twitter
    For Quick Alerts
    ALLOW NOTIFICATIONS  
    For Daily Alerts

    ಸೋನು ಸೂದ್ ಹೆಸರಿನಲ್ಲಿ ನಡೆಯುತ್ತಿದೆ ಮಹಾಮೋಸ; ಎಚ್ಚರವಿರಲಿ ಎಂದ ನಟ

    By ಫಿಲ್ಮ್ ಡೆಸ್ಕ್
    |

    ಲಾಕ್ ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರಿಗೆ ತಮ್ಮ ಊರುಗಳಿಗೆ ತೆರಳಲು ಸಾರಿಗೆ ವ್ಯವಸ್ಥೆ ಕಲ್ಪಿಸಿ ಲಕ್ಷಾಂತರ ಕಾರ್ಮಿಕರನ್ನು ಮನೆಗೆ ಸೇರಿಸುವ ಮೂಲಕ ನಟ ಸೋನು ಸೂದ್ ಮಾನವೀಯತೆ ಮೆರೆದಿದ್ದರು. ತಮ್ಮ ಸಮಾಜಿಕ ಕಾರ್ಯವನ್ನು ಲಾಕ್ ಡೌನ್ ಬಳಿಕವೂ ಮುಂದುವರೆಸಿಕೊಂಡು ಬಂದಿದ್ದಾರೆ.

    ಕಷ್ಟ ಎಂದವರಿಗೆ ತಕ್ಷಣಕ್ಕೆ ಸ್ಪಂದಿಸುವ ನಟ ಸೋನು ಸೂದ್ ಹೆಸರು ಈಗ ದುರ್ಬಳಕೆ ಆಗುತ್ತಿದೆ. ಈ ಬಗ್ಗೆ ಸೋನು ಸೂದ್ ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆ ನೀಡಿದ್ದಾರೆ. ಈ ವಿಚಾರದಲ್ಲಿ ಅಭಿಮಾನಿಗಳು ಮತ್ತು ನೆಟ್ಟಿಗರು ಹುಷಾರಾಗಿ ಇರಬೇಕು ಎಂದು ಹೇಳಿದ್ದಾರೆ.

    ಸೋನು ಸೂದ್ ಮಾನವೀಯತೆ ಕೆಲಸ ಗೌರವಿಸಿದ 'ಆಚಾರ್ಯ' ತಂಡಸೋನು ಸೂದ್ ಮಾನವೀಯತೆ ಕೆಲಸ ಗೌರವಿಸಿದ 'ಆಚಾರ್ಯ' ತಂಡ

    ಬಡವರ ಪಾಲಿನ ರಿಯಲ್ ಹೀರೋ ಆಗಿರುವ ಸೋನು ಸೂದ್ ಹೆಸರನ್ನು ಬಳಸಿಕೊಂಡು ಜನರನ್ನು ಯಾಮಾರಿಸುವ ಪ್ರಯತ್ನಗಳು ನಡೆಯುತ್ತಿವೆ. ಇದೀಗ ಸೋನು ಸೂದ್ ಗಮನಕ್ಕೆ ಬಂದಿದೆ. ಇದನ್ನು ಸಾಕ್ಷಿ ಸಮೇತ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

    Offering Personal Loan from fake social media account in the name of Sonu Sood

    ಸೋನು ಸೂದ್ ಹೆಸರಿನಲ್ಲಿ ಪರ್ಸನಲ್ ಲೋನ್ ಕೊಡಲಾಗುತ್ತೆ. ಈ ನಂಬರ್ ಗೆ ಕರೆ ಮಾಡಿ ಎಂದು ಕಿಡಿಗೇಡಿಗಳು ಟ್ವೀಟ್ ಮಾಡಿದ್ದಾರೆ. ಇದನ್ನು ಸ್ಕ್ರೀನ್ ಶಾಟ್ ತೆಗೆದು ಸೋನು ಸೂದ್ ಶೇರ್ ಮಾಡಿದ್ದಾರೆ. ಇವು ನಕಲಿ ಖಾತೆಗಳು, ಎಚ್ಚರಿಕೆ ಎಂದು ಹೇಳಿದ್ದಾರೆ.

    ಸೋನು ಸಮಾಜಿಕ ಕೆಲಸ ಕಂಡು ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಲೇ ಇದೆ. ಅನೇಕರು ಸೋನು ಸೂದ್ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಸಹಾಯ ಮಾಡುವ ನೆಪದಲ್ಲಿ ನಾಟಕವಾಡುತ್ತಿದ್ದಾರೆ, ಪ್ರಚಾರದ ಗೀಳಿನಿಂದ ಹೀಗೆ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    Recommended Video

    ಅಂದು ಪ್ರಥಮ್ ಮಾಡಿದ ಒಳ್ಳೆ ಕೆಲಸ ಇಂದು ಎಷ್ಟೋ ಮಕ್ಕಳಿಗೆ ಉಪಯೋಗ ಆಗ್ತಿದೆ | Olle Hudga Pratham

    ಆದರೆ ಇದೆಲ್ಲದಕ್ಕೂ ಸೋನು ಸೂದ್ ಉತ್ತರ ನೀಡುತ್ತಾ ಬಂದಿದ್ದಾರೆ. ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಈಗಲು ಕಷ್ಟ ಎಂದವರಿಗೆ ಸೋನು ಸೂದ್ ನೆರವಾಗುತ್ತಿದ್ದಾರೆ. ವಿದ್ಯಾರ್ಥಿಗಳಿಗೆ, ರೈತರಿಗೆ ಎಲ್ಲರಿಗೂ ಸೋನು ಸೂದ್ ಸಹಾಯ ಮಾಡುತ್ತಿದ್ದಾರೆ.

    English summary
    Offering personal loan from fake social media account in the name of Sonu Sood. Actor alerts his fans about this.
    Thursday, November 26, 2020, 12:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X