ಮದುವೆ ಮುಂಚೆ ಈ ಆಕ್ಟರ್ ಜೊತೆ 'ನಾನು ಒನ್-ನೈಟ್ ಸ್ಟ್ಯಾಂಡ್ ಮಾಡಿದ್ದೆ'- ಸಂಜಯ್ ಕಪೂರ್ ಪತ್ನಿಯ ಮಾತಿಗೆ ಎಲ್ಲ ತಬ್ಬಿಬ್ಬು..!
ಪ್ರೀತಿ ಅಂದರೆ ಅದು ಪ್ರೀತಿಯಷ್ಟೇ ಅಲ್ಲ .. ಪ್ರೀತಿ ಅಂದರೆ ಬದುಕು, ಭವಿಷ್ಯ, ಭಾಷೆ, ಕನಸು, ನಗು, ಇನ್ನೂ ಏನೆಲ್ಲಾ ! ಇಂಥಾ ಪ್ರೀತಿಯನ್ನು ಬದುಕಿರುವ ತನಕ ಜಿನುಗುವ, ಪ್ರೇಮಸೆಲೆಯಾಗಿ ಬೆಳೆಸುವ -ಉಳಿಸುವ ವೃತವೇ ದಾಂಪತ್ಯ.
ಆದರೆ ಈಗೀಗ ಪ್ರೀತಿ ಮತ್ತು ದಾಂಪತ್ಯದ ಅರ್ಥ ಎರಡು ಬದಲಾಗಿದೆ. ಅದರಲ್ಲಿಯೂ ರಂಗೀನ್ ಲೋಕದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲ. ಇಲ್ಲಿ ಅನೇಕರು ದಿನಬೆಳಗಾದರೆ ತಮ್ಮ ಸಂಬಂಧಕ್ಕೆ ಗುಡ್ ಬೈ ಹೇಳುತ್ತಾರೆ. ಇನ್ನೂ ಕೆಲವರು ಮದುವೆಯ ಮುಂಚೆಯೇ ಮಾಡಬಾರದ್ದನ್ನೆಲ್ಲ ಮಾಡುತ್ತಾರೆ. ಸಮಯ ಸಂದರ್ಭ ಬಂದಾಗ ಯಾವುದನ್ನು ಮುಚ್ಚುಮರೆಯಿಲ್ಲದೆ ಎಲ್ಲವನ್ನೂ ಬಿಚ್ಚಿಡುತ್ತಾರೆ. ಇದಕ್ಕೆ ಮಹೀಪ್ ಕಪೂರ್ ಸದ್ಯದ ಉದಾಹರಣೆ.

ಹೌದು, ಮಹೀಪ್ ಕಪೂರ್.. ಬಾಲಿವುಡ್‌ನ ಸ್ಟಾರ್ ಅನಿಲ್ ಕಪೂರ್ ಅವರ ಸಹೋದರ ಸಂಜಯ್ ಕಪೂರ್ ಅವರ ಮಡದಿ. ಸರಿ ಸುಮಾರು 28 ವರ್ಷದ ಹಿಂದೆ ಸಂಜಯ್ ಕಪೂರ್ ಜೊತೆ ಸಪ್ತಪದಿಯನ್ನು ತುಳಿದ ಮಹೀಪ್, ಮದುವೆಯಾಗುವ ಮುನ್ನ ನಾನು ವ್ಯಕ್ತಿಯೊಬ್ಬನ ಜೊತೆ ಹಾಸಿಗೆ ಹಂಚಿಕೊಂಡಿದ್ದೇ ಎಂದು ಹೇಳಿದ್ದಾರೆ. ಮುಂದುವರೆದು ಆ ವ್ಯಕ್ತಿ ಬೇರೆ ಯಾರು ಅಲ್ಲ ಬದಲಿಗೆ ನನ್ನ ಗಂಡ ಸಂಜಯ್ ಕಪೂರ್ ಎಂದಿರುವ ಮಹೀಪ್, ಆ ಕ್ಷಣ ನನಗೆ ಸಂಜಯ್ ಕಪೂರ್ ಅವರನ್ನು ಮದುವೆಯಾಗುವ ಯಾವ ಆಲೋಚನೆ ಇರಲಿಲ್ಲ. ಆದರೂ ನಾನು ಸಂಜಯ್ ಪಕ್ಕ ಹೋಗಿ ಮಲಗಿದ್ದೆ ಎಂದು ಹೇಳಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಮಹೀಪ್ ಅದೊಂದು ದಿನ ಸಂಜಯ್ ಕಪೂರ್ ಮನೆಯಲ್ಲಿ ಪಾರ್ಟಿ ಇತ್ತು. ಆದರೆ ನನಗೆ ಆಹ್ವಾನ ಇರಲಿಲ್ಲ. ಆದರೂ ಕೂಡ ನಾನು ಆ ಜಗಮಗಿಸುವ ಪಾರ್ಟಿಗೆ ತೆರಳಿದ್ದೆ ಕಂಠಪೂರ್ತಿ ಕುಡಿದಿದ್ದೇ ಎಂದಿರುವ ಮಹೀಪ್ ಕುಡಿದ ಮತ್ತಿನಲ್ಲಿಯೇ ನಾನು ಸಂಜಯ್ ಕಪೂರ್ ಅವರ ಸಂಪೂರ್ಣ ಕುಟುಂಬವನ್ನು ಭೇಟಿಯಾದೆ, ಅನಿಲ್ ಕಪೂರ್, ಸುನಿತಾ, ಶ್ರೀದೇವಿ ಹೀಗೆ ಎಲ್ಲರನ್ನು ಮಾತನಾಡಿಸಿದೆ ಎಂದಿದ್ದಾರೆ. ಆ ನಂತರ ನಡೆಯಬಾರದ್ದು ನಡೆಯಿತು ನಾನು ಒನ್ ನೈಟ್ ಸ್ಟ್ಯಾಂಡ್ ಮಾಡಿದ್ದೇ ಎಂದಿದ್ದಾರೆ.

ಇನ್ನೂ ತಮ್ಮ ಈ ಒನ್ ನೈಟ್ ಸ್ಟ್ಯಾಂಡ್ ವಿಚಾರ ಗೊತ್ತಾದರೂ ಕೂಡ ಸಂಜಯ್ ಕಪೂರ್ ಅವರ ಫ್ಯಾಮಿಲಿ ನನ್ನನ್ನೂ ಪ್ರೀತಿಯಿಂದ ಸ್ವಾಗತಿಸಿತು, ಸೊಸೆಯೆಂದು ಒಪ್ಪಿಕೊಂಡಿತು ಎಂದಿರುವ ಮಹೀಪ್ ಆಗೆಲ್ಲ ಈಗ ಇರುವಂತೆ ಇನ್ಸ್ಟಾಗ್ರಾಮ್ ಇರಲಿಲ್ಲ ಆದರೂ ಕೂಡ ನಾವು ಪ್ರೀತಿಯನ್ನು ಮಾಡಿದ್ವಿ ಎಂದಿದ್ದಾರೆ. ಅದೊಂದು ದಿನ ಇಬ್ಬರು ನೈಟ್ ಕ್ಲಬ್‌ನಲ್ಲಿ ಪಾರ್ಟಿ ಮಾಡುತ್ತಿದ್ದೇವು ಆ ಸಮಯದಲ್ಲಿ ಸಂಜಯ್ ಕಪೂರ್ ನಾವು ಮದುವೆಯಾಗುತ್ತಿದ್ದೇವೆ ಎಂದು ಹೇಳಿದ, ನಾನು ಕೂಡ ಕೈಯಲ್ಲಿದ್ದ ಟಕೀಲಾ ಗ್ಲಾಸ್ ಖಾಲಿ ಮಾಡಿ ಆಯ್ತು ಎಂದೆ ಎಂದು ಹೇಳಿದ್ದಾರೆ. ಮದುವೆಯಾಗುವ ಮುನ್ನ ಐದು ವರ್ಷ ನಾವು ಇಬ್ಬರು ಪ್ರೀತಿಯ ಅಮಲಿನಲ್ಲಿ ಇದ್ದೇವು ಎಂದು ಕೂಡ ಹೇಳಿದ್ದಾರೆ.
ಅಂದ್ಹಾಗೇ ಇದೇ ಮಹೀಪ್ ಕಪೂರ್ ಕೆಲ ದಿನಗಳ ಹಿಂದೆ ಸಂಜಯ್ ಕಪೂರ್ ಅವರ ಅನೈತಿಕ ಸಂಬಂಧದ ಕುರಿತು ಮುಕ್ತವಾಗಿ ಮಾತನಾಡಿದ್ದರು. ನನ್ನ ಗಂಡ ಅನೇಕ ಯುವತಿಯರ ಜೊತೆ ಅನೈತಿಕ ಸಂಬಂಧ ಹೊಂದಿದ್ದರು, ಆದರೂ ನಾನು ಎಲ್ಲವೂ ಗೊತ್ತಿದ್ದು ಸುಮ್ಮನಾದೆ ಅಂದಿದ್ದರು. ಬದುಕಿನ ಅನಿವಾರ್ಯತೆ ಎಲ್ಲವನ್ನೂ ಕಲಿಸುತ್ತೆ ಎಂದಿದ್ದ ಮಹೀಪ್, ಸಂಜಯ್ ಕಪೂರ್ ಅವರ ಈ ಕಾಮದಾಹದ ಕಥೆ ಗೊತ್ತಾದಾಗ ಎಲ್ಲರಂತೆ ನಾನು ವಿಚ್ಛೇದನ ಪಡೆಯಲು ನಿರ್ಧಾರ ಮಾಡಿದ್ದೆ, ಮಗಳು ಶನಾಯಾ ಜೊತೆ ಮನೆಯಾಚೆ ಹೋಗಬೇಕೆಂದುಕೊಂಡಿದ್ದೇ ಆದರೆ ಆಗಷ್ಟೇ ಮಗ ಜಹಾನ್ ಕಪೂರ್ ಜನಿಸಿದ್ದ. ಈ ಕಾರಣಕ್ಕೆ ಹೆಣ್ಣಾಗಿ.. ತಾಯಿಯಾಗಿ.. ನನ್ನ ಕಷ್ಟ ಮತ್ತು ದು:ಖಗಳನ್ನ ಮರೆಯಬೇಕಾಯಿತು ಎಂದಿದ್ದರು. ಮಕ್ಕಳಿಂದ ತಂದೆಯ ಪ್ರೀತಿಯನ್ನ ಕಸಿದುಕೊಳ್ಳುವ ಬದಲು ನೋವನ್ನ ನುಂಗಿ ಅವರ ಜೊತೆಯಲ್ಲಿ ಇರುವ ನಿರ್ಧಾರವನ್ನ ಮಾಡಿದೆ ಎಂದು ಹೇಳಿದ್ದರು.
ಸದ್ಯಕ್ಕೆ ಮಹೀಪ್ ಕಪೂರ್ ಹೇಳಿದ ಈ ಒನ್ ನೈಟ್ ಸ್ಟ್ಯಾಂಡ್ ಕಥೆಯ ಕುರಿತು ಬಾಲಿವುಡ್‌ನಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಅನೇಕ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲವರು ಸಂಜಯ್ ಕಪೂರ್ ವ್ಯಕ್ತಿತ್ವದ ಬಗ್ಗೆ ಚರ್ಚೆ ಮಾಡುತ್ತಿದ್ದರೆ ಇನ್ನೂ ಕೆಲವರು ಮಹೀಪ್ ಕಪೂರ್ ಅವರ ಬಗ್ಗೆ ಮಾತನಾಡುತ್ತಿದ್ದಾರೆ.


Click it and Unblock the Notifications











