ಗಂಡಸು ಅಲ್ಲ ಚಿತ್ರರಂಗದಲ್ಲಿರುವ ಮಹಿಳೆಯೊಬ್ಬಳು ನನ್ನನ್ನು ಮಂಚಕ್ಕೆ ಕರೆದಿದ್ದಳು- ಶಾಕಿಂಗ್ ವಿಚಾರ ಹೇಳಿದ ಖ್ಯಾತ ನಟಿ..!

ಬಣ್ಣದ ಪ್ರಪಂಚದಲ್ಲಿ ನಡೆದ ಬಗೆ ಬಗೆಯ ಲೈಂಗಿಕ ಪ್ರಕರಣ, ಕಿರುಕುಳ, ದೌರ್ಜನ್ಯ ಕುರಿತ ಸುದ್ದಿಗಳನ್ನೂ ನಾವೆಲ್ಲರೂ ಕೇಳುತ್ತಲೇ ಇರುತ್ತೇವೆ. ಮಾಧ್ಯಮಗಳಲ್ಲಿ ನೋಡುತ್ತಲೇ ಇರುತ್ತೇವೆ. ಆದರೆ ಹೀಗೆ ನಡೆದ ಸಾಕಷ್ಟು ಲೈಂಗಿಕ ಪ್ರಕರಣಗಳು ಹೇಳ ಹೆಸರಿಲ್ಲದೇ ಕಾಣದಂತಾಗುತ್ತದೆ. ಇನ್ನೂ ಕೆಲವೊಮ್ಮೆ ಪ್ರಜ್ಞಾವಂತ ನಾಯಕಿಯರು ತಮ್ಮ ಛಲದಿಂದ ತೆರೆಮರೆಯ ಕಳ್ಳಾಟ ಬಹಿರಂಗ ಪಡಿಸಿದ್ದಾರೆ. ಕಾಮುಕರ ಮುಖವಾಡ ಕಳಚಿದ್ದಾರೆ.

ಒಂದರ್ಥದಲ್ಲಿ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬುದು ಬಟ್ಟೆ ಬದಲಿಸಿದಷ್ಟೇ ಸಾಮಾನ್ಯವಾಗಿದೆ. ಪ್ರತಿಯೊಬ್ಬ ನಟಿಮಣಿಯರೂ ಒಂದಿಲ್ಲೊಂದು ಸಂದರ್ಭಗಳಲ್ಲಿ ಇಂತಹ ಸನ್ನಿವೇಶಗಳಲ್ಲಿ ನಲುಗಿದವರೇ ಆಗಿರುತ್ತಾರೆ.

Not Men Women Asked Me to Compromise for a Role at 19 Saiyami Kher s Casting Couch Confession

ಇನ್ನು ಮಲಯಾಳಂ ಚಿತ್ರರಂಗದಲ್ಲಿನ ಕಾಮಕಾಂಡದ ಕುರಿತು ಕಳೆದ ವರ್ಷ ಹೇಮಾ ಆಯೋಗ ವರದಿ ನೀಡಿದ ಬೆನ್ನಲ್ಲಿ ಇನ್ನೊಮ್ಮೆ ಈ ಪಾತ್ರಕ್ಕಾಗಿ ಪಲ್ಲಂಗದ ಬಿರುಗಾಳಿ ಎದ್ದಿದೆ.

ಕೇವಲ ಮಲಯಾಳಂನಲ್ಲಿ ಅಷ್ಟೇ ಅಲ್ಲ ಭಾರತದ ಬೇರೆ ಬೇರೆ ಭಾ‍ಷೆಯಲ್ಲಿ ಕೂಡ ಕಾಮುಕರು ತುಂಬಿ ತುಳುಕುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಬೇರೆ ಬೇರೆ ಭಾಷೆಯಲ್ಲಿನ ನಟಿಯರು ತಮಗಾದ ಕಹಿ ಅನುಭವ ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೆ ಸಯಾಮಿ ಖೇರ್ ಸದ್ಯದ ಉದಾಹರಣೆ.

ಹೌದು, ಸಯಾಮಿ ಖೇರ್.. ತೆಲುಗಿನ 'ರೇ' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಚೆಲುವೆ. ಆ ನಂತರ ಬಾಲಿವುಡ್‌ನಲ್ಲಿ ಮಿರ್ಜ್ಯಾ.. ಚೋಕಡ್ .. 8ಎ.ಎಮ್ ಮೆಟ್ರೋ .. ಗೂಮರ್ ..ಚಿತ್ರಗಳಲ್ಲಿ ಕಾಣಿಸಿಕೊಂಡ ಸಯಾಮಿ ಖೇರ್ ಸ್ಪೆಷಲ್ ಓಪಿಎಸ್ ವೆಬ್ ಸರಣಿಯಲ್ಲಿ ಕೂಡ ಕಾಣಿಸಿಕೊಂಡರು. ಇದಲ್ಲದೇ ತೆಲುಗಿನಲ್ಲಿ ನಾಗಾರ್ಜುನ ಅಭಿನಯದ ವೈಲ್ಡ್ ಡಾಗ್ ಮತ್ತು ಆನಂದ್ ದೇವರಕೊಂಡ ಅಭಿನಯದ ಹೈವೇ ಚಿತ್ರಗಳಲ್ಲಿ ಕೂಡ ತಮ್ಮ ಅಭಿನಯದ ಮೂಲಕ ಗಮನ ಸೆಳೆದರು.

ಇಂಥಾ ಸಯಾಮಿ ಖೇರ್ ಸದ್ಯ ತಮಗಾದ ಅನುಭವ ಹಂಚಿಕೊಂಡಿದ್ದಾರೆ. ತೆಲುಗು ಚಿತ್ರವೊಂದಕ್ಕೆ ನನಗೆ ಮಂಚಕ್ಕೆ ಕರೆದಿದ್ದರು ಎಂದು ಹೇಳಿರುವ ಸಯಾಮಿ ನನ್ನನ್ನೂ ಕರೆದಿದ್ದು ನಿರ್ದೇಶಕ ಅಥವಾ ನಿರ್ಮಾಪಕ ಅಲ್ಲ ಬದಲಿಗೆ ಮಹಿಳೆಯೊಬ್ಬಳು ನನಗೆ ರಾಜಿ ಮಾಡಿಕೊಳ್ಳುವಂತೆ ಹೇಳಿದ್ದಳು ಇದರಿಂದ ನನಗೆ ತುಂಬಾ ಆಘಾತವಾಗಿತ್ತು ಎಂದು ಹೇಳಿದ್ದಾರೆ.

ಈ ಕುರಿತು 'ಬಾಲಿವುಡ್ ಬಬಲ್‌'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸಯಾಮಿ, '' ನನಗೆ ಆಗಿನ್ನೂ 19 ಅಥವಾ 20 ವಯಸ್ಸಾಗಿರಬೇಕಷ್ಟೇ. ಆಗ ತೆಲುಗು ಚಿತ್ರದ ಅವಕಾಶ ನನಗೆ ಬಂದಿತ್ತು, ಕಾಸ್ಟಿಂಗ್ ಏಜೆಂಟ್‌ ಆಗಿದ್ದ ಮಹಿಳೆಯೊಬ್ಬರು ನನಗೆ ಕರೆ ಮಾಡಿದ್ದರು, ಮಾತನಾಡುತ್ತಾ ನೀವು ರಾಜಿ ಮಾಡಿಕೊಳ್ಳಬೇಕಾಗುತ್ತೆ ಎಂದು ಹೇಳಿದರು. ಆಗ ನನಗೆ ಅರ್ಥವಾಗಿದ್ದರೂ ಕೂಡ ನಾನು ಪರೀಕ್ಷೆ ಮಾಡಲು ಅರ್ಥವಾಗದಂತೆ ಅಭಿನಯಿಸಿದೆ, ಮಹಿಳೆಯಾಗಿ ಇನ್ನೊಬ್ಬ ಮಹಿಳೆಯನ್ನು ಮಂಚಕ್ಕೇರುವಂತೆ ಹೇಳುತ್ತಿರುವುದನ್ನು ಕಂಡು ನನಗೆ ಆಗ ಆಘಾತವಾಗಿತ್ತು'' ಎಂದು ಸಯಾಮಿ ಖೇರ್ ಹೇಳಿದ್ಧಾರೆ.

ಮುಂದುವರೆದು ಮಾತನಾಡಿರುವ ಸಯಾಮಿ ''ಮೇಡಂ ನೀವು ಏನು ಹೇಳ್ತಿದ್ದೀರಾ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ ಎಂದು ನಾನು ಹೇಳಿದೆ, ಆಗ ಆ ಮಹಿಳೆ ಮತ್ತೆ ವಿಚಾರವನ್ನು ಹೇಳಿದಳು ನೀವು ಅರ್ಥ ಮಾಡಿಕೊಳ್ಳಬೇಕು ಎಂದಳು ಆಗ ನಾನು ಪಾತ್ರಕ್ಕಾಗಿ ಅವಕಾಶಕ್ಕಾಗಿ ನಾನು ಎಂತಹ ಕೆಳ ಮಟ್ಟಕ್ಕಾದರೂ ಇಳಿಯಬಲ್ಲೆ ಎಂದು ನೀವು ಅಂದುಕೊಂಡಿದ್ದಕ್ಕೆ ನನಗೆ ವಿಷಾದ ಇದೆ, ನನಗೆ ನನ್ನದೇ ಆದ ಮಿತಿಗಳಿವೆ, ನನ್ನದೇ ಆದ ಆದರ್ಶಗಳಿವೆ, ನಾನು ನೀವು ಅಂದುಕೊಂಡಂತಹ ಹೆಣ್ಣು ಅಲ್ಲ'' ಎಂದು ಹೇಳಿದ್ದೇ ಎಂದು ಹೇಳಿದ್ದಾರೆ.

ಆದರೆ.. ಸಯಾಮಿ ಖೇರ್ ತಮಗೆ ಕರೆ ಮಾಡಿದ್ದ ಆ ಮಹಿಳೆಯ ಹೆಸರಾಗಲಿ .. ತಮಗೆ ಬಂದಿದ್ದ ಆ ಚಿತ್ರದ ಹೆಸರಾಗಲಿ.. ಈ ಸಂದರ್ಶನದಲ್ಲಿ ಹೇಳಿಲ್ಲ. ಸದ್ಯ ಸಯಾಮಿ ಖೇರ್ ಅವರ ಈ ಮಾತುಗಳು ತೆಲುಗು ಚಿತ್ರರಂಗದಲ್ಲಿ ಚರ್ಚೆಗೆ ಕಾರಣವಾಗಿವೆ. ಸಯಾಮಿ ಖೇರ್‌ಗೆ ಕರೆ ಮಾಡಿದ್ದ ಆ ಕಾಸ್ಟಿಂಗ್ ಏಜೆಂಟ್ ಯಾರು ? ಅದ್ಯಾವ ಚಿತ್ರದ ನಿರ್ದೇಶಕ ನಿರ್ಮಾಪಕನ ಜೊತೆ ರಾಜಿ ಮಾಡಿಕೊಳ್ಳುವಂತೆ ಆ ಕಾಸ್ಟಿಂಗ್ ಏಜೆಂಟ್ ಸಯಾಮಿ ಖೇರ್‌ಗೆ ಹೇಳಿದ್ದಳು ಎಂಬ ಪ್ರಶ್ನೆ ಈಗ ಅನೇಕರನ್ನು ಕಾಡುತ್ತಿದೆ.

More from Filmibeat

English summary
Saiyami Kher revealed that when she was 19, she faced a casting couch situation in the Telugu film industry. Surprisingly, it was women — not men — who asked her to compromise in exchange for a role.
Read more about: casting couch me too actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X