ಬಾಲಿವುಡ್‌ಗೆ ಮತ್ತೊಂದು ಫ್ಲಾಪ್: ಸದ್ದು ಮಾಡಲಿಲ್ಲ ರಣ್ವೀರ್ ಸಿಂಗ್ ಹೊಸ ಸಿನಿಮಾ!
ಬಾಹುಬಲಿ, RRR, ಕೆಜಿಎಫ್ ಅಂತಹ ಸಿನಿಮಾಗಳು ಬಂದ್ಮೇಲೆ ಪ್ಯಾನ್ ಇಂಡಿಯಾ ಸಿನಿಮಾಗಳ ಸಾಲಿನಲ್ಲಿ ಹೆಚ್ಚು ಸಿನಿಮಾಗಳು ಬರುತ್ತಿವೆ. ಇನ್ನು ಮೊದಲೆಲ್ಲಾ ಬಾಲಿವುಡ್ ಮಾಡುವ ಸಿನಿಮಾಗಳೇ ಹೆಚ್ಚು ಶ್ರೇಷ್ಠ, ಬಾಲಿವುಡ್ ಸಿನಿಮಾಗಳೇ ಮಾದರಿ ಎನ್ನುವಂತೆ ಇತ್ತು. ಆದರೆ ಈಗ ಪ್ರೇಕ್ಷಕರ ಮನಸ್ಥಿತಿಯು ಬದಲಾಗಿದೆ.
ಯಾವುದೇ ಸಿನಿಮಾ ಆಗಲಿ, ಯಾವ ಬಾಲಿವುಡ್ ಬಿಗ್ ಸ್ಟಾರ್ ಸಿನಿಮಾ ಆಗಲಿ, ಸಿನಿಮಾ ಚೆನ್ನಾಗಿ ಇಲ್ಲ ಅಂದರೆ ಅದನ್ನು ಅಭಿಮಾನಕ್ಕೆ ಒಳಾಗಾಗಿ ಒಪ್ಪಿಕೊಳ್ಳುವುದಿಲ್ಲ. ಹಾಗಾಗಿ ಈ ಕಾಲಘಟ್ಟದಲ್ಲಿ ಸಿನಿಮಾ ಮಾಡುವವರು ಎಚ್ಚರಿಕೆಯಿಂದ ಸಿನಿಮಾ ಮಾಡುವ ಅವಶ್ಯಕತೆ ಇದೆ.
'ಕೆಜಿಎಫ್ 2' ಸಿನಿಮಾ ಬಂದ ಮೇಲೆ ರಿಲೀಸ್ ಆಗುತ್ತಿರುವ ಬಾಲಿವುಡ್ ಸಿನಿಮಾಗಳು ಅಷ್ಟಾಗಿ ಸದ್ದು ಮಾಡುತ್ತಿಲ್ಲ. 'ಕೆಜಿಎಫ್' ಕ್ರೇಜ್ ಮುಂದೆ ಈ ಚಿತ್ರಗಳ ಏನು ಇಲ್ಲ ಎನ್ನುವಂತಾಗಿದೆ. ಈಗ ರಣ್ವೀರ್ ಸಿಂಗ್ ಅಭಿನಯದ 'ಜಯೇಶ್ ಭಾಯ್ ಜೋರ್ದಾರ್' ಸಿನಿಮಾ ಸರದಿ.

ರಣ್ವೀರ್ ಸಿಂಗ್ ನಾಯಕನಾದ ಸಿನಿಮಾ ಅಂದ್ರೆ ನಿರೀಕ್ಷೆ ಇದ್ದೇ ಇರುತ್ತೆ. ಹಾಗಾಗಿ ಈ ವಾರ ತೆರೆಗೆ ಬಂದ 'ಜಯೇಶ್ ಭಾಯ್ ಜೋರ್ದಾರ್' ಸಿನಿಮಾವನ್ನು ನೋಡಲು ಕಾದಿದ್ದ ಪ್ರೇಕ್ಷಕರಿಗೆ ನಿರಾಸೆ ಉಂಟಾಗಿದೆ. ರಿಲೀಸ್ ಆದ ಮೊದಲ ದಿನವೇ 'ಜಯೇಶ್ ಭಾಯ್ ಜೋರ್ದಾರ್' ಸಿನಿಮಾ ನೆಲಕಚ್ಚಿದೆ.
ಬಾಲಿವುಡ್ ಸಿನಿಮಾಗಳು ಚೆನ್ನಾಗಿ ಇಲ್ಲ ಅಂದರು ಓಪನಿಂಗ್ ದಿನ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತವೆ. ಆದರೆ ರಣ್ವೀರ್ ಸಿಂಗ್ 'ಜಯೇಶ್ ಭಾಯ್ ಜೋರ್ದಾರ್' ಮೊದಲ ದಿನ ಸಾಧಾರಾಣ ಓಪನಿಂಗ್ ಪಡೆದುಕೊಳ್ಳುವಲ್ಲಿಯೂ ಸೋತಿದೆ.
ಇನ್ನು ವಿಮರ್ಶಕರೂ ಕೂಡ ಸಿನಿಮಾ ಚೆನ್ನಾಗಿಲ್ಲ ಎಂದು ಹೇಳುತ್ತಿದ್ದಾರೆ. ವಿಮರ್ಶಕರಿಂದ 'ಜಯೇಶ್ ಭಾಯ್ ಜೋರ್ದಾರ್' ಸಿನಿಮಾ ನೆಗೆಟಿವ್ ಕಮೆಂಟ್ಸ್ ಪಡೆದುಕೊಂಡಿದೆ. ಅಲ್ಲದೆ 2 ಸ್ಟಾರ್ ಗಿಟ್ಟಿಸಿ ಕೊಳ್ಳುವಲ್ಲೂ ಸೋತಿದೆ. ಹೆಚ್ಚೆಂದರೆ ಈ ಚಿತ್ರಕ್ಕೆ ಒಂದೂವರೆ ಸ್ಟಾರ್ ಸಿಕ್ಕಿದ್ದು, ಯಶ್ ರಾಜ್ ಬ್ಯಾನರ್‌ನಲ್ಲಿಅತೀ ಕೆಟ್ಟ ಸಿನಿಮಾ ಎನಿಸಿಕೊಂಡಿದೆ.
'ಜಯೇಶ್ ಭಾಯ್ ಜೋರ್ದಾರ್'ದಲ್ಲಿ ಕಲಾವಿದರ ನಟನೆ ಉತ್ತಮ. ಆದರೆ ಕಥೆ ಈ ಕಾಲಘಟ್ಟಕ್ಕೆ ತಕ್ಕನಾಗಿಲ್ಲ. ಹಾಗೇ ಸಿನಿಮಾ ತುಂಬಾನೇ ಬೋರ್ ಹೊಡೆಸುತ್ತೆ ಎಂದು ಹಲವರು ವಿಮರ್ಶೆ ಮಾಡಿದ್ದಾರೆ. ಹಾಗಾಗಿ ಬಾಲಿವುಡ್‌ನ ಫ್ಲಾಪ್ ಲಿಸ್ಟ್ ಸೇರುವ ಎಲ್ಲಾ ಸಾಧ್ಯತೆಗಳು ಇವೆ.


Click it and Unblock the Notifications











