"ಸದಾ ನನ್ನ ಹಿಂಭಾಗವನ್ನೇ ಜೂಮ್ ಮಾಡ್ತಾರೆ"; ನೋರಾ ಫತೇಹಿ ಆಕ್ರೋಶ

ಬಾಲಿವುಡ್ ಬ್ಯೂಟಿ ನೋಹಾ ಫತೇಹಿ ತಮ್ಮ ಸ್ಪೆಷಲ್ ಸಾಂಗ್‌ಗಳಿಂದಲೇ ಹೆಚ್ಚು ಸಿನಿರಸಿಕರಿಗೆ ಪರಿಚಿತ. ಕೆನಡಾ ಮೂಲದ ನಟಿ ಸದ್ಯ ಹಿಂದಿ ಸಿನಿಮಾ, ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು ಸಿನಿಮಾಗಳಲ್ಲಿ ಕೂಡ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ. 'ಬಾಹುಬಲಿ-1' ಚಿತ್ರದಲ್ಲಿ ಕೂಡ ಆಗಿ ಬಿಂದಾಸ್ ಸ್ಟೆಪ್ಸ್ ಹಾಕಿದ್ದರು.

ಬಾಲಿವುಡ್‌ ನಟ, ನಟಿಯರು ಹೋದಲ್ಲಿ ಬಂದಲ್ಲಿ ಪಾಪರಾಜಿಗಳು (ಛಾಯಾಗ್ರಾಹಕರು) ಮುತ್ತಿಕೊಳ್ಳುತ್ತಾರೆ. ಏರ್‌ಪೋರ್ಟ್, ಜಿಮ್ ಹೀಗೆ ನಟಿಯರು ಎಲ್ಲೇ ಕಂಡರೂ ಫೋಟೊ, ವಿಡಿಯೋಗಳನ್ನು ಕ್ಲಿಕ್ಕಿಸುತ್ತಾರೆ. ಅದಕ್ಕಾಗಿ ನಟ, ನಟಿಯರು ಹಣ ಕೂಡ ಕೊಡುತ್ತಾರೆ ಎಂದು ಇತ್ತೀಚೆಗೆ ನಟಿ ಪ್ರಿಯಾಮಣಿ ಹೇಳಿಕೊಂಡಿದ್ದರು. ಹಣ ಕೊಟ್ಟರೆ ಪಾಪರಾಜಿಗಳು ಹೀಗೆ ಮುತ್ತಿಕೊಂಡು ಫೋಟೊ ಕ್ಲಿಕ್ಕಿಸಿ ವೈರಲ್ ಮಾಡುತ್ತಾರೆ. ಸಾಕಷ್ಟು ಜನ ನಟಿಯರು ಇದನ್ನು ಮಾಡುತ್ತಿದ್ದಾರೆ ಎಂದಿದ್ದರು.

Nora Fatehi reacts on Paparazzi zooming on her body parts

ಇದೀಗ ಬಿಂದಾಸ್ ಬೆಡಗಿ ನೋಹಾ ಫತೇಹಿ ಪಾಪರಾಜಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ತಮ್ಮ ಖಾಸಗಿ ಭಾಗಗಳನ್ನು ಜೂಮ್ ಮಾಡಿ ತೋರಿಸುತ್ತಾರೆ. ಇದು ಎಷ್ಟು ಸರಿ ಎಂದು ಆಕೆ ಪ್ರಶ್ನಿಸಿದ್ದಾರೆ. "ಅಂತಹ ಪು* ಎಂದೂ ನೋಡಿಲ್ಲ ಎನಿಸುತ್ತದೆ. ಯಾವಾಗಲೂ ಪಾಪರಾಜಿಗಳು ಅದನ್ನೇ ಜೂಮ್ ಮಾಡುತ್ತಾರೆ" ಎಂದು ನೋರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ನನಗೆ ಮಾತ್ರವಲ್ಲ ಎಲ್ಲಾ ನಟಿಯರ ವಿಚಾರದಲ್ಲಿ ಕೂಡ ಪಾಪರಾಜಿಗಳು ಇದೇ ರೀತಿ ಮಾಡುತ್ತಾರೆ. ಬೇರೆಯವರ ಹಿಂಭಾಗ ಇಷ್ಟು ಎಕ್ಸೈಟಿಂಗ್ ಆಗಿ ಇರಲ್ಲ ಎನಿಸುತ್ತೆ. ನನ್ನ ಹಿಂದೆ ಬೀಳುತ್ತಾರೆ. ಯಾವಾಗಲೂ ಅದರ ಮೇಲೆಯೇ ಗಮನ ಇರುತ್ತದೆ. ಅವರು ಹೀಗೆ ಜೂಮ್ ಮಾಡುವ ಉದ್ದೇಶ ಏನೇ ಇರಬಹುದು, ಅದು ಬೇರೆ ವಿಚಾರ. ಆದರೆ ನಾನು ಎಲ್ಲರಿಗೂ ಕರೆದು ತಿಳಿಹೇಳಲು ಸಾಧ್ಯವಿಲ್ಲ, ನಾನು ನಾನು ಈಗಲೂ ಸುತ್ತಾಡುತ್ತಿದ್ದೇನೆ. ನನ್ನ ದೇಹದ ಬಗ್ಗೆ ಬಹಳ ಭರವಸೆ ಇದೆ" ಎಂದಿದ್ದಾರೆ.

ನಟಿ ನೋರಾ ಸರ್ಜರಿ ಗಾಸಿಪ್ ಬಗ್ಗೆಯೂ ಮಾತನಾಡಿದ್ದಾರೆ. ಸಿನಿಮಾ ತಾರೆಯರು ಅಂದವಾಗಿ ಕಾಣಲು ದೇಹದ ವಿವಿಧ ಭಾಗಗಳಿಗೆ ಸರ್ಜರಿ ಮಾಡಿಸಿಕೊಳ್ಳುತ್ತಾರೆ. ಆದರೆ ಕೆಲವರ ಬಗ್ಗೆ ಸುಖಾಸುಮ್ಮನೆ ಅಂತೆ ಕಂತೆ ಸುದ್ದಿ ಹರಿದಾಡುತ್ತದೆ. ಈ ಬಗ್ಗೆಯೂ ನೋರಾ ಪ್ರತಿಕ್ರಿಯಿಸಿದ್ದಾರೆ. "ದುರದೃಷ್ಟವಶಾತ್ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಇದೇ ಟ್ರೆಂಡ್ ಆಗಿರುವ ವಿಷಯಗಳು. ಸಾಮಾಜಿಕ ಮಾಧ್ಯಮ ಅಲ್ಗಾರಿದಮ್ ಆಟ ಆ ರೀತಿ ಇರುತ್ತದೆ. ನನ್ನ ಅದೃಷ್ಟ ನನಗೆ ಒಳ್ಳೆ ದೇಹವಿದೆ. ನಾನು ಸರ್ಜರಿ ಮಾಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ನನ್ನ ದೇಹದ ಬಗ್ಗೆ ಗೌರವವಿದೆ. ಅದೇ ನನ್ನ ಆಸ್ತಿ. ಅದು ಹೇಗೆ ಇದ್ದರೂ ನನಗೆ ನಾಚಿಕೆಯಿಲ್ಲ" ಎಂದಿದ್ದಾರೆ.

Nora Fatehi reacts on Paparazzi zooming on her body parts

ತಮ್ಮನ್ನು ಗ್ಲಾಮರ್ ಡಾಲ್ ರೀತಿ ನೋಡುವ ಬಗ್ಗೆಯೂ ನೋರಾ ಮಾತನಾಡಿದ್ದಾರೆ. "ಸೌಂದರ್ಯ ಮತ್ತು ಅಜ್ಞಾನ ಎರಡೂ ನೋಡುಗರ ಕಣ್ಣಿನಲ್ಲಿದೆ ಎಂದು ನಾನು ಭಾವಿಸುತ್ತೇನೆ. ನಾನು ಕೆಲಸ ಮಾಡುತ್ತಿರುವ ಬಹಳಷ್ಟು ಜನರು ನನ್ನ ಕಥೆಯನ್ನು ಮೆಚ್ಚುತ್ತಾರೆ, ನಾನು ಹೇಗೆ ಬಂದೆ, ನಾನು ಉದ್ಯಮಕ್ಕೆ ಏನು ತಂದಿದ್ದೇನೆ ಮತ್ತು ನನ್ನ ಬ್ರ್ಯಾಂಡ್‌ ಏನು ಎನ್ನುವುದು ಗೊತ್ತು. ಕೆಲವರಿಗೆ ನನ್ನ ಬಗ್ಗೆ ಹೆಚ್ಚು ತಿಳಿದಿಲ್ಲದಿರಬಹುದು, ಅದು ಗೊತ್ತಾಗಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಆದರೆ ನಾನು ಕೆಲಸ ಮಾಡಿದ ಯಾರಾದರೂ ಯಾವಾಗಲೂ ನನ್ನ ಬಗ್ಗೆ ಹೆಚ್ಚಿನ ಗೌರವವನ್ನು ಹೊಂದಿದ್ದಾರೆ. ಅದು ನನಗೆ ಇಷ್ಟವಾಗುತ್ತದೆ. ನಾನು ಏನು ಮಾಡುತ್ತೇನೆ ಎಂಬುದರ ಬಗ್ಗೆ ನಾನು ತುಂಬಾ ಗಂಭೀರವಾಗಿರುತ್ತೇನೆ. ನನಗೆ ವರ್ಕ್ ಎಥಿಕ್ಸ್ ಮುಖ್ಯ" ಎಂದು ಆಕೆ ವಿವರಿಸಿದ್ದಾರೆ.

ನೋರಾ ಫತೇಹಿ ಹೇಳಿಕೆ ಸದ್ಯ ಸಖತ್ ವೈರಲ್ ಆಗುತ್ತಿದೆ. 'ಮಡಗಾಂವ್ ಎಕ್ಸ್‌ಪ್ರೆಸ್' ಚಿತ್ರದಲ್ಲಿ ಆಕೆ ನಟಿಸಿದ್ದಾರೆ. 'ಡ್ಯಾನ್ಸಿಂಗ್ ಡ್ಯಾಡ್' ಹಾಗೂ 'ಮಟ್ಕಾ' ಎನ್ನುವ ಮತ್ತೆರಡು ಸಿನಿಮಾಗಳಲ್ಲಿ ಬಿಂದಾಸ್ ಬೆಡಗಿ ಮಿಂಚಿದ್ದಾರೆ. ಇನ್ನಷ್ಟೆ ಈ ಸಿನಿಮಾಗಳು ತೆರೆಗೆ ಬರಬೇಕಿದೆ.

More from Filmibeat

English summary
Nora Fatehi Outraged over Paparazzi zooming actresses body parts;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X