»   » ದೀಪಿಕಾ ಪಡುಕೋಣೆ ಡೇಟಿಂಗ್ ಕುರಿತು ಹೀಗೊಂದು ಸ್ಫೋಟಕ ಸುದ್ದಿ?

ದೀಪಿಕಾ ಪಡುಕೋಣೆ ಡೇಟಿಂಗ್ ಕುರಿತು ಹೀಗೊಂದು ಸ್ಫೋಟಕ ಸುದ್ದಿ?

Posted By:
Subscribe to Filmibeat Kannada

ಬೆಂಗಳೂರು ಮೂಲದ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ರವರ ರೂಮರ್ಸ್ ಬಾಯ್ ಫ್ರೆಂಡ್ ಲಿಸ್ಟ್ ನಲ್ಲಿ ಇದುವರೆಗೂ 4 ಕ್ಕೂ ಹೆಚ್ಚು ಹೆಸರು ಕೇಳಿಬಂದಿದೆ. ಆದರೆ ಹೆಚ್ಚಾಗಿ ಸದ್ದು ಮಾಡಿದ್ದು ರಣಬೀರ್ ಕಪೂರ್ ಮತ್ತು ರಣವೀರ್ ಸಿಂಗ್ ರ ಹೆಸರುಗಳು. ಆದರೆ ಈಗ ಡಿಪ್ಪಿಯ ಡೇಟಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಹೊಸ ಹೆಸರೊಂದು ಕೇಳಿಬಂದಿದೆ.

ದೀಪಿಕಾ ಪಡುಕೋಣೆ ಮತ್ತು ಸರ್ಬಿಯ ಟೆನ್ನಿಸ್ ತಾರೆ ನೊವಾಕ್ ಜೊಕೊವಿಕ್ ಪರಸ್ಪರ ಡೇಟಿಂಗ್ ನಲ್ಲಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ಸರ್ಬಿಯನ್ ಪಾಪ್‌ ಸ್ಟಾರ್ ನಟಾಶ ಬೆಕ್ವಲಕ್ ನೀಡಿರುವುದಾಗಿ ವರದಿಯಾಗಿದೆ.

Novak Djokovic’s former girlfriend alleges Deepika of having an affair with him?

ನಟಾಶ ಬೆಕ್ವಲಕ್ ರವರು ನೊವಾಕ್ ಜೊಕೊವಿಕ್ ರವರ ಮಾಜಿ ಗರ್ಲ್ ಫ್ರೆಂಡ್ ಆಗಿದ್ದು ಇತ್ತೀಚಿನ ಸಂದರ್ಶನವೊಂದರಲ್ಲಿ, 'ನೊವಾಕ್ ಗೆ ದೀಪಿಕಾ ಪಡುಕೋಣೆ ಜೊತೆ ಡೇಟಿಂಗ್ ಮಾಡುವುದು ಎಂದರೆ ತುಂಬಾ ಖುಷಿ' ಎಂದು, ನೇರವಾಗಿ ಮಾಧ್ಯಮಗಳ ಮುಂದೆ ನೊವಾಕ್ ಸೀಕ್ರೆಟ್ ಅಫೇರ್ ಬಗ್ಗೆ ಬಿಚ್ಚಿಟ್ಟಿದ್ದಾರೆ. ಇದರಿಂದ ಡಿಪ್ಪಿ ಮತ್ತು ನೊವಾಕ್ ನಡುವೆ ಡೇಟಿಂಗ್ ನಡೆದಿರಬಹುದೆನೋ ಎಂದು ಎಲ್ಲರು ಪಿಸುಗುಟ್ಟುತ್ತಿದ್ದಾರೆ.

Novak Djokovic’s former girlfriend alleges Deepika of having an affair with him?

ಹಿಂದೆಯೊಮ್ಮೆ ನೊವಾಕ್ ಜೊಕೊವಿಕ್ ಮತ್ತು ದೀಪಿಕಾ ಪಡುಕೋಣೆ ಲಾಸ್ ಏಂಜಲೀಸ್ ನ 'The Nice Guy' ಹೆಸರಿನ ರೆಸ್ಟೋರೆಂಟ್ ನಲ್ಲಿ ಡಿನ್ನರ್ ವೇಳೆ ಜೊತೆಯಲ್ಲಿ ಕಾಣಿಸಿಕೊಂಡಿದ್ದ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ ಡಿಪ್ಪಿಯನ್ನು ಗುರುತಿಸಲಾಗದ ಮಾಧ್ಯಮಗಳು ಜೊಕೊವಿಕ್ ರವರು ನೀಳ ಕಾಲುಗಳ ಗೆಳತಿಯೊಡನೆ ಡಿನ್ನರ್ ಮಾಡಿದ್ದರು ಎಂದು ವರದಿ ಮಾಡಿದ್ದವು.

English summary
Novak Djokovic’s former girlfriend alleges Deepika of having an affair with him?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada