200 ಕೋಟಿ ಸುಲಿಗೆ: ಜಾಕ್ವೆಲಿನ್ ಫರ್ನಾಂಡೀಸ್ ಬಳಿಕ ನೋರಾ ಫತೇಹಿ ವಿಚಾರಣೆ
ವಂಚಕ ಸುಕೇಶ್ ಚಂದ್ರಶೇಖರ್‌ನ 200 ಕೋಟಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ಇಲಾಖೆಯ ಹಣಕಾಸು ಅಪರಾಧ ವಿಭಾಗವು ನಿನ್ನೆ ಸತತ ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿದೆ.
ನಿನ್ನೆ ಜಾಕ್ವೆಲಿನ್ ಫರ್ನಾಂಡೀಸ್ ಫರ್ನಾಂಡೀಸ್ ವಿಚಾರಣೆ ನಡೆಸಿದ್ದ ಪೊಲೀಸರು ಇಂದು ನಟಿ ನೋರಾ ಫತೇಹಿಯ ವಿಚಾರಣೆ ನಡೆಸಲಾಗುತ್ತಿದೆ.
ಪ್ರಕರಣದ ಪ್ರಮುಖ ಆರೋಪಿ ಸುಕೇಶ್ ಚಂದ್ರಶೇಖರ್‌ನಿಂದ ಜಾಕ್ವೆಲಿನ್ ಮಾತ್ರವೇ ಅಲ್ಲದೆ ಗ್ಲಾಮರಸ್ ನಟಿ ನೋರಾ ಫತೇಹಿ ಸಹ ಉಡುಗೊರೆಗಳನ್ನು ಪಡೆದಿದ್ದರು ಹಾಗಾಗಿ ಆಕೆಯನ್ನೂ ದೆಹಲಿ ಪೊಲೀಸರ ಇಲಾಖೆಯ ಹಣಕಾಸು ಅಪರಾಧ ವಿಭಾಗವು ವಿಚಾರಣೆ ನಡೆಸಿದೆ.
ಜಾಕ್ವೆಲಿನ್‌ಗೆ ಮೂರು ಬಾರಿ ದೆಹಲಿ ಪೊಲೀಸರು ಸಮನ್ಸ್ ನೀಡಿದ್ದರು. ಆಗಸ್ಟ್ 29 ಹಾಗೂ ಸೆಪ್ಟೆಂಬರ್ 12 ರಂದು ಸಮನ್ಸ್ ನೀಡಿದಾಗ ನಟಿ ವಿಚಾರಣೆಗೆ ಹಾಜರಾಗಿರಲಿಲ್ಲ. ಇದೀಗ ಮೂರನೇ ಸಮನ್ಸ್‌ಗೆ ವಿಚಾರಣೆ ಎದುರಿಸಿದ್ದಾರೆ.

ಕಳೆದ ವರ್ಷ ಆಗಸ್ಟ್ 30 ಹಾಗೂ ಅಕ್ಟೋಬರ್ 20 ರಂದು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ನೋರಾ ಫತೇಹಿಯನ್ನು (ಇಡಿ) ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ಮಾಡಿದ್ದರು. ವಿಚಾರಣೆ ಸಂದರ್ಭದಲ್ಲಿ ತಾನು ಸುಕೇಶ್ ಚಂದ್ರಶೇಖರ್ ಇಂದ ದುಬಾರಿ ಉಡೊಗರೆ ಪಡೆದಿದ್ದಾಗಿ ಒಪ್ಪಿಕೊಂಡಿದ್ದರು. ಆದರೆ ತಮಗೆ ಸುಕೇಶ್‌ನ ಪರಿಚಯವಾಗಲಿ, ಆತನ ಹಿನ್ನೆಲೆ, ಆದಾಯದ ಮೂಲದ ಬಗ್ಗೆ ಪರಿಚಯ ಇರಲಿಲ್ಲವೆಂದು ಹೇಳಿದ್ದರು. ಪ್ರಕರಣದಲ್ಲಿ ನೋರಾ ಅನ್ನು ಸಾಕ್ಷಿಯನ್ನಾಗಿ ಇಡಿ ಅಧಿಕಾರಿಗಳು ಪರಿಗಣಿಸಿದ್ದರು.
ನಟಿ ಜಾಕ್ವೆಲಿನ್ ಫರ್ನಾಂಡೀಸ್ ಈ ಪ್ರಕರಣದಲ್ಲಿ ಆರೋಪಿಯಾಗಿದ್ದು, ಪ್ರಕರಣದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಟಿ ಜಾಕ್ವೆಲಿನ್ ಫರ್ನಾಂಡೀಸ್, ಸುಕೇಶ್ ಜೊತೆ ಆಪ್ತ ಸಂಬಂಧ ಇರಿಸಿಕೊಂಡಿದ್ದರು. ಹಲವು ದುಬಾರಿ ಉಡುಗೊರೆಗಳನ್ನು ಸುಕೇಶ್‌ನಿಂದ ಪಡೆದಿದ್ದ ಜಾಕ್ವೆಲಿನ್, ತನ್ನ ಸಹೋದರನಿಗೂ ಸುಕೇಶ್‌ನಿಂದ ಹಣ ಕೊಡಿಸಿದ್ದರು.
ನಟಿ ಜಾಕ್ವೆಲಿನ್‌ಗೆ ಸುಕೇಶ್ ಚಂದ್ರಶೇಖರ್‌ನ ಅಪರಾಧಿಕ ಹಿನ್ನೆಲೆ ತಿಳಿದಿತ್ತು ಎಂದು ಇಡಿ ತನ್ನ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದು, ಸುಕೇಶ್‌ನ ಅಪರಾಧಿಕ ಆದಾಯದ ಮೂಲ ತಿಳಿದಾಗಿದ್ದೂ ಸಹ ಜಾಕ್ವೆಲಿನ್, ಸುಕೇಶ್‌ನಿಂದ ಹಣ, ಉಡುಗೊರೆಗಳನ್ನು ಪಡೆದುಕೊಂಡಿದ್ದರು ಎಂದಿದೆ. ಇದೇ ಕಾರಣಕ್ಕೆ ಜಾಕ್ವೆಲಿನ್ ಅನ್ನು ಆರೋಪಿಯನ್ನಾಗಿಸಿದೆ ಇಡಿ.


Click it and Unblock the Notifications











