ಈ ಪಾತ್ರ ಮಾಡಬೇಕೆಂದು ಹೃತಿಕ್ ಮನವೊಲಿಸಲು ಅವರ ಮನೆಗೆ ಹೋಗಿ ಕುಳಿತಿದ್ದ ಆಮೀರ್ ಖಾನ್

By ಫಿಲ್ಮಿಬೀಟ್ ಕನ್ನಡ

ಸ್ಟಾರ್ ಕಲಾವಿದರ ನಡುವೆ ವೃತ್ತಿಪರ ಪೈಪೋಟಿ ಇರುವುದು ಸಹಜ. ಪ್ರತಿ ಚಿತ್ರರಂಗದಲ್ಲೂ ದೊಡ್ಡ ದೊಡ್ಡ ಸ್ಟಾರ್ ಗಳ ನಡುವೆ ಪೈಪೋಟಿ ಏರ್ಪಪಡುವುದು ಸಹಜ. ಹಾಗಿರುವಾಗ ಒಬ್ಬ ಸ್ಟಾರ್ ಮತ್ತೊಬ್ಬ ಸ್ಟಾರ್ ಬಳಿ ಹೋಗಿ ಈ ಪಾತ್ರ ಮಾಡಿ ಎಂದು ಕೇಳಿಕೊಳ್ಳುವುದು ತೀರ ಅಪರೂಪ. ಆದರೆ ಆಮೀರ್ ಖಾನ್ ಹಾಗಲ್ಲ. ಸಿನಿಮಾ ಚೆನ್ನಾಗಿ ಮೂಡಿಬರಲು ಏನು ಬೇಕಾದರು ಮಾಡಲು ಸಿದ್ಧರಿರುತ್ತಾರೆ. ತನ್ನ ಒಂದು ಸಿನಿಮಾದ ಪ್ರಮುಖ ಪಾತ್ರಕ್ಕಾಗಿ ಹೃತಿಕ್ ರೋಷನ್ ಅವರನ್ನು ಮನವೊಲಿಸಲು ಆಮೀರ್ ಖಾನ್ ಅವರ ಮನೆಗೆ ಹೋಗಿದ್ದ ವಿಚಾರವನ್ನು ಖ್ಯಾತ ನಿರ್ದೇಶಕ ಓಂ ಪ್ರಕಾಶ್ ಮೆಹ್ರಾ ಬಹಿರಂಗ ಪಡಿಸಿದ್ದಾರೆ.

ಬಾಲಿವುಡ್‌ನ ಖ್ಯಾತ ನಿರ್ದೇಶಕ ರಾಕೇಶ್ ಓಂ ಪ್ರಕಾಶ್ ಮೆಹ್ರಾ ಇತ್ತೀಚಿಗಷ್ಟೆ ತನ್ನ ಆತ್ಮಚರಿತ್ರೆ ಬಿಡುಗಡೆ ಮಾಡಿದ್ದಾರೆ. 'ದಿ ಸ್ಟ್ರೇಂಜರ್ ಇನ್ ದಿ ಮಿರರ್' ಆತ್ಮಚರಿತ್ರೆಯಲ್ಲಿ ಸಾಕಷ್ಟು ಇಂಟ್ರೆಸ್ಟಿಂಗ್ ವಿಚಾರಗಳು ಬಹಿರಂಗಗೊಂಡಿದೆ. ಓಂ ಪ್ರಕಾಶ್ ಮೆಹ್ರಾ ಅವರ ರೋಚಕ ಸಿನಿಪಯಣದ ಜೊತೆಗೆ ಆಮೀರ್ ಖಾನ್ ಜೊತೆ ಸೂಪರ್ ಹಿಟ್ ರಂಗ್ ದೇ ಬಸಂತಿ ಸಿನಿಮಾಗಾಗಿ ಪಟ್ಟ ಶ್ರಮದ ಬಗ್ಗೆಯೂ ವಿವರಿಸಿದ್ದಾರೆ.

'ರಂಗ್ ದೇ ಬಸಂತಿ' ಸಿನಿಮಾದ ಪ್ರಮುಖ ಪಾತ್ರಕ್ಕಾಗಿ ನಟ ಹೃತಿಕ್ ಕೋಷನ್ ಅವರನ್ನು ಕೇಳಿಕೊಳ್ಳಲಾಗಿತ್ತು. ಆದರೆ ಹೃತಿಕ್ ಆ ಪಾತ್ರವನ್ನು ಮಾಡಲು ಹಿಂದೇಟು ಹಾಕಿದ್ದರು. ಆಮೀರ್, ಹೃತಿಕ್ ಮನವೊಲಿಸಲು ಅವರ ಮನೆಗೆ ತೆರಳಿದ ಘಟನೆಯನ್ನು ಓಂ ಪ್ರಕಾಶ್ ಮೆಹ್ರಾ ಬಹಿರಂಗಪಡಿಸಿದ್ದಾರೆ.

 Rakeysh Omprakash Mehra has revealed Aamir Khan visited Hrithik Roshan to pursue him for Rang De Basanti

ಅಂದಹಾಗೆ ಹೃತಿಕ್ ರಿಜೆಕ್ಟ್ ಮಾಡಿದ ಪಾತ್ರವನ್ನು ತಮಿಳು ಸ್ಟಾರ್ ನಟ ಸಿದ್ದಾರ್ಥ್ ಕಾಣಿಸಿಕೊಂಡಿದ್ದರು. ಕರಣ್ ಸಿಂಘಾನಿಯ ಪಾತ್ರಕ್ಕಾಗಿ ಆಮೀರ್ ಖಾನ್, ಗ್ರೀಕ್ ಗಾಡ್ ಹೃತಿಕ್ ರೋಷನ್ ಅವರನ್ನು ಒಪ್ಪಿಸಲು ತುಂಬಾ ಪ್ರಯತ್ನ ಪಟ್ಟಿದ್ದರು ಎಂದು ಮೆಹ್ರಾ ಬಹಿರಂಗಪಡಿಸಿದ್ದಾರೆ. ಹೃತಿಕ್ ರೋಷನ್ ಗೂ ಮೊದಲು ಈ ಪಾತ್ರವನ್ನು ಮಾಡಲು ನಟ ಫರ್ಹಾನ್ ಅಕ್ತರ್ ಮತ್ತು ಅಭಿಷೇಕ್ ಬ್ಚನ್ ಸಹ ನಿರಾಕರಿಸಿದ್ದರು ಎಂದು ಹೇಳಿದ್ದಾರೆ.

ರಂಗ್ ದೇ ಬಸಂತಿ ಚಿತ್ರಕ್ಕಾಗಿ ಎದುರಿಸಿದ ಸವಾಲುಗಳನ್ನು ಮೆಹ್ರಾ ತನ್ನ ಆತ್ಮಚರಿತ್ರೆಯಲ್ಲಿ ವಿವರಿಸಿದ್ದಾರೆ. "ಕರಣ್ ಸಿಂಘಾನಿಯಾ ಪಾತ್ರವನ್ನು ಪ್ರತಿಯೊಬ್ಬ ಸ್ಟಾರ್ ಕಲಾವಿದರೂ ನಿರಾಕರಿಸಿದರು. ಫರ್ಹಾನ್ ಅಕ್ತಾರ್ ಅವರನ್ನು ಸಂಪರ್ಕ ಮಾಡಿದ್ದೆ. ಫರ್ಹಾನ್ ನಿರಾಕರಿಸಿದ ಬಳಿಕ ಅಭಿಷೇಕ್ ಬಚ್ಚನ್ ಅವರನ್ನು ಸಂಪರ್ಕ ಮಾಡಿದೆ. ಆದರೆ ಅಭಿಷೇಕ್ ಕೂಡ ನಿರಾಕರಿಸಿದರು" ಎಂದಿದ್ದಾರೆ.

ನಾನು ಹೃತಿಕ್ ರೋಷನ್ ಬಳಿ ಮಾತನಾಡುವಂತೆ ಆಮೀರ್ ಖಾನ್ ಗೆ ತಿಳಿಸಿದೆ. ಆಮೀರ್ ಖಾನ್, ಹೃತಿಕ್ ಮನೆಗೆ ಹೋದರು ಇದು ಉತ್ತಮ ಸಿನಿಮಾ ಇದನ್ನು ಮಾಡಿ ಎಂದ ಕೇಳಿಕೊಂಡರು. ಆದರೆ ಮಾಡಿಲ್ಲ. ಕೊನೆಯದಾಗಿ ತಮಿಳು ನಟ ಸಿದ್ಧಾರ್ಥ್ ಸಹಿ ಮಾಡಿದರು. ಚಿತ್ರೀಕರಣಕ್ಕೂ ಒಂದು ತಿಂಗಳ ಮೊದಲು ಸಿದ್ಧಾರ್ಥ್ ಆಯ್ಕೆಯಾದರು. ಇದಕ್ಕೂ ಮೊದಲು ಸಿದ್ಧಾರ್ಥ್ ಯಾವುದೇ ಹಿಂದಿ ಸಿನಿಮಾವನ್ನು ಮಾಡಿರಲಿಲ್ಲ" ಎಂದು ಹೇಳಿದ್ದಾರೆ.

 Rakeysh Omprakash Mehra has revealed Aamir Khan visited Hrithik Roshan to pursue him for Rang De Basanti

ಇನ್ನು ಆಮೀರ್ ಖಾನ್ ಬಗ್ಗೆಯೂ ಬರೆದಿರುವ ಮೆಹ್ರಾ ಸಿನಿಮಾ ವಿಚಾರದಲ್ಲಿ ಆಮೀರ್ ಖಾನ್ ಎಷ್ಟು ಕಟ್ಟುನಿಟ್ಟಾಗಿ ಇರುತ್ತಾರೆ ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ. ಒಂದು ವೇಳೆ ಸಿನಿಮಾ ಅಂದುಕೊಂಡ ದಿನಕ್ಕೆ ಮುಗಿಸದಿದ್ದರೆ ಆಮೀರ್ ಖಾನ್ ಗೆ ದಂಡ ಕಟ್ಟಬೇಕಾಗಿತ್ತು ಎನ್ನುವ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ರಂಗ್ ದೇ ಬಸಂತಿ ಸಿನಿಮಾ ಅಂದುಕೊಂಡ ದಿನಕ್ಕೆ ಮುಗಿಸದಿದ್ದರೆ 8 ಕೋಟಿ ರೂ. ದಂಡ ಕಟ್ಟಬೇಕು ಎಂದು ಆಮೀರ್ ಖಾನ್ ಎಚ್ಚರಿಕೆ ನೀಡಿದ್ದರು ಎಂದು ಓಂ ಪ್ರಕಾಶ್ ಮೆಹ್ರಾ ಹೇಳಿದ್ದಾರೆ.

More from Filmibeat

English summary
Director Rakeysh Omprakash Mehra has revealed Aamir Khan visited Hrithik Roshan to pursue him for Rang De Basanti.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X