For Quick Alerts
  ALLOW NOTIFICATIONS  
  For Daily Alerts

  ನಟಿ, ಸಂಸದೆ ನುಸ್ರುತ್ ಮದುವೆ ರಂಪಾಟ: ಮದುವೆ ಫೋಟೋಗಳನ್ನು ಡಿಲೀಟ್ ಮಾಡಿದ ನಟಿ

  |

  ನಟಿ, ಟಿಎಂಸಿ ಸಂಸದೆ ನುಸ್ರತ್ ಜಹಾನ್ ಮದುವೆ ರಂಪಾಟ ಬೀದಿಗೆ ಬಂದಿದೆ. ಚುನಾವಣೆಯಲ್ಲಿ ಗೆದ್ದ ಬಳಿಕ ನಿಖಿಲ್ ಜೈನ್ ಎಂಬುವರ ಜೊತೆ ಟರ್ಕಿಯಲ್ಲಿ ಮದುವೆಯಾಗಿದ್ದ ನಟಿ ಕಮ್ ಸಂಸದೆ ನುಸ್ರುತ್ ಈಗ ಪತಿಯಿಂದ ದೂರ ಆಗಿದ್ದಾರೆ.

  ಆ ಮದುವೆ ಕಾನೂನುಬದ್ಧವಲ್ಲ ಎಂದಿರುವ ನುಸ್ರುತ್, ನಿಖಿಲ್ ವಿರುದ್ಧ ಸಾಲು-ಸಾಲು ಆರೋಪಗಳನ್ನು ಮಾಡಿದ್ದಾರೆ. ಪ್ರತಿಯಾಗಿ ನಿಖಿಲ್ ಕೂಡ ನುಸ್ರುತ್ ವಿರುದ್ಧ ಪ್ರತ್ಯಾರೋಪ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಈಗ ನುಸ್ರುತ್ ಮದುವೆಯ ಫೋಟೋಗಳನ್ನು ಸಮಾಜಿಕ ಜಾಲತಾಣದಿಂದ ಡಿಲೀಟ್ ಮಾಡಿದ್ದಾರೆ.

  ಮದುವೆ ಫೋಟೋ ಮಾತ್ರವಲ್ಲದೇ ಪತಿ ನಿಖಿಲ್ ಜೊತೆಗಿದ್ದ ಪ್ರತಿಯೊಂದು ಫೋಟೋವನ್ನು ತನ್ನ ಸಾಮಾಜಿಕ ಜಾಲತಾಣದ ಖಾತೆಯಿಂದ ತೆಗೆದುಹಾಕಿದ್ದಾರೆ. ಈ ಹಿಂದೆ ಮದುವೆ ಮತ್ತು ಹನಿಮೂನ್ ಫೋಟೋಗಳನ್ನು ಶೇರ್ ಮಾಡಿ ಸಂತಸ ಹಂಚಿಕೊಂಡಿದ್ದರು. ಇದೀಗ ಎಲ್ಲಾ ಫೋಟೋಗಳು ಖಾತೆಯಿಂದ ಡಿಲೀಟ್ ಆಗಿದೆ. ನಿಖಿಲ್ ನನ್ನು ಮನಸ್ಸಿಂದ ಅಲ್ಲದೇ ಈಗ ಸಾಮಾಜಿಕ ಜಾಲತಾಣಗಳ ಖಾತೆಯಿಂದನೂ ದೂರ ಇಟ್ಟಿದ್ದಾರೆ.

  ಬೆಂಗಾಲಿ ಸಿನಿಮಾಗಳ ನಟಿ ನುಸ್ರತ್ ಜಹಾನ್ ಹಾಗೂ ಉದ್ಯಮಿ ನಿಖಿಲ್ ಜೈನ್ 2019 ರಲ್ಲಿ ಟರ್ಕಿ ದೇಶದಲ್ಲಿ ವಿವಾಹವಾಗಿದ್ದರು. ಆದರೆ ಅದನ್ನು ಭಾರತದಲ್ಲಿ ನೊಂದಾವಣೆ ಮಾಡಿಸಿರಲಿಲ್ಲ. ಆದರೆ ಇಬ್ಬರೂ ಕೆಲ ವರ್ಷ ಒಟ್ಟಿಗೆ ಇದ್ದರು. ಆದರೆ ಕೆಲವು ತಿಂಗಳಿನಿಂದ ಇಬ್ಬರೂ ಬೇರೆಯಾಗಿದ್ದು, ಇದೀಗ ಪರಸ್ಪರ ಗಂಭೀರ ಆರೋಪಗಳನ್ನು ಮಾಡಿಕೊಳ್ಳುತ್ತಿದ್ದಾರೆ.

  Rohini Sindhuri ಬಗ್ಗೆ ನಟಿ Ramya ಏನ್ ಹೇಳಿದ್ದಾರೆ? | Filmibeat Kannada

  ಕಾನೂನಿನ ಪ್ರಕಾರ ಇದು ವಿವಾಹವಲ್ಲ, ಲಿನ್ ಇನ್ ಸಂಬಂಧ ಎಂದಿರುವ ನಟಿ, ಸಂಸದೆ ನುಸ್ರುತ್ ಪತಿಯಿಂದ ದೂರ ಆಗಿರುವ ಬಗ್ಗೆ ಅಧಿಕೃತವಾಗಿ ಬಹಿರಂಗ ಪಡಿಸಿದ್ದಾರೆ.

  English summary
  After Separation from her Husband Nikhil Jain, Nusrat Jahan deletes wedding pics form her Instagram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X