ನನ್ನ ಬಳಿ ಹಣ, ಕೀರ್ತಿ ಎಲ್ಲವೂ ಇದೆ ಆದರೆ ನೆಮ್ಮದಿ ಇಲ್ಲ ; ಚಿತ್ರರಂಗಕ್ಕೆ ಏಕಾಏಕಿ ಗುಡ್ ಬೈ ಹೇಳಿದ ನಟಿ..!
ಸೆಲೆಬ್ರಿಟಿಗಳ ಹತ್ತಿರ ಎಲ್ಲವೂ ಇರುತ್ತೆ. ಆದರೆ .. ಬದುಕಲು ಬೇಕಾಗುವ ಮೂಲವಸ್ತುವಾದ ಸಂತೋಷ ಅವರಿಗೆ ಇರಲ್ಲ. ಯಾಕೆಂದರೆ.. ಆ ಸಂತೋಷವನ್ನು ಖ್ಯಾತಿ ಮತ್ತು ಸಾರ್ವಜನಿಕತೆ ಕಸಿದುಕೊಂಡು ಬಿಟ್ಟಿರುತ್ತೆ. ಇನ್ನೂ.. ಕೆಲವೊಮ್ಮೆ ಸೆಲೆಬ್ರಿಟಿ ಫಿಗರ್ ಎಂಬ ಭಾರ ಮಾನಸಿಕ ನೆಮ್ಮದಿಗೆ ಕೊಳ್ಳಿಯನ್ನೂ ಇಡುತ್ತೆ. ಯಶಸ್ಸು ದಾರುಣತೆಗಳನ್ನು ನಿರ್ಮಾಣ ಮಾಡುತ್ತೆ. ಆಗ ಈ ಬಣ್ಣದ ಲೋಕದ ಸಹವಾಸವೇ ಸಾಕು ಎಂದು ಅನ್ಸುತ್ತೆ. ಇದಕ್ಕೆ ಸೋನಿಯಾ ಬನ್ಸಲ್ ಸದ್ಯದ ಉದಾಹರಣೆ.
ಹೌದು, ಸೋನಿಯಾ ಬನ್ಸಲ್.. ಬಿಗ್ ಬಾಸ್‌ನ ಮಾಜಿ ಸ್ಫರ್ಧಿ. ಹಿಂದಿಯ ಬಿಗ್ ಬಾಸ್ ಸೀಸನ್ 17ರಲ್ಲಿ ಭಾಗವಹಿಸಿದ್ದ ಸೋನಿಯಾ ಬನ್ಸಲ್ ತೆಲುಗಿನಲ್ಲಿ ಬಂದ ಧೀರ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದರು. ಡುಬ್ಕಿ, ಗೇಮ್ 100 ಕರೋರ್ ಕಾ, ಶೂರ್ ವೀರ್ ಸೋನಿಯಾ ಅಭಿನಯದ ಇನ್ನು ಕೆಲ ಚಿತ್ರಗಳು.

ಕೇವಲ ಸಿನಿಮಾ ಮಾತ್ರವಲ್ಲ ಆಲ್ಬಂ ಹಾಡುಗಳಲ್ಲಿ ಕೂಡ ಸೋನಿಯಾ ಹೆಜ್ಜೆ ಹಾಕಿದ್ದಾರೆ. ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ 6.5 ಮಿಲಿಯನ್ ಜನ ಇವರನ್ನು ಹಿಂಬಾಲಿಸುತ್ತಾರೆ.
ಇಂಥಾ ಸೋನಿಯಾ ಬನ್ಸಲ್ ಸದ್ಯ ಬಣ್ಣದ ಬದುಕಿಗೆ ವಿದಾಯ ಹೇಳಿದ್ದಾರೆ. ಹಣ-ಕೀರ್ತಿ ಎಲ್ಲವೂ ನನ್ನ ಬಳಿ ಇದೆ ಆದರೆ ಮಾನಸಿಕ ನೆಮ್ಮದಿ ಇಲ್ಲ ಎಂದು ಹೇಳಿದ್ದಾರೆ.
ಈ ಕುರಿತು E ಟೈಮ್ಸ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಸೋನಿಯಾ ಈ ಯಾಂತ್ರಿಕ ಬದುಕಿನಲ್ಲಿ ನಾನು ನನ್ನನ್ನು ಮರೆತಿದ್ದೇನೆ, ನನ್ನ ಬದುಕಿನ ಉದ್ದೇಶವೇನು ಎನ್ನುವುದೇ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ನನ್ನ ಬಳಿ ಹಣ, ಜನಪ್ರಿಯತೆ, ಖ್ಯಾತಿ ಎಲ್ಲವೂ ಇದೆ ಆದರೆ ಮಾನಸಿಕ ಶಾಂತಿ ಇಲ್ಲ ಎಂದಿರುವ ಸೋನಿಯಾ ಬನ್ಸಲ್ ನೆಮ್ಮದಿಯೇ ಇರದಿದ್ದರೆ ಹಣದಿಂದಾಗುವ ಪ್ರಯೋಜನವಾದರು ಏನು ಎನ್ನುವ ಪ್ರಶ್ನೆಯನ್ನು ಹೇಳಿದ್ದಾರೆ. ಬಾಹ್ಯವಾಗಿ ನೀವು ಎಲ್ಲವನ್ನು ಹೊಂದಿರಬಹುದು ಆದರೆ ಒಳಗೆ ಖಾಲಿಯಾಗಿದ್ದರೆ ಏನು ಮಾಡಲು ಸಾಧ್ಯ ಎಂದಿದ್ದಾರೆ.
ಮುಂದುವರೆದು ಜೀವನದಲ್ಲಿ ನನಗೇನು ಬೇಕು ಎಂದು ಆಳವಾದ ಅಧ್ಯಯನ ಮಾಡಲು ನಾನು ಬಯಸುತ್ತೇನೆ ಎಂದಿರುವ ಸೋನಿಯಾ ಬನ್ಸಾಲಿ ಈ ಉದ್ಯಮ ನನಗೆ ಮನ್ನಣೆ ನೀಡಿದೆ ಆದರೆ ಸ್ಥಿರತೆ ನೀಡಿಲ್ಲ ಎಂದು ಹೇಳಿದ್ದಾರೆ. ಮುಕ್ತವಾಗಿ ಉಸಿರಾಡಲು ನನಗೆ ಅವಕಾಶವನ್ನು ನೀಡಲಿಲ್ಲ ನಾನು ಇನ್ಮುಂದೆ ಅಭಿನಯಿಸುವುದಿಲ್ಲ ಎಂದು ಹೇಳಿದ್ದಾರೆ. ಪ್ರಾಮಾಣಿಕವಾಗಿ ಬದುಕಲು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.
ಸದ್ಯ ಬದುಕಿನಲ್ಲಿ ನೆಮ್ಮದಿಯನ್ನು ಹುಡುಕುತ್ತಿದ್ದೇನೆ ಎಂದಿರುವ ಸೋನಿಯಾ ಬನ್ಸಲ್, ಚಿತ್ರರಂಗದಿಂದ ದೂರವಾಗಿ ಬದುಕಿನ ಪಾಠ ಮಾಡುವ ಶಿಕ್ಷಕಿಯಾಗಬೇಕೆಂದುಕೊಂಡಿದ್ದೇನೆ ಎಂದು ಹೇಳಿದ್ದಾರೆ. ಆಧ್ಯಾತ್ಮಿಕದತ್ತ ನನ್ನ ಮನಸು ವಾಲುತ್ತಿದೆ ಎಂದಿರುವ ಸೋನಲ್ ನಿಮ್ಮ ಜೀವನ ಯಾವಾಗ ಬೇಕಾದರೂ ಬದಲಾಗಬಹುದು, ಯಾವ ಕ್ಷಣದಲ್ಲೇನಾಗುತ್ತೆ ಎನ್ನುವುದು ನಮಗೆ ಗೊತ್ತಿರಲ್ಲ ಎಂದು ಹೇಳಿದ್ದಾರೆ. ಸಾವು ಯಾವಾಗ ಬೇಕಾದರೂ ಎದುರಾಗಬಹುದು ಆ ಸಮಯದಲ್ಲಿ ನಾವು ನಮ್ಮತನವನ್ನು ಕಾಪಾಡಿಕೊಳ್ಳದಿದ್ದರೆ ಇಡೀ ಬದುಕಿಗೆ ಅರ್ಥವೇ ಇರುವುದಿಲ್ಲ ಎಂದು ಹೇಳಿದ್ದಾರೆ.
ಸೋನಿಯಾ ಬನ್ಸಲ್ ಅವರ ಈ ಮಾತುಗಳು ಸದ್ಯ ಬಾಲಿವುಡ್‌ನಲ್ಲಿ ಚರ್ಚೆಗೆ ಕಾರಣವಾಗಿವೆ. ತಳುಕು ಬಳುಕಿನ ಪ್ರಪಂಚ ನೋಡಲು ಮಾತ್ರ ಚೆಂದ ಒಳ ಹೋದರೆ ನೆಮ್ಮದಿ ಮರಿಚೀಕೆ ಎನ್ನುವುದಕ್ಕೆ ಸೋನಿಯಾ ಅವರ ಈ ವ್ಯೆಯಕ್ತಿಕ ಬದುಕೇ ಅತ್ಯುತ್ತಮ ಉದಾಹರಣೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅಂದ್ಹಾಗೇ ಸೋನಿಯಾ ಬನ್ಸಲ್ ಸದ್ಯ ತೆಲುಗಿನಲ್ಲಿ ಚಿತ್ರವೊಂದನ್ನು ಮಾಡಿದ್ಧಾರೆ. ಆ ಚಿತ್ರದ ಹೆಸರು ಯೆಸ್ ಬಾಸ್. ಶೀಘ್ರದಲ್ಲಿಯೇ ಈ ಚಿತ್ರ ತೆರೆಗೆ ಬರಲಿದೆ.


Click it and Unblock the Notifications











