For Quick Alerts
  ALLOW NOTIFICATIONS  
  For Daily Alerts

  'ಚಪಾಕ್' ಚಿತ್ರದಲ್ಲಿ ಆಸಿಡ್ ಎರಚಿದವನ ಹೆಸರು ರಾಜೇಶ್ ಅಲ್ಲ: ಬಷೀರ್ ಖಾನ್.!

  |

  ಜೆ.ಎನ್.ಯು ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಪಾಲ್ಗೊಂಡು ಬೆಂಬಲ ಸೂಚಿಸಿದ ಮೇಲೆ ವ್ಯಾಪಕ ಪರ-ವಿರೋಧ ಚರ್ಚೆ ನಡೆಯುತ್ತಿದೆ.

  ''ಪ್ರತಿಭಟನೆಯಲ್ಲಿ ದೀಪಿಕಾ ಪಡುಕೋಣೆ ಪಾಲ್ಗೊಂಡಿರುವುದು 'ಚಪಾಕ್' ಚಿತ್ರದ ಪ್ರಚಾರಕ್ಕಾಗಿ. ಹೀಗಾಗಿ 'ಚಪಾಕ್' ಚಿತ್ರವನ್ನು ಬಹಿಷ್ಕರಿಸಿ'' ಎಂಬ ಟ್ವೀಟ್ ಗಳು ಶುರುವಾಯ್ತು. ಪರಿಣಾಮ ಟ್ವಿಟ್ಟರ್ ನಲ್ಲಿ #BoycottChhapaak ಟ್ರೆಂಡ್ ಆಯ್ತು. ಈ ಬೆನ್ನಲ್ಲೇ 'ಚಪಾಕ್' ಚಿತ್ರ ವಿವಾದದ ಕೇಂದ್ರಬಿಂದು ಆಗಿದೆ.

  'ಚಪಾಕ್' ಹೇಳಿ ಕೇಳಿ ಆಸಿಡ್ ಅಟ್ಯಾಕ್ ಸಂತ್ರಸ್ತೆ ಲಕ್ಷ್ಮಿ ಅಗರ್ವಾಲ್ ಜೀವನಾಧಾರಿತ ಚಿತ್ರ. ಈ ಚಿತ್ರದಲ್ಲಿ ಲಕ್ಷ್ಮಿ ಅಗರ್ವಾಲ್ ಹೆಸರನ್ನ ಮಾಲತಿ ಅಗರ್ವಾಲ್ ಅಂತ ಚೇಂಜ್ ಮಾಡಲಾಗಿದೆ. ಹಾಗೇ, ಲಕ್ಷ್ಮಿ ಅಗರ್ವಾಲ್ ಮುಖದ ಮೇಲೆ ಆಸಿಡ್ ಎರಚಿದ ದುಷ್ಕರ್ಮಿ ನದೀಮ್ ಖಾನ್ ಹೆಸರನ್ನ 'ರಾಜೇಶ್' ಅಂತ ಬದಲಾಯಿಸಲಾಗಿದೆ ಎಂಬ ಕಾಂಟ್ರವರ್ಸಿ ಆರಂಭವಾಯ್ತು. ಈ ಬಗ್ಗೆ ಚಿತ್ರತಂಡ ಸ್ಪಷ್ಟನೆ ನೀಡಿದೆ. ಮುಂದೆ ಓದಿರಿ...

  'ಚಪಾಕ್' ಬಹಿಷ್ಕರಿಸಿ ಎಂಬ ಟ್ವೀಟ್ಸ್

  'ಚಪಾಕ್' ಬಹಿಷ್ಕರಿಸಿ ಎಂಬ ಟ್ವೀಟ್ಸ್

  ಆಸಿಡ್ ಎರಚಿದ ದುಷ್ಕರ್ಮಿಯ ಧರ್ಮವನ್ನು ಬದಲಾವಣೆ ಮಾಡಿದ 'ಚಪಾಕ್' ಚಿತ್ರವನ್ನು ಬಹಿಷ್ಕರಿಸಿ ಎಂದು ಕೆಲವರು ಟ್ವೀಟ್ ಮಾಡಿದ್ದರು. ಇದೀಗ ಇದೇ ವಿಚಾರಕ್ಕೆ ಸಂಬಂಧ ಪಟ್ಟಂತೆ ಚಿತ್ರತಂಡದಿಂದ ವಿವರಣೆ ಸಿಕ್ಕಿದೆ.

  JNU ವಿದ್ಯಾರ್ಥಿಗಳಿಗೆ ದೀಪಿಕಾ ಬೆಂಬಲ: 'ಚಪಾಕ್' ಟಿಕೆಟ್ ಬುಕ್ಕಿಂಗ್ ಕ್ಯಾನ್ಸಲ್ ಮಾಡುತ್ತಿರುವ ನೆಟ್ಟಿಗರುJNU ವಿದ್ಯಾರ್ಥಿಗಳಿಗೆ ದೀಪಿಕಾ ಬೆಂಬಲ: 'ಚಪಾಕ್' ಟಿಕೆಟ್ ಬುಕ್ಕಿಂಗ್ ಕ್ಯಾನ್ಸಲ್ ಮಾಡುತ್ತಿರುವ ನೆಟ್ಟಿಗರು

  ಪಾತ್ರದ ಹೆಸರು ಬಷೀರ್ ಖಾನ್.!

  ಪಾತ್ರದ ಹೆಸರು ಬಷೀರ್ ಖಾನ್.!

  ಸಿನಿಮಾದಲ್ಲಿ ಲಕ್ಷ್ಮಿ ಅಗರ್ವಾಲ್ ಗೆ ಆಸಿಡ್ ಎರಚಿದ ದುಷ್ಕರ್ಮಿಯ ಹೆಸರನ್ನು ಬದಲಾಯಿಸಿರುವುದು ನಿಜ. ಆದ್ರೆ, ಧರ್ಮವನ್ನು ಬದಲಾವಣೆ ಮಾಡಿಲ್ಲ. ಲಕ್ಷ್ಮಿ ಅಗರ್ವಾಲ್ ಮೇಲೆ ಆಸಿಡ್ ದಾಳಿ ಮಾಡಿದ ನದೀಮ್ ಖಾನ್ ಪಾತ್ರಕ್ಕೆ ಬಷೀರ್ ಖಾನ್ ಎಂಬ ಹೆಸರಿಡಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.

  'ಚಪಾಕ್' ಸಿನಿಮಾಗೆ ದೊಡ್ಡ ವಿರೋಧ: ಕೆಂಗಣ್ಣಿಗೆ ಗುರಿಯಾದ ದೀಪಿಕಾ'ಚಪಾಕ್' ಸಿನಿಮಾಗೆ ದೊಡ್ಡ ವಿರೋಧ: ಕೆಂಗಣ್ಣಿಗೆ ಗುರಿಯಾದ ದೀಪಿಕಾ

  ಬೇರೆ ಪಾತ್ರಕ್ಕೆ ರಾಜೇಶ್ ಹೆಸರು

  ಬೇರೆ ಪಾತ್ರಕ್ಕೆ ರಾಜೇಶ್ ಹೆಸರು

  ಅಸಲಿಗೆ, 'ಚಪಾಕ್' ಚಿತ್ರದಲ್ಲಿ ರಾಜೇಶ್ ಎಂಬ ಪಾತ್ರ ಕೂಡ ಇದೆ. ಲಕ್ಷ್ಮಿ ಅಗರ್ವಾಲ್ (ಮಾಲತಿ ಅಗರ್ವಾಲ್) ಫ್ರೆಂಡ್ ಪಾತ್ರಕ್ಕೆ ರಾಜೇಶ್ ಅಂತ ಹೆಸರಿಡಲಾಗಿದೆ.

  ನಾಳೆ ಬಿಡುಗಡೆ

  ನಾಳೆ ಬಿಡುಗಡೆ

  ಲಕ್ಷ್ಮಿ ಅಗರ್ವಾಲ್ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಅಭಿನಯದ 'ಚಪಾಕ್' ಚಿತ್ರ ನಾಳೆ (ಜನವರಿ 10) ರಿಲೀಸ್ ಆಗಲಿದೆ. ಮೇಘನಾ ಗುಲ್ಜರ್ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ನಟಿ ದೀಪಿಕಾ ಪಡುಕೋಣೆ ಬಂಡವಾಳ ಕೂಡ ಹಾಕಿದ್ದಾರೆ.

  English summary
  Not Rajesh, Antagonist name in Deepika Padukone starrer Chhapaak is Bashir Khan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X