For Quick Alerts
  ALLOW NOTIFICATIONS  
  For Daily Alerts

  ನಟಿ, ಸಂಸದೆ ನುಸ್ರುತ್- ನಿಖಿಲ್ ಕಿತ್ತಾಟದಲ್ಲಿ ಟ್ರೆಂಡಿಂಗ್ ನಲ್ಲಿರುವ ಯಶ್ ಯಾರು?

  |

  ನಟಿ, ಟಿಎಂಸಿ ಸಂಸದೆ ನುಸ್ರುತ್ ಜಹಾನ್ ಸಂಸಾರ ಗಲಾಟೆ ಬೀದಿಗೆ ಬಂದಿದೆ. ಪತಿ ನಿಖಿಲ್ ಜೈನ್ ಯಿಂದ ದೂರ ಆಗಿರುವ ನುಸ್ರುತ್ ಬಗ್ಗೆ ತರಹೇವಾರಿ ಸುದ್ದಿಗಳು ಹರಿದಾಡುತ್ತಿದೆ. 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಿಖಿಲ್ ಮತ್ತು ನುಸ್ರುತ್ ಎರಡು ವರ್ಷದೊಳಗೆ ಬೇರೆ ಆಗಿದ್ದಲ್ಲದೇ ಬೀದಿ ರಂಪಾಟ ಮಾಡಿಕೊಂಡಿದ್ದಾರೆ.

  ಇವರಿಬ್ಬರ ಸಂಸಾರದ ಗಲಾಟೆಯಲ್ಲಿ ಯಶ್ ಎನ್ನುವ ವ್ಯಕ್ತಿ ಟ್ರೆಂಡಿಂಗ್ ನಲ್ಲಿದ್ದಾರೆ. ಪತಿಯಿಂದ ದೂರ ಆಗುತ್ತಿದ್ದಂತೆ ನುಸ್ರುತ್ ಹೆಸರು ಯಶ್ ಜೊತೆ ಕೇಳಿಬರುತ್ತಿದೆ. ಇಬ್ಬರ ಸಂಸಾರದಲ್ಲಿ ಬಿರುಗಾಳಿ ಏಳಲು ಕಾರಣ ಯಶ್ ಜೊತೆಗಿನ ನುಸ್ರುತ್ ಸಂಬಂಧ ಎನ್ನುವ ಮಾತು ಬಲವಾಗಿ ಕೇಳಿಬರುತ್ತಿದೆ. ಅಷ್ಟಕೂ ಈ ಯಶ್ ಯಾರು? ನುಸ್ರುತ್ ಹಾಗೂ ಯಶ್ ಗೆ ಏನು ಸಂಬಂಧ?

  ನಟಿ, ಸಂಸದೆ ನುಸ್ರುತ್ ಮದುವೆ ರಂಪಾಟ: ಮದುವೆ ಫೋಟೋಗಳನ್ನು ಡಿಲೀಟ್ ಮಾಡಿದ ನಟಿನಟಿ, ಸಂಸದೆ ನುಸ್ರುತ್ ಮದುವೆ ರಂಪಾಟ: ಮದುವೆ ಫೋಟೋಗಳನ್ನು ಡಿಲೀಟ್ ಮಾಡಿದ ನಟಿ

  ಬೆಂಗಾಲಿಯ ಖ್ಯಾತ ನಟ ಯಶ್

  ಬೆಂಗಾಲಿಯ ಖ್ಯಾತ ನಟ ಯಶ್

  ಯಶ್ ಕೂಡ ಬೆಂಗಾಲಿಯ ಖ್ಯಾತ ನಟ. ಪೂರ್ಣ ಹೆಸರು ಯಶ್ ದಾಸ್ ಗುಪ್ತಾ. ಕಿರುತೆರೆ ಮತ್ತು ಬೆಳ್ಳಿ ಪರದೆ ಮೇಲೆ ಮಿಂಚಿ ಖ್ಯಾತಿಗಳಿಸಿರುವ ಯಶ್ ಇತ್ತೀಚಿಗೆ ಅಂದರೆ ಫೆಬ್ರವರಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಕಿರುತೆರೆ ಮೂಲಕ ಬಣ್ಣದ ಲೋಕದ ಪಯಣ ಪ್ರಾರಂಭ ಮಾಡಿರುವ ನಟ ಯಶ್ ಗ್ಯಾಂಗ್ ಸ್ಟರ್ ಸಿನಿಮಾ ಮೂಲಕ ಬೆಳ್ಳಿ ಪರದೆಗೆ ಎಂಟ್ರಿ ಕೊಟ್ಟರು.

  ಕಿರುತೆರೆ ಮತ್ತು ಸಿನಿಮಾಗಳಲ್ಲಿ ಮಿಂಚಿರುವ ಯಶ್

  ಕಿರುತೆರೆ ಮತ್ತು ಸಿನಿಮಾಗಳಲ್ಲಿ ಮಿಂಚಿರುವ ಯಶ್

  ಮತ್ತೋರ್ವ ಖ್ಯಾತ ನಟಿ ಮತ್ತು ರಾಜಕಾರಣಿ ಮಿಮಿ ಚಕ್ರವರ್ತಿ ಜೊತೆ ಯಶ್ ಸಿನಿಮಾಗೆ ಪದಾರ್ಪಣೆ ಮಾಡಿದರು. 6 ಸಿನಿಮಾಗಳಲ್ಲಿ ನಟಿಸಿರುವ ಯಶ್ ದಾಸ್ ಗುಪ್ತ ಬೆಂಗಾಲಿಯ ಭರವಸೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಟೋಟಲ್ ದಾದಾಗಿರಿ, ಫಿದಾ, ಮೋನ್ ಜಾನೆ ನಾ ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

  ನುಸ್ರುತ್ ಜೊತೆ ಸ್ನೇಹ ಸಂಬಂಧ

  ನುಸ್ರುತ್ ಜೊತೆ ಸ್ನೇಹ ಸಂಬಂಧ

  ಯಶ್ ಮತ್ತು ನುಸ್ರುತ್ ಇಬ್ಬರು ಅನೇಕ ವರ್ಷಗಳಿಂದ ಸ್ನೇಹಿತರು. ಆದರೆ 2020ರಲ್ಲಿ ಬಿಡುಗಡೆಯಾದ ಬೆಂಗಾಲಿಯ 'SOS Kolkata' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾ ಬಳಿಕ ಇಬ್ಬರ ಸ್ನೇಹ ಮತ್ತಷ್ಟು ಗಟ್ಟಿಯಾಗಿತ್ತು. ಈ ಚಿತ್ರದಲ್ಲಿ ನಟಿ ಮಿಮಿ ಚಕ್ರವರ್ತಿ ಕೂಡ ಮಿಂಚಿದ್ದರು. ಈ ಸಿನಿಮಾ ನಂತರ ಇಬ್ಬರ ಕ್ಲೋಸ್ ನೆಸ್ ಗಾಳಿಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿತ್ತು. ಆದರೆ ಈ ಬಗ್ಗೆ ಕೇಳಿದ್ದಕ್ಕೆ ಸ್ನೇಹಿತರಷ್ಟೆ ಎಂದು ಹೇಳುತ್ತಿದ್ದರು.

  ಯಶ್ ಜೊತೆ ಕೇಳಿಬರುತ್ತಿದೆ ನುಸ್ರುತ್ ಹೆಸರು

  ಯಶ್ ಜೊತೆ ಕೇಳಿಬರುತ್ತಿದೆ ನುಸ್ರುತ್ ಹೆಸರು

  ನಟಿ ನುಸ್ರುತ್ 2019ರಲ್ಲಿ ನಿಖಿಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಎರಡು ವರ್ಷದೊಳಗೆ ಬೇರೆ ಆಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ನಿಖಿಲ್ ನಿಂದ ದೂರ ಆಗುತ್ತಿದ್ದಂತೆ ಯಶ್ ಜೊತೆಗಿನ ಸಂಬಂಧ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿದೆ. ನಿಖಿಲ್ ಯಿಂದ ಬೇರೆ ಆಗಲು ಕಾರಣ ಯಶ್ ಜೊತೆಗಿನ ನುಸ್ರುತ್ ಸಂಬಂಧವೇ ಕಾರಣ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಯಶ್ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದ್ದಾರೆ.

  ಪ್ರಭಾಸ್ ಗೆ ಪೌರಾಣಿಕ ಕಥೆ ರೆಡಿ ಮಾಡ್ತಿದ್ದಾರೆ ಪ್ರಶಾಂತ್ ನೀಲ್ | Filmibeat Kannada
  ನುಸ್ರುತ್ ಗರ್ಭಿಣಿ?, ತಂದೆ ನಾನಲ್ಲ ಎಂದ ನಿಖಿಲ್

  ನುಸ್ರುತ್ ಗರ್ಭಿಣಿ?, ತಂದೆ ನಾನಲ್ಲ ಎಂದ ನಿಖಿಲ್

  ಈ ನಡುವೆ ನುಸ್ರುತ್ ಗರ್ಭಿಣಿ ಎನ್ನುವ ವದಂತಿ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ನುಸ್ರುತ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿಖಿಲ್ ತಿಂಗಳ ಹಿಂದೆಯೆ ಪ್ರತ್ಯೇಕವಾಗಿದ್ದೇವೆ ನುಸ್ರುತ್ ಮಗುವಿಗೆ ತಾನು ತಂದೆ ಅಲ್ಲ ಎಂದು ನಿಖಿಲ್ ಹೇಳಿದ್ದಾರೆ.

  English summary
  Nusrat Jahan and Nikhil Jain marriage controversy; Who is Yash Dasgupta and why is treding?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X