ಮದುವೆಯಾದ ಎರಡು ವರ್ಷದ ನಂತರ ಗಂಡು ಮಗುವಿಗೆ ಜನ್ಮ ನೀಡಿದ 36ರ ಹರೆಯದ ಖ್ಯಾತ ನಟಿ
ಸಾಮಾನ್ಯವಾಗಿ ಯಾರೇ ಮದುವೆಯಾಗಲಿ ಕೆಲ ದಿನ ಕಳೆಯುತ್ತಿದ್ದಂತೆಯೇ ಏನಾದರೂ ಗುಡ್ ನ್ಯೂಸ್ ಎಂಬ ಪ್ರಶ್ನೆಯನ್ನೇ ಅನೇಕರು ಕೇಳಲು ಶುರು ಮಾಡುತ್ತಾರೆ. ಇನ್ನು ಸೆಲೆಬ್ರೆಟಿಗಳ ವಿಚಾರದಲ್ಲಿ ಇದು ಇನ್ನೂ ಹೆಚ್ಚಾಗಿರುತ್ತೆ. ಎಲ್ಲಿಯೇ ಹೋದರೂ ಸಾಕು ಮುಜುಗರವಾಗುವಂತಹ ವ್ಯೆಯಕ್ತಿಕ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ. ಮದುವೆಯಾಗಿ ಒಂದು ವರ್ಷ ತುಂಬಿರುವುದಿಲ್ಲ ಆಗಲೇ ಮದುವೆ ಮುಂಚೆ ಗರ್ಭಿಣಿಯಾಗುವ ಟ್ರೆಂಡ್ ಇರುವ...
ಈ ಸಮಯದಲ್ಲಿ ಯಾಕೆ ಇಷ್ಟು ತಡ ಮಾಡ್ತಿದ್ದೀರಾ ಎಂದು ಕೇಳಿ ಹಿಂಸೆ ಕೊಡುತ್ತಾರೆ. ಸುಖಾ ಸುಮ್ಮನೆ ಕೆಲವರ ಪಿತ್ತ ನೆತ್ತಿಗೇರಿಸುತ್ತಾರೆ. ಕೆಲವರು ಈ ಪ್ರಶ್ನೆ ಸಹಿಸಿಕೊಳ್ಳಲು ಸಾಧ್ಯವಾಗದೇ ರೇಗಿದ್ದು ಇದೆ. ಮಾರ್ಮಿಕವಾಗಿ ಉತ್ತರ ನೀಡಿದ್ದು ಇದೆ. ಹೀಗೆ ಸಿಕ್ಕ ಸಿಕ್ಕಲ್ಲಿ ಪ್ರಶ್ನೆಗಳನ್ನು ಕೇಳುವವರಿಗೆ ಪರಿಣಿತಿ ಚೋಪ್ರಾ ಉತ್ತರ ನೀಡಿದ್ದಾರೆ. ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿರುವ ಈ ಸಮಯದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಈ ಸಿಹಿ ಸುದ್ದಿಯನ್ನು ತಮ್ಮ ಅಭಿಮಾನಿಗಳಿಗಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪರಿಣಿತಿ ಚೋಪ್ರಾ ಅವರ ಗಂಡ ರಾಘವ್ ಚಡ್ಡಾ ಅವನು ಇಲ್ಲದ ಜೀವನವನ್ನು ಇನ್ಮುಂದೆ ಊಹಿಸಲು ಸಾಧ್ಯ ಇಲ್ಲ. ಮೊದಲು ನಾವು ಇಬ್ಬರೇ ಇದ್ದೇವು ಆದರೆ ಈಗ ನಮ್ಮ ಬಳಿ ಎಲ್ಲವೂ ಇದೆ. ನಮ್ಮ ಹೃದಯ ತುಂಬಿ ಬಂದಿದೆ ಎಂದು ಹೇಳಿದ್ದಾರೆ. ಕೊನೆಗೂ ಅವನ ಆಗಮನವಾಗಿದೆ, ನಮ್ಮ ಮಗು ಎಂದು ಪ್ರೀತಿಯಿಂದ ಬರೆದುಕೊಂಡಿದ್ದಾರೆ.
ಸದ್ಯ ಪರಿಣಿತಿ ಚೋಪ್ರಾ ಅವರಿಗೆ ಹಲವರು ಶುಭಾಶಯವನ್ನು ಕೋರುತ್ತಿದ್ದಾರೆ. ಹರ್ಲಿನ್ ಸೇಠಿ .. ಎಲ್ನಾಜ್ ನೌರೋಜಾ .. ಅನನ್ಯಾ ಪಾಂಡೆ .. ಆಯುಷ್ಮಾನ್ ಖುರಾನ .. ನೀಲ್ ನಿತಿನ್ ಮುಖೇಶ್ .. ಹುಮಾ ಖುರೇಶಿ .. ಹೀಗೆ ಹಲವರು ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಅವರಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಅಂದ್ಹಾಗೇ ಪರಿಣಿತಿ ಚೋಪ್ರಾ 2023ರಲ್ಲಿ ರಾಘವ್ ಚಡ್ಡಾ ಅವರನ್ನು ಮದುವೆಯಾಗಿದ್ದರು. ರಾಜಕಾರಣಿಯನ್ನು ನಾನು ಯಾವುದೇ ಕಾರಣಕ್ಕೂ ಮದುವೆಯಾಗಲ್ಲ ಎಂದು ಹಿಂದೊಮ್ಮೆ ಹೇಳಿದ್ದ ಪರಿಣಿತಿ ಚೋಪ್ರಾ ರಾಜ್ಯಸಭೆಯ ಕಿರಿಯ ಸದಸ್ಯರಲ್ಲಿ ಒಬ್ಬರಾದ ಎಎಪಿ ಪಕ್ಷದ ಸಂಸದ ರಾಘವ್ ಚಡ್ಡಾ ಅವರಿಗೆ ಮನಸೋತಿದ್ದನ್ನು ಕಂಡು ಹಲವರು ಪರಿಣಿತಿ ಕಾಲೆಳೆದಿದ್ದರು.

2023ರ ಮಾರ್ಚ್‌ನಲ್ಲಿ ರಾಘವ್ ಚಡ್ಡಾ ಜೊತೆ ಕಾಣಿಸಿಕೊಂಡ ಪರಿಣಿತಿ ಚೋಪ್ರಾ ಅವರು ಆ ನಂತರ ಪಂಜಾಬ್‌ನಲ್ಲಿ ಇಮ್ತಿಯಾಜ್ ಅಲಿಯ '' ಅಮರ್ ಸಿಂಗ್ ಚಮ್ಕಿಲಾ'' ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾಗ ರಾಘವ್ ಚಡ್ಡಾ ಚಿತ್ರೀಕರಣದ ಸ್ಥಳಕ್ಕೆ ಭೇಟಿ ನೀಡಿದ್ದರು. ಕದ್ದು ಮುಚ್ಚಿ ಪರಿಣಿತಿಯವರ ಜೊತೆ ಓಡಾಡಿದ್ದರು. ಆ ನಂತರ ಮೇ 13 -2023ರಲ್ಲಿ ತಮ್ಮ ಆಪ್ತ ಸ್ನೇಹಿತರ ಸಮ್ಮುಖದಲ್ಲಿ.. ಗುರು ಹಿರಿಯರ ಸಮ್ಮುಖದಲ್ಲಿ.. ನಿಶ್ಚಿತಾರ್ಥ ಮಾಡಿಕೊಂಡರು. ಸೆಪ್ಟೆಂಬರ್ 24-2023ರಂದು ಸಪ್ತಪದಿಯನ್ನು ತುಳಿದರು.
ಇನ್ನು ಕೆಲ ದಿನಗಳ ಹಿಂದೆ ಪರಿಣಿತಿ ಚೋಪ್ರಾ ತಮ್ಮ ಪತಿ ರಾಘವ್ ಚಡ್ಡಾ ಜೊತೆ ಕಪಿಲ್ ಶರ್ಮಾ ಶೋಗೆ ಬಂದಾಗ ಪರಿಣಿತಿ ಗರ್ಭಿಣಿಯಾಗಿರಬಹುದು ಎನ್ನುವ ಅನುಮಾನ ಹಲವರಲ್ಲಿ ಬಂದಿತ್ತು. ಈ ಸಮಯದಲ್ಲಿ ಕಾರ್ಯಕ್ರಮ ಅರ್ಧಕ್ಕೆ ನಿಲ್ಲಿಸಿ ರಾಘವ್ ಮತ್ತು ಪರಿಣಿತಿ ಆತುರಾತುರವಾಗಿ ಹೊರ ಹೋಗಿದ್ದರು. ಆಗ ಪರಿಣಿತಿಯ ಆರೋಗ್ಯದ ಕುರಿತು ಹಲವರು ಚಿಂತಿತರಾಗಿದ್ದರು.
ಆದರೆ ವಾಸ್ತವದಲ್ಲಿ ರಾಘವ್ ಚಡ್ಡಾ ಅವರ ತಾಯಿ ಅನಾರೋಗ್ಯಕ್ಕೀಡಾಗಿದ್ದರು. ತಮ್ಮ ತಾಯಿ ಆಸ್ಪತ್ರೆಗೆ ದಾಖಲಾದ ವಿಚಾರ ತಿಳಿದು ಪತ್ನಿ ಪರಿಣಿತಿ ಜೊತೆ ರಾಘವ್ ಆಸ್ಪತ್ರೆಗೆ ತೆರಳಿದ್ದರು. ತಮ್ಮ ತಾಯಿಯ ಆರೋಗ್ಯ ವಿಚಾರಿಸಿ ಮತ್ತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇನ್ನುಳಿದಂತೆ ಮದುವೆಯ ನಂತರ ಪರಿಣಿತಿ ಚಿತ್ರರಂಗದಿಂದ ದೂರ ಇದ್ದಾರೆ. ''ಅಮರ್‌ಸಿಂಗ್ ಚಮ್ಕಿಲಾ'' ಚಿತ್ರವೇ ಪರಿಣಿತಿ ಚೋಪ್ರಾ ಮತ್ತೆ ಬಣ್ಣ ಹಚ್ಚಿಲ್ಲ.


Click it and Unblock the Notifications











