twitter
    For Quick Alerts
    ALLOW NOTIFICATIONS  
    For Daily Alerts

    ಸೈನಿಕರ ಬಗ್ಗೆ ಸಿನಿಮಾ, ವೆಬ್ ಸಿರೀಸ್‌ ನಿರ್ಮಿಸುವುದು ಇನ್ನು ಮುಂದೆ ಸುಲಭವಲ್ಲ

    |

    ಭಾರತೀಯ ಸೇನೆಯ ಬಗ್ಗೆ ಈ ಹಿಂದೆ ಹಲವಾರು ಸಿನಿಮಾಗಳು ಬಂದಿವೆ. ವೆಬ್‌ ಸರಣಿಗಳೂ ಸಹ ಬಂದಿವೆ. ಆದರೆ ಇನ್ನು ಮುಂದೆ ಭಾರತೀಯ ಸೇನೆಯ ಕುರಿತಾಗಿ ಆಗಲಿ, ಸೈನಿಕರ ಕುರಿತಾಗಿ ಆಗಲಿ ಸಿನಿಮಾ, ವೆಬ್ ಸಿರೀಸ್ ನಿರ್ಮಿಸುವುದು ಸುಲಭವಲ್ಲ.

    ಇತ್ತೀಚಿನ ಕೆಲವು ವೆಬ್ ಸರಣಿಗಳಲ್ಲಿ ಭಾರತೀಯ ಸೈನಿಕರನ್ನು ಕೆಟ್ಟದಾಗಿ ಬಿಂಬಿಸಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ. ಹಾಗಾಗಿಯೇ ದೇಶದ ರಕ್ಷಣಾ ಇಲಾಖೆ ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.

    ಹಿರಿಯ ಪೊಲೀಸ್ ಅಧಿಕಾರಿಯನ್ನು ಮನಸಾರೆ ಹೊಗಳಿದ ಯೋಗರಾಜ್ ಭಟ್ಹಿರಿಯ ಪೊಲೀಸ್ ಅಧಿಕಾರಿಯನ್ನು ಮನಸಾರೆ ಹೊಗಳಿದ ಯೋಗರಾಜ್ ಭಟ್

    ಅದರಲ್ಲಿಯೂ ಎಕ್ಸ್‌ಎಕ್ಸ್‌ಎಕ್ಸ್‌: ಅನ್‌ಸೆನ್ಸರ್ಡ್‌ ಸೀಸನ್ 2 ವೆಬ್ ಸರಣಿಯಲ್ಲಿ ಸೈನ್ಯದ ಸಮವಸ್ತ್ರ ಧರಿಸಿರುವ ವ್ಯಕ್ತಿಗಳು ಕೆಟ್ಟ ಕಾರ್ಯಗಳನ್ನು ಮಾಡುತ್ತಾರೆ. ಇದು ಭಾರಿ ವಿವಾದ ಸೃಷ್ಟಿಸಿತ್ತು, ಸೈನಿಕರಿಗೆ ಅಪಮಾನ ಮಾಡಲಾಗಿದೆ ಎಂದು ಪ್ರಕರಣ ಸಹ ದಾಖಲಾಗಿತ್ತು.

    ಸೈನಿಕರ ಬಗ್ಗೆ ಸಿನಿಮಾ ಸುಲಭವಲ್ಲ

    ಸೈನಿಕರ ಬಗ್ಗೆ ಸಿನಿಮಾ ಸುಲಭವಲ್ಲ

    ವೆಬ್ ಸರಣಿ ಹಾಗೂ ಸಿನಿಮಾಗಳ ಮೇಲೆ ಕಣ್ಣಿಡುವಂತೆ ರಕ್ಷಣಾ ಇಲಾಖೆಗೂ ಒತ್ತಡ ಬಂದ ಕಾರಣ. ರಕ್ಷಣಾ ಇಲಾಖೆಯು ಹೊಸ ನಿಯಮವನ್ನು ಹೊರಡಿಸಿದ್ದು, ಈ ನಿಯಮದ ಅನ್ವಯ ಸೈನ್ಯ, ಸೈನಿಕರ ಬಗ್ಗೆ ಸಿನಿಮಾ ಅಥವಾ ವೆಬ್ ಸರಣಿ ನಿರ್ಮಿಸುವುದು ಸುಲಭವಾಗಿರಲಾರದು.

    ದೃಶ್ಯಗಳಿದ್ದರೂ ಸಹ ಅನುಮತಿ ಬೇಕು

    ದೃಶ್ಯಗಳಿದ್ದರೂ ಸಹ ಅನುಮತಿ ಬೇಕು

    ರಕ್ಷಣಾ ಇಲಾಖೆ ಹೇರಿರುವ ನಿಯಮದಂತೆ, ಭಾರತೀಯ ಸೈನ್ಯ ಹಾಗೂ ಸೈನಿಕರ ಬಗ್ಗೆ ಸಿನಿಮಾ, ವೆಬ್ ಸರಣಿಗಳನ್ನು ನಿರ್ಮಿಸಬೇಕಾದರೆ. ಒಟ್ಟಾರೆ ಸಿನಿಮಾ ಅಲ್ಲದೆ ಕೇವಲ ದೃಶ್ಯಗಳು ಮಾತ್ರವೇ ಇದ್ದರೂ ಸಹ ಮೊದಲಿಗೆ ರಕ್ಷಣಾ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕು.

    ತಮನ್ನಾ-ವಿರಾಟ್ ಕೋಹ್ಲಿ ವಿರುದ್ಧ ದೂರು: ಬಂಧನಕ್ಕೆ ಒತ್ತಾಯತಮನ್ನಾ-ವಿರಾಟ್ ಕೋಹ್ಲಿ ವಿರುದ್ಧ ದೂರು: ಬಂಧನಕ್ಕೆ ಒತ್ತಾಯ

    ರಕ್ಷಣಾ ಇಲಾಖೆಯಿಂದ ಅನುಮತಿ ಕಡ್ಡಾಯ

    ರಕ್ಷಣಾ ಇಲಾಖೆಯಿಂದ ಅನುಮತಿ ಕಡ್ಡಾಯ

    ಸೈನ್ಯದ ಬಗ್ಗೆ, ಸೈನಿಕರ ಬಗ್ಗೆ ಸಿನಿಮಾ, ವೆಬ್ ಸರಣಿ ನಿರ್ಮಿಸುತ್ತೇರೆಂದರೆ ಮೊದಲಿಗೆ, ನಿರ್ದೇಶಕ, ನಿರ್ಮಾಪರು ರಕ್ಷಣಾ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ಅಷ್ಟೆ ಅಲ್ಲದೆ ಸಿನಿಮಾ ಅಥವಾ ವೆಬ್ ಸರಣಿ ನಿರ್ಮಾಣವಾದ ಬಳಿಕ ಅದನ್ನು ಇಲಾಖೆಯವರಿಗೆ ತೋರಿಸಿದ ನಂತರ ಬಿಡುಗಡೆ ಆಗಬೇಕು.

    ಖಾರವಾಗಿ ಪ್ರತಿಕ್ರಿಯಿಸಿದ್ದ ಏಕ್ತಾ ಕಪೂರ್

    ಖಾರವಾಗಿ ಪ್ರತಿಕ್ರಿಯಿಸಿದ್ದ ಏಕ್ತಾ ಕಪೂರ್

    ಎಕ್ಸ್‌ಎಕ್ಸ್‌ಎಕ್ಸ್‌ ವೆಬ್ ಸೀರೀಸ್‌ನಲ್ಲಿ ಭಾರತೀಯ ಸೇನೆಯ ಸಮವಸ್ತ್ರ ಧರಿಸಿದ ವ್ಯಕ್ತಿ ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸುವ ದೇಶ್ಯವಿದೆ. ಇದರ ವಿರುದ್ಧ ಹಲವರು ದನಿ ಎತ್ತಿದ್ದರು. ದೂರು ಸಹ ನಿಡಿದ್ದರು. ವೆಬ್ ಸೀರೀಸ್ ನಿರ್ಮಾಪಕಿ ಏಕ್ತಾ ಕಪೂರ್ ತಮ್ಮ ವಿರುದ್ಧ ದೂರುಗಳಿಗೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದರು.

    English summary
    Defense ministry said that to made a movie or web series on Indian Army or soldier must take NOC from defense ministry.
    Saturday, August 1, 2020, 16:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X