ಅಕ್ಷಯ್ ಕುಮಾರ್- ನೋರಾ ಫತೇಹಿ ಹೆಜ್ಜೆ ಹಾಕಿ 'ಊ ಅಂಟಾವ ಮಾವ' ಹಾಡನ್ನು ಹಾಳು ಮಾಡಿಬಿಟ್ರಾ?
ಎರಡು ವರ್ಷಗಳ ಹಿಂದೆ ಬಂದ 'ಪುಷ್ಪ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿದ್ದು ಗೊತ್ತೇಯಿದೆ. 350 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಚಿತ್ರದಲ್ಲಿ 'ಊ ಅಂಟಾವ ಮಾವ' ಸಾಂಗ್ ಸೂಪರ್ ಹಿಟ್ ಆಗಿ ಚಿತ್ರದ ಸಕ್ಸಸ್‌ಗೆ ಪ್ಲಸ್ ಆಗಿತ್ತು. ಹಾಡಿನಲ್ಲಿ ಸಮಂತಾ ಬಿಂದಾಸ್ ಸ್ಟೆಪ್ಸ್ ಹಾಕಿದ್ದರು. ಇದೀಗ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ನೋರಾ ಫತೇಹಿ ಇದೇ ಹಾಡಿಗೆ ಕುಣಿದು ರಂಗೇರಿಸಿದ್ದಾರೆ.
ಯುಎಸ್ ಡಲ್ಲಾಸ್‌ನಲ್ಲಿ ನಡೆದ ಈವೆಂಟ್‌ನಲ್ಲಿ ಅಕ್ಷಯ್- ನೋರಾ ಸೂಪರ್ ಹಿಟ್ ಸಾಂಗ್‌ಗೆ ಬಿಂದಾಸ್ ಡ್ಯಾನ್ಸ್ ಮಾಡಿದ್ದಾರೆ. 'ಪುಷ್ಪ' ಚಿತ್ರದಲ್ಲಿ ಹಾಡಿಗೆ ಅಲ್ಲು ಅರ್ಜುನ್ ಸ್ಟೈಲ್, ಸಮಂತಾ ಹಾವಭಾವ ಪ್ರೇಕ್ಷಕರಿಗೆ ಕಿಕ್ ಕೊಟ್ಟಿತ್ತು. ಇದೀಗ ವೇದಿಕೆಯಲ್ಲಿ ಅಕ್ಷಯ್- ನೋರಾ ಈ ಸಾಂಗ್ ರೀಕ್ರಿಯೆಟ್ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಹಾಡಿಗೆ ಸಂಬಂಧವೇ ಇಲ್ಲದ ಹಾವಭಾವ ಪ್ರದರ್ಶಿಸಿ ನೋರಾ ಫತೇಹಿ ಟ್ರೋಲ್ ಆಗುತ್ತಿದ್ದಾರೆ. ಇನ್ನು ಅಕ್ಷಯ್ ಸ್ಟೈಲ್ ಕೂಡ ಅಷ್ಟಕ್ಕಷ್ಟೇ ಎನ್ನುವಂತಿದೆ. ಒಳ್ಳೆ ಸಾಂಗ್‌ನ ಈ ತರ ಹಾಳು ಮಾಡಿಬಿಟ್ಟರು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಸದ್ಯ ಅಕ್ಷಯ್- ನೋರಾ ಜೋಡಿಯ 'ಊ ಅಂಟಾವ ಮಾವ' ಡ್ಯಾನ್ಸ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಸ್ಯಾಮ್- ಅಲ್ಲು ಅರ್ಜುನ್ ಗ್ರೇಸ್ ಮ್ಯಾಚ್ ಮಾಡೋಕೆ ಇಬ್ಬರಿಂದಲೂ ಸಾಧ್ಯವಾಗಿಲ್ಲ. ನೋರಾ ಒಳ್ಳೆ ಡ್ಯಾನ್ಸರ್ ಇರಬಹುದು. ಆದರೆ ಆಕೆ ಸ್ಯಾಮ್ ರೀತಿ ಹಾವಭಾವ ಪ್ರದರ್ಶಿಸಲು ಸಾಧ್ಯವಿಲ್ಲ ಎಂದು ನೆಟ್ಟಿಗರು ಹೇಳ್ತಿದ್ದಾರೆ. 'ಪುಷ್ಪ' ಚಿತ್ರಕ್ಕಾಗಿ ಸಮಂತಾ ಮೊದಲ ಬಾರಿಗೆ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ್ದರು. ದೇವಿಶ್ರೀ ಪ್ರಸಾದ್ ಸಂಗೀತದ ಹಾಡನ್ನು ಇಂದ್ರವತಿ ಚೌಹಾಣ್ ಹಾಡಿದ್ದರು.
'ಪುಷ್ಪ' ಸಿನಿಮಾ 5 ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗಿತ್ತು. ಕನ್ನಡದಲ್ಲಿ ಹಾಡನ್ನು ಮಂಗ್ಲಿ ಹಾಡಿದ್ದರು. ಇದೀಗ 'ಪುಷ್ಪ' ಸೀಕ್ವಲ್ ಬರ್ತಿದೆ. ಈ ಚಿತ್ರದಲ್ಲೂ ಸಮಂತಾ ನಟಿಸ್ತಾರೆ ಎನ್ನುವ ಮಾತುಗಳು ಕೆಲ ದಿನಗಳ ಹಿಂದೆ ಕೇಳಿಬಂದಿತ್ತು. ಆದರೆ ಇದನ್ನು ಆಕೆಯ ಮ್ಯಾನೇಜರ್ ತಳ್ಲಿ ಹಾಕಿದ್ದರು. ಅಂತಹ ಯಾವುದೇ ಮಾತುಕತೆ ನಡೆದಿಲ್ಲ ಎಂದರು. ಸದ್ಯ 'ಪುಷ್ಪ' - 2 ಶೂಟಿಂಗ್ ಭರದಿಂದ ಸಾಗುತ್ತಿದೆ. ಮೊದಲ ಭಾಗದಲ್ಲಿ ಇದ್ದ ಬಹುತೇಕ ಕಲಾವಿದರು ಎರಡನೇ ಭಾಗದಲ್ಲೂ ಇದ್ದಾರೆ.

ಮೊದಲ ಭಾಗ ಬ್ಲಾಕ್‌ಬಸ್ಟರ್ ಹಿಟ್ ಆದಮೇಲೆ ಎರಡನೇ ಭಾಗವನ್ನು ಮತ್ತಷ್ಟು ಅದ್ಧೂರಿಯಾಗಿ ತೆರೆಗೆ ತರುವ ಪ್ರಯತ್ನ ನಡೀತಿದೆ. ಈ ಬಾರಿ ಪುಷ್ಪರಾಜ್ ವರ್ಸಸ್ ಭನ್ವರ್ ಸಿಂಗ್ ಶೇಖಾವತ್ ಕಾದಾಟ ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ. 'ಪುಷ್ಪ' ಸಿನಿಮಾ ಹಿಂದಿ ಬೆಲ್ಟ್‌ನಲ್ಲಿ ಭಾರೀ ಸದ್ದು ಮಾಡಿತ್ತು. ಹಾಗಾಗಿ ಬಾಲಿವುಡ್ ಪ್ರೇಕ್ಷಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಬಾರಿ ಸಿನಿಮಾ ಕಟ್ಟಿಕೊಡಲಾಗುತ್ತಿದೆ. ಕಥೆಯನ್ನು ತಿದ್ದಿ ತೀಡಿ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ನಡೀತಿದೆ. ಈ ಚಿತ್ರದಲ್ಲಿ ಒಂದು ಐಟಂ ಸಾಂಗ್ ಪ್ಲ್ಯಾನ್ ಮಾಡ್ತಿದೆ ಚಿತ್ರತಂಡ.


Click it and Unblock the Notifications











