India
  For Quick Alerts
  ALLOW NOTIFICATIONS  
  For Daily Alerts

  ನನ್ನ ಸ್ನೇಹಿತರಾಗಲೂ ಬಾಲಿವುಡ್‌ನಲ್ಲಿ ಯಾರಿಗೂ ಯೋಗ್ಯತೆ ಇಲ್ಲ: ಕಂಗನಾ ರನೌತ್

  |

  ಬಾಲಿವುಡ್‌ನ ಕಾಂಟ್ರವರ್ಸಿ ಕ್ವೀನ್‌ ಎಂದೇ ಫೇಮಸ್ ಆಗಿರುವ ನಟಿ ಕಂಗನಾ ರನೌತ್ ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿರುತ್ತಾರೆ. ಅದೇ ರೀತಿ ಈ ಬಾರಿಯೂ ಕೂಡ ನಟಿ ಕಂಗನಾ ಬಾಲಿವುಡ್‌ ಮಂದಿ ವಿರುದ್ಧ ಕೆಂಡಕಾರಿದ್ದಾರೆ.

  ನಟಿ ಕಂಗನಾ ರನೌತ್ ಬಹುನೀರಿಕ್ಷಿತ ಚಿತ್ರ 'ಧಾಕಡ್' ಸಿನಿಮಾದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಈ ಪ್ರಚಾರದ ವೇಳೆಯೇ ಖಾಸಗಿ ಸಂದರ್ಶನದ ಸಂದರ್ಭದಲ್ಲಿ ಬಾಲಿವುಡ್‌ ಮಂದಿ ವಿರುದ್ಧ ತಮ್ಮ ಅಕ್ರೋಶ ಭರಿತ ಮಾತುಗಳನ್ನಾಡಿದ್ದಾರೆ. ತಮ್ಮ ನೇರ ಮಾತುಗಳಿಂದಲೇ ಅವರಿಗೆ ಹೆಚ್ಚು ಸ್ನೇಹಿತರಿಲ್. ಈ ಬಗ್ಗೆ ಹಲವು ಬಾರಿ ಹೇಳಿಕೊಂಡಿದ್ದಾರೆ. ಈಗಲೂ ಸಹ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ನಟಿ ಕಂಗನಾ ಖಾರವಾಗಿಯೇ ಉತ್ತರ ನೀಡಿದ್ದಾರೆ.

  'ಧಾಕಡ್‌' ರಿಲೀಸ್‌ಗೂ ಮುನ್ನವೇ ತಿಮ್ಮಪ್ಪನ ದರ್ಶನ ಪಡೆದ ಕಂಗನಾ ರನೌತ್'ಧಾಕಡ್‌' ರಿಲೀಸ್‌ಗೂ ಮುನ್ನವೇ ತಿಮ್ಮಪ್ಪನ ದರ್ಶನ ಪಡೆದ ಕಂಗನಾ ರನೌತ್

  ಸಂದರ್ಶನದಲ್ಲಿ ಕಂಗನಾ ರನೌತ್‌ಗೆ ಬಾಲಿವುಡ್ ಕುರಿತಾಗಿ ಪ್ರಶ್ನೆ ಕೇಳಲಾಗಿದೆ. ಬಾಲಿವುಡ್‌ನ ಮೂವರನ್ನು ಮನೆಗೆ ಊಟಕ್ಕೆ ಕರೆಯುವುದಾದರೆ ಯಾರನ್ನು ಕರೆಯುತ್ತೀರಿ ಎಂದು ಕೇಳಲಾಗಿತ್ತು. ಇದಕ್ಕೆ ನೇರಾ ನೇರಾ ಉತ್ತರ ಕೊಟ್ಟ ಕಂಗನಾ ಬಾಲಿವುಡ್‌ನ ಯಾರೊಬ್ಬರೂ ಅರ್ಹರಲ್ಲ. ಮನೆಯಿಂದ ಹೊರಗೆ ಅವರನ್ನು ಭೇಟಿ ಆಗುವುದು ಓಕೆ. ಆದರೆ, ಮನೆಗೆ ಕರೆದು ಊಟ ಹಾಕುವುದಕ್ಕೆ ಯಾರೂ ಅರ್ಹರಲ್ಲ ಎಂದಿದ್ದಾರೆ.

  ಇನ್ನು ಸಂದರ್ಶನಕರ ಮತ್ತೊಂದು ಪ್ರಶ್ನೆ ಕೇಳಿದ್ದಾರೆ. ಬಾಲಿವುಡ್‌ನಲ್ಲಿ ನಿಮ್ಮ ಪ್ರೀತಿ ಪಾತ್ರರು ಯಾರು ಎಂದು ಕೇಳಿದ್ದಕ್ಕೆ ಖಡಕ್‌ ಆಗಿ ಉತ್ತರಿಸಿದ ನಟಿ ಕಂಗನಾ ಬಾಲಿವುಡ್‌ನಲ್ಲಿ ನನ್ನ ಜೊತೆ ಸ್ನೇಹ ಬೆಳೆಸಲು ಯಾರಿಗೂ ಯೋಗ್ಯತೆ ಇಲ್ಲ. ಹಾಗೇ ಗೆಳತನ ಬೆಳೆಸಬೇಕು ಎಂದರೆ ಅದಕ್ಕೆ ಅರ್ಹತೆ ಬೇಕು ಎಂದು ಹೇಳಿದ್ದಾರೆ.

  'ಧಾಕಡ್‌' ರಿಲೀಸ್‌ಗೂ ಮುನ್ನವೇ ತಿಮ್ಮಪ್ಪನ ದರ್ಶನ ಪಡೆದ ಕಂಗನಾ ರನೌತ್'ಧಾಕಡ್‌' ರಿಲೀಸ್‌ಗೂ ಮುನ್ನವೇ ತಿಮ್ಮಪ್ಪನ ದರ್ಶನ ಪಡೆದ ಕಂಗನಾ ರನೌತ್

  ಸದ್ಯ ಇತ್ತೀಚಿಗಷ್ಟೇ ನಟಿ ಕಂಗನಾ ತಮ್ಮ 'ಧಾಕಡ್' ಸಿನಿಮಾ ಬಗ್ಗೆ ಬಾಲಿವುಡ್‌ ಯಾವ ಸೆಲೆಬ್ರೆಟಿಗಳು ಮಾತನಾಡದೇ ಇರುವುದಕ್ಕೆ ಬೇಸರಗೊಂಡಿದ್ದರು. ಅಚ್ಚರಿ ಎಂಬಂತೆ ಸಲ್ಮಾನ್ ಖಾನ್ 'ಧಾಕಡ್' ಚಿತ್ರತಂಡಕ್ಕೆ ಶುಭ ಕೋರಿ ಟ್ರೈಲರ್‌ನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಇದಕ್ಕೆ ಕಂಗನಾ ಕೂಡ ಸಖತ್ ಖುಷಿ ಪಟ್ಟಿದ್ದಲ್ಲದೆ ನಾನು ಇನ್ನು ಮುಂದೆ ನನಗೆ ಬಾಲಿವುಡ್‌ನಲ್ಲಿ ಯಾರು ಇಲ್ಲ ಎಂಬುದನ್ನು ಮತ್ತೆ ಎಲ್ಲೂ ಹೇಳುವುದಿಲ್ಲ ಎಂಬ ಹೇಳಿಕೆ ನೀಡಿದ್ದರು. ಆದಾದ ಕೆಲವೇ ದಿನಗಳಲ್ಲಿ ಮತ್ತೆ ಕಂಗನಾ ತಮಗೆ ಸ್ನೇಹಿತರಿಲ್. ತಾನು ಯಾರನ್ನೂ ಮನೆಗೆ ಕರೆಯಲ್ಲ ಅಂತ ಹೇಳಿದ್ದಾರೆ.

  Nobody Is Worthy Of Bollywood, Even My Friends Says Kangana Ranaut

  ಮೇ 20 ರಂದು 'ಧಾಕಡ್' ಸಿನಿಮಾ ಬಿಡುಗಡೆಯಾಗಲಿದೆ. ಸಿನಿಮಾದಲ್ಲಿ ಕಂಗನಾ ಸ್ಪೈ ಏಜೆಂಟ್ ಅಗ್ನಿ ಪಾತ್ರದಲ್ಲಿ ರಗಡ್‌ ಆಗಿ ಮಿಂಚಿದ್ದಾರೆ. ಈಗಾಗಲೇ ಹಾಡು, ಟ್ರೈಲರ್‌ಗಳಿಂದ ಜನರ ಗಮನ ಸೆಳೆದಿದೆ. ನಟಿ ಕಂಗನಾ ಕೂಡ ಚಿತ್ರದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ನಿನ್ನೆಯಷ್ಟೇ ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಂಡು ಬಂದಿದ್ದಾರೆ. ಸಿನಿಮಾ ಯಶಸ್ಸು ಕಾಣಲಿ ಎಂದು ನಟಿ ಕಂಗನಾ ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

  English summary
  Nobody Is Worthy Of Bollywood, Even My Friends Says Kangana Ranaut.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X