ಗದರ್ 2, ಓ ಮೈ ಗಾಡ್ 2: ಮುಂಗಡ ಟಿಕಿಟ್ ಬುಕ್ಕಿಂಗ್‌ ರೇಸ್‌ನಲ್ಲಿ ಮುಂದೆ ಯಾರು? ಹಿಂದೆ ಯಾರು?

ಈ ಶುಕ್ರವಾರ (ಆಗಸ್ಟ್ 11) ಹಿಂದಿ ಚಿತ್ರೋದ್ಯಮದಲ್ಲಿ ಎರಡು ಬಹುನಿರೀಕ್ಷಿತ ಚಿತ್ರಗಳು ಬಿಡುಗಡೆಯಾಗುತ್ತಿವೆ. ಇದೇ ಈಗ ಬಾಲಿವುಡ್‌ನಲ್ಲಿ ಮುಸುಕಿನ ಗುದ್ದಾಟಕ್ಕೂ ಕಾರಣವಾಗಿದೆ. ಹೌದು, ಈ ವಾರ ಬಿಡುಗಡೆಯಾಗಲು ಸಜ್ಜಾಗಿರುವ ಆಕ್ಷಯ್ ಕುಮಾರ್ ನಟನೆಯ ಓ ಮೈ ಗಾಡ್ 2 ಮತ್ತು ಸನ್ನಿ ಡಿಯೋಲ್ ನಟನೆಯ ಗದರ್ 2 ಸೀಕ್ವೆಲ್‌ಗಳ ನಡುವೆ ಟಿಕೆಟ್ ಬುಕ್ಕಿಂಗ್ ವಾರ್‌ ಶುರುವಾಗಿದೆ.

ಎರಡು ಸಿನಿಮಾ ಬಿಡುಗಡೆಗೆ ಕೇವಲ ನಾಲ್ಕು ದಿನ ಬಾಕಿಯಿದೆ. ಈಗಾಗಲೇ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ಸನ್ನಿ ಡಿಯೋಲ್ ನಟ ಅಕ್ಷಯ್ ಕುಮಾರ್‌ಗೆ ಸವಾಲಾಗಲಿದ್ದಾರೆ ಎನ್ನುವಂತಿದೆ ಲೆಕ್ಕಾಚಾರಗಳು. ಸನ್ನಿ ಡಿಯೋಲ್ ಮತ್ತು ಅಮಿಶಾ ಪಟೇಲ್ ಅಭಿನಯದ ಗದರ್‌ ಸೀಕ್ವೆಲ್‌ನ ಟ್ರೈಲರ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಇತ್ತ, ಖಿಲಾಡಿ ಅಕ್ಷಯ್ ಕುಮಾರ್ ನಟನೆಯ ಓ ಮೈ ಗಾಡ್ 2 ಟ್ರೈಲರ್ ವಿವಾದವನ್ನು ಎಬ್ಬಿಸಿತ್ತು!.

OMG 2 vs Gadar 2 box office clash: Who is leading in Day 1 Advance Booking?

ಸಿನಿಮಾಗೆ ಟ್ರೈಲರ್ ಗೆಲುವು ಪ್ರಮಖ ಅಂಶವಾಗುತ್ತದೆ. ಆದರೆ, ಈ ವಿಷಯದಲ್ಲಿ ಆರಂಭಿಕ ಹಂತದಲೇ ಅಕ್ಷಯ್ ಕುಮಾರ್ ಅವರ ಸಿನಿಮಾ ಎಡವಿದೆ. ಗದರ್ ಜನಮನ್ನಣೆ ಪಡೆಯುತ್ತಿದೆ. ಇದೆ ಗದರ್ ಸೀಕ್ವೆಲ್‌ನ ಮುಂಗಡ ಟಿಕೆಟ್ ಬುಕ್ಕಿಂಗ್ ಮೇಲು ಪ್ರಭಾವ ಬೀರುತ್ತಿದೆ. ಈವರೆಗಿನ ಬುಕ್ಕಿಂಗ್ ನೋಡಿದರೇ ಅಕ್ಕಯ್‌ಗೆ ಸನ್ನಿ ಡಿಯೋಲ್ ಭಾರಿ ಪೆಟ್ಟು ನೀಡಲಿದ್ದಾರೆ ಎನ್ನಿಸುತ್ತಿದೆ.

ಟಿಕೆಟ್ ಬುಕ್ಕಿಂಗ್‌ನಲ್ಲಿ ಯಾರು ಮುಂದು?

ಮುಂಗಡ ಬುಕಿಂಗ್ ಪ್ರಾರಂಭವಾಗುವ ಮೊದಲು ಓ ಮೈ ಗಾಡ್ ಸೀಕ್ವೆಲ್‌ನ ಸ್ಟೋರಿಯನ್ನೇ ಜನ ವಿರೋಧಿಸುತ್ತಿದ್ದಾರೆ. ಕೆಲವೊಂದು ಆಕ್ಷೇಪಾರ್ಹ ವಿಷಯಗಳಿಂದಾಗಿ ಚಿತ್ರವು ವಾರಗಟ್ಟಲೆ ಸೆನ್ಸಾರ್ ಮಂಡಳಿಯ ಅಡ್ಡಕತ್ತರಿಯಲ್ಲಿ ಸಿಲುಕಿತ್ತು. ಹೀಗಾಗಿಯೇ ಇದಕ್ಕೆ 'ಎ - ವಯಸ್ಕರಿಗೆ ಮಾತ್ರ' ಪ್ರಮಾಣಪತ್ರ ಪಡೆದಿದೆ. ಇದೇ ಸಿನಿಮಾ ಬುಕ್ಕಿಂಗ್ ಮೇಲೆ ಪ್ರಭಾವ ಬೀರಲಿದೆ .

OMG 2 vs Gadar 2 box office clash: Who is leading in Day 1 Advance Booking?

ಇತ್ತೀಚಿನ ಬಾಕ್ಸ್ ಆಫೀಸ್ ಟ್ರೆಂಡ್‌ಗಳ ಪ್ರಕಾರ, ಗದರ್ 2 ಕಾಯ್ದಿರಿಸಿದ ಸ್ಥಾನಗಳನ್ನು ಬಿಟ್ಟು ತನ್ನ ಬುಟ್ಟಿಗೆ ಒಟ್ಟು 4 ಕೋಟಿ ಟಿಕೆಟ್‌ಗಳನ್ನು ತುಂಬಿಕೊಂಡಿದೆ. ಭಾನುವಾರ ಇದು 3.30 ಕೋಟಿಗಳಿತ್ತು. ದಿನ ದಿನವೂ ಟಿಕೆಟ್ ಬುಕ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಈ ಸಂಖ್ಯೆ ಎರಡಂಕಿಯನ್ನು ದಾಟಬಹುದು ಎಂದು ಸಿನಿಮಾ ವಿಶ್ಲೇಷಕರು ಅಂದಾಜಿಸಿದ್ದಾರೆ.

ಮತ್ತೊಂದೆಡೆ, ಓ ಮೈ ಗಾಡ್ 2 ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಕಾಯ್ದಿರಿಸಿದ ಸ್ಥಾನಗಳನ್ನು ಬಿಟ್ಟು ಸುಮಾರು 70 ಲಕ್ಷ ಮುಂಗಡ ಟಿಕೆಟ್ ಬುಕ್ಕಿಂಗ್‌ಗಳನ್ನು ಮಾತ್ರ ಸಂಗ್ರಹಿಸಿದೆ. ಇನ್ನು ಟಿಕೆಟ್ ಕಾಯ್ದಿರಿಸಲು ನಾಲ್ಕು ದಿನಗಳಿವೆ. ಅಷ್ಟರಲ್ಲಿ ಅಕ್ಷಯ್ ಕುಮಾರ್ ಮತ್ತು ತಂಡ ತಮ್ಮ ಸಿನಿಮಾವನ್ನು ಮುಳುಗದಂತೆ ತಡೆಯಲು ಉತ್ತಮ ಮಾರ್ಕೆಟಿಂಗ್ ತಂತ್ರಗಳನ್ನು ಬಳಸಬೇಕಿರುವುದಂತು ಸತ್ಯ.

OMG 2 vs Gadar 2 box office clash: Who is leading in Day 1 Advance Booking?

ಗದರ್ 2 ಬಾಲಿವುಡ್‌ನ ಸೂಪರ್ ಹಿಟ್ ಚಲನಚಿತ್ರ ಗದರ್: ಏಕ್ ಪ್ರೇಮ್ ಕಥಾ ಚಿತ್ರದ ಸೀಕ್ವೆಲ್. ಈ ಸಿನಿಮಾ ಬಿಡುಗಡೆಯಾಗಿ ಸುಮಾರು 22 ವರ್ಷಗಳ ನಂತರ ತಾರಾ (ಸನ್ನಿ ಡಿಯೋಲ್) ಮತ್ತು ಸಕೀನಾ (ಅಮೀಶಾ ಪಟೇಲ್) ಅವರ ಅಭಿನಯದ ಗದರ್ 2ಗೆ ಅನಿಲ್ ಶರ್ಮಾ ಆಕ್ಷನ್ ಕಟ್ ಹೇಳಿದ್ದಾರೆ.

ಓ ಮೈ ಗಾಡ್ 2 ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ಅವರ ಓ ಮೈ ಗಾಡ್ ಸಿನಿಮಾದ ಸೀಕ್ವೆಲ್. ಈಗ ಸ್ವೀಕ್ವೆಲ್‌ನಲ್ಲಿ ಅಕ್ಷಯ್ ಕುಮಾರ್‌ಗೆ ಸಾಥ್ ನೀಡಲು ಯಾಮಿ ಗೌತಮ್ ಮತ್ತು ಪಂಕಜ್ ತ್ರಿಪಾಠಿ ಇದ್ದಾರೆ. ಆದರೆ, ಚಿತ್ರದಲ್ಲಿ ಸಲಿಂಗ ಕಾಮ, ಲೈಂಗಿಕ ಶಿಕ್ಷಣದ ಅಂಶಗಳಿವೆ ಎಂಬ ವದಂತಿಗಳು ಹಬ್ಬಿದ ಕಾರಣ ಸಿನಿಮಾಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಇದಲ್ಲದೆ, 'ಓ ಮೈ ಗಾಡ್'-2 ಚಿತ್ರದದಲ್ಲಿ 13 ನಿಮಿಷ ದೃಶ್ಯಗಳನ್ನು ಕತ್ತರಿಸುವಂತೆ ಸೆನ್ಸಾರ್ ಮಂಡಳಿ ಸೂಚಿಸಿದ್ದು, 'ಎ' ಸರ್ಟಿಫಿಕೆಟ್ ನೀಡಿದೆ.

More from Filmibeat

English summary
OMG 2 vs Gadar 2 box office clash: Which film is leading in day 1 advance Bookin? Sunny Deol starrer Gadar 2 or Akshay Kumar led film OMG 2 . know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X