ಮಗ ಮನೆಗೆ ಬರುವವರೆಗೂ ಸಿಹಿ ಪದಾರ್ಥ ಬೇಡ ಎಂದ ಗೌರಿ ಖಾನ್

ಡ್ರಗ್ಸ್ ಪಾರ್ಟಿ ಆರೋಪದಡಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜೈಲು ಸೇರಿದ್ದಾರೆ. ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದ್ದು, ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ಆರ್ಯನ್ ಖಾನ್್ರನ್ನ ಇರಿಸಲಾಗಿದೆ. ಅಕ್ಟೋಬರ್ 20ಕ್ಕೆ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಇದ್ದು, ಕುಟುಂಬ ಸದಸ್ಯರು ಆದಷ್ಟು ಬೇಗ ಜಾಮೀನು ಸಿಕ್ಕು ಮಗ ಹೊರಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.

ದೀಪಾವಳಿ ಹಬ್ಬಕ್ಕೂ ಮುಂಚೆ ಮಗನಿಗೆ ಈ ಬಂಧನದಿಂದ ಮುಕ್ತಿ ಸಿಗಲಿ ಎಂದು ಆಶಿಸುತ್ತಿರೋ ಕುಟುಂಬ ಸದಸ್ಯರು, ಈ ಬಗ್ಗೆ ಸಾಕಷ್ಟು ಚಿಂತೆ ಭರಿತರಾಗಿದ್ದಾರೆ. ಈಗ ಗೌರಿ ಖಾನ್ ತಮ್ಮ ಮನೆಗೆ ಆರ್ಯನ್ ಖಾನ್ ಬರುವವರೆಗೂ ಯಾವುದೇ ತರಹದ ಸಿಹಿ ತಿನಿಸುಗಳನ್ನು ಮಾಡಬಾರದು ಎಂದು ಮನೆಯ ಅಡುಗೆ ಸದಸ್ಯರಿಗೆ ತಿಳಿಸಿದ್ದಾರೆ. ದಸರಾ ಹಬ್ಬದ ಸಂದರ್ಭದಲ್ಲಿ ಮನೆಯಲ್ಲಿ ಊಟದ ಜೊತೆ ಸಿಹಿ ತಿಂಡಿಯನ್ನು ಮಾಡಲಾಗಿತ್ತು, ಈ ಸಂಧರ್ಭದಲ್ಲಿ ಇದನ್ನು ಗಮನಿಸಿದ ಗೌರಿ ಖಾನ್ ಆರ್ಯನ್ ಮನೆಗೆ ಬರುವವರೆಗೂ ಯಾವುದೇ ಈ ತರಹದ ಸಿಹಿ ತಿನಿಸು ಮಾಡಬೇಡಿ ಎಂದು ತಾಕೀತು ಮಾಡಿದ್ದಾರಂತೆ.

ಶಾರುಖ್ ನಿವಾಸ ಮನ್ನತ್‌ನಲ್ಲಿ ಸದ್ಯ ಯಾರಿಗೂ ಯಾವ ಹಬ್ಬವನ್ನು ಆಚರಿಸುವ ಮನಸ್ಸಿಲ್ಲ. ದೀಪಾವಳಿ ಹಬ್ಬಕ್ಕಾದರೂ ಮನೆಯಲ್ಲಿ ಬೆಳಕು ಪಸರಿಸಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತಿದ್ದಾರೆ. ಮಗ ಆರ್ಯನ್ ಖಾನ್ ಜೈಲು ಸೇರಿದಾಗಿನಿಂದಲೂ ಮನೆಯಲ್ಲಿ ನೀರವ ಮೌನ ಆವರಿಸಿದ್ದು, ಕುಟುಂಬ ಸದಸ್ಯರು ಯಾವುದಕ್ಕೂ ಆಸಕ್ತಿ ತೋರುತ್ತಿಲ್ಲ ಹಾಗೇ ಮಗ ಮನೆಗೆ ಬರುವವರೆಗೂ ಯಾವುದೇ ಸಂಭ್ರಮಾಚರಣೆ ಕೂಡ ಮಾಡದಿರಲು ಶಾರುಖ್ ಖಾನ್ ಮತ್ತು ಗೌರಿ ಖಾನ್ ತೀರ್ಮಾನಿಸಿದ್ದಾರಂತೆ.

No Sweets In Mannat Till Aryans Release From Jail, Gauri Khan Instructs Staff

ಇನ್ನು ಗೌರಿ ಖಾನ್ ಮಗನ ಬಂಧನದ ನಂತರ ಭಾರಿ ನೋದಿದ್ದು, ತನ್ನ ಸ್ನೇಹಿತರಿಗೆ, ಹಿತೈಷಿಗಳಿಗೆ ಕರೆಮಾಡಿ ಆಳಲು ತೋಡಿಕೊಳ್ಳುತ್ತಿರುತಾರೆ. ಹಾಗೇ ಗೌರಿ ಖಾನ್ ಹೆಚ್ಚಾಗಿ ಪೂಜೆ ಪುನಸ್ಕಾರಗಳನ್ನು ಮಾಡದವರು ಈಗ ಮಗನಿಗಾಗಿ ಈಗ ಹಗಲು ರಾತ್ರಿಯೆನ್ನದೇ ಧಾರ್ಮಿಕ ಆಚರಣೆ ಮಾಡುತ್ತಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಇತ್ತ ಶಾರುಖ್ ಖಾನ್ ಕೂಡ ಈ ಘಟನೆ ಆದ ನಂತರದಿಂದ ಕುಗ್ಗಿ ಹೋಗಿದ್ದು, ಮಗನ ಬರುವಿಕೆಯ ದಾರಿ ನೋಡುತ್ತಿದ್ದಾರೆ. ಹೀಗಾಗಿ ಹೆಚ್ಚಾಗಿ ಯಾರು ಸ್ನೇಹಿತರು, ಹಿತೈಷಿಗಳು ನಿವಾಸಕ್ಕೆ ಆಗಮಿಸಬೇಡಿ ಎಂದಿದ್ದಾರಂತೆ.

ಹೀಗೆ ಮಗನಿಗೆ ಬಂದೊದಗಿರೊ ಈ ಕಷ್ಟಕ್ಕೆ ಈಡೀ ಕುಟುಂಬ ಪರಿತಪ್ಪಿಸುತ್ತಿದ್ದು, ಆರ್ಯನ್ ಖಾನ್ ಅ.20ರವರೆಗೆ ಜೈಲು ವಾಸ ಅನುಭವಿಸಲೇ ಬೇಕಿದೆ. ಆ ಬಳಿಕ ಆರ್ಯನ್‌ಗೆ ಜಾಮೀನು ಸಿಗುತ್ತೋ ಇಲ್ಲವೋ ಎಂಬ ಪ್ರಶ್ನೆ ಎಲ್ಲರನ್ನು ಕಾಡಿದೆ. ಶಾರುಖ್ ಖಾನ್ ಈಗಾಗಲೇ ಹೆಸರಾಂತ ವಕೀಲರ ಸಹಾಯ ಪಡೆಯುತ್ತಿದ್ದು, ಮಗನನ್ನು ಹೊರತರಲು ಪರದಾಡುತ್ತಿದ್ದಾರೆ. ಮಗನ ಬಂಧನದಿಂದ ಮನಸ್ಥಿತಿ ಕೆಡಿಸಿಕೊಂಡಿರೋ ಶಾರುಖ್ ಕುಟುಂಬ ಇದರಿಂದೆಲ್ಲ ಯಾವಾಗ ಹೊರಗೆ ಬರುತ್ತೆ ಅನ್ನೋದನ್ನ ನೋಡಬೇಕಿದೆ.

More from Filmibeat

English summary
Shah Rukh Khan's wife Gauri Khan instructs staff at Mannat to not cook sweets till son Aryan Khan gets bail: Report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X