ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಪೋಸ್ಟ್‌ಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ

ಲೋಕಸಭೆ ಚುನಾವಣೆ ಇನ್ನು ಮುಗಿದಿಲ್ಲ. ಈಗಾಗಲೇ 4 ಹಂತದಲ್ಲಿ ಮತದಾನ ನಡೆದಿದೆ. ಇನ್ನು ಮೂರು ಹಂತಗಳಲ್ಲಿ ದೇಶದ ವಿವಿಧ ಕ್ಷೇತ್ರಗಳಲ್ಲಿ ಜನ ಮತ ಚಲಾಯಿಸಬೇಕಿದೆ. ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅಭಿವೃದ್ಧಿಗೆ ಮತ ನೀಡಿ ಎಂದು ಹೇಳಿದ್ದು ವೈರಲ್ ಆಗಿತ್ತು.

10 ವರ್ಷಗಳಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಮುಂಬೈ ಅಟಲ್ ಸೇತುವೆ ಮೇಲೆ ಕಾರಿನಲ್ಲಿ ಪ್ರಯಾಣಿಸುತ್ತಾ ರಶ್ಮಿಕಾ ಮಂದಣ್ಣ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದರು. ಕಣ್ಣು ತೆರೆದು ನೋಡಿ. 22 ಕಿಮೀ ಉದ್ದದ ಆರು ಪಥದ ಸೇತುವೆಯು ಪ್ರಯಾಣದ ಸಮಯವನ್ನು 2 ಗಂಟೆಗಳಿಂದ ಕೇವಲ ನಿಮಿಷಗಳಿಗೆ ಕಡಿಮೆ ಮಾಡುತ್ತದೆ ಎಂದು ಅವರು ಹೇಳಿದ್ದರು. ಭಾರತವು ದೊಡ್ಡ ಕನಸುಗಳನ್ನು ಹೊಂದಿರಲಿಲ್ಲ ಎನ್ನುತ್ತಿದ್ದರು ಆದರೆ 7 ವರ್ಷಗಳಲ್ಲಿ ಈ ಸೇತುವೆಯ ನಿರ್ಮಾಣ ಪೂರ್ಣಗೊಂಡಿದೆ ಎಂದು ರಶ್ಮಿಕಾ ಹೇಳಿದ್ದರು.

Nothing more satisfying than PM Modi Reacts To actress Rashmika Mandanna words from atal setu

ಅಟಲ್ ಸೇತು ಮೂಲಕ ಅಭಿವೃದ್ಧಿ ಹೊಂದಿದ ಭಾರತದ ಹೆಬ್ಬಾಗಿಲು ತೆರೆದುಕೊಂಡಿದೆ. ಇದು ನಮ್ಮ ಯುವ ಭಾರತಕ್ಕೆ ಸೇತುವೆ ಮಾತ್ರವಲ್ಲ. ನೂರಾರು ಸೇತುವೆಗಳು ನಿರ್ಮಾಣವಾಗಬೇಕಾದರೆ ಜನರು ಎಚ್ಚೆತ್ತುಕೊಂಡು ಅಭಿವೃದ್ಧಿಗೆ ಮತ ನೀಡಿ ಎಂದು ರಶ್ಮಿಕಾ ಕರೆ ನೀಡಿದರು. ಸೌತ್ ಇಂಡಿಯಾ ಟು ನಾರ್ತ್ ಇಂಡಿಯಾ, ವೆಸ್ಟ್ ಇಂಡಿಯಾ ಟು ಈಸ್ಟ್ ಇಂಡಿಯಾ.. ಕನೆಕ್ಟಿಂಗ್ ಹಾರ್ಟ್ಸ್.. ಮೈ ಇಂಡಿಯಾ ಎಂದು ಟ್ವಿಟರ್‌ನಲ್ಲಿ ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ರಶ್ಮಿಕಾ ಮಂದಣ್ಣ ಯಾವ ಪಕ್ಷಕ್ಕೆ ಮತ ನೀಡಿ ಎಂದು ಹೇಳಿದ್ದರು ಎನ್ನುವುದು ಆಕೆ ಹೇಳದಿದ್ದರೂ ಬಹುತೇಕರಿಗೆ ಅರ್ಥವಾಗಿತ್ತು. ಕೆಲವರು ಮೇಡಂ ಮೊದಲು ನೀವು ಈ ವರ್ಷ ಮತ ಚಲಾಯಿಸಿದ್ರಾ? ಎಂದು ಪ್ರಶ್ನಿಸಿದ್ದರು. ಇದೀಗ ಆಕೆ ಹಾಕಿರುವ ಪೋಸ್ಟ್‌ಗೆ ಮತ್ತಷ್ಟು ಕಾಮೆಂಟ್ಸ್ ಬಂದಿವೆ. ರಶ್ಮಿಕಾ ಮಂದಣ್ಣ ನಿಧಾನವಾಗಿ ಕಂಗನಾ ರಾಣಾವತ್ ಆಗಿ ಬದಲಾಗುತ್ತಿರುವುದನ್ನು ನೋಡಿ ಎಂದು ವ್ಯಂಗ್ಯವಾಡಿದ್ದರು.

ಸದ್ಯ ರಶ್ಮಿಕಾ ಮಂದಣ್ಣ ಟ್ವೀಟ್‌ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. ಆಕೆಯ ಟ್ವೀಟ್ ರೀ-ಟ್ವೀಟ್ ಮಾಡಿ "ಖಂಡಿತವಾಗಿಯೂ.. ಜನರನ್ನು ಸಂಪರ್ಕಿಸುವುದು ಮತ್ತು ಜೀವನವನ್ನು ಸುಧಾರಿಸುವುದಕ್ಕಿಂತ ಹೆಚ್ಚು ಸಂತೃಪ್ತಿ ಮತ್ತೊಂದಿಲ್ಲ" ಎಂದು ಬರೆದುಕೊಂಡಿದ್ದಾರೆ.

ಅಟಲ್ ಸೇತುವೆ ಮೇಲೆ ಪ್ರಯಾಣಿಸುತ್ತಾ ಎಎನ್‌ಐ ವಾಹಿನಿ ರಶ್ಮಿಕಾ ಏನು ಹೇಳಿದ್ದರು ಎಂದು ನೋಡುವುದಾದರೆ "ಎರಡು ಗಂಟೆಗಳ ಪ್ರಯಾಣವನ್ನು 20 ನಿಮಿಷಗಳಲ್ಲಿ ಮಾಡಬಹುದು. ಈಗ ನವಿ ಮುಂಬೈಯಿಂದ ಮುಂಬೈಗೆ, ಗೋವಾದಿಂದ ಮುಂಬೈವರೆಗೆ ಹಾಗೂ ಬೆಂಗಳೂರುನಿಂದ ಮುಂಬೈವರೆಗೆ ಎಲ್ಲಾ ಪ್ರಯಾಣಗಳನ್ನು ತುಂಬಾ ಸುಲಭವಾಗಿ ಮಾಡಲಾಗಿದೆ. ಅದೂ ಕೂಡ ಅದ್ಭುತ ಮೂಲಸೌಕರ್ಯದೊಂದಿಗೆ. ಇದು ನನಗೆ ಹೆಮ್ಮೆ ಎನಿಸುತ್ತದೆ. ಯುವ ಪೀಳಿಗೆ - ಯುವ ಭಾರತ - ಅಂತಹ ವೇಗದಲ್ಲಿ ಬೆಳೆಯುತ್ತಿದೆ. ಭಾರತವು ಅತ್ಯಂತ ಬುದ್ಧಿವಂತ ದೇಶ, ನಾನು ಹೇಳಲು ನಾನು ಬಯಸುತ್ತೇನೆ. ಯುವ ಭಾರತೀಯರು ಮತ ಚಲಾಯಿಸಬೇಕು" ಎಂದು ಹೇಳಿದ್ದರು.

"ದೇಶದ ಯುವಜನತೆ ಈಗ ತುಂಬಾ ಜವಾಬ್ದಾರರಾಗಿರುತ್ತಾರೆ ಮತ್ತು ನೀವು ಏನು ಹೇಳಿದರೂ ಅವರು ಪ್ರಭಾವಿತರಾಗುತ್ತಿದ್ದಾರೆ. ಜನರು ನಿಜವಾಗಿಯೂ ನೋಡುತ್ತಿದ್ದಾರೆ, ಜನರು ತುಂಬಾ ಜವಾಬ್ದಾರಿಯುತರಾಗಿದ್ದಾರೆ. ಅದರ ಬಗ್ಗೆ ತುಂಬಾ ಸ್ಮಾರ್ಟ್ ಆಗಿದ್ದಾರೆ. ಅವರು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ"

More from Filmibeat

English summary
PM Modi repelid Rashmika Mandanna's new tweet post;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X