'ದಿಲ್ ಬರ್' ಬೆಡಗಿಯನ್ನು ಮದುವೆಯಾಗಬೇಕಂತೆ ಈ ಪುಟ್ಟ ಪೋರ: ನಟಿಯ ಪ್ರತಿಕ್ರಿಯೆ ಹೀಗಿದೆ
ಬಾಲಿವುಡ್ ನಲ್ಲಿ ಐಟಂ ಹಾಡುಗಳ ಮೂಲಕವೆ ಪಡ್ಡೆಯುವಕರ ನಿದ್ದೆಗೆಡಿಸಿರುವ ನಟಿ ನೋರಾ ಫತೇಹಿ. ಬ್ಯಾಕ್ ಟು ಬ್ಯಾಕ್ ಐಟಂ ಹಾಡುಗಳಲ್ಲಿ ಕಾಸಿಕೊಳ್ಳುತ್ತಿರುವ ನೋರಾ ಬಾಲಿವುಡ್ ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿದ್ದಾರೆ. ಬಹುಬೇಡಿಕೆ ನಟಿಯಾಗಿ ಗುರುತಿಸಿಕೊಂಡಿರುವ ನೋರಾ ಅಪಾರ ಸಂಖ್ಯೆಯ ಅಭಿಮಾನಿ ಬಗಳಹೊಂದಿದ್ದಾರೆ.
Recommended Video
ನೋರಾ ಅಭಿನಯದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿವೆ. ಯೂ ಟ್ಯೂಬ್ ನಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದು ಲೈಕ್ಸ್ ಗಿಟ್ಟಿಸಿಕೊಳ್ಳುತ್ತಿದೆ. ಭಾರತೀಯ ಸಿನಿಮಾ ಪ್ರಿಯರ ನಿದ್ದೆ ಗೆಡಿಸಿರುವ ನೋರಾ ಕೆನಡಾ ಮೂಲದವರು. ಅದ್ಭುತ ನೃತ್ಯ ಮತ್ತು ಸೌಂದರ್ಯದ ಮೂಲಕ ಅಭಿಮಾನಿಗಳನ್ನು ಸೆಳೆಯುತ್ತಿರುವ ನೋರಾಗೆ ಪುಟ್ಟ ಅಭಿಮಾನಿಯೊಬ್ಬ ಫಿದಾ ಆಗಿದ್ದಾನೆ.
ಪುಟ್ಟ ಪೋರ ನೋರಾ ಅವರನ್ನು ಮದುವೆಯಾಗಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿದ್ದಾನೆ. ಮುದ್ದು ಅಭಿಮಾನಿಗೆ ನಟಿ ನೋರಾ ಸಹ ಪ್ರತಿಕ್ರಿಯೆ ನೀಡಿದ್ದಾರೆ. ಅಭಿಮಾನಿ 'ನಾನು ದಿಲ್ ಬರ್ ನಟಿಯನ್ನು ಮದುವೆಯಾಗಬೇಕೆಂದು' ಹೇಳಿದ್ದಾನೆ. ಈ ವಿಡಿಯೋವನ್ನು ನಟಿ ನೋರಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

"ಹೌದು, ನನಗೆ ಪತಿ ಸಿಕ್ಕಿದ್ದಾರೆ. ನಾವು ಮದುವೆಯಾಗುತ್ತಿದ್ದೇವೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮಕ್ಕಳಿಂದ ವಯಸ್ಸಾದವರೂ ಸಹ ನೋರಾ ಅವರನ್ನು ತುಂಬಾ ಇಷ್ಟಪಡುತ್ತಾರೆ. ನೋರಾ ಪ್ರತಿಕ್ರಿಯೆಗೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ನೋರಾಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಅಂದ್ಹಾಗೆ ನೋರಾ ಫತೇಹಿ ಬಿಗ್ ಬಾಸ್ ಮೂಲಕ ಖ್ಯಾತಿಗಳಿಸಿದ್ದಾರೆ. ಡ್ಯಾನ್ಸ್ ರಿಯಾಲಿಟಿ ಶೋನಲ್ಲಿಯೂ ಕಾಣಿಸಿಕೊಂಡಿರುವ ನೋರಾ ಈಗ ಬಾಲಿವುಡ್ ನ ಬಹುಬೇಡಿಕೆಯ ಐಟಂ ಡ್ಯಾನ್ಸರ್ ಆಗಿದ್ದಾರೆ. ಬಾಲಿವುಡ್ ಮಾತ್ರವಲ್ಲದೆ ತೆಲುಗು ಸಿನಿಮಾದಲ್ಲಿಯೂ ನೋರಾ ಹೆಜ್ಜೆಹಾಕಿದ್ದಾರೆ. ತೆಲುಗಿನ ಬ್ಲಾಕ್ ಬಸ್ಟರ್ ಬಾಹುಬಲಿ ಸಿನಿಮಾದಲ್ಲಿ ನೋರಾ ಕಾಣಿಸಿಕೊಂಡಿದ್ದಾರೆ. ಸದ್ಯ ನೋರಾ ಫತೇಹಿ ಅಜಯ್ ದೇವಗನ್ ಅಭಿನಯದ ಭುಜ್ ಸಿನಿಮಾದಲ್ಲಿ ಹೆಜ್ಜೆ ಹಾಕಿದ್ದಾರೆ. ಈ ಹಾಡಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.


Click it and Unblock the Notifications











