twitter
    For Quick Alerts
    ALLOW NOTIFICATIONS  
    For Daily Alerts

    ದಿಲೀಪ್ ಮಾತ್ರವಲ್ಲ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸೆಲೆಬ್ರಿಟಿಗಳ ದಂಡೇ ಇದೆ..

    By Suneel
    |

    ಬಹುಭಾಷಾ ನಟಿ ಅಪಹರಣ ಮತ್ತು ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಮಲಯಾಳಂ ನಟ ದಿಲೀಪ್ ಬಂಧನ ಹಿನ್ನೆಲೆ ಈಗ ಚಿತ್ರರಂಗದಲ್ಲಿ ಇಂತಹ ಪ್ರಕರಣಗಳಲ್ಲಿ ಕೇಳಿಬಂದ ಹೆಸರುಗಳ ಮೇಲೆ ಬೆಳಕು ಚೆಲ್ಲಿದೆ.

    ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ನಟ ದಿಲೀಪ್ ಹೆಸರು ಮಾತ್ರವಲ್ಲದೇ, ವಿವಿಧ ಪ್ರಕರಣಗಳಲ್ಲಿ ಬಾಲಿವುಡ್ ನ ರಾಷ್ಟ್ರ ಪ್ರಶಸ್ತಿ ವಿಜೇತ ಮಧುರ್ ಭಂಡಾರ್ಕರ್ ರವರಿಂದ ಹಿಡಿದು ಶೈನಿ ಅಹುಜಾ ವರೆಗೂ ಹೆಸರುಗಳು ಕೇಳಿಬಂದಿದೆ. ಆದರೆ ಅವುಗಳಲ್ಲಿ ಕೆಲವರ ಮೇಲಿನ ಆರೋಪ ಸಾಬೀತಾಗಿದ್ದು, ಇನ್ನು ಹಲವರ ಮೇಲಿನ ಆರೋಪ ಸಾಬೀತಾಗಿಲ್ಲ.

    ಬಣ್ಣದ ಜಗತ್ತಿನಲ್ಲಿ ಹಲವು ಸ್ಟಾರ್‌ಗಳ ಮೇಲೆ ಇಂತಹ ಆರೋಪಗಳು ಕೇಳಿಬರುವುದು ಸಾಮಾನ್ಯವಾಗಿದ್ದು, ಈ ಹಿಂದೆ ಇಂತಹ ಪ್ರಕರಣಗಳ ಬಗ್ಗೆ ರಣವೀರ್ ಸಿಂಗ್ ಮತ್ತು Ayushmann Khurrana ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದರು. ಅಂತಹ ಕೆಲವು ಪ್ರಕರಣಗಳ ಲಿಸ್ಟ್ ಈ ಕೆಳಗಿನಂತಿದೆ.

    ಶಕ್ತಿ ಕಪೂರ್ ಮತ್ತು ಅಮನ್ ವರ್ಮಾ

    ಶಕ್ತಿ ಕಪೂರ್ ಮತ್ತು ಅಮನ್ ವರ್ಮಾ

    2005 ರಲ್ಲಿ ವರದಿಗಾರರೊಬ್ಬರು ಬಾಲಿವುಡ್ ನಟರಾದ ಶಕ್ತಿ ಕಪೂರ್ ಮತ್ತು ಅಮನ್ ವರ್ಮಾ ರವರ ಬಳಿ ಅಭಿನಯಕ್ಕೆ ಚಾನ್ಸ್ ಕೇಳಿಕೊಂಡು ಹೋಗಿದ್ದ ವೇಳೆ ಅವರು ಮಂಚಕ್ಕೆ ಕರೆದಿದ್ದರು ಎಂಬುದು ಸ್ಟಿಂಗ್ ಆಪರೇಷನ್ ನಿಂದ ಬಯಲಾದ ಬಗ್ಗೆ ವರದಿಯಾಗಿತ್ತು.

    'ಚೆನ್ನೈ ಎಕ್ಸ್‌ಪ್ರೆಸ್' ನಿರ್ಮಾಪಕರ ವಿರುದ್ಧ ಕೇಸ್

    'ಚೆನ್ನೈ ಎಕ್ಸ್‌ಪ್ರೆಸ್' ನಿರ್ಮಾಪಕರ ವಿರುದ್ಧ ಕೇಸ್

    ಇದೇ ವರ್ಷ 'ಚೆನ್ನೈ ಎಕ್ಸ್‌ಪ್ರೆಸ್' ನಿರ್ಮಾಪಕರಾದ ಕರಿಮ್ ಮೊರಾನಿ ವಿರುದ್ಧ, 'ನನ್ನನ್ನು ಮದುವೆ ಆಗುವುದಾಗಿ ನಂಬಿಸಿ ಮುಂಬೈ ನಲ್ಲಿ ಹಲವು ಬಾರಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ್ದಾರೆ' ಎಂದು 25 ವರ್ಷದ ಮಹಿಳೆಯೊಬ್ಬರು ಆರೋಪಿಸಿ ದೂರು ದಾಖಲಿಸಿದ್ದರು.

    ಶೈನಿ ಅಹುಜಾ ಪ್ರಕರಣ

    ಶೈನಿ ಅಹುಜಾ ಪ್ರಕರಣ

    ಶೈನಿ ಅಹುಜಾ ಅವರ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಬಾಲಿವುಡ್ ನಲ್ಲಿ ಬಿಗ್ ನ್ಯೂಸ್ ಆಗಿತ್ತು. ಹುಡುಗಿಯೊಬ್ಬಳು 2009 ಶೈನಿ ಅಹುಜಾ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. ಅನಂತರ ಈಕೆ ಈ ದೂರನ್ನು ವಾಪಸ್ಸು ಪಡೆಯಲು ಮುಂದಾದರು ಚಾರ್ಜ್ ಶೀಟ್ ವಿಧಿಸಿದ್ದ ಕಾರಣ ತ್ರಿಸದಸ್ಯ ಪೀಠದ ನ್ಯಾಯಾದೀಶರು ದೂರನ್ನು ಹಿಂಪಡೆಯುವುದಕ್ಕೆ ಅನುಮತಿ ನೀಡಲಿಲ್ಲ. 2011 ರಲ್ಲಿ ಅಹುಜಾ ಅವರಿಗೆ ಏಳು ವರ್ಷಗಳ ಕಾಲ ಕಠಿಣ ಶಿಕ್ಷೆ ವಿಧಿಸಲಾಯಿತು. ಶಿಕ್ಷೆಯನ್ನು ಪ್ರಶ್ನಿಸಿ ಅಹುಜಾ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಮನವಿ ಇನ್ನು ಬಗೆಹರಿದಿಲ್ಲ.

    ಮಹಮ್ಮದ್ ಫರೂಕಿ

    ಮಹಮ್ಮದ್ ಫರೂಕಿ

    'ಪೀಪ್ಲಿ ಲೈವ್' ಚಿತ್ರದ ಸಹ-ನಿರ್ದೇಶಕ ಮಹಮ್ಮದ್ ಫರೂಕಿ ರವರು 2015 ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದ ವಿದ್ವಾಂಸಕಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಏಳು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಆದರೆ ಫರೂಕಿ ತಾವು ತಪ್ಪಾಗಿ ಈ ಪ್ರಕರಣದಲ್ಲಿ ಸಿಲುಕಿರುವುದಾಗಿ ಹೇಳಿದ್ದಾರೆ. ಈ ಕೇಸ್ ವಿರುದ್ಧ ಅವರ ಹೆಂಡತಿ ಅನುಷ ರಿಜ್ವಿ ಇನ್ನೂ ಹೋರಾಡುತ್ತಿದ್ದಾರೆ.

    ಮಧುರ್ ಭಂಡಾರ್ಕರ್

    ಮಧುರ್ ಭಂಡಾರ್ಕರ್

    'ಫ್ಯಾಷನ್' ಚಿತ್ರದ ನಿರ್ದೇಶಕ ಮಧುರ್ ಭಂಡಾರ್ಕರ್ ಅವರು ಒಮ್ಮೆ ಈ ಪ್ರಕರಣದಲ್ಲಿ ಸಿಲುಕಿದ್ದರು. ನಂತರ ಪ್ರಕರಣವನ್ನು ಡಿಸ್‌ಮಿಸ್ ಮಾಡಲಾಯಿತು. ರೂಪದರ್ಶಿ ಪ್ರೀತಿ ಜೈನ್ ಎಂಬುವರು ಮಧುರ್ ಭಂಡಾರ್ಕರ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು 2004 ರಲ್ಲಿ ಆರೋಪಿಸಿ ದೂರು ದಾಖಲಿಸಿದ್ದರು. ಅನಂತರ ಕೇಸ್ ಯೂ ಟರ್ನ್ ಹೊಡೆಯಿತು.

    'ಕ್ವೀನ್' ನಿರ್ದೇಶಕ ವಿಕಾಶ್ ಬಾಲ್

    'ಕ್ವೀನ್' ನಿರ್ದೇಶಕ ವಿಕಾಶ್ ಬಾಲ್

    'ಕ್ವೀನ್' ಚಿತ್ರ ನಿರ್ದೇಶಕ ವಿಕಾಶ್ ಬಾಲ್ ರವರು ಸಹ ಇತ್ತೀಚೆಗೆ ಲೈಂಗಿಕ ಪ್ರಕರಣದ ಹಿನ್ನೆಲೆಯಲ್ಲಿ ಸುದ್ದಿ ಆಗಿದ್ದರು. 'ಫಾಂಟಮ್ ಫಿಲ್ಮ್ಸ್' ನ ಸಹೋದ್ಯೋಗಿ ಒಬ್ಬರು ಇವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಆರೋಪಿಸಿದ್ದರು. ಆದರೆ ನಿರ್ದೇಶಕರು ಸಹೋದ್ಯೋಗಿಗೆ ತಮ್ಮ ಕಂಪನಿಯಲ್ಲಿ ಕೆಲಸ ಮಾಡಲು ಎರಡನೇ ಚಾನ್ಸ್ ನೀಡಿ ಅನುರಾಗ್ ಕಶ್ಯಪ್, ಮಧು ಮಂಟೆನಾ ಅವರ ಎದುರೇ ವಾರ್ನ್ ನೀಡಿದ್ದ ಬಗ್ಗೆ ವರದಿಯಾಗಿತ್ತು.

    ಇದು ಬಾಲಿವುಡ್ ಅಂಗಳದ ಕತೆಯಾದರೆ, ಟಾಲಿವುಡ್ ಮತ್ತು ಕಾಲಿವುಡ್ ಅಂಗಳದಲ್ಲೂ ಇಂತಹ ಹಲವು ಕತೆಗಳಿವೆ.

    English summary
    Not only Dileep, many celebrities named in sexual assault and harassment cases.
    Thursday, July 13, 2017, 19:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X