ಈ ನಟಿ ಧರಿಸಿರುವುದು ದುಬಾರಿ ಬೆಲೆಯ ವಿಗ್: ಅಂಥ ವಿಶೇಷತೆ ಏನಿದೆ.?
'ಸ್ಟ್ರೀಟ್ ಡ್ಯಾನ್ಸರ್ 3D' ಇಂದು ದೇಶದಾದ್ಯಂತ ಬಿಡುಗಡೆ ಆಗಿದೆ. ರೆಮೋ ಡಿಸೋಜ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ವರುಣ್ ಧವನ್, ಶ್ರದ್ಧಾ ಕಪೂರ್, ಪ್ರಭುದೇವ, ನೋರಾ ಫತೇಹಿ ಅಭಿನಯಿಸಿದ್ದಾರೆ.
ನೃತ್ಯ ಸ್ಪರ್ಧೆಯ ಸುತ್ತ ಸುತ್ತುವ 'ಸ್ಟ್ರೀಟ್ ಡ್ಯಾನ್ಸರ್ 3D' ಚಿತ್ರದ ಹಾಡೊಂದಕ್ಕಾಗಿ ನಟಿ ನೋರಾ ಫತೇಹಿ ದುಬಾರಿ ಬೆಲೆಯ ಪೋನಿ ಟೇಲ್ ವಿಗ್ ಧರಿಸಿದ್ದಾರೆ. ನೋರಾ ಫತೇಹಿಗಾಗಿಯೇ ದುಬೈಯಲ್ಲಿ ರೆಡಿ ಮಾಡಲಾದ ಈ ವಿಗ್ ನ ಬೆಲೆ ಬರೋಬ್ಬರಿ 2.5 ಲಕ್ಷ ರೂಪಾಯಿ.!

''ಶ್ರದ್ಧಾ ಕಪೂರ್ ಜೊತೆಗಿನ ಫೇಸ್ ಆಫ್ ಸನ್ನಿವೇಶಕ್ಕಾಗಿ ಉದ್ದನೆಯ ಹಾಗೂ ದಪ್ಪ ಪೋನಿ ಟೇಲ್ ಅವಶ್ಯಕತೆ ಇತ್ತು. ಹೀಗಾಗಿ ನಾನು ಮತ್ತು ನನ್ನ ಮೇಕಪ್ ಎಕ್ಸ್ ಪರ್ಟ್ ದುಬೈನಿಂದ ಪೋನಿ ಟೇಲ್ ವಿಗ್ ತರಿಸಿದ್ವಿ'' ಅಂತಾರೆ ನಟಿ ನೋರಾ ಫತೇಹಿ.
ಅರ್ಧ ಕೆ.ಜಿ ತೂಗುವ ಈ ಪೋನಿ ಟೇಲ್ ವಿಗ್ ಮನುಷ್ಯರ ಕೂದಲಿನಿಂದಲೇ ತಯಾರು ಮಾಡಲಾಗಿದೆ. ''ಡ್ಯಾನ್ಸ್ ಮಾಡುವಾಗ ಈ ಪೋನಿ ಟೇಲ್ ತುಂಬಾ ಭಾರ ಇತ್ತು. ಆದರೂ, ಚೆನ್ನಾಗಿ ಮ್ಯಾನೇಜ್ ಮಾಡಿದ್ದೇನೆ. ಇಡೀ ಚಿತ್ರದಲ್ಲಿ ನಾನು ಬೇರೆ ಬೇರೆ ಲುಕ್ ಟ್ರೈ ಮಾಡಿದ್ದೇನೆ'' ಎಂದಿದ್ದಾರೆ ನಟಿ ನೋರಾ ಫತೇಹಿ.
ಅಂದ್ಹಾಗೆ, ಈ ನೋರಾ ಫತೇಹಿ ಕೆನಡಾ ಮೂಲದ ಡ್ಯಾನ್ಸರ್, ಮಾಡೆಲ್, ನಟಿ ಮತ್ತು ಗಾಯಕಿ. ಹಿಂದಿ, ತೆಲುಗು ಮತ್ತು ಮಲಯಾಳಂ ಚಿತ್ರಗಳ ಸ್ಪೆಷಲ್ ಹಾಡುಗಳಲ್ಲಿ ಸೊಂಟ ಬಳುಕಿಸಿ ನೋರಾ ಫತೇಹಿ ಗುರುತಿಸಿಕೊಂಡಿದ್ದಾರೆ. ಇದೀಗ 'ಸ್ಟ್ರೀಟ್ ಡ್ಯಾನ್ಸರ್ 3D' ಚಿತ್ರದಲ್ಲಿ ನೋರಾ ಫತೇಹಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.


Click it and Unblock the Notifications