ಎ ಪ್ರಮಾಣಪತ್ರ ಪಡೆದು ಅತಿ ಹೆಚ್ಚು ಗಳಿಕೆ ಮಾಡಿದ ಬಾಲಿವುಡ್‌ನ ನಾಲ್ಕನೆ ಚಿತ್ರ OMG 2

ಇತ್ತೀಚೆಗೆ ಬಿಡುಗೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿರುವ ಅಕ್ಷಯ್ ಕುಮಾರ್ ನಟನೆಯ ಓ ಮೈ ಗಾಡ್ 2 (OMG 2) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಮಾಡಿದೆ. ವಯಸ್ಕರ ಪ್ರಮಾಣ ಪತ್ರ ಪಡೆದ ಬಾಲಿವುಡ್ ಸಿನಿಮಾಗಳಲ್ಲಿ ರಿತೇಶ್ ದೇಶ್‌ಮುಖ್ ಅವರ ಗ್ರ್ಯಾಂಡ್ ಮಸ್ತಿಯನ್ನು ಹಿಂದಿಕ್ಕಿ 4 ನೇ ಅತಿ ಹೆಚ್ಚು ಗಳಿಕೆ ಮಾಡಿದ ವಯಸ್ಕ ಚಿತ್ರವಾಗಿ ಹೊರಹೊಮ್ಮಿದೆ.

Sacnilk.com ಪ್ರಕಾರ ಇದುವರೆಗೆ ಅಕ್ಷಯ್ ಕುಮಾರ್ ನಟನೆಯ ಓ ಮೈ ಗಾಡ್ 2 ಚಿತ್ರವು ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 135.9 ಕೋಟಿ ಗಳಿಸುವ ಮೂಲಕ ಉತ್ತಮ ಪ್ರದರ್ಶನವನ್ನು ಮುಂದುವರೆಸಿದೆ. ಹೀಗಾಗಿ ಸಿನಿಮಾಗೆ ನೀಡಿರುವ ವಯಸ್ಕರ ಪ್ರಮಾಣಪತ್ರ ಅದರ ಓಟಕ್ಕೆ ಯಾವುದೇ ಅಡ್ಡಿಯಾಗಿಲ್ಲ.

highest-grossing-bollywood-film

ಬಾಕ್ಸ್ ಆಫೀಸ್ ಗಳಿಕೆಯ ಪ್ರಕಾರ, ಬಾಲಿವುಡ್‌ನಲ್ಲಿ ಓ ಮೈ ಗಾಡ್ 2 ವಯಸ್ಕರ ಪ್ರಮಾಣಪತ್ರದೊಂದಿಗೆ ಅತಿ ಹೆಚ್ಚು ಗಳಿಕೆ ಮಾಡಿದ ನಾಲ್ಕನೇ ಬಾಲಿವುಡ್ ಚಲನಚಿತ್ರವಾಗಿದೆ. 2019 ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ಕಬೀರ್ ಸಿಂಗ್ ಬಾಲಿವುಡ್‌ನ ಅತಿ ಹೆಚ್ಚು ಗಳಿಕೆ ಮಾಡಿದ ವಯಸ್ಕ ಚಲನಚಿತ್ರವಾಗಿದೆ.

ಬಾಕ್ಸ್ ಆಫೀಸ್ ಉಡೀಸ್ ಮಾಡಿರುವ ಹಿಂದಿ ವಯಸ್ಕರ ಸಿನಿಮಾಗಳು

ಪೋರ್ಟಲ್ ಮಾಹಿತಿ ಪ್ರಕಾರ, ಶಾಹಿದ್ ಕಪೂರ್ ಮತ್ತು ಕಿಯಾರಾ ಅಡ್ವಾಣಿ ನಟಿಸಿದ್ದ ಕಬೀರ್ ಸಿಂಗ್ 278.2 ಕೋಟಿ ರೂಪಾಯಿ ಗಳಿಸಿ ಮೊದಲ ಸ್ಥಾನದಲ್ಲಿದೆ. ಕಬೀರ್ ಸಿಂಗ್ ತೆಲುಗಿನ ಸೂಪರ್ ಹಿಟ್ ಅರ್ಜುನ್ ರೆಡ್ಡಿಯ ರಿಮೇಕ್ ಆಗಿದ್ದು, ವಿಜಯ್ ದೇವರಕೊಂಡ, ಶಾಲಿನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದರು.

highest-grossing-bollywood-film

ಕಬೀರ್ ಸಿಂಗ್ ನಂತರ ಬಾಲಿವುಡ್‌ನ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ವಯಸ್ಕ ಚಿತ್ರವೆಂದರೆ ಕಳೆದ ವರ್ಷ ಬಿಡುಗಡೆಯಾದ ವಿವಾದಿತ ಸಿನಿಮಾ ದಿ ಕಾಶ್ಮೀರ್ ಫೈಲ್ಸ್. ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಮಿಥುನ್ ಚಕ್ರವರ್ತಿ, ಅನುಪಮ್ ಖೇರ್ ಮತ್ತು ಪಲ್ಲವಿ ಜೋಶಿ ಕಾಣಿಸಿಕೊಂಡಿದ್ದಾರೆ. ಇದು 252.5 ಕೋಟಿ ಗಳಿಸಿದೆ. ಕಾಶ್ಮೀರ ಫೈಲ್ಸ್ ಸಿನಿಮಾಗೆ ಇತ್ತೀಚೆಗೆ 69 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ನರ್ಗೀಸ್ ದತ್ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಮೂರನೇ ಸಾಲಿನಲ್ಲಿ 'ದಿ ಕೇರಳ ಸ್ಟೋರಿ' ನಿಲ್ಲುತ್ತದೆ. ಮೂವರು ಯುವತಿಯರ ಜೀವನದ ಸುತ್ತ ಕಥೆ ಸುತ್ತುತ್ತದೆ. ಇಸ್ಲಾಂಗೆ ಮತಾಂತರವಾಗುವಂತೆ ಆಮಿಷವೊಡ್ಡಿ, ಭಯೋತ್ಪಾದಕ ಸಂಘಟನೆ ಐಸಿಸ್‌ಗೆ ಸೇಎಇಸಲು ಅವರನ್ನು ಬಲವಂತ ಪಡಿಸಿದ ಬಗ್ಗೆ ಸಿನಿಮಾದಲ್ಲಿದೆ. ಆದರೆ, ಈ ಸಿನಿಮಾ ಭಾರಿ ವಿವಾದ ಮತ್ತು ನಿಷೇಧಕ್ಕೆ ಒಳಗಾಯಿತು. ಈ ಸಿನಿಮಾ ಭಾರತದಲ್ಲಿ 238 ಕೋಟಿಗೂ ಹೆಚ್ಚು ಲಾಭ ಗಳಿಸಿದೆ.

highest-grossing-bollywood-film

ಇನ್ನು, 102.5 ಕೋಟಿ ಗಳಿಕೆ ಮಾಡಿ 5 ನೇ ಸ್ಥಾನದಲ್ಲಿ 'ಗ್ರ್ಯಾಂಡ್ ಮಸ್ತಿ' ಸಿನಿಮಾವಿದೆ. ಇಂದ್ರ ಕುಮಾರ್ ನಿರ್ದೇಶಿಸಿದ 2013 ರ ವಯಸ್ಕ, ಹಾಸ್ಯ ಸಿನಿಮಾವು 2004 ರ ಮಸ್ತಿಯ ಸೀಕ್ವೆಲ್ ಆಗಿತ್ತು. ಇದರಲ್ಲಿ ರಿತೇಶ್ ದೇಶ್‌ಮುಖ್, ವಿವೇಕ್ ಒಬೆರಾಯ್ ಮತ್ತು ಅಫ್ತಾಬ್ ಶಿವದಾಸನಿ ಸೇರಿ ಹಲವರು ನಟಿಸಿದ್ದರು.

ಓ ಮೈ ಗಾಡ್ 2

ಓ ಮೈ ಗಾಡ್ 2 (OMG 2) ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ಒಳಗೊಂಡ 2012 ರ OMG - ಓ ಮೈ ಗಾಡ್ ಚಲನಚಿತ್ರದ ಸೀಕ್ವೆಲ್. OMG 2 ಅನ್ನು ಅಮಿತ್ ರೈ ನಿರ್ದೇಶಿಸಿದ್ದು, ಪಂಕಜ್ ತ್ರಿಪಾಠಿ ಅವರು ಶಿವಭಕ್ತ ಕಾಂತಿ ಶರಣ್ ಮುದ್ಗಲ್ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಅಕ್ಷಯ್ ಭಗವಾನ್ ಶಿವನ ಸಂದೇಶವಾಹಕನಾಗಿ ಮತ್ತು ಯಾಮಿ ಗೌತಮ್ ವಕೀಲರಾಗಿ ನಟಿಸಿದ್ದಾರೆ. ಸಿನಿಮಾಗೆ ಜುಲೈನಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಎ ಪ್ರಮಾಣಪತ್ರವನ್ನು ನೀಡಿತ್ತು.

More from Filmibeat

English summary
Akshay Kumar's OMG 2 becomes 4th highest grossing Bollywood adult film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X