OMG- 2 Trailer: ಸೆನ್ಸಾರ್ ಏಟಿಗೆ ಎಲ್ಲಾ ಅದಲು ಬದಲು: ಅಕ್ಷಯ್ ಶಿವ ಅಲ್ಲ ಶಿವಧೂತ.. ಯಪ್ಪಾ ಏನ್ ಟ್ವಿಸ್ಟ್

ಖಿಲಾಡಿ ಅಕ್ಷಯ್ ಕುಮಾರ್ ನಟನೆಯ 'ಓ ಮೈ ಗಾಡ್-2' ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ಇತ್ತೀಚೆಗೆ ಸಿನಿಮಾ ಸೆನ್ಸಾರ್ ವಿಚಾರ ಭಾರೀ ಸದ್ದು ಮಾಡಿತ್ತು. ಚಿತ್ರದಲ್ಲಿ ಸಲಿಂಗ ಕಾಮ, ಲೈಂಗಿಕ ಶಿಕ್ಷಣದ ಅಂಶಗಳಿವೆ ಎನ್ನುವ ಗುಸು ಗುಸು ಶುರುವಾಗಿತ್ತು. ಇದೇ ಕಾರಣಕ್ಕೆ ಚಿತ್ರಕ್ಕೆ ಸರ್ಟಿಫಿಕೇಟ್ ನೀಡಲು ಸೆನ್ಸಾರ್ ಮಂಡಳಿ ಹಿಂದುಮುಂದು ನೋಡ್ತಿದೆ ಎನ್ನಲಾಗಿತ್ತು.

ಸೂಪರ್ ಹಿಟ್ 'ಓ ಮೈ ಗಾಡ್' ಹಾದಿಯಲ್ಲೇ ಬರುತ್ತಿರುವ ವಿಡಂಬನಾತ್ಮಕ ಕಾಮಿಡಿ ಎಂಟರ್‌ಟೈನರ್ ಸಿನಿಮಾ ಇದು. ಹಿಂದಿನ ಸಿನಿಮಾದಲ್ಲಿ ಶ್ರೀಕೃಷ್ಣನಾಗಿ ನಟಿಸಿದ್ದ ಅಕ್ಷಯ್ ಕುಮಾರ್ ಈ ಚಿತ್ರದಲ್ಲಿ ಶಿವನಾಗಿ ಬಣ್ಣ ಹಚ್ಚಿದ್ದರು. ಆದರೆ ಸದ್ಯ ರಿಲೀಸ್ ಆಗಿರುವ ಟ್ರೈಲರ್‌ನಲ್ಲಿ ಕಥೆ ಮತ್ತು ಅಕ್ಷಯ್ ಕುಮಾರ್ ಪಾತ್ರವನ್ನು ಕೂಡ ಬದಲಾಯಿಸಿರೋದು ಗೊತ್ತಾಗುತ್ತಿದೆ. ಸಿನಿಮಾ ಯತಾವತ್ ರಿಲೀಸ್ ಮಾಡೋಕೆ ಸಾಧ್ಯವೇ ಇಲ್ಲ ಎಂದಾಗ ಬದಲಾವಣೆಗೆ ಚಿತ್ರತಂಡ ಒಪ್ಪಿದೆ.

OMG- 2 Trailer out, Akshay Kumars character changed

'ಓ ಮೈ ಗಾಡ್-2' ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ 'ಎ' ಸರ್ಟಿಫಿಕೇಟ್ ಸಿಕ್ಕಿದೆ. ಶಿವನ ಕುರಿತಾದ ಚಿತ್ರಕ್ಕೆ ವಯಸ್ಕರ ಸಿನಿಮಾ ಸರ್ಟಿಫಿಕೇಟ್ ಸಿಕ್ಕಿರೋದು ಚಿತ್ರತಂಡಕ್ಕೂ ಕಸಿವಿಸಿ ತಂದಿದೆ. ಆದರೆ ಚಿತ್ರದಲ್ಲಿ ಲೈಂಗಿಕ ಶಿಕ್ಷಣಕ್ಕೆ ಸಂಬಂಧಿಸಿದ ಅಂಶಗಳಿರುವ ಕಾರಣಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕೃತ ಮಂಡಳಿ ಸೆನ್ಸಾರ್ ಸರ್ಟಿಫಿಕೇಟ್ ನಿರಾಕರಿಸಿತ್ತು. ಬದಲಿಗೆ ಪರಿಶೀಲನಾ ಸಮಿತಿಗೆ ಕಳುಹಿಸಿ ಕೊಡಲಾಗಿತ್ತು. ಒಂದಷ್ಟು ಬದಲಾವಣೆಗೆ ಒಪ್ಪಿದ ಬಳಿಕ ಪರಿಶೀಲನಾ ಸಮಿತಿಯು ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ನೀಡಿದೆ.

ಅಕ್ಷಯ್ ಶಿವಧೂತ

ಕಳೆದರಡು ದಿನಗಳಿಂದ 'ಓ ಮೈ ಗಾಡ್-2' ಚಿತ್ರದಲ್ಲಿ ಅಕ್ಷಯ್ ಕುಮಾರ್ ಪಾತ್ರವನ್ನೇ ಬದಲಿಸುವಂತೆ ಪರಿಶೀಲನಾ ಸಮಿತಿ ಹೇಳಿದ್ದಾಗಿ ಚರ್ಚೆ ನಡೆದಿತ್ತು. ಸದ್ಯ ರಿಲೀಸ್ ಆಗಿರುವ ಟ್ರೈಲರ್‌ನಲ್ಲಿ ಪಾತ್ರ ಬದಲಿಸಿರುವುದು ಗೊತ್ತಾಗುತ್ತಿದೆ. ಚಿತ್ರದಲ್ಲಿ ಅಕ್ಷಯ್ ಕುಮಾರ್ ಶಿವನಾಗಿ ನಟಿಸಿದ್ದರು. ಆದರೆ ಈಗ ಅದನ್ನು ಶಿವಧೂತ ಎಂದು ಬದಲಿಸಲಾಗಿದೆ. ಟ್ರೈಲರ್‌ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದ್ದು ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ.

ನಂಬಿದ ಶಿವನ ವಿರುದ್ಧ ದೂರು?

ಶಿವಭಕ್ತನಾಗಿ ವಾಸಿಸುವ ಕಾಂತಿ ಶರಣ್ ಮುದ್ಗಲ್(ಪಂಕಜ್ ತ್ರಿಪಾಠಿ) ತನ್ನ ಹದಿಹರೆಯದ ಮಗನನ್ನು ಉನ್ನತ ಶಿಕ್ಷಣಕ್ಕಾಗಿ ಕಾನ್ವೆಂಟ್‌ಗೆ ಸೇರಿಸುತ್ತಾನೆ. ಆದರೆ ಒಂದು ಅಶ್ಲೀಲ ವೀಡಿಯೋ ಮೂಲಕ ಆಕಸ್ಮಿಕವಾಗಿ ಆತ ವೈರಲ್ ಆಗುವಂತಾಗುತ್ತದೆ. ಇದರಿಂದ ಕಾಂತಿ ಗೌರವಕ್ಕೆ ಧಕ್ಕೆ ಬರುತ್ತದೆ. ಇದರಿಂದ ಆತ ತಾನುವಬಹಳ ಭಕ್ತಿಯಿಂದ ಆರಾಧಿಸುವ ಶಿವನ ಮೇಲೆ ಅಸಮಾಧಾನ ವ್ಯಕ್ತಪಡಿಸುತ್ತಾನೆ. ಸಾಲದ್ದಕ್ಕೆ ದೇವರ ಮೇಲೆ ಸೇಡು ತೀರಿಸಿಕೊಳ್ಳಲು ಕೋರ್ಟ್ ಮೆಟ್ಟಿಲೇರುತ್ತಾನೆ. ಇಂತಹ ಸಮಯದಲ್ಲೇ ಅಕ್ಷಯ್ ಕುಮಾರ್ ಶಿವಧೂತನಾಗಿ ಕಾಂತಿ ಬಳಿ ಬರುತ್ತಾನೆ. ಆತ ಹೇಗೆ ಅಡಿಗಡಿಗೂ ಕಾಂತಿಗೆ ಸಹಾಯ ಮಾಡುತ್ತಾನೆ? ಆ ವೈರಲ್ ವಿಡಿಯೋ ಏನು? ಕಾಂತಿ ಗೊಂದಲಕ್ಕೆ ಕಾರಣ ಏನು? ಅನ್ನೋದನ್ನೆಲ್ಲಾ ತೆರೆಮೇಲೆ ನೋಡಬೇಕು.

OMG- 2 Trailer out, Akshay Kumars character changed

ಕುತೂಹಲ ಮೂಡಿಸಿದ ಟ್ರೈಲರ್

'ಓ ಮೈ ಗಾಡ್- 2' ಟ್ರೈಲರ್ ಕೊಂಚಮಟ್ಟಿಗೆ ಕುತೂಹಲ ಮೂಡಿಸಿದೆ. ಆ ವೈರಲ್ ವಿಡಿಯೋ ಸುತ್ತಾ ಈ ಸಿನಿಮಾ ಕಥೆ ಸುತ್ತುತ್ತದೆ ಅನ್ನೋದು ಗೊತ್ತಾಗ್ತಿದೆ. ಬಹಳ ಸೂಕ್ಷ್ಮವಾದ ವಿಷಯದ ಜೊತೆ ಸನಾತನ ಧರ್ಮವನ್ನು ಸೇರಿಸಿ ಜೇನುಗೂಡಿಗೆ ಕೈ ಹಾಕಿದಂತೆ ಕಾಣುತ್ತಿದೆ. ಈಗಾಗಲೇ ಸೆನ್ಸಾರ್ ಮಂಡಳಿ ತಂಡಕ್ಕೆ ಬಿಸಿ ಮುಟ್ಟಿಸಿರೋದು ಅದಕ್ಕೆ ಸಾಕ್ಷಿ. ಇತ್ತೀಚೆಗೆ 'ಆದಿಪುರುಷ್' ಸಿನಿಮಾ ರಿಲೀಸ್ ಆಗಿ ಇದೇ ರೀತಿ ಭಾರೀ ವಿವಾದ ಸೃಷ್ಟಿಸಿತ್ತು. ಹಾಗಾಗಿಯೇ ಎಚ್ಚೆತ್ತುಕೊಂಡ ಸೆನ್ಸಾರ್ ಮಂಡಳಿ 'ಓ ಮೈ ಗಾಡ್'-2 ತಂಡಕ್ಕೆ ಶಾಕ್ ಕೊಟ್ಟಿದೆ.

ಕತ್ತರಿ ಅಲ್ಲ ಕೊಡಲಿ ಪ್ರಯೋಗ!

ಸಾಮಾನ್ಯವಾಗಿ ಸೆನ್ಸಾರ್‌ ಮಂಡಳಿ ವಿವಾದ ಸೃಷ್ಟಿಸುವಂತಹ ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡುತ್ತದೆ. ಆದರೆ 'ಓ ಮೈ ಗಾಡ್'-2 ಚಿತ್ರದ ವಿಚಾರದಲ್ಲಿ ಸಿಬಿಎಫ್‌ಸಿ ಕೊಡಲಿ ಪ್ರಯೋಗ ಮಾಡಿದಂತೆ ಕಾಣುತ್ತಿದೆ. 13 ನಿಮಿಷ ದೃಶ್ಯಗಳನ್ನು ಕತ್ತರಿಸುವಂತೆ ಸೆನ್ಸಾರ್ ಮಂಡಳಿ ಸೂಚಿಸಿದೆಯಂತೆ. ಸಾಲದಕ್ಕೆ ಅಕ್ಷಯ್ ಕುಮಾರ್ ಪಾತ್ರವನ್ನೇ ಬದಲಿಸಿಬಿಟ್ಟಿದೆ. ಇನ್ನು ಒಂದಷ್ಟು ಡೈಲಾಗ್‌ಗಳನ್ನು ಮ್ಯೂಟ್ ಮಾಡಲು ಸೂಚಿಸಿದೆ. ಆಗಸ್ಟ್ 11ಕ್ಕೆ ಎಲ್ಲಾ ವಿವಾದಗಳನ್ನು ಮೀರಿ ಸಿನಿಮಾ ಗೆಲ್ಲುತ್ತಾ ಕಾದು ನೋಡಬೇಕಿದೆ.

More from Filmibeat

English summary
OMG- 2 Trailer Released, Akshay Kumar's character changed from shiva to shiva messenger. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X