For Quick Alerts
  ALLOW NOTIFICATIONS  
  For Daily Alerts

  ಆ ನಗ್ನ ಚಿತ್ರ ನನ್ನದಲ್ಲ ಎಂದ ರಣ್ವೀರ್ ಸಿಂಗ್!

  |

  ಜುಲೈ ತಿಂಗಳಲ್ಲಿ ನಟ ರಣ್ವೀರ್ ಸಿಂಗ್‌ ಹಂಚಿಕೊಂಡಿದ್ದ ತಮ್ಮದೇ ನಗ್ನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ತೀವ್ರ ಪರ-ವಿರೋಧ ಚರ್ಚೆಗಳನ್ನು ಹುಟ್ಟುಹಾಕಿದ್ದವು.

  ರಣ್ವೀರ್ ಸಿಂಗ್‌ರ ನಗ್ನ ಚಿತ್ರಗಳು ಮಹಿಳೆಯರ ಭಾವನೆಗೆ ಧಕ್ಕೆ ತರುತ್ತಿವೆ ಹಾಗೂ ಆ ಚಿತ್ರಗಳು ಸಾರ್ವಜನಿಕ ಅಸಂಬದ್ಧತೆಗೆ ಉದಾಹರಣೆ ಎಂದು ಆರೋಪಿಸಿ ಮುಂಬೈನ ಎನ್‌ಜಿಓದ ಮುಖ್ಯಸ್ಥರೊಬ್ಬರು ಪೊಲೀಸರಿಗೆ ದೂರು ನೀಡಿದ್ದರು.

  ಎಫ್‌ಐಆರ್ ದಾಖಲಿಸಿಕೊಂಡಿದ್ದ ಮುಂಬೈ ಪೊಲೀಸರು ರಣ್ವೀರ್ ಸಿಂಗ್‌ಗೆ ಸಮನ್ಸ್ ಜಾರಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಅಂತೆಯೇ ಆಗಸ್ಟ್ 29 ರಂದು ಮಂಬೈನ ಚೆಂಬೂರ್ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದ ರಣ್ಬೀರ್ ಸಿಂಗ್ ಪೊಲೀಸರ ಮುಂದೆ ನೀಡಿರುವ ಹೇಳಿಕೆ ಬಹಿರಂಗಗೊಂಡಿದ್ದು, ರಣ್ವೀರ್ ನೀಡಿರುವ ಹೇಳಿಕೆ ಆಶ್ಚರ್ಯಕ್ಕೆ ಕಾರಣವಾಗಿದೆ.

  ವಿಚಾರಣೆಗೆ ಹಾಜರಾಗಿದ್ದ ರಣ್ವೀರ್ ಸಿಂಗ್‌ ಗೆ ಪೊಲೀಸರು ರಣ್ವೀರ್‌ ಸಿಂಗ್‌ರದ್ದು ಎನ್ನಲಾದ ಚಿತ್ರಗಳನ್ನೆಲ್ಲ ತೋರಿಸಿದ್ದು, ಅದರಲ್ಲಿ ಒಂದು ಚಿತ್ರ ತಮ್ಮದ್ದಲ್ಲ ಎಂದು ರಣ್ವೀರ್ ಸಿಂಗ್ ಹೇಳಿದ್ದಾರೆ. ಯಾರೋ ತಮ್ಮ ಚಿತ್ರವನ್ನು ತಿದ್ದಿ ಬಳಸಿದ್ದಾರೆ ಎಂದು ರಣ್ವೀರ್ ಸಿಂಗ್ ಹೇಳಿದ್ದಾರೆ.

  ರಣ್ವೀರ್ ಸಿಂಗ್, ತಮ್ಮದಲ್ಲ ಎಂದು ನಿರಾಕರಿಸುವ ಚಿತ್ರದಲ್ಲಿ ರಣ್ವೀರ್ ಸಿಂಗ್‌ರ ಖಾಸಗಿ ಅಂಗ ಕಾಣುತ್ತಿದೆ ಎನ್ನಲಾಗುತ್ತಿದ್ದು, ಅದೇ ಚಿತ್ರದ ಆಧಾರದ ಮೇಲೆ ಎನ್‌ಜಿಓಗೆ ಸೇರಿದ ವಕೀಲರೊಬ್ಬರು ಚೆಂಬೂರ್ ಪೊಲೀಸರಿಗೆ ದೂರು ನೀಡಿದ್ದರು.

  ಜುಲೈ 22 ರಂದು ನಟ ರಣ್ವೀರ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ನಗ್ನ ಚಿತ್ರಗಳನ್ನು ಹಂಚಿಕೊಂಡಿದ್ದರು. ಪೇಪರ್ ಮ್ಯಾಗಜೀನ್‌ಗಾಗಿ ನಡೆಸಿದ ಫೋಟೊಶೂಟ್‌ನ ಚಿತ್ರಗಳು ಅವಾಗಿದ್ದವು. ಬಟ್ಟೆ ತೊಡದೆ ಬೆತ್ತಲೆಯಾಗಿ ರಣ್ವೀರ್ ಸಿಂಗ್ ಫೋಸು ನೀಡಿದ್ದರು. ಆದರೆ ನೆರಳು-ಬೆಳಕಿನ ಸಂಯೋಜನೆ ಬಳಸಿ ರಣ್ವೀರ್‌ ಸಿಂಗ್‌ರ ಖಾಸಗಿ ಅಂಗದ ಪ್ರದರ್ಶನವಾಗದಂತೆ ಚಿತ್ರವನ್ನು ಸೆರೆಹಿಡಿಯಲಾಗಿತ್ತು.

  ಅಮೆರಿಕದ ಖ್ಯಾತ ಮಾಡೆಲ್ ಬರ್ಟ್ ರೆನಾಲ್ಡ್ಸ್‌ಗೆ ಗೌರವ ಸೂಚಿಸಲೆಂದು ತಾವು ಹೀಗೆ ನಗ್ನವಾಗಿ ಫೋಸು ನೀಡಿದ್ದಾಗಿ ನಟ ರಣ್ವೀರ್ ಸಿಂಗ್‌ ಹೇಳಿದ್ದರು. ಅಲ್ಲದೆ, ಬೆತ್ತಲೆ ಎಂಬುದು ಮಾನಸಿಕ ಸ್ಥಿತಿ, ಜನರಿರುವ ಕಡೆಗಳಲ್ಲಿ ಸಹ ನಾನು ಬೆತ್ತಲಾಗಿ, ಮುಜುಗರವಿಲ್ಲದೆ ಓಡಾಡಬಲ್ಲೆ'' ಎಂದಿದ್ದರು ಸಹ.

  ಸಿನಿಮಾ ವಿಷಕ್ಕೆ ಮರಳುವುದಾದರೆ, ಅವರ ಈ ಹಿಂದಿನ ಸಿನಿಮಾ 'ಜಯೇಷ್‌ಭಾಯ್ ಜೋರ್‌ದಾರ್' ಸಿನಿಮಾ ಹೀನಾಯ ಸೋಲು ಕಂಡಿದೆ. ರಣ್ವೀರ್ ಸಿಂಗ್ ನಟನೆಯ 'ಸರ್ಕಸ್' ಸಿನಿಮಾ ಇದೀಗ ಬಿಡುಗಡೆ ಆಗಬೇಕಿದೆ. ತಮಿಳಿನ 'ಅನ್ನಿಯನ್' ಸಿನಿಮಾದ ಹಿಂದಿ ರೀಮೇಕ್‌ನಲ್ಲಿ ರಣ್ವೀರ್ ನಟಿಸುತ್ತಿದ್ದು ಸಿನಿಮಾವನ್ನು ಮೂಲ ಸಿನಿಮಾದ ನಿರ್ದೇಶಕ ಶಂಕರ್ ಅವರೇ ನಿರ್ದೇಶನ ಮಾಡಲಿದ್ದಾರೆ. ಜೊತೆಗೆ ರಣ್ಬೀರ್ ಕಪೂರ್ ಜೊತೆಗೆ 'ಅಂದಾಜ್ ಅಪ್ನಾ ಅಪ್ನಾ' ಸಿನಿಮಾದಲ್ಲಿಯೂ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

  English summary
  Nude photo shoot case: Ranveer Singh said to Mumbai police that one of the photos spreading in online is morphed.
  Thursday, September 15, 2022, 14:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X