OMG 2: ಅಕ್ಷಯ್ ಕುಮಾರ್, ಯಾಮಿ ಗೌತಮ್, ಪಂಕಜ್ ತ್ರಿಪಾಠಿ ಅಭಿನಯದ OMG 2 ಏಕೆ ನೋಡಬೇಕು?

ಶುಕ್ರವಾರ (ಆಗಸ್ಟ್ 11) ಅಕ್ಷಯ್ ಕುಮಾರ್, ಪಂಕಜ್ ತ್ರಿಪಾಠಿ ಮತ್ತು ಯಾಮಿ ಗೌತಮ್ ಅಭಿನಯದ OMG 2 ಬಿಡುಗಡೆಗೆ ಸಿದ್ಧವಾಗಿದೆ. ಚಲನಚಿತ್ರವು ಹಾಸ್ಯಮಯ ಸಂಭಾಷಣೆ ಮತ್ತು ಸಾಮಾಜಿಕ ಸಂದೇಶವನ್ನು ಹೊಂದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಪ್ರೇಕ್ಷಕರು ಈಗಾಗಲೇ ಚಿತ್ರದ ಟ್ರೇಲರ್ ನೋಡಿದ್ದಾರೆ. ಇದು ಕೆಲವರಿಗೆ ಇಷ್ಟವಾಗಿದ್ದರೇ, ಮತ್ತೆ ಕೆಲವರು ಸಿನಿಮಾಗೆ ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ.

ಓ ಮೈ ಗಾಡ್ ಸೆನ್ಸಾರ್ 2 ಸಿನಿಮಾ ಸೆನ್ಸಾರ್ ಮಂಡಳಿಯಿಂದ ಸರ್ಟಿಫಿಕೇಟ್ ಪಡೆಯುವಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಿದೆ. ಕೊನೆಗೆ ಎ ಪ್ರಮಾಣಪತ್ರ ಪಡೆದಿದ್ದು, ಇದಕ್ಕೆ ಚಿತ್ರತಂಡ ಬೇಸರ ವ್ಯಕ್ತಪಡಿಸಿದೆ. ಜೊತೆಗೆ ಉತ್ತರ ಪ್ರದೇಶದಲ್ಲಿ ಹಲವು ಸಂಘಟನೆಗಳು ಚಿತ್ರವನ್ನು ಬಾಯ್ಕಾಟ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಚಿತ್ರವು ನಾಳೆ ಚಿತ್ರಮಂದಿರಗಳಿಗೆ ಬರಲಿದ್ದು, ಚಿತ್ರವನ್ನು ಏಕೆ ವೀಕ್ಷಿಸಬೇಕು ಎಂಬುದಕ್ಕೆ ಐದು ಕಾರಣಗಳು ಇಲ್ಲಿವೆ.

OMG 2 release: Five reasons why you should watch OMG 2

ಸೂಪರ್ ಹಿಟ್ ಚಿತ್ರದ ಬಹು ನಿರೀಕ್ಷಿತ ಸೀಕ್ವೆಲ್ ಓ ಮೈ ಗಾಡ್ 2

ಈ ಚಿತ್ರವು 2012 ರ ಸೂಪರ್ ಹಿಟ್ ಚಲನಚಿತ್ರ ಓ ಮೈ ಗಾಡ್‌ನ ಮುಂದುವರಿದ ಭಾಗವಾಗಿದೆ. ಮೊದಲ ಭಾಗದಲ್ಲಿ ಭೂಕಂಪವು ತನ್ನ ಅಂಗಡಿಯನ್ನು ಹಾಳುಮಾಡಿದಾಗ ದೇವರ ಮೇಲೆ ಮೊಕದ್ದಮೆ ಹೂಡುವ ನಾಸ್ತಿಕ ವ್ಯಕ್ತಿ ಪರೇಶ್ ರಾವಲ್ ಪಾತ್ರದ ಸುತ್ತ ಸುತ್ತುತ್ತದೆ. ಅಕ್ಷಯ್ ಕುಮಾರ್ ಅವರು ಪ್ರಕರಣದಲ್ಲಿ ಪರೇಶ್ ರಾವಲ್‌ಗೆ ಸಹಾಯ ಮಾಡಲು ಮತ್ತು ನಕಲಿ ಅರ್ಚಕರನ್ನು ಹೊರಗೆಳೆಯಲು ಸಹಾಯ ಮಾಡುವ ಭಗವಾನ್ ಕೃಷ್ಣನ ಪಾತ್ರವನ್ನು ನಿರ್ವಹಿಸಿದ್ದರು. ಜೊತೆಗೆ ಸಿನಿಮಾದಲ್ಲಿ ದೇವರ ಮೇಲಿನ ನಂಬಿಕೆಯನ್ನು ಮತ್ತೆ ಹಾಗೆಯೇ ಇರುವಂತೆ ನೋಡಿಕೊಂಡಿದ್ದರು. ಈ ಹಾಸ್ಯ ಮತ್ತು ಸಮದೇಶ ತುಂಬಿದ್ದ ಸಿನಿಮಾ ಅಪಾರ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದು, ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿತ್ತು. ಹೀಗಾಗಿ ಸೀಕ್ವೆಲ್ ಮೇಲೆ ಅಪಾರ ನಿರೀಕ್ಷೆಯಿದೆ.

ಪಂಕಜ್ ತ್ರಿಪಾಠಿ ಮತ್ತು ಯಾಮಿ ಗೌತಮ್

ಸಿನಿಮಾ ಟ್ರೈಲರ್‌ಗಳಲ್ಲಿ ನೋಡಿದಂತೆ ಇದು ಕೋರ್ಟ್ ರೂಂ ಡ್ರಾಮಾ. ಪಂಕಜ್ ತ್ರಿಪಾಠಿ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಅವರ ಮಗ ಯಾವುದೋ ಆಘಾತಕ್ಕೆ ಒಳಗಾಗುತ್ತಾರೆ. ಹೀಗಾಗಿ ಆತನ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಹೂಡುತ್ತಾನೆ. ಯಾಮಿ ಗೌತಮ್ , ಪಂಕಜ್ ತ್ರಿಪಾಠಿ ವಿರುದ್ಧ ನ್ಯಾಯಾಲಯದ ಹೋರಾಟ ನಡೆಸುವ ವಕೀಲರಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಟ್ರೇಲರ್‌ನಲ್ಲಿ ಇಬ್ಬರ ಜಿದ್ದಾಜಿದ್ದಿ ಕಾಣಿಸಿದೆ.

OMG 2 release: Five reasons why you should watch OMG 2

ಅಕ್ಷಯ್ ಕುಮಾರ್ ಅವರ ಹೊಸ ಅವತಾರ

ಚಿತ್ರದಲ್ಲಿ ಅಕ್ಷಯ್ ಕುಮಾರ್ ಶಿವನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಹಲವು ವಿರೋಧಗಳು ವ್ಯಕ್ತವಾದ ನಂತರ ಅವರನ್ನು ಶಿವದಾಸ ಎಂದು ಹೇಳಲಾಗಿದೆ. ಜಟೆ, ವಿಭೂತಿ, ರುದ್ರಾಕ್ಷಿ ಧರಿಸಿರುವ ಅಕ್ಷಯ್ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್‌ನಲ್ಲಿ ಹೆಚ್ಚು ಗಮನ ಸೆಳೆದಿದ್ದು ಅಕ್ಷಯ್ ಕುಮಾರ್ ಅವರ ತಾಂಡವ ನೃತ್ಯ. ಇಡೀ ಸಿನಿಮಾದಲ್ಲಿ ಇದು ಹೇಗಿರಲಿದೆ ಎಂಬುದಕ್ಕೆ ನಾಳೆ ಉತ್ತರ ದೊರೆಯಲಿದೆ.

ಹಾಸ್ಯಮಯ ಸಂಭಾಷಣೆಗಳು ಮತ್ತು ಚಿತ್ರದ ಕಥಾವಸ್ತು

ಚಿತ್ರವನ್ನು ಅಮಿತ್ ರೈ ಬರೆದು ನಿರ್ದೇಶಿಸಿದ್ದಾರೆ. ಟ್ರೈಲರ್‌ನಲ್ಲಿ ಕಂಡಂತೆ ಕೆಲವು ತಮಾಷೆಯ ಸಂಭಾಷಣೆ ಜೊತೆಗೆ ಶಕ್ತಿ ತುಂಬಿದ ಡೈಲಾಗ್‌ಗಳು ಸಿನಿಮಾದಲ್ಲಿ ಏನೋ ಇದೆ ಎಂಬುದನ್ನು ತೋರಿಸಿದೆ. ಶಾಲೆಗಳಲ್ಲಿ ಲೈಂಗಿಕ ಶಿಕ್ಷಣದ ನಿಷೇಧಿತ ವಿಷಯವನ್ನು ಹೊಂದಿರುವ ಕಾರಣ ಚಿತ್ರದ ಕಥಾಹಂದರವು ಸಹ ಸೂಕ್ಷ್ಮವಾಗಿದೆ. ಇದು ಅದೇ ಸಮಯದಲ್ಲಿ ಮನರಂಜನೆ ಮತ್ತು ಶೈಕ್ಷಣಿಕವಾಗಿಯೂ ಸಿನಿಮಾ ಭರವಸೆ ನೀಡಿದೆ.

ಚಿತ್ರದ ಸಂಗೀತ

ಚಿತ್ರ ಬಿಡುಗಡೆಗೂ ಮೊದಲು, ಎರಡು ಭಕ್ತಿಗೀತೆಗಳನ್ನು ಬಿಡುಗಡೆ ಮಾಡಲಾಗಿದೆ. ಹರ್ ಹರ್ ಮಹಾದೇವ್ ಮೈನವಿರೇಳಿಸುವಂತಿದ್ದು, ಇದನ್ನು ಅನೇಕ ಹಿನ್ನೆಲೆ ನೃತ್ಯಗಾರನ್ನು ಬಳಸಿಕೊಂಡು ದೊಡ್ಡಮಟ್ಟದಲ್ಲಿ ಚಿತ್ರೀಕರಿಸಲಾಗಿದೆ. ಆದರೆ, ಊಂಚಿ ಊಂಚಿ ವಾಡಿ ಮತ್ತೊಂದು ಬಗೆಯ ಅನುಭವ ನೀಡುತ್ತದೆ. ಮತ್ಯಾಕೆ ತಡ ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಒಮ್ಮೆ OMG 2 ನೋಡಿ ಬಿಡಿ.

More from Filmibeat

English summary
OMG 2 release: Five reasons why you should watch Akshay Kumar, Yami Gautam and Pankaj Tripathi starrer comedy and drama OMG 2. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X