For Quick Alerts
  ALLOW NOTIFICATIONS  
  For Daily Alerts

  ರಾಜ್‌ ಕುಂದ್ರಾ ಆದಾಯ ಪ್ರಶ್ನಿಸಿದ್ದ ಕಪಿಲ್ ಶರ್ಮಾ ಹಳೆಯ ವಿಡಿಯೋ ವೈರಲ್

  |

  ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಅವರನ್ನು ಸೋಮವಾರ (ಜುಲೈ 19) ಮುಂಬೈ ಪೊಲೀಸರು ಬಂಧಿಸಿದ್ದಾರೆ. ಅಶ್ಲೀಲ ವಿಡಿಯೋ ನಿರ್ಮಾಣ, ಮಾರಾಟ ಜಾಲಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅರೆಸ್ಟ್ ಮಾಡಲಾಗಿದೆ.

  ರಾಜ್ ಕುಂದ್ರಾ ಬಂಧನದ ನಂತರ ಮೇಲೆ ಕಪಿಲ್ ಶರ್ಮಾ ಕಾರ್ಯಕ್ರಮದ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದಾಯ ಬಗ್ಗೆ ರಾಜ್ ಕುಂದ್ರಾ ಅವರನ್ನು ಕಪಿಲ್ ಶರ್ಮಾ ಪ್ರಶ್ನಿಸಿದ್ದ ಈ ವಿಡಿಯೋ ಈಗ ಟ್ರೆಂಡ್ ಆಗಿದೆ. ಈ ಕಾರ್ಯಕ್ರಮದಲ್ಲಿ ಕಪಿಲ್ ಶರ್ಮಾ, ಶಿಲ್ಪಾ ಶೆಟ್ಟಿ ಹಾಗೂ ಶಮಿತಾ ಶೆಟ್ಟಿ ಭಾಗಿಯಾಗಿದ್ದಾರೆ.

  ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಬಂಧನಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಬಂಧನ

  ವಿಡಿಯೋದಲ್ಲಿ ನಿರೂಪಕ ಕಪಿಲ್ ಶರ್ಮಾ ಅತಿಥಿಯಾಗಿದ್ದ ರಾಜ್ ಕುಂದ್ರಾ ಅವರಿಗೆ, 'ನೀವು ಇಷ್ಟೊಂದು ಬ್ಯುಸಿ ಇರ್ತೀರಾ, ನಿಮ್ಮದು ಸಖತ್ ದುಬಾರಿ ಲೈಫು, ನಿಮ್ಮ ಆದಾಯದ ಮೂಲ ಯಾವುದು' ಎಂದು ಪ್ರಶ್ನಿಸಿದ್ದಾರೆ.

  ''ಬಾಲಿವುಡ್ ಪಾರ್ಟಿಗಳು, ಪುಟ್ಬಾಲ್ ಪಂದ್ಯಗಳಲ್ಲಿ, ಬೇರೆ ಬೇರೆ ರೆಸ್ಟೋರೆಂಟ್‌ಗಳಲ್ಲಿ, ವಿಮಾನದಲ್ಲಿ, ಶಿಲ್ಪಾ ಜೊತೆ ಶಾಪಿಂಗ್ ಮಾಡೋಕೆ ಹೀಗೆ ಎಲ್ಲೇ ನೋಡಿದ್ರು ರಾಜ್ ಕುಂದ್ರಾ ಅವರೇ ಕಾಣಿಸಿಕೊಳ್ತೀರಾ. ನೀವು ಯಾವಾಗ ಕೆಲಸ ಮಾಡ್ತೀರಾ, ಇಷ್ಟೊಂದು ದುಬಾರಿ ಜೀವನ ಮಾಡೋಕೆ ಎಲ್ಲಿಂದ ಹಣ ತರ್ತೀರಾ?'' ಎಂದು ಕಪಿಲ್ ಶರ್ಮಾ ಹಾಸ್ಯ ಚಟಾಕಿ ಹಾರಿಸಿದ್ದರು.

  ಕಪಿಲ್ ಶರ್ಮಾ ಕೇಳಿದ ಈ ಪ್ರಶ್ನೆಗೆ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ, ಶಮಿತಾ ಶೆಟ್ಟಿ ಬಿದ್ದು ಬಿದ್ದು ನಕ್ಕಿದ್ದರು. ಇದೀಗ, ಅಶ್ಲೀಲ ವಿಡಿಯೋ ನಿರ್ಮಾಣ ಕೇಸ್‌ನಲ್ಲಿ ಬಂಧನವಾಗಿರುವ ರಾಜ್ ಕುಂದ್ರಾರ ಆದಾಯದ ಮೂಲ ಯಾವುದು ಎಂದು ತಿಳಿಯಿತು ಎಂದು ನೆಟ್ಟಿಗರು ಈ ವಿಡಿಯೋ ಟ್ರೋಲ್ ಮಾಡ್ತಿದ್ದಾರೆ.

  ರಾಜ್ ಕುಂದ್ರಾ ಪ್ರಕರಣದ ಬಗ್ಗೆ....

  ಅಶ್ಲೀಲ ಚಿತ್ರ ಶೂಟಿಂಗ್ & ಮಾರಾಟ: ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ ಅರೆಸ್ಟ್ | Filmibeat Kannada

  ರಾಜ್ ಕುಂದ್ರಾ ಬಂಧನದ ಬಗ್ಗೆ ಮುಂಬೈ ಪೊಲೀಸ್ ಆಯುಕ್ತ ಹೇಮಂತ್ ನಾಗ್ರಲೇ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. "ಅಶ್ಲೀಲ ಚಿತ್ರಗಳ ನಿರ್ಮಾನ ಮತ್ತು ಅವುಗಳನ್ನು ಕೆಲವು ಅಪ್ಲಿಕೇಶನ್‌ಗಳ ಮೂಲಕ ಪ್ರಕಟಿಸುವ ಬಗ್ಗೆ ಫೆಬ್ರವರಿ 2021 ರಲ್ಲಿ ಮುಂಬೈ ಅಪರಾಧ ವಿಭಾಗದಲ್ಲಿ ಪ್ರಕರಣವೊಂದು ದಾಖಲಾಗಿದೆ. ಈ ಕೇಸ್‌ನಲ್ಲಿ ರಾಜ್ ಕುಂದ್ರಾ 19/7/21 ರಂದು ಬಂಧಿಸಿದ್ದೇವೆ, ಪ್ರಾಥಮಿಕ ತನಿಖೆ ವೇಳೆ ರಾಜ್ ಕುಂದ್ರಾ ಈ ಕೇಸ್‌ನಲ್ಲಿ ಪ್ರಮುಖ ಆರೋಪಿ ಎಂದು ತಿಳಿದಿದೆ'' ಎಂದು ಹೇಳಿದ್ದಾರೆ.

  English summary
  After Raj Kundra Arrest, Old video of Kapil Sharma asking Shilpa Shetty's husband about his income goes viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X