ವಿಡಿಯೋ: 'ನಿನ್ನ ಅಭಿನಯ ಯಾರಿಗೆ ಬೇಕಿದೆ' ಎಂದವರ ಎದುರು ಬೆಳೆದ ಬಾಲಿವುಡ್ ಸ್ಟಾರ್

ಆಯುಷ್ಮಾನ್ ಖುರಾನಾ, ಸದ್ಯ ಬಾಲಿವುಡ್‌ನಲ್ಲಿ ಚಾಲ್ತಿಯಲ್ಲಿರುವ ಹೆಸರು. ಮಸಾಲೆ ಸಿನಿಮಾಗಳಲ್ಲದೆ, ಆಯುಷ್ಮಾನ್ ಕೇವಲ ತನ್ನ ಪ್ರತಿಭೆಯಿಂದಲೇ ಗುರುತಿಸಿಕೊಂಡವರು.

ಆರ್ಟಿಕಲ್ 15, ಬರೇಲಿ ಕಿ ಬರ್ಫಿ, ಅಂದಾಧುನ್, ಡ್ರೀಲ್ ಗರ್ಲ್, ಶುಭ ಮಂಗಲ್ ಸಾವಧಾನ್, ವಿಕ್ಕಿ ಡೋನರ್, ಬಾಲಾ ಹೀಗೆ ಆಯುಷ್ಮಾನ್ ನಟಿಸಿರುವ ಸಿನಿಮಾಗಳ ಪಟ್ಟಿ ಬೆಳೆಯುತ್ತಾ ಸಾಗುತ್ತದೆ. ವಿಶೇಷವೆಂದರೆ ಆಯುಷ್ಮಾನ್ ನಟಿಸಿರುವ ಸಿನಿಮಾಗಳೆಲ್ಲವೂ 'ಔಟ್ ಆಫ್ ದಿ ಬಾಕ್ಸ್' ರೀತಿಯ ಕತೆಗಳೇ ಹೊಂದಿವೆ.

ತಮ್ಮ ಅಭಿನಯದಿಂದ ಬಾಲಿವುಡ್‌ನಲ್ಲಿ ಖಾಯಂ ಸ್ಥಳ ಸಂಪಾದಿಸಿರುವ ಆಯುಷ್ಮಾನ್ ಖುರಾನಾ, ಒಂದೊಮ್ಮೆ ಹೀನಾಯವಾಗಿ ಬೈಸಿಕೊಂಡಿದ್ದರು ಎಂದರೆ ನಂಬಲೇ ಬೇಕು.

ಗಾಡ್‌ಫಾದರ್‌ಗಳಿಲ್ಲದೆ ಬಂದವರು ಆಯುಷ್ಮಾನ್

ಗಾಡ್‌ಫಾದರ್‌ಗಳಿಲ್ಲದೆ ಬಂದವರು ಆಯುಷ್ಮಾನ್

ಆಯುಷ್ಮಾನ್ ಖುರಾನಾ ಯಾವುದೇ ಗಾಡ್‌ಫಾದರ್‌ಗಳಿಲ್ಲದೆ ಬಾಲಿವುಡ್‌ಗೆ ಬಂದವರು. ನೆಪೊಟಿಸಮ್ ತುಂಬಿ ತುಳುಕುತ್ತಿರುವ ಬಾಲಿವುಡ್‌ನಲ್ಲಿ ನಾಯಕನಾಗಿ ಹೆಸರು ಮಾಡುವುದು ಸುಲಭದ ಕಾರ್ಯವಾಗಿರಲಿಲ್ಲ, ಬಾಲಿವುಡ್ ನಾಯಕನಿಗೆ ಇರಬೇಕಾಗಿದ್ದ ಸಿಕ್ಸ್‌ ಪ್ಯಾಕ್, ನೃತ್ಯ ಕಲೆ, ಅಜಾನುಭಾಹುತ್ವ (ಸ್ಥಾಪಿತ ನಿಯಮ) ಇನ್ನಿತರೆ ಯಾವುದೂ ಅವರಿಗಿರಲಿಲ್ಲ.

ಒಂದೊಂದೇ ಮೆಟ್ಟಿಲು ಹತ್ತಿ ಮೆಟ್ಟಿಲೇರಿದ ಆಯುಷ್ಮಾನ್

ಒಂದೊಂದೇ ಮೆಟ್ಟಿಲು ಹತ್ತಿ ಮೆಟ್ಟಿಲೇರಿದ ಆಯುಷ್ಮಾನ್

ಒಂದೊಂದೆ ಮೆಟ್ಟಿಲು ಹತ್ತಿ ಆಯುಷ್ಮಾನ್ ಖುರಾನಾ ಈಗಿರುವ ಸ್ಥಾನಕ್ಕೆ ಏರಿದ್ದಾರೆ. ನಟನಾ ವೃತ್ತಿಯಲ್ಲೇ ಮುಂದುವರೆಯುದೆಂದು ನಿಶ್ಚಯಿಸಿದಾಗ ಆಯುಷ್ಮಾನ್ ಖುರಾನಾ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ ಯತ್ನ ಮಾಡಿದ್ದರು. ಆಗ ಖ್ಯಾತಿಯ ಉತ್ತುಂಗದಲ್ಲಿದ್ದ ಎಂಟಿವಿ ರೋಡೀಸ್‌ ಗೆ ಆಡಿಶನ್ ನೀಡಿದ್ದರು ಆಯುಷ್ಮಾನ್ ಖುರಾನಾ. ಅಲ್ಲಿ ಬಹಳ ಕೆಟ್ಟ ಅನುಭವ ಅವರಿಗಾಗಿತ್ತು.

ಒರಟಾಗಿ ವರ್ತಿಸಿದ್ದ ರಘು ರಾಂ

ಒರಟಾಗಿ ವರ್ತಿಸಿದ್ದ ರಘು ರಾಂ

2005 ರ ಸುಮಾರಿಗೆ ಅವರು ರೋಡೀಸ್‌ ನಲ್ಲಿ ಪಾಲ್ಗೊಳ್ಳಲು ಆಡಿಶನ್ ನೀಡಿದ್ದಾಗ ಶೋ ನ ಜಡ್ಜ್ ಗಳಲ್ಲಿ ಒಬ್ಬರಾಗಿದ್ದ ರಘು ರಾಂ, ಒರಟಾಗಿ ವರ್ತಿಸಿದ್ದರು. ನಿಮ್ಮ ಮಾತು, ನಿಮ್ಮ ನಡೆ, ನಗು ಎಲ್ಲವೂ ಕೃತಕವಾಗಿದೆ ಎಂದು ಜರಿದಿದ್ದರು. ಇದಕ್ಕೆ ಉತ್ತರಿಸಿದ ಖುರಾನಾ, ನಾನೊಬ್ಬ ನಟ ಹಾಗಾಗಿ ನಿಮಗೆ ಹಾಗನಿಸಿರಬೇಕು ಎಂದರು, ಇದಕ್ಕೆ ಒರಟಾಗಿಯೇ ಪ್ರತಿಕ್ರಿಯಸಿದ ರಘು ರಾಂ, 'ನಿನ್ನ ಅಭಿನಯ ಇಲ್ಲಾರಿಗೂ ಬೇಕಾಗಿಲ್ಲ, ಇದು ರಿಯಾಲಿಟಿ ಶೋ, ನೀನು ಹೇಗಿದ್ದೀರೋ ಹಾಗೆ ಇರು, ಇಲ್ಲಿ ಅಭಿನಯ ಮಾಡಬೇಡ' ಎಂದು ಗದರಿದ್ದರು.

ಮನವರಿಕೆ ಮಾಡಲು ಯತ್ನಿಸಿದ್ದ ಆಯುಷ್ಮಾನ್

ಮನವರಿಕೆ ಮಾಡಲು ಯತ್ನಿಸಿದ್ದ ಆಯುಷ್ಮಾನ್

ಇದರ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ ಆಯುಷ್ಮಾನ್ ಖುರಾನಾ, 'ನಾನು ಸಾಮಾನ್ಯವಾಗಿ ಇರುವುದೇ ಹೀಗೆ' ಎಂದು ಮನವರಿಕೆ ಮಾಡಿಕೊಡಲು ಯತ್ನಿಸಿದರಾದರೂ ಅವರು ಒಪ್ಪಲಿಲ್ಲ. ಆದರೆ ಆ ಶೋ ನಲ್ಲಿ ಅವರು ಆಯ್ಕೆ ಆದರು, ಎರಡನೇ ಬಹುಮಾನವನ್ನೂ ಪಡೆದರು.

ಈಗ ವೈರಲ್ ಆಗಿರುವ ವಿಡಿಯೋ

ರಘು ರಾಂ ಮತ್ತು ಆಯುಷ್ಮಾನ್ ಖುರಾನಾ ನಡುವೆ ನಡೆದ ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಯುಷ್ಮಾನ್ ಖುರಾನಾ ಎಲ್ಲಿ ತಲುಪಿದರು, ರಘು ರಾಂ ಎಲ್ಲಿ ಉಳಿದುಬಿಟ್ಟರು ಎಂದು ಕಮೆಂಟ್ ಮಾಡುತ್ತಿದ್ದಾರೆ ನೆಟ್ಟಿಗರು.

More from Filmibeat

English summary
Old video of Raghu Ram of MTV roadies and Ayushman Khurana viral now. In that Raghu Ram insulted Ayushman Khurana.
Read more about: raghu ram mtv roadies
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X