ಮಾಲ್ಡೀವ್ಸ್‌ನ ಬೋಲ್ಡ್ ಫೋಟೋ ಹಂಚಿಕೊಂಡು ಹನಿಮೂನ್ ಫೋಟೋವಲ್ಲ ಎಂದ ಪರಿಣಿತಿ ಚೋಪ್ರಾ!
ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮದುವೆ ಬಳಿಕ ಮೊದಲ ಬಾರಿಗೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಮಾಲ್ಡೀವ್ಸ್‌ನಲ್ಲಿರುವ ಅವರು ತಮ್ಮ ರಜೆ ದಿನಗಳನ್ನು ಆನಂದಿಸುತ್ತಿದ್ದು, ಫೋಟೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ.
ಬೋಲ್ಡ್ ಫೋಟೋ ಹಂಚಿಕೊಂಡ ಪರಿಣಿತಿ ಚೋಪ್ರಾ
ಇನ್‌ಸ್ಟಾಗ್ರಾಮ್‌ನಲ್ಲಿ ಪರಿಣಿತಿ ಹಂಚಿಕೊಂಡಿರುವ ಚಿತ್ರದಲ್ಲಿ, ನಟಿ ಕಪ್ಪು ಮತ್ತು ಹಳದಿ ಬಣ್ಣದ ಸ್ವಿಮ್ ಸೂಟ್ ಧರಿಸಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕೈ ತುಂಬಾ ಮದುವೆಯ ಬಳೆಗಳು ಧರಿಸಿರುವ ಅವರು, ಸೈಡ್ ಆಂಗಲ್‌ನಲ್ಲಿ ಮುಗುಳ್ನಕ್ಕು ಫೋಟೋಗೆ ಫೋಸ್ ನೀಡಿದ್ದಾರೆ. ಫೋಟೋದ ಬ್ಯಾಕ್‌ಗ್ರೌಂಡ್‌ನಲ್ಲಿ ಸ್ಪಷ್ಟವಾದ ಆಕಾಶ ಮತ್ತು ನೀಲಿ ಸಮುದ್ರ ಕಾಣುತ್ತಿದೆ.

ಫೋಟೋಗೆ ಪರಿಣಿತಿ ಚೋಪ್ರಾ ಸ್ಪಷ್ಟನೆ
ತಮ್ಮ ಫೋಟೋವನ್ನು ಹಂಚಿಕೊಂಡ ಪರಿಣಿತಿ ಚೋಪ್ರಾ, " ಇದು ಹನಿಮೂನ್ ಫೋಟೋವಲ್ಲ! ಅತ್ತಿಗೆ ತೆಗೆದ ಫೋಟೋ" ಎಂದಿದ್ದಾರೆ. ಜೊತೆಗೆ ನಗುವ ಎಮೋಜಿಗಳನ್ನು ಹಾಕಿದ್ದಾರೆ. ಜೊತೆಗೆ ಗರ್ಲ್ಸ್ ಟ್ರಿಪ್ ಎಂದು ಹೇಳಿದ್ದು, ಇದು ಹುಡುಗಿಯರೇ ಹೋಗಿರುವ ಪ್ರವಾಸ ಎಂಬುದನ್ನು ಒತ್ತಿ ಹೇಳಿದ್ದಾರೆ.
ಇದಕ್ಕೂ ಮುನ್ನ ಪರಿಣಿತಿ ಅವರು ತಮ್ಮ ಪತಿ, ರಾಜಕಾರಣಿ ರಾಘವ್ ಚಡ್ಡಾ ಅವರೊಂದಿಗಿನ ಹನಿಮೂನ್ ಹೋಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅವಳು ಒಂದು ಕಪ್ ಕಾಫಿ ಹಿಡಿದುಕೊಂಡು ತನ್ನ ಬಳೆಗಳನ್ನು ತೋರಿಸುವ ಫೋಟೋವನ್ನು ಹಂಚಿಕೊಂಡಿದ್ದಳು. ಪರಿಣಿತಿ ಮತ್ತು ರಾಘವ್ ಸೆಪ್ಟೆಂಬರ್ 24 ರಂದು ಉದಯಪುರದಲ್ಲಿ ಅದ್ದೂರಿ ವಿವಾಹ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.
ಇತ್ತೀಚೆಗೆ ರ‍್ಯಾಂಪ್ ವಾಕ್ ಮಾಡಿದ್ದ ಪರಿಣಿತಿ ಚೋಪ್ರಾ
ಇತ್ತೀಚೆಗಷ್ಟೇ ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ ನವ ವಧು ರ‍್ಯಾಂಪ್ ವಾಕ್ ಮಾಡಿದ್ದರು. ಶೋಸ್ಟಾಪರ್ ಆಗಿದ್ದ ಅವರು ಭಾರವಾದ ಬಾರ್ಡರ್ ಕಸೂತಿಯ ಕ್ರೀಮ್ ಕಲರ್ ಸೀರೆಯನ್ನು ಧರಿಸಿದ್ದರು. ಜೊತೆಗೆ ಬೈತಲೆಗೆ ಸಿಂಧೂರ ಮತ್ತು ಗುಲಾಬಿ ಬಣ್ಣದ ಬಳೆಗಳನ್ನು ಧರಿಸಿ ವೇದಿಕೆ ಮೇಲೆ ಹೆಜ್ಜೆ ಹಾಕಿದ್ದರು. ಮಿನುಗುತ್ತಿದ್ದ ಸೀರೆಯಲ್ಲಿ ದುಪಟ್ಟಾವನ್ನು ಹೆಗಲಿನಿಂದ ಕೆಳಗೆ ಇಳಿ ಬಿಟ್ಟಿದ್ದರು.

ರ‍್ಯಾಂಪ್ ವಾಕ್ ಬಳಿಕ ಮಾತನಾಡಿದ್ದ ಅವರು, "ಇದು ಮದುವೆಯ ನಂತರ ನನ್ನ ಮೊದಲ ರ‍್ಯಾಂಪ್ ವಾಕ್ ಮತ್ತು ನಾನು ನನ್ನ ತವರು ನಗರವಾದ ದೆಹಲಿಯಲ್ಲಿದ್ದೇನೆ. ಈ ಕಾರಣಕ್ಕೆ ಇದು ತುಂಬಾ ವಿಶೇಷ. ಕರಿಷ್ಮಾ ಅವರು ನನ್ನ ಮೆಚ್ಚಿನ ಡಿಸೈನರ್‌ಗಳಲ್ಲಿ ಒಬ್ಬರು. ಅವರ ಡಿಸೈನ್ ತುಂಬಾ ಇಷ್ಟ. ಹೀಗಾಗಿ ನನ್ನ ಮದುವೆಯ ಬಟ್ಟೆಗಳಲ್ಲಿ ಒಂದು ಬಟ್ಟೆ ಅವರದ್ದು ಇದೆ" ಎಂದು ಹೇಳಿದ್ದರು.
ಪರಿಣಿತಿ ಚೋಪ್ರಾ ಅವರ ಸಿನಿಮಾಗಳು
ಪರಿಣಿತಿ ಚೋಪ್ರಾ ಕೊನೆಯದಾಗಿ ಮಿಷನ್ ರಾಣಿಗಂಜ್: ದಿ ಗ್ರೇಟ್ ಭಾರತ್ ರೆಸ್ಕ್ಯೂ ಚಿತ್ರದಲ್ಲಿ ನಟ ಅಕ್ಷಯ್ ಕುಮಾರ್ ಎದುರು ಕಾಣಿಸಿಕೊಂಡಿದ್ದರು. ಚಿತ್ರವು ಅಕ್ಟೋಬರ್ 6 ರಂದು ಬಿಡುಗಡೆಯಾಗಿದೆ. ಈ ಹಿಂದೆ ನಟಿ ಅಕ್ಷಯ್ ಕುಮಾರ್ ಜೊತೆಗೆ ಕೇಸರಿ ಸಿನಿಮಾದಲ್ಲಿ ಜೋಡಿಯಾಗಿದ್ದರು.
ಇನ್ನು ಪರಿಣಿತಿ ಚೋಪ್ರಾ ಕೈಯಲ್ಲಿ ದಿಲ್ಜಿತ್ ದೋಸಾಂಜ್ ಅವರ ಸಿನಿಮಾ ಇದೆ. ಗಾಯಕ, ನಟ ದಿಲ್ಜಿತ್ ದೋಸಾಂಜ್ ಜೊತೆಗೆ ಚಮ್ಕಿಲಾ ಸಿನಿಮಾ ಮಾಡುತ್ತಿದ್ದಾರೆ. ಇಮ್ತಿಯಾಜ್ ಅಲಿ ನಿರ್ದೇಶಿಸುತ್ತಿರುವ ಈ ಚಿತ್ರವು ಇಬ್ಬರು ಪ್ರಸಿದ್ಧ ಪಂಜಾಬಿ ಗಾಯಕರಾದ ಅಮರಜೋತ್ ಕೌರ್ ಮತ್ತು ಅಮರ್ ಸಿಂಗ್ ಚಮ್ಕಿಲಾ ಅವರ ನಿಜ ಜೀವನದ ಕಥೆಯನ್ನು ಹೇಳಲಿದೆ.


Click it and Unblock the Notifications











