For Quick Alerts
  ALLOW NOTIFICATIONS  
  For Daily Alerts

  ಚಿತ್ರೀಕರಣಕ್ಕೆ ಬೆಂಗಳೂರಿಗೆ ಬರುತ್ತಿರುವ ಬಾಲಿವುಡ್‌ ಮಂದಿ!

  |

  ಹಿಂದಿ ಸಿನಿಮಾ ನಟಿ ನೋರಾ ಫತೇಹಿ ಹಠಾತ್ತನೆ ಬೆಂಗಳೂರಿಗೆ ಬಂದಿದ್ದಾರೆ. ಕನ್ನಡ ಸಿನಿಮಾದಲ್ಲಿ ನಟಿಸಲು ನೋರಾ ಫತೇಹಿ ಬೆಂಗಳೂರಿಗೆ ಬಂದಿದ್ದಾರೆ ಎನ್ನುವ ಸುದ್ದಿ ಹರಿದಾಡಿತು ಆದರೆ ನಿಜ ಬೇರೆಯೇ ಇದೆ.

  ನೋರಾ ಫತೇಹಿ ಬೆಂಗಳೂರಿಗೆ ಬಂದಿರುವುದು ರಿಯಾಲಿಟಿ ಶೋ ಒಂದರ ಚಿತ್ರೀಕರಣಕ್ಕೆ. 'ಡ್ಯಾನ್ಸ್ ದೀವಾನೆ' ಹೆಸರಿನ ನೃತ್ಯ ಸಂಬಂಧಿ ಶೋನ ಚಿತ್ರೀಕರಣಕ್ಕೆಂದು ನೋರಾ ಬೆಂಗಳೂರಿಗೆ ಬಂದಿದ್ದಾರೆ. ಇಂದು ವಿಮಾನ ನಿಲ್ದಾಣದಲ್ಲಿ ಪಾಪರಾಟ್ಜಿಗಳ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.

  ಮುಂಬೈನಲ್ಲಿಯೇ ಸುಸಜ್ಜಿತ ಸ್ಟುಡಿಯೋದ ಸೆಟ್‌ನಲ್ಲಿ ಇಷ್ಟು ದಿನ ಚಿತ್ರೀಕರಣ ಮಾಡಲಾಗುತ್ತಿತ್ತು, ಆದರೆ ಮುಂಬೈನಲ್ಲಿ ಚಿತ್ರೀಕರಣದ ಮೇಲೆ ನಿರ್ಬಂಧ ಹೇರಿರುವ ಕಾರಣ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲು ಇಲ್ಲಿಗೆ ಬಂದಿದೆ ತಂಡ.

  'ಡ್ಯಾನ್ಸ್‌ ದೀವಾನೆ' ಶೋನಲ್ಲಿ ನೋರಾ, ಅತಿಥಿ ಜಡ್ಜ್ ಆಗಿ ಪಾಲ್ಗೊಳ್ಳುತ್ತಿದ್ದಾರೆ. ನೋರಾ ಮಾತ್ರವೇ ಅಲ್ಲದೆ ನಟ ಸೋನು ಸೂದ್ ಸಹ ಈ ಶೋನಲ್ಲಿ ಅತಿಥಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಶೋಗೆ ಮಾಧುರಿ ದೀಕ್ಷಿತ್ ಅವರು ಆಗಮಿಸಬೇಕಾಗಿತ್ತು ಆದರೆ ಅವರು ಗೈರಾಗಿದ್ದಾರೆ.

  ಮುಂಬೈನಲ್ಲಿ ಬಹುಶಿಸ್ತಿನ ಕರ್ಫ್ಯೂ ವಿಧಿಸಲಾಗಿದೆ. ಚಿತ್ರಮಂದಿರಗಳು ಬಂದ್ ಆಗಿದ್ದು, ಎಲ್ಲ ರೀತಿಯ ಚಿತ್ರೀಕರಣಗಳನ್ನು ಬಂದ್ ಮಾಡಲಾಗಿದೆ. ಹಾಗಾಗಿ ಕೆಲವು ರಿಯಾಲಿಟಿ ಶೋಗಳನ್ನು ಚಿತ್ರೀಕರಣ ಮಾಡಲೆಂದು ಬೆಂಗಳೂರು, ನೆರೆಯ ಹೈದರಾಬಾದ್‌ ಮತ್ತಿತರೆ ಕಡೆಗಳಿಗೆ ಬರುತ್ತಿದ್ದಾರೆ ಬಾಲಿವುಡ್‌ ಮಂದಿ.

  ಸಿಹಿಸುದ್ದಿ ಹಂಚಿಕೊಂಡ ಡಾರ್ಲಿಂಗ್ ಜೋಡಿ | Filmibeat Kannada

  ಕರ್ನಾಟಕದಲ್ಲಿಯೂ ಸಹ ಶಿಸ್ತಿನ ಕರ್ಫ್ಯೂ ವಿಧಿಸಲಾಗಿದೆ. ಜನ ಒಟ್ಟಿಗೆ ಸೇರುವುದರ ಮೇಲೆ ನಿರ್ಬಂಧ ಹೇರಲಾಗಿದೆ. ಬೆಂಗಳೂರಿನಲ್ಲಿಯಂತೂ ಕಟ್ಟು ನಿಟ್ಟಿನ ಕರ್ಫ್ಯೂ ಹೇರಲಾಗಿದೆ. ಹೀಗಿದ್ದಾಗ್ಯೂ ಬೆಂಗಳೂರಿನಲ್ಲಿ ಹೇಗೆ ಚಿತ್ರೀಕರಣ ಮಾಡುತ್ತಾರೆ ಎಂಬುದು ಅನುಮಾನ.

  English summary
  Bollywood actress Nora Fatehi came to Bengaluru for Dance Deewane reality show shooting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X