ಚಿತ್ರರಂಗದಲ್ಲೊಬ್ಬ ಹೆಣ್ಣು ಬಾಕ ನಿರ್ದೇಶಕ, ಒಬ್ಬರಲ್ಲ, ಇಬ್ಬರಲ್ಲ 10 ನಟಿಯರಿಗೆ ಲೈಂಗಿಕ ಕಿರುಕುಳ ನೀಡಿದ ಡೈರೆಕ್ಟರ್ ..!

ಇದು ಬಣ್ಣದ ಲೋಕ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನುವಂತೆ, ಹೊರಗಡೆಯಿಂದ ಈ ಲೋಕ ತುಂಬಾನೇ ಕಲರ್ ಫುಲ್ ಆಗಿ ಕಾಣುತ್ತೆ. ಆದರೆ .. ಅದರ ಒಳಹೊಕ್ಕಾಗಲೇ ಬಣ್ಣ ಅಸಲಿ ಅಲ್ಲ ನಕಲಿ ಅನ್ನುವುದು ಮನದಟ್ಟಾಗುತ್ತೆ. ಮುಖವಾಡದ ಬದುಕು ಎಷ್ಟೊಂದು ವಿಚಿತ್ರ ಎಂದು ಅನ್ಸುತ್ತೆ. ಇನ್ನು, ಚಿತ್ರರಂಗದಲ್ಲಿ ಅಮಾಯಕ ಹೆಣ್ಣು ಮಕ್ಕಳನ್ನು ಕಂಡರೆ ಮುಕ್ಕಿ ತಿನ್ನುವರು ತುಂಬಾ ಜನ ಇದ್ದಾರೆ.

ಕೇವಲ ಆ ಇಂಡಸ್ಟ್ರೀ ಈ ಇಂಡಸ್ಟ್ರೀ ಅಂತ ಅಲ್ಲ. ಎಲ್ಲ ಚಿತ್ರೋದ್ಯಮಗಳಲ್ಲಿ ಬಹುತೇಕ ಕಥೆ ಒಂದೇ. ಇದಕ್ಕೆ ಕೈಗನ್ನಡಿ ಎಂಬಂತೆ ಇಲ್ಲಿಯವರೆಗೆ ಹಲವು ನಾಯಕಿಯರು ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಬಿಕ್ಕಿದ್ದಾರೆ. ಪಾತ್ರದ ಹೆಸರಿನಲ್ಲಿ ತಮ್ಮನ್ನು ಮಂಚಕ್ಕೆ ಕರೆದ ವ್ಯಕ್ತಿಗಳ ಜನ್ಮವನ್ನೂ ಜಾಲಾಡಿದ್ದಾರೆ. ಇದಕ್ಕೆ ನವೀನಾ ಬೋಲೆ ಸದ್ಯದ ಉದಾಹರಣೆ.

Not One or Two This Director Has Been Accused of Misconduct by 10 Actresses

ಹೌದು, ನವೀನಾ ಬೋಲೆ ಹಿಂದಿ ಕಿರುತೆರೆಯ ನಾಯಕಿ. ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ ಇವರಿಗೆ ಅಪಾರ ಹೆಸರು ತಂದು ಕೊಟ್ಟ ಧಾರಾವಾಹಿಗಳಲ್ಲೊಂದು. ಯೇ ಹೈ ಮೊಹಬ್ಬತೇ, ಕುಂಕುಮ್ ಭಾಗ್ಯ, ಸಪ್ನಾ ಬಾಬುಲ್ ಕಾ, ಹೀಗೆ ಹಲವಾರು ಸೀರಿಯಲ್‌ಗಳಲ್ಲಿ ನವೀನಾ ಬೋಲೆ ಕಾಣಿಸಿಕೊಂಡಿದ್ದಾರೆ.

ಇಂಥಾ ನವೀನಾ ಬೋಲೆ ಬಾಲಿವುಡ್‌ನ ಪ್ರಖ್ಯಾತ ನಿರ್ದೇಶಕ ಸಾಜಿದ್ ಖಾನ್ ವಿರುದ್ಧ ಕಿಡಿ ಕಾರಿದ್ದಾರೆ. ಅವನಂತಹ ಹೊಲಸು ವ್ಯಕ್ತಿ ಮತ್ತೊಬ್ಬ ಇರಲಾರ ಎಂದು ಹೇಳಿದ್ದಾರೆ. ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ.

ಸುಭೋಜಿತ್ ಘೋಷ್ ಅವರಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ನವೀನಾ ಬೋಲೆ ಅದು 2004 ರಿಂದ 2006ರ ಸಮಯ ಇರಬಹುದು ಆಗ ಸಾಜಿದ್ ಖಾನ್ ಕಡೆಯಿಂದ ನನಗೆ ಕರೆ ಬಂತು, ಚಿತ್ರದಲ್ಲಿನ ಒಂದು ಪಾತ್ರಕ್ಕೆ ಆತ ನನಗೆ ಕರೆ ಮಾಡಿದ್ದ, ನನ್ನನ್ನೂ ಬಂದು ಭೇಟಿ ಮಾಡಿ ಎಂದು ಹೇಳಿದ್ದ ಎಂದಿರುವ ನವೀನಾ ಸಹಜವಾಗಿ ನನಗೆ ಚಿತ್ರದ ಅವಕಾಶ ಬಂದ ಹಿನ್ನೆಲೆ ಅವತ್ತು ಖುಷಿಯಾಗಿತ್ತು ಎಂದು ಹೇಳಿದ್ದಾರೆ.

ಆದರೆ ಆ ವ್ಯಕ್ತಿ ಅವನ ಕಚೇರಿಗೆ ಕರೆದಿರಲಿಲ್ಲ ಬದಲಿಗೆ ಮನೆಗೆ ಕರೆದಿದ್ದ ಆದರೂ ಕೂಡ ನಾನು ಅಲ್ಲಿ ಹೋದೆ ಎಂದಿರುವ ನವೀನಾ ಬೋಲೆ ನಿನ್ನ ಬಟ್ಟೆಗಳನ್ನೆಲ್ಲ ತೆಗೆದು ಕೇವಲ ಒಳ ಉಡುಪಿನಲ್ಲಿ ಯಾಕೆ ಕುಳಿತುಕೊಳ್ಳಬಾರದು, ನೀನು ಎಷ್ಟು ಕಂಫರ್ಟಬಲ್ ಆಗಿದೀಯಾ ಎಂದು ನಾನು ನೋಡಬೇಕು ಎಂದು ಹೇಳಿದ್ದ ಎಂದು ಹೇಳಿದ್ದಾರೆ.

ಸಾಜಿದ್ ಖಾನ್ ಆಡಿದ ಈ ಮಾತು ಕೇಳಿ ನನಗೆ ಏನು ಹೇಳಬೇಕೆನ್ನುವುದು ಗೊತ್ತಾಗಲಿಲ್ಲ, ನಾನು ಹೇಗೋ ಅಲ್ಲಿಂದ ಬಂದೆ ಎಂದಿರುವ ನವೀನಾ ಬೋಲೆ ನಾನು ಮನೆಗೆ ಮರಳಿ ಬರುವ ಸಮಯದಲ್ಲಿ ನನಗೆ 50 ಬಾರಿಯಾದರೂ ಅವನು ಕರೆ ಮಾಡಿದ್ದ ಎಂದು ಹೇಳಿದ್ದಾರೆ. ಎಲ್ಲಿದೀಯಾ, ಎಲ್ಲಿಗೆ ತಲುಪಿದ್ದೀಯಾ ಎಂದೆಲ್ಲ ಪ್ರಶ್ನೆ ಕೇಳುತ್ತಿದ್ದ ಎಂದು ಹೇಳಿದ್ದಾರೆ.

ಮುಂದುವರೆದು ಸಾಜಿದ್ ಖಾನ್ ಎಂತಹ ಹೆಣ್ಣುಬಾಕ ಅಂದರೆ ನನ್ನ ಜೊತೆ ಅವನು ವರ್ತಿಸಿದ ರೀತಿ ಅವನಿಗೆ ನೆನಪಿಲ್ಲ ಎಂದಿರುವ ನವೀನಾ ಪುನಃ ಒಂದು ವರ್ಷದ ನಂತರ ಮತ್ತೆ ನನಗೆ ಕರೆ ಮಾಡಿದ ಏನು ಮಾಡುತ್ತಿದ್ದೀರಿ ಒಂದು ಪಾತ್ರ ಇದೆ ಬಂದು ಭೇಟಿ ಮಾಡಿ ಎಂದು ಹೇಳಿದ ಎಂದು ಹೇಳಿದ್ದಾರೆ. ಆಗ ಇವನು ಹೆಣ್ಣು ಪೀಡಕ ಎಂದು ನನಗೆ ಮನದಟ್ಟಾಯಿತು ಎಂದು ಹೇಳಿದ್ದಾರೆ.

ಅಂದ್ಹಾಗೇ ಸಾಜಿದ್ ಖಾನ್ ಮೇಲೆ ಇದೇ ಮೊದಲ ಆರೋಪ ಅಲ್ಲ. ಸಾಜಿದ್ ಖಾನ್ ಅವರಿಂದ ನಲುಗಿದ ನಾಯಕಿಯರಲ್ಲಿ ನವೀನಾ ಬೊಲೆ ಮೊದಲಿಗರಲ್ಲ. ಈ ಹಿಂದೆ 2018ರಲ್ಲಿ ಭಾರತದೆಲ್ಲೆಡೆ ಮೀಟೂ ಅಲೆ ಎದ್ದ ಸಮಯದಲ್ಲಿ ಹಲವಾರು ನಾಯಕಿಯರು ತಮಗಾದ ಕಹಿ ಅನುಭವ ಹಂಚಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ಒಬ್ಬರಲ್ಲ.. ಇಬ್ಬರಲ್ಲ.. ಒಂಬತ್ತು ಜನ ಸಾಜಿದ್ ಖಾನ್ ಅವರ ಕರಾಳ ಮುಖವನ್ನು ಬಯಲು ಮಾಡಿದ್ದರು.

ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ, ಮಂದನ ಕರಿಮಿ, ರಾಚೆಲ್ ವೈಟ್, ಸಿಮ್ರನ್ ಸೂರಿ, ಮರೀನಾ ಕುವರ್, ಆಹನಾ ಕುಮ್ರಾ, ಡಿಂಪಲ್ ಪೌಲಾ, ಸಲೋನಿ ಚೋಪ್ರಾ ಮತ್ತು ಪತ್ರಕರ್ತೆ ಕರೀಶ್ಮಾ ಉಪಾಧ್ಯಯ, ಸಾಜಿದ್ ಖಾನ್ ವಿರುದ್ಧ ಕೆಂಡ ಕಾರಿದ್ದರು. ಅವಕಾಶ ನೀಡುವ ನೆಪದಲ್ಲಿ ಸಾಜಿದ್ ಖಾನ್ ತಮ್ಮನ್ನು ಹೇಗೆಲ್ಲ ಬಳಸಿಕೊಳ್ಳಲು ಪ್ರಯತ್ನಿಸಿದ, ಹೇಗೆಲ್ಲ ಕಾಡಿದ ಎಂದು ಹೇಳಿದ್ದರು. ಈ ಸಾಲಿಗೆ ಈಗ ನವೀನಾ ಬೋಲೆ ಸೇರಿಕೊಂಡಿದ್ದಾರೆ.

ಮೀಟೂ ಅಲೆಯಲ್ಲಿ ಸಿಲುಕಿ ಕೆಲಸ ಕಳೆದುಕೊಂಡಿದ್ದ ಸಾಜಿದ್ ಖಾನ್

ಇನ್ನುಳಿದಂತೆ 2018ರಲ್ಲಿ ಒಬ್ಬರಾದ ನಂತರ ಒಬ್ಬರು ಸಾಜಿದ್ ಖಾನ್ ವಿರುದ್ಧ ಆರೋಪ ಮಾಡಿದ ಬೆನ್ನಲ್ಲೇ, ಸಾಜಿದ್ ಖಾನ್ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು. ಹೌಸ್‌ಫುಲ್ 4 ಚಿತ್ರದಿಂದ ನಿರ್ದೇಶಕನ ಸ್ಥಾನದಿಂದ ಕೂಡ ಸಾಜಿದ್ ಖಾನ್ ಅವರನ್ನು ತೆಗೆದು ಹಾಕಲಾಗಿತ್ತು. ಇದಾದ ನಂತರ ಸಾಜಿದ್ ಖಾನ್ ಅಕ್ಷರಶಃ ನಿರುದ್ಯೋಗಿಯಾದರು. ಅಲ್ಲಿಂದ ಇಲ್ಲಿಯವರೆಗೆ ಸಾಜಿದ್ ಖಾನ್ ಒಂದೇ ಒಂದು ಚಿತ್ರವನ್ನು ಕೂಡ ನಿರ್ದೇಶನ ಮಾಡಿಲ್ಲ.

ಕೆಲಸ ಇಲ್ಲದೇ ಬಿಗ್ ಬಾಸ್ ಮನೆಗೆ ಹೋಗಿದ್ದ ಸಾಜಿದ್ ಖಾನ್

ಇದರ ನಡುವೆ ಸಾಜಿದ್ ಖಾನ್ 2022ರಲ್ಲಿ ಬಿಗ್ ಬಾಸ್ ಸೀಸನ್ 16ರಲ್ಲಿ ಸ್ಫರ್ಧಿಯಾಗಿ ಭಾಗವಹಿಸಿದ್ದರು. ಆಗಲೂ ಕೂಡ ಸಾಜಿದ್ ಖಾನ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಕೂಡಲೇ ಸಾಜಿದ್ ಖಾನ್ ಅವರನ್ನು ಮನೆಯಿಂದ ಹೊರಗಡೆ ಕಳುಹಿಸಬೇಕೆನ್ನುವ ಕೂಗು ಕೇಳಿ ಬಂದಿತ್ತು. ಈ ಸಮಯದಲ್ಲಿ ಸಾಜಿದ್ ಖಾನ್ ಅವರ ಪರ ವಕಾಲತ್ತು ವಹಿಸಿದ್ದ ರಾಖಿ ಸಾವಂತ್ ಸಾಜಿದ್ ಖಾನ್ ನನಗೆ ಆಪ್ತ ಅಲ್ಲ. ಆದರೂ ಕೂಡ ಮಾನವೀಯತೆ ದೃಷ್ಟಿಯಿಂದ ಹೇಳುವುದಾದರೆ ಅವನನ್ನು ನೀವೆಲ್ಲ ಬದುಕೋಕೆ ಬಿಡಿ ಎಂದು ಹೇಳಿದ್ದರು. ಹೀಗೆ ಮುಂದುವರೆದರೆ ಒಂದಿಲ್ಲೊಂದು ದಿನ ಅವನು ಆತ್ಮಹತ್ಯೆ ಮಾಡಿಕೊಳ್ತಾನೆ ಎಂದು ರಾಖಿ ಸಾವಂತ್ ಹೇಳಿದ್ದರು.

ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಪತ್ರ ಬರೆದಿದ್ದ ಮಹಿಳಾ ಆಯೋಗ

ಇನ್ನು ಬಿಗ್ ಬಾಸ್‌ನಲ್ಲಿ ಸಾಜಿದ್ ಖಾನ್ ಸ್ಪರ್ಧಿಯಾಗಿದ್ದ ಹಿನ್ನೆಲೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಅವರನ್ನು ಕಾರ್ಯಕ್ರಮದಿಂದ ತೆಗೆದುಹಾಕಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಸಚಿವಾಲಯಕ್ಕೆ ಪತ್ರ ಬರೆದಿದ್ದರು. ಸಾಜಿದ್ ಖಾನ್ ಅವರನ್ನು ಕೂಡಲೇ ಕಾರ್ಯಕ್ರಮದಿಂದ ತೆಗೆದು ಹಾಕಬೇಕೆಂದು ಒತ್ತಾಯಿಸಿದ್ದರು.

ಹೀಗೆ ಕಾಲ ಕಾಲಕ್ಕೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಿಲುಕಿ ಒದ್ದಾಡುತ್ತಾನೇ ಬರುತ್ತಿರುವ ಸಾಜಿದ್ ಖಾನ್ ಮೇಲೀಗ ನವೀನಾ ಬೋಲೆ ಆರೋಪ ಮಾಡಿದ್ದಾರೆ. ಈ ಮೂಲಕ ಸಾಜಿದ್ ಖಾನ್ ಅವರ ಕರಾಳ ಮುಖವನ್ನು ಮತ್ತೊಮ್ಮೆ ಕಳಿಚಿದ್ದಾರೆ. ಈ ಆರೋಪಕ್ಕಾದರೂ ಸಾಜಿದ್ ಖಾನ್ ಮೌನ ಮುರಿಯುತ್ತಾರಾ, ಮಾತನಾಡುತ್ತಾರಾ ಎನ್ನುವುದನ್ನು ಈಗ ಕಾದು ನೋಡಬೇಕಿದೆ.

ಇನ್ನು ಸಾಜಿದ್ ಖಾನ್ ಸಾಮಾನ್ಯ ವ್ಯಕ್ತಿಯಲ್ಲ. ಬಾಲಿವುಡ್‌ನ ಸ್ಟಾರ್‌ ಕೊರಿಯೋಗ್ರಾಫರ್ ಫರ್ಹಾ ಖಾನ್ ಅವರ ಸಹೋದರ. ಕಳೆದ ಬಾರಿ ತಮ್ಮ ಸಹೋದರನ ಮೇಲೆ ಲೈಂಗಿಕ ಕಿರುಕುಳದ ಆರೋಪ ಬಂದಾಗ ಫರ್ಹಾ ಖಾನ್ ಮಾತನಾಡಿದ್ದರು. ಈ ಬಾರಿ ಕೂಡ ತಮ್ಮ ಸಹೋದರನ ಪರ ವಕಾಲತ್ತು ವಹಿಸುತ್ತಾರಾ ? ಲೆಟ್ಸ್ ಸೀ..

More from Filmibeat

English summary
The storm around filmmaker Sajid Khan grows stronger as actress Navina Bole alleges he made an indecent demand during a private meeting. With this, Khan now faces misconduct accusations from 10 women, including those who spoke out during the #MeToo wave in 2018. The pattern of disturbing claims shows no sign of fading.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X