕೆ ವಿಮರ್ಶಕರಿಂದ ಚಾಟಿಯೇಟು]

No need to clarify says Actor Shah Rukh Khan

'ಒಂದು ವೇಳೆ ನಾನು ಕ್ಷಮೆ ಕೋರುವಂತ ಹೇಳಿಕೆ ನೀಡಿದಿದ್ದರೆ, ನನ್ನ ತಪ್ಪಿನ ಅರಿವು ಮೊದಲು ನನಗೆ ಆಗುತ್ತಿತ್ತು. ಹಾಗೊಂದು ವೇಳೆ ನಾನಾಡಿದ ಮಾತಿನಿಂದ ಯಾರಿಗಾದರೂ ಬೇಸರ ಆಗಿದ್ದರೆ, ನಾನು ಕ್ಷಮೆ ಯಾಚಿಸುತ್ತೇನೆ.

ದಯವಿಟ್ಟು ಚಿತ್ರ ನೋಡಿ ಆನಂದಿಸಿ. ಚಿತ್ರ ನನ್ನೊಬ್ಬನದಲ್ಲ. ಸಾವಿರಾರು ಮಂದಿ ಬೆವರು ಸುರಿಸಿದ ಪರಿಶ್ರಮ ಈ ಚಿತ್ರದಲ್ಲಿದೆ. ಎಂದು ಕಿಂಗ್ ಖಾನ್ ಮನವಿ ಮಾಡಿದ್ದಾರೆ.['ಬೆಂಗಳೂರಿನಲ್ಲಿ ನನಗೆ ಬದುಕಲು ತುಂಬಾ ಆಸೆ' ಎಂದವರು ಯಾರು?]

No need to clarify says Actor Shah Rukh Khan

'ಸುಮಾರು 25 ವರ್ಷಗಳಿಂದ ಚಿತ್ರರಂಗ ಕ್ಷೇತ್ರದಲ್ಲಿದ್ದೇನೆ, ಜಾತಿ, ಧರ್ಮ, ಪ್ರಾಂತ್ಯ, ವರ್ಗ, ಲಿಂಗ, ಭೇದವಿಲ್ಲದೆ ಈ ದೇಶದ ಜನ ನನಗೆ ಅಪಾರ ಪ್ರೀತಿ, ವಿಶ್ವಾಸ ತೋರಿದ್ದಾರೆ. ನನ್ನ ಚಿತ್ರ ಜನರನ್ನು ತಲುಪದಿದ್ದಾಗ ಬಹಳ ಬೇಸರ ಆಗುತ್ತದೆ'.

'ಜನರ ಪ್ರೀತಿಯನ್ನು ಹಿಂದಿರುಗಿಸಲು ಇರುವ ಏಕೈಕ ಮಾರ್ಗ ಎಂದರೆ ಅದು ಸಿನಿಮಾ ಒಂದೇ, ದಯವಿಟ್ಟು ಚಿತ್ರ ನೋಡಿ ಗೆಲ್ಲಿಸಿ ಎಂದು ಶಾರುಖ್ ಖಾನ್ ಅವರು ತಮ್ಮ ಅಭಿಮಾನಿಗಳಲ್ಲಿ ಮತ್ತು ಪ್ರೇಕ್ಷಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

English summary
More than a month after the controversy over his remarks on intolerance, actor Shah Rukh Khan today said his comments were "misconstrued" and that he did not say anything for which he should apologise.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada