ಐಶ್ವರ್ಯಾ ವಿಷಯದಲ್ಲಿ ನೆಟ್ಟಿಗನ ಬಾಯಿ ಮುಚ್ಚಿಸಿದ ಅಭಿಷೇಕ್ ಬಚ್ಚನ್; ಜ್ಯೂ. ಬಚ್ಚನ್ ಖಡಕ್ ಉತ್ತರಕ್ಕೆ ಫ್ಯಾನ್ಸ್ ಫಿದಾ
ಬಾಲಿವುಡ್ ಅಂದಮೇಲೆ ಅಲ್ಲಿ ಗಾಸಿಪ್‌ಗಳಿಗೆ ಪಾರವೇ ಇಲ್ಲ. ದಿನಕ್ಕೊಂದು ಸುದ್ದಿ, ಹೊತ್ತಿಗೊಂದು ವಿವಾದ ಇಲ್ಲಿ ಮಾಮೂಲಿ. ಅದರಲ್ಲೂ ಸ್ಟಾರ್ ಜೋಡಿಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನಡೆಯುವ ಚರ್ಚೆಗಳೇ ಬೇರೆ. ಅಂತಹ ಚರ್ಚೆಗಳ ನಡುವೆ ಸದಾ ಸುದ್ದಿಯಲ್ಲಿರುವ ಜೋಡಿ ಎಂದರೆ ಅದು ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್.
ಸಿನಿಮಾ ಜಗತ್ತಿನ ಈ ಸುಂದರ ದಂಪತಿಗಳ ಬಗ್ಗೆ ಜನರಿಗೆ ಯಾವಾಗಲೂ ಒಂದು ರೀತಿಯ ಕುತೂಹಲ. ಅವರ ನಡುವಿನ ಬಾಂಧವ್ಯ ಹೇಗಿದೆ? ಅವರ ವೈಯಕ್ತಿಕ ಜೀವನದಲ್ಲಿ ಏನು ನಡೆಯುತ್ತಿದೆ? ಹೀಗೆ ಸಾಲು ಸಾಲು ಪ್ರಶ್ನೆಗಳು ಅಭಿಮಾನಿಗಳ ತಲೆಯಲ್ಲಿ ಓಡುತ್ತಲೇ ಇರುತ್ತವೆ. ಆದರೆ ಇವೆಲ್ಲವನ್ನೂ ಈ ಜೋಡಿ ಬಹಳ ಗೌಪ್ಯವಾಗಿ ಇರಿಸುತ್ತದೆ.

ಸಿನಿಮಾ ಕಾರ್ಯಕ್ರಮ ಇರಲಿ ಅಥವಾ ಫ್ಯಾಮಿಲಿ ಫಂಕ್ಷನ್ ಇರಲಿ, ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡರೆ ಸಾಕು ಕ್ಯಾಮೆರಾಗಳು ಅತ್ತ ತಿರುಗುತ್ತವೆ. ಇಷ್ಟೊಂದು ಪ್ರೀತಿಯಿಂದ ಇರುವ ಈ ಜೋಡಿಯ ಬಗ್ಗೆ ಆಗಾಗ ಕಿಡಿಗೇಡಿಗಳು ಇಲ್ಲಸಲ್ಲದ ಕಮೆಂಟ್ ಮಾಡುವುದು ಉಂಟು. ಅಂತಹ ಸಂದರ್ಭದಲ್ಲಿ ಅಭಿಷೇಕ್ ಸುಮ್ಮನೆ ಕೂರುವವರಲ್ಲ.
ಟ್ರೋಲಿಗರಿಗೆ ಖಡಕ್ ಉತ್ತರ...
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಟ್ರೋಲ್ ಮಾಡುವವರನ್ನು ನಿರ್ಲಕ್ಷಿಸುತ್ತಾರೆ. ಆದರೆ ಕೆಲವೊಮ್ಮೆ ತಾಳ್ಮೆ ಮೀರಿದಾಗ ತಿರುಗೇಟು ನೀಡಲೇಬೇಕಾಗುತ್ತದೆ. ಈ ಹಿಂದೆ ಅಭಿಷೇಕ್ ಬಚ್ಚನ್ ಕೂಡ ಇದೇ ರೀತಿ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಐಶ್ವರ್ಯಾ ರೈ ಅವರ ವೃತ್ತಿಜೀವನ ಅಥವಾ ನಿರ್ಧಾರಗಳ ಬಗ್ಗೆ ಯಾರೋ ಒಬ್ಬರು ಅಸಹ್ಯವಾಗಿ ಮಾತನಾಡಿದ್ದರು.

ಯಾರೋ ಒಬ್ಬ ವ್ಯಕ್ತಿ ಐಶ್ವರ್ಯಾ ಅವರ ಸಿನಿಮಾ ಆಯ್ಕೆಗಳ ಬಗ್ಗೆ ಅಭಿಷೇಕ್ ಅವರನ್ನು ಪ್ರಶ್ನಿಸಿದ್ದರು. "ನಿಮ್ಮ ಹೆಂಡತಿ ಇಂತಹ ನಿರ್ಧಾರ ತಗೆದುಕೊಳ್ಳುವಾಗ ನೀವು ಸುಮ್ಮನೆ ಇರುತ್ತೀರಾ?" ಎನ್ನುವ ಅರ್ಥದಲ್ಲಿ ವ್ಯಂಗ್ಯವಾಡಿದ್ದರು. ಈ ಮಾತನ್ನು ಕೇಳಿಸಿಕೊಂಡು ಅಭಿಷೇಕ್ ಸುಮ್ಮನಾಗಲಿಲ್ಲ. ಬದಲಿಗೆ ಆತ ಎಲ್ಲಿಯೂ ತಲೆ ಎತ್ತದಂತೆ ಸಣ್ಣದಾಗಿ ಮದ್ದು ನೀಡಿದ್ದರು.
ಅವಳಿಗೆ ನನ್ನ ಅನುಮತಿ ಬೇಕಿಲ್ಲ
ನಟ ಅಭಿಷೇಕ್ ಬಚ್ಚನ್ ಆ ಟ್ರೋಲ ನೀಡಿದ ಉತ್ತರ ನೆಟ್ಟಿಗರ ಮನ ಗೆದ್ದಿತ್ತು. "ಐಶ್ವರ್ಯಾ ಏನು ಮಾಡಬೇಕು ಎನ್ನುವುದಕ್ಕೆ ನನ್ನ ಅನುಮತಿಯ ಅಗತ್ಯವಿಲ್ಲ. ಆಕೆ ಒಬ್ಬ ಸ್ವತಂತ್ರ ಮಹಿಳೆ ಮತ್ತು ತನ್ನ ನಿರ್ಧಾರಗಳನ್ನು ತೆಗೆದುಕೊಳ್ಳುವ ಪೂರ್ಣ ಸಾಮರ್ಥ್ಯ ಆಕೆಗೆ ಇದೆ" ಎಂದು ಅಭಿಷೇಕ್ ಬಚ್ಚನ್ ನೇರವಾಗಿ ಹೇಳಿದ್ದರು.
ಈ ಒಂದು ಸಾಲಿನ ಉತ್ತರ ಇಡೀ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು. ಈ ಮಾತನ್ನು ಕೇಳಿದ ಮೇಲೆ ನೆಟ್ಟಿಗರು ಅಭಿಷೇಕ್ ಅವರನ್ನು 'ಹಸ್ಬೆಂಡ್ ಗೋಲ್ಸ್' ಎಂದು ಕೊಂಡಾಡಿದರು. ಹೆಂಡತಿಯ ಸ್ವಾತಂತ್ರ್ಯವನ್ನು ಗೌರವಿಸುವ ಗಂಡ ಎಂದರೆ ಹೀಗಿರಬೇಕು ಎಂದು ಅನೇಕರು ಶ್ಲಾಘಿಸಿದರು.
ನೆಟ್ಟಿಗರ ಮೆಚ್ಚುಗೆಯ ಸುರಿಮಳೆ
ಅಭಿಷೇಕ್ ನೀಡಿದ ಆ ಉತ್ತರ ಕೇವಲ ಟ್ರೋಲಿಗನ ಬಾಯಿ ಮುಚ್ಚಿಸಲಿಲ್ಲ, ಬದಲಿಗೆ ಅವರ ವ್ಯಕ್ತಿತ್ವ ಎಂತದ್ದು ಎಂಬುದನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟಿತು. ಒಬ್ಬ ನಟಿಯಾಗಿ, ಒಬ್ಬ ವ್ಯಕ್ತಿಯಾಗಿ ಐಶ್ವರ್ಯಾ ಅವರಿಗೆ ಅವರು ನೀಡುವ ಬೆಂಬಲ ನಿಜಕ್ಕೂ ಅದ್ಭುತ. ಇದನ್ನು ನೋಡಿದ ಮೇಲೆ ಅಭಿಮಾನಿಗಳು ಜೂನಿಯರ್ ಬಚ್ಚನ್ ಅವರ ಅಭಿಮಾನಿಗಳಾಗಿ ಬಿಟ್ಟರು.
ಇಂದಿನ ಕಾಲದಲ್ಲೂ ಪತ್ನಿಯ ಪ್ರತಿಭೆ ಮತ್ತು ಸ್ವಾತಂತ್ರ್ಯವನ್ನು ಗೌರವಿಸುವ ಪುರುಷರು ವಿರಳ. ಅಂತಹದ್ರಲ್ಲಿ ಸ್ಟಾರ್ ನಟನಾಗಿ ಇಷ್ಟು ಸರಳವಾಗಿ ಮತ್ತು ಸ್ಪಷ್ಟವಾಗಿ ಮಾತನಾಡಿದ್ದು ಎಲ್ಲರ ಗಮನ ಸೆಳೆಯಿತು. ಈ ಒಂದು ಘಟನೆಯಿಂದ ಅಭಿಷೇಕ್ ಬಚ್ಚನ್ ಅವರ ಇಮೇಜ್ ಮತ್ತಷ್ಟು ಹೆಚ್ಚಾಯಿತು ಎನ್ನಬಹುದು.
'ಕಿಂಗ್' ಚಿತ್ರದಲ್ಲಿ ನಟನೆ
ವೈಯಕ್ತಿಕ ಜೀವನದಲ್ಲಿ ಪತ್ನಿಯ ಬೆನ್ನಿಗೆ ನಿಲ್ಲುವ ಅಭಿಷೇಕ್, ಈಗ ವೃತ್ತಿಜೀವನದಲ್ಲೂ ದೊಡ್ಡ ಮಟ್ಟದ ಸದ್ದು ಮಾಡಲು ಸಜ್ಜಾಗಿದ್ದಾರೆ. ಬಾಲಿವುಡ್ ಬಾದ್ಷಾ ಶಾರುಖ್ ಖಾನ್ ನಟನೆಯ ಬಹುನಿರೀಕ್ಷಿತ 'ಕಿಂಗ್' ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಎಂದರೆ ಈ ಚಿತ್ರದಲ್ಲಿ ಅಭಿಷೇಕ್ ಖಳನಾಯಕನ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಅಭಿಷೇಕ್ ಅವರ ಈ ಹೊಸ ಅವತಾರ ನೋಡಲು ಸಿನಿಪ್ರೇಮಿಗಳು ತುದಿಗಾಲಲ್ಲಿ ನಿಂತಿದ್ದಾರೆ.


Click it and Unblock the Notifications











