ಛೇ.. ವರ್ಷದ ಆರಂಭದಲ್ಲೇ ಬೇಸರದ ಸುದ್ದಿ: ಸಲ್ಲು, ಶಾರುಖ್, ರಣ್‌ಬೀರ್, ರಣ್‌ವೀರ್ ಫ್ಯಾನ್ಸ್‌ಗೆ ನಿರಾಸೆ!

2023ರ ವರ್ಷಕ್ಕೆ ಗುಡ್‌ಬೈ ಹೇಳಿ 2024ನೇ ವರ್ಷವನ್ನು ಸ್ವಾಗತಿಸಿದ್ದು ಆಗಿದೆ. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಳೆದ ವರ್ಷ ಬಾಲಿವುಡ್‌ ಸಿನಿಮಾಗಳು ಸಖತ್ ಸದ್ದು ಮಾಡಿದ್ದವು. 'ಪಠಾನ್', 'ಜವಾನ್', 'ಗದರ್- 2', 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ', 'ಅನಿಮಲ್', 'ಡಂಕಿ' ಸಿನಿಮಾಗಳು ದೊಡ್ಡಮಟ್ಟದಲ್ಲೇ ಸಕ್ಸಸ್ ಕಂಡಿದ್ದವು.

ಇದೀಗ ಹೊಸ ವರ್ಷದ ಆರಂಭದಲ್ಲೇ ಬಾಲಿವುಡ್ ಪ್ರೇಕ್ಷಕರಿಗೆ ಬೇಸರದ ಸುದ್ದಿ ಬಂದಿದೆ. ಬಿಟೌನ್ ಸೂಪರ್ ಸ್ಟಾರ್‌ಗಳಲ್ಲಿ ಬಹುತೇಕರು ಈ ವರ್ಷ ಥಿಯೇಟರ್‌ಗಳಿಂದ ದೂರವೇ ಉಳಿಯುತ್ತಿದ್ದಾರೆ. ಕಳೆದ ವರ್ಷ ಹ್ಯಾಟ್ರಿಕ್ ಹಿಟ್ ಬಾರಿಸಿದ ಕಿಂಗ್ ಖಾನ್ ಸಹ ಈ ಲಿಸ್ಟ್‌ನಲ್ಲಿದ್ದಾರೆ. ಬಾಲಿವುಡ್‌ನಲ್ಲಿ ಸಿನಿಮಾಗಳು ಅಷ್ಟು ಬೇಗ ನಿರ್ಮಾಣವಾಗುವುದಿಲ್ಲ. ಬಹಳ ಸಮಯ ಬೇಕಾಗುತ್ತದೆ. ಸಲ್ಲು, ಶಾರುಖ್, ರಣ್‌ಬೀರ್ ಕಪೂರ್, ರಣ್‌ವೀರ್‌ ಸಿಂಗ್ ಯಾರು ಹೊಸ ಸಿನಿಮಾ ಆರಂಭಿಸಿಲ್ಲ. ಹಾಗಾಗಿ ಇವರ ಸಿನಿಮಾಗಳು ಈ ವರ್ಷ ತೆರೆಗೆ ಬರಲ್ಲ.

No Shahrukh Khan, Salman Khan, Ranbir Kapoor and Ranveer Singh Films in 2024

ಕಳೆದ ಕೆಲ ವರ್ಷಗಳಲ್ಲಿ ಬಾಲಿವುಡ್ ಸಿನಿಮಾಗಳ ಸಾಧನೆ ಅಷ್ಟಕ್ಕಷ್ಟೆ ಎನ್ನುವಂತಾಗಿತ್ತು. ಆದರೆ 2023ರಲ್ಲಿ ಸಕ್ಸಸ್ ಗ್ರಾಫ್ ಮತ್ತೆ ಏರುಮುಖವಾಗಿತ್ತು. ಅದರಲ್ಲೂ 2018ರಲ್ಲಿ 'ಜೀರೊ' ಸಿನಿಮಾ ಮಾಡಿ ಸೋತಿದ್ದ ಶಾರುಖ್ ಖಾನ್ ಒಂದೇ ವರ್ಷದಲ್ಲಿ 3 ಹಿಟ್ ಕೊಟ್ಟರು. ಅದರಲ್ಲಿ 2 ಸಿನಿಮಾಗಳ ಕಲೆಕ್ಷನ್ 1000 ಕೋಟಿ ರೂ. ಗಡಿ ದಾಟಿತ್ತು. 'ಡಂಕಿ' ಸಿನಿಮಾ ಕೂಡ ಬಾಕ್ಸಾಫೀಸ್‌ ಶೇಕ್ ಮಾಡ್ತಿದೆ. ಆದರೆ ಈ ವರ್ಷ ಕಿಂಗ್ ಖಾನ್ ನಟನೆಯ ಯಾವುದೇ ಸಿನಿಮಾ ತೆರೆಗೆ ಬರುವ ಸುಳಿವು ಸಿಗುತ್ತಿಲ್ಲ.

ಸಲ್ಮಾನ್ ಖಾನ್ ಸದ್ಯ ಸೋಲಿನ ಸುಳಿಗೆ ಸಿಲುಕಿದ್ದಾರೆ. ಕಳೆದ ವರ್ಷ 'ಪಠಾಣ್' ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿ ಗಮನ ಸೆಳೆದಿದ್ದರು. ಆದರೆ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಹಾಗೂ 'ಟೈಗರ್- 3' ಸಿನಿಮಾಗಳು ಅಷ್ಟಾಗಿ ಸದ್ದು ಮಾಡಲಿಲ್ಲ. ದೀಪಾವಳಿ ಸಂಭ್ರಮದಲ್ಲಿ ಬಂದ 'ಟೈಗರ್'-3 ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದ್ದು ಸುಳ್ಳಲ್ಲ. ಆದರೆ ಸರಣಿಯ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಸಿನಿಮಾ ಗಳಿಕೆ ಕಮ್ಮಿ ಎನ್ನಬಹುದು. ಸಲ್ಲು ಕೂಡ ಇನ್ನು ಹೊಸ ಸಿನಿಮಾ ಒಪ್ಪಿಕೊಂಡಿಲ್ಲ.

2023ರ ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟ ನಟ ರಣ್‌ಬೀರ್ ಕಪೂರ್. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಅನಿಮಲ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ರಣ್‌ಬೀರ್ ಇನ್‌ಟೆನ್ಸ್ ಪರ್ಫಾರ್ಮನ್ಸ್‌ಗೆ ಸಿನಿರಸಿಕರು ಫಿದಾ ಆಗಿದ್ದಾರೆ. ಥಿಯೇಟರ್‌ಗಳಲ್ಲಿ ಸಿನಿಮಾ ಆರ್ಭಟ ಮುಂದುವರೆದಿದೆ. ರಣ್‌ಬೀರ್ ಕೂಡ ಈ ವರ್ಷ ತೆರೆಗೆ ಬರೋದು ಅನುಮಾನ.

No Shahrukh Khan, Salman Khan, Ranbir Kapoor and Ranveer Singh Films in 2024

ಇನ್ನು ರಣ್‌ವೀರ್ ಸಿಂಗ್ ಕಥೆ ಕೂಡ ಹೀಗೆ ಇದೆ. ಕಳೆದ ವರ್ಷ ಆಲಿಯಾ ಭಟ್ ಜೊತೆ ನಟಿಸಿದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾ ಹಿಟ್ ಆಗಿತ್ತು. ಆದರೆ ಈ ವರ್ಷ ಯಾವುದೇ ಸಿನಿಮಾ ಕೈಗೆತ್ತಿಕೊಂಡಿಲ್ಲ. 'ಸಿಂಗಂ ರಿಟರ್ನ್ಸ್' ಚಿತ್ರದಲ್ಲಿ 'ಸಿಂಬಾ' ಆಗಿ ಗೆಸ್ಟ್ ಅಪಿಯರೆನ್ಸ್ ಮಾತ್ರ ಮಾಡಲಿದ್ದಾರೆ. ಈ ಸಿನಿಮಾ ಆಗಸ್ಟ್ 15ಕ್ಕೆ ತೆರೆಗೆ ಬರಲಿದೆ.

2024ರ ವರ್ಷದ ಬಾಲಿವುಡ್ ಹೃತಿಕ್ ರೋಷನ್, ಅಜಯ್ ದೇವಗನ್ ಹಾಗೂ ಅಕ್ಷಯ್ ಕುಮಾರ್ ಕೈಯಲ್ಲಿದೆ ಎನ್ನಬಹುದು. ಇದೇ ವರ್ಷ ಗಣರಾಜ್ಯೋತ್ಸವಕ್ಕೆ ಹೃತಿಕ್ ನಟನೆಯ 'ಫೈಟರ್' ಸಿನಿಮಾ ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಟೀಸರ್, ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ದೊಡ್ಡ ಮಟ್ಟದಲ್ಲಿ ಸಿನಿಮಾ ನಿರೀಕ್ಷೆ ಮೂಡಿಸಿದೆ.

ಅಜಯ್ ದೇವಗನ್ ನಟನೆಯ 'ಸಿಂಗಂ ರಿಟರ್ನ್ಸ್', 'ಔರಾನ್ ಮೇ ಕಹಾನ್ ದಮ್ ಥಾ' ಹಾಗೂ 'ಸೈಥಾನ್' ಸಿನಿಮಾಗಳು ತೆರೆಗೆ ಬರಲಿದೆ. ಹಾಗಾಗಿ ದೇವಗನ್‌ ಮೇಲೆ ಭಾರೀ ನಿರೀಕ್ಷೆಯಿದೆ. ಇನ್ನು 'ಸುರರೈ ಪೊಟ್ರು' ರೀಮೆಕ್ ಸೇರಿ ಅಕ್ಷಯ್ ಕುಮಾರ್ ನಟನೆಯ ಮೂರ್ನಾಲ್ಕು ಸಿನಿಮಾಗಳು ಇದೇ ವರ್ಷ ರಿಲೀಸ್ ಆಗಲಿವೆ. ಇನ್ನು ಆಮೀರ್ ಖಾನ್ ಯಾವುದೇ ಸಿನಿಮಾ ಮಾಡ್ತಿಲ್ಲ. ಹಾಗಾಗಿ ಈ ವರ್ಷವೂ ಬಾಲಿವುಡ್ ಮಿ. ಪರ್ಫೆಕ್ಷನಿಸ್ಟ್ ಸಿನಿಮಾಗಳು ತೆರೆಗೆ ಬರುವುದು ಕಷ್ಟಕಷ್ಟ.

More from Filmibeat

English summary
Shahrukh Khan, Salman Khan, Ranbir Kapoor and Ranveer Singh Films not releasing this year
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X