ನೋರಾ ಫತೇಹಿಯ ನಿಜ ಬಣ್ಣ ಬಯಲು ಮಾಡಿದ ಸುಕೇಶ್! ವಂಚಕನ ಹಣದಲ್ಲಿ ಕಾರು, ಬಂಗ್ಲೆ ಖರೀದಿ!

ಮಹಾ ವಂಚಕ ಸುಕೇಶ್ ಚಂದ್ರಶೇಕರ್ ಪ್ರಕರಣ ಬಗೆದಷ್ಟು ಗುಟ್ಟುಗಳು ಹೊರಗೆ ಬರುತ್ತಲೇ ಇವೆ. ಸುಕೇಶ್ ಚಂದ್ರಶೇಕರ್‌ಗೆ ಬಾಲಿವುಡ್‌ನ ನಟಿಯರೊಟ್ಟಿಗೆ ಇದ್ದ ಅತ್ಯಾಪ್ತ ಸಂಬಂಧ ಆಶ್ಚರ್ಯಕ್ಕೆ ಕಾರಣವಾಗಿತ್ತು.

ಸುಕೇಶ್ ಚಂದ್ರಶೇಕರ್ ಜೊತೆ ಹೊಂದಿದ್ದ ಆತ್ಮೀಯ ಸಂಬಂಧದಿಂದಲೇ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಇದೀಗ ಇಡಿಯಿಂದ ಸತತ ವಿಚಾರಣೆ ಎದುರಿಸಿದ್ದಾರೆ. ಇದೇ ಪ್ರಕರಣದಲ್ಲಿ ಮತ್ತೋರ್ವ ಬಾಲಿವುಡ್ ನಟಿ ನೋರಾ ಫತೇಹಿ ಸಹ ಸಿಲುಕಿಕೊಂಡಿದ್ದಾರಾದರೂ ಆಕೆಯನ್ನು ಸಾಕ್ಷಿಯನ್ನಾಗಿ ಇಡಿ ಪರಿಗಣಿಸಿದೆ.

ಜಾಕ್ವೆಲಿನ್ ಫರ್ನಾಂಡೀಸ್‌ಗೆ ದುಬಾರಿ ಕಾರು, ಹಣ, ಮನೆ, ಆಭರಣಗಳನ್ನು ಉಡುಗೊರೆಯಾಗಿ ನೀಡಿದ್ದ ಸುಕೇಶ್ ಚಂದ್ರಶೇಖರ್ ನೋರಾ ಫತೇಹಿಗೂ ಸಹ ಐಶಾರಾಮಿ ಬಿಎಂಡಬ್ಲು ಕಾರನ್ನು ಉಡುಗೊರೆಯನ್ನಾಗಿ ನೀಡಿದ್ದ. ಹಾಗಾಗಿ ನೋರಾ ಫತೇಹಿಯನ್ನು ಸಹ ಇಡಿ ವಿಚಾರಣೆ ನಡೆಸಿತ್ತು. ಬಳಿಕ ಅವರನ್ನು ಸಾಕ್ಷಿಯನ್ನಾಗಿ ಪರಿಗಣಿಸಿತ್ತು.

ನನ್ನ ಹಣದಲ್ಲಿ ಮನೆ ಖರೀದಿಸಿದ್ದಾಳೆ ನೋರಾ: ಸುಕೇಶ್

ನನ್ನ ಹಣದಲ್ಲಿ ಮನೆ ಖರೀದಿಸಿದ್ದಾಳೆ ನೋರಾ: ಸುಕೇಶ್

ನೋರಾ ಫತೇಹಿ, ಇಡಿಗೆ ನೀಡಿದ್ದ ಹೇಳಿಕೆಯಲ್ಲಿ 'ಸುಕೇಶ್ ನನಗೆ ಮನೆ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದ' ಎಂದಿದ್ದರು. ಆದರೆ ಇದೀಗ ಸುಕೇಶ್ ಚಂದ್ರಶೇಖರ್ ಜೈಲಿನಿಂದಲೇ ಮಾಧ್ಯಮ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ''ನಾನು ನೀಡಿದ ಹಣದಿಂದಲೇ ನೋರಾ ಫತೇಹಿ ಮೊರಕ್ಕೊ, ಕ್ಯಾಸಬ್ಲಾಂಕಾ ನಗರಗಳಲ್ಲಿ ತಮ್ಮ ಕುಟುಂಬಕ್ಕಾಗಿ ಭಾರಿ ದೊಡ್ಡ ಮನೆಗಳನ್ನು ಖರೀದಿಸಿದ್ದಾರೆ ಎಂದಿದ್ದಾನೆ.

'ಕೊಡಿಸಿದ್ದ ಬೆಂಜ್ ಸಿಎಲ್‌ಎ ಕಾರನ್ನು ಬೇಡ ಎಂದಳು'

'ಕೊಡಿಸಿದ್ದ ಬೆಂಜ್ ಸಿಎಲ್‌ಎ ಕಾರನ್ನು ಬೇಡ ಎಂದಳು'

ಒಂಬತ್ತು ತಿಂಗಳ ಹಿಂದೆ ನೋರಾ ಫತೇಹಿ ನೀಡಿರುವ ಹೇಳಿಕೆಯಲ್ಲಿ ಆಕೆ ನನ್ನಿಂದ ಕಾರು ಅಪೇಕ್ಷಿಸಿರಲಿಲ್ಲ, ಸುಕೇಶ್‌ನಿಂದ ತನಗಾಗಿ ಕಾರು ಪಡೆದಿರಲಿಲ್ಲ ಎಂದೆಲ್ಲ ಹೇಳಿದ್ದಾಳೆ. ಆದರೆ ಅದೆಲ್ಲ ದೊಡ್ಡ ಸುಳ್ಳು. ನಾನು ಮೊದಲು ಕೊಡಿಸಿದ ಬೆಂಜ್ ಸಿಎಲ್‌ಎ ಆಕೆಗೆ ಬಹಳ ಕಡಿಮೆ ಬೆಲೆಯದ್ದು ಎನಿಸಿ, ನನ್ನ ಹಿಂದೆ ಬಿದ್ದು ಪದೇ ಪದೇ ಪೀಡಿಸಿ ಬಿಎಂಡಬ್ಲು ಎಸ್‌ ಕ್ಲಾಸ್ ಕೊಡಿಸಿಕೊಂಡಳು'' ಎಂದಿದ್ದಾರೆ.

ರೇಂಜ್ ರೋವರ್ ಕಾರು ಕೊಡಿಸುವನಿದ್ದೆ: ಸುಕೇಶ್

ರೇಂಜ್ ರೋವರ್ ಕಾರು ಕೊಡಿಸುವನಿದ್ದೆ: ಸುಕೇಶ್

''ಮೊದಲಿಗೆ ನಾನು ನೋರಾ ಫತೇಹಿಗೆ ರೇಂಜ್ ರೋವರ್ ಕಾರು ಕೊಡೋಣವೆಂದಿದ್ದೆ ಆದರೆ ಅದು ಸ್ಟಾಕ್‌ನಲ್ಲಿ ಇರಲಿಲ್ಲವಾದ್ದರಿಂದ ಆಕೆ ಬಹಳ ತುರ್ತಾಗಿ ಕಾರು ಕೇಳಿದ್ದರಿಂದ ಬಿಎಂಡಬ್ಲು ಎಸ್ ಸೀರೀಸ್‌ ಕಾರು ಕೊಡಿಸಿದೆ. ಆಕೆ ಎನ್‌ಆರ್‌ಐ ಆಗಿರುವ ಕಾರಣ ತನ್ನ ಬೆಸ್ಟ್‌ ಫ್ರೆಂಡ್‌ನ ಪತಿ ಬಾಬಿಯ ಹೆಸರಿಗೆ ಆ ಕಾರನ್ನು ನೊಂದಣಿ ಮಾಡಿಸಿಕೊಂಡಳು'' ಎಂದು ನೋರಾ ಫತೇಹಿಯ ನಿಜ ಬಣ್ಣ ಬಿಚ್ಚಿಟ್ಟಿದ್ದಾನೆ ವಂಚಕ ಸುಕೇಶ್ ಚಂದ್ರಶೇಖರ್.

ಒಂದು ಬಾರಿ ಮಾತ್ರ ಅಧಿಕೃತ ಹಣ ವರ್ಗಾವಣೆ

ಒಂದು ಬಾರಿ ಮಾತ್ರ ಅಧಿಕೃತ ಹಣ ವರ್ಗಾವಣೆ

''ನನ್ನ ಹಾಗೂ ನೋರಾ ಫತೇಹಿ ನಡುವೆ ಅಧಿಕೃತವಾಗಿ ಯಾವುದೇ ಹಣದ ವರ್ಗಾವಣೆ ನಡೆದಿಲ್ಲ. ಆದರೆ ದೊಡ್ಡ ಮೊತ್ತದ ಹಣವನ್ನು ಆಕೆ ಹೇಳಿದವರಿಗೆ ನೀಡಿದ್ದೇನೆ. ಆದರೆ ಒಂದು ಬಾರಿ ಮಾತ್ರ ನನ್ನ ಫೌಂಡೇಶನ್‌ನ ಕಾರ್ಯಕ್ರಮಕ್ಕೆ ಬಂದ ನೋರಾ ಫತೇಹಿಗೆ ನನ್ನ ಖಾತೆಯಿಂದ ಆಕೆಯ ಏಜೆನ್ಸಿಗೆ ಹಣ ಪಾವತಿ ಮಾಡಿದ್ದೆ. ಆಕೆ ಹಾಗೂ ನನ್ನ ನಡುವೆ ನಡೆದಿರುವ ಎಲ್ಲ ವಾಟ್ಸ್‌ ಆಫ್ ಮಾತುಕತೆಗಳ ಸ್ಕ್ರೀನ್‌ಶಾಟ್ ಇಡಿ ಬಳಿ ಭಧ್ರವಾಗಿವೆ. ಇಡಿಯಿಂದ ತಪ್ಪಿಸಿಕೊಳ್ಳಲು ನೋರಾ ಸುಳ್ಳುಗಳನ್ನು ಪೋಣಿಸಿದ್ದಾಳೆ'' ಎಂದಿದ್ದಾನೆ ಸುಕೇಶ್ ಚಂದ್ರಶೇಖರ್.

ಮಹಾನ್ ವಂಚಕ ಸುಕೇಶ್ ಚಂದ್ರಶೇಖರ್

ಮಹಾನ್ ವಂಚಕ ಸುಕೇಶ್ ಚಂದ್ರಶೇಖರ್

ಸುಕೇಶ್ ಚಂದ್ರಶೇಖರ್ ಮಹಾನ್ ವಂಚಕನಾಗಿದ್ದು ತಿಹಾರ್ ಜೈಲಿನಲ್ಲಿದ್ದುಕೊಂಡೆ ನೂರಾರು ಕೋಟಿ ವಂಚನೆ, ಸುಲಿಗೆ ಮಾಡಿದ್ದಾನೆ. ಜಾಕ್ವೆಲಿನ್ ಫರ್ನಾಂಡೀಸ್, ನೋರಾ ಫತೇಹಿ ಸೇರಿದಂತೆ ಬಾಲಿವುಡ್‌ ನ ಹಲವು ನಟಿಯರಿಗೆ ಉಡುಗೊರೆಗಳನ್ನು ಕಳಿಸಿ ಅವರ ಸಂಪರ್ಕವನ್ನು ಸಹ ಸುಕೇಶ್ ಸಾಧಿಸಿದ್ದ. ಜಾಕ್ವೆಲಿನ್ ಫರ್ನಾಂಡೀಸ್ ಜೊತೆಗಂತೂ ಗಂಭೀರ ಸಂಭಂಧವನ್ನೇ ಹೊಂದಿದ್ದ. ಈತನ ಪ್ರಕರಣವನ್ನು ಇದೀಗ ಇಡಿ, ಸಿಬಿಐ ಹಾಗೂ ಐಟಿ ಇಲಾಖೆ ತನಿಖೆ ನಡೆಸುತ್ತಿದೆ.

More from Filmibeat

English summary
Conman Sukesh Chandrashekhar said Nora Fatehi telling lies to ED, She purchased houses in Moracco and Casablanca with my money.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X