For Quick Alerts
  ALLOW NOTIFICATIONS  
  For Daily Alerts

  ಎಂಗೇಜ್ಡ್! ಆಮಿರ್ ಖಾನ್ ಪುತ್ರಿಗೆ ಉಂಗುರ ತೊಡಿಸಿ, ಮುತ್ತಿಟ್ಟ ನೂಪುರ್

  |

  ಆಮಿರ್ ಖಾನ್ ಪುತ್ರಿ ಇರಾ ಖಾನ್ ಪ್ರೇಮಕತೆ ಬಹುತೇಕರಿಗೆ ಗೊತ್ತಿರುವುದೇ. ಆಕೆಯ ಫಿಸಿಕಲ್ ಟ್ರೈನರ್ ನೂಪುರ್ ಶಿಖಾರೆ ಜೊತೆ ಕೆಲ ವರ್ಷಗಳಿಂದ ಪ್ರೇಮದಲ್ಲಿದ್ದಾರೆ ಇರಾ ಖಾನ್.

  ಇಬ್ಬರೂ ಒಟ್ಟಿಗೆ ಪಾರ್ಟಿ ಮಾಡುವ, ಪ್ರವಾಸ ಹೋಗುವ ಹಲವು ಚಿತ್ರಗಳನ್ನು ಇರಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇರಾ-ನೂಪುರ್ ಹಾಗೂ ಅವರ ಕೆಲವು ಗೆಳೆಯರು ಸೇರಿ ಮಾಡಿದ್ದ ಪೂಲ್ ಪಾರ್ಟಿಯ ಚಿತ್ರಗಳು ಸಾಕಷ್ಟು ವೈರಲ್ ಆಗಿದ್ದವು. ಪೂಲ್ ಪಾರ್ಟಿಯಲ್ಲಿ ಬಿಕಿನಿ ಧರಿಸಿ ಬಿಂದಾಸ್ ಆಗಿ ಎಂಜಾಯ್ ಮಾಡಿದ್ದರು ಇರಾ.

  ಈ ಯುವ ಜೋಡಿ ಒಬ್ಬರಿಗೊಬ್ಬರು ಪ್ರವಾಸ ಹೋಗುತ್ತಾ, ಪಾರ್ಟಿ ಮಾಡುತ್ತಾ ಆರಾಮವಾಗಿದ್ದರು. ಆದರೆ ಈಗ ಇಬ್ಬರೂ ಮದುವೆಯಾಗಲು ನಿಶ್ಚಯಿಸಿದ್ದಾರೆ. ನೂಪುರ್ ಶಿಖಾರೆ ಇದೀಗ ಇರಾ ಖಾನ್‌ಗೆ ಮದುವೆ ಪ್ರೊಪೋಸ್ ಮಾಡಿದ್ದು, ತಡ ಮಾಡದೆ 'ಎಸ್' ಎಂದು ಒಪ್ಪಿಗೆ ಸೂಚಿಸಿದ್ದಾರೆ ಇರಾ.

  ನೂಪುರ್, ಇರಾಗೆ ಪ್ರೊಪೋಸ್ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಯಾವುದೋ ರೇಸ್‌ ಒಂದರಲ್ಲಿ ಭಾಗವಹಿಸಿದ್ದ ನೂಪುರ್ ರೇಸ್ ಗೆದ್ದು ಬಂದು ಇರಾ ಮುಂದೆ ಮಂಡಿಯೂರಿ ರಿಂಗ್ ತೋರಿಸಿ 'ನನ್ನನ್ನು ಮದುವೆಯಾಗುವೆಯಾ?' ಎಂದು ಕೇಳಿದ್ದಾರೆ. ಅದಕ್ಕೆ ಕೂಡಲೇ 'ಎಸ್' ಎಂದಿದ್ದಾರೆ ಇರಾ. ತಡಮಾಡದೆ ಉಂಗುರವನ್ನು ಇರಾಗೆ ತೊಡಿಸಿದ ನೂಪುರ್, ಇರಾ ತುಟಿಗೆ ತುಟಿಯೊತ್ತಿ ಮುತ್ತು ಕೊಟ್ಟಿದ್ದಾರೆ.

  ನೂಪುರ್ ಹಾಗೂ ಇರಾ ಎಂಗೇಜ್ ಆಗಿದ್ದಕ್ಕೆ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಫಾತಿಮಾ ಸನಾ ಶೇಕ್, ಯುವರಾಜ್ ಸಿಂಗ್ ಪತ್ನಿ ಹೇಜಲ್ ಕೀಚ್, ಹುಮಾ ಖುರೇಷಿ, ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿ, ಗುಲ್ಷನ್ ದೇವಯ್ಯ ಇನ್ನೂ ಹಲವರು ಈ ಯುವ ಜೋಡಿಗೆ ಶುಭಾಶಯ ತಿಳಿಸಿದ್ದಾರೆ.

  ನೂಪುರ್ ಹಾಗೂ ಇರಾ ಖಾನ್ ಕೆಲ ವರ್ಷಗಳಿಂದಲೂ ಪ್ರೀತಿಯಲ್ಲಿದ್ದಾರೆ. ಹಲವು ಬಾರಿ ಇರಾ, ತನ್ನ ಬಾಯ್‌ಫ್ರೆಂಡ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. 'ಆಂಕ್ಸೈಟಿ' ಸಮಸ್ಯೆಯಿಂದ ಬಳಲುತ್ತಿದ್ದ ಇರಾಗೆ ನೂಪುರ್ ಸಹಾಯ ಮಾಡಿದರಂತೆ. ಅವರಿಂದ ನಾನು ದೊಡ್ಡ ಸಮಸ್ಯೆಯಿಂದ ಪಾರಾದೆ, ನೂಪುರ್ ಜೊತೆಗಿರುವುದು ನನಗೆ ಆರಾಮ ಒದಗಿಸುತ್ತದೆ ಎಂದಿದ್ದರು ನೂಪುರ್.

  English summary
  Aamir Khan's daughter Ira Khan engaged to her long time boyfriend Nupur Shikhare. Both were dating from long time.
  Friday, September 23, 2022, 13:16
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X