2023ರಲ್ಲಿ ತೆರೆಕಂಡ ಹಿಂದಿ ಚಿತ್ರಗಳಲ್ಲಿ ಬ್ಲಾಕ್‌ಬಸ್ಟರ್ ಎನಿಸಿಕೊಂಡಿರುವುದು ಈ 2 ಚಿತ್ರಗಳು ಮಾತ್ರ!

ಕಳೆದ ವರ್ಷ ಸೌತ್ ಇಂಡಸ್ಟ್ರಿಗಳ ಮುಂದೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವಲ್ಲಿ ವಿಫಲವಾಗಿದ್ದ ಬಾಲಿವುಡ್ ಈ ವರ್ಷದ ಮೊದಲ ತಿಂಗಳಿನಲ್ಲಿಯೇ ಸಾವಿರ ಕೋಟಿ ಕ್ಲಬ್‌ನ ಚಿತ್ರವನ್ನು ನೀಡುವುದರ ಮೂಲಕ ಬೃಹತ್ ಕಮ್‌ಬ್ಯಾಕ್ ಮಾಡಿದೆ.

ಹೌದು, ಈ ವರ್ಷ ಜನವರಿ ತಿಂಗಳಿನಲ್ಲಿ ಬಿಡುಗಡೆಗೊಂಡ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ಪಠಾಣ್ ಚಿತ್ರ ಸಾವಿರ ಕೋಟಿ ಕ್ಲಬ್ ಸೇರಿದ ಸಿನಿಮಾ ಎನಿಸಿಕೊಂಡಿತು. ಸದ್ಯ ಈ ವರ್ಷದ ಮೊದಲ ಐದು ತಿಂಗಳು ಮುಕ್ತಾಯಗೊಂಡಿದ್ದು, ಆರನೇ ತಿಂಗಳು ಆರಂಭವಾಗಿದೆ.

Only 2 bollywood films have become all time blockbuster in 2023 till May

ಆದರೂ ಸಹ ಆದಿಪುರುಷ್ ಚಿತ್ರದ ಕಲೆಕ್ಷನ್ ದಾಖಲೆಯನ್ನು ಯಾವ ಚಿತ್ರವೂ ಸಹ ಮುರಿಯಲಾಗಿಲ್ಲ. ಹೌದು, ಈ ವರ್ಷ ಬಿಡುಗಡೆಗೊಂಡ ಯಾವ ಚಿತ್ರಗಳೂ ಪಠಾಣ್ ಚಿತ್ರ ಮಾಡಿದ ಗಳಿಕೆಗಿಂತ ಹೆಚ್ಚಿಗೆ ಗಳಿಸಲಾಗಿಲ್ಲ. ಇನ್ನು ಈ ತಿಂಗಳ 16ರಂದು ಬಹು ನಿರೀಕ್ಷೆಯ ಆದಿಪುರುಷ್ ಚಿತ್ರ ಬಿಡುಗಡೆಗೊಳ್ಳುತ್ತಿದ್ದು, ಈ ಬೃಹತ್ ಚಿತ್ರ ಪಠಾಣ್ ಕಲೆಕ್ಷನ್ ದಾಖಲೆಯನ್ನು ಮುರಿಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ ಹಾಗೂ ಅಂತಹ ಸಾಮರ್ಥ್ಯ ಸಹ ಈ ಚಿತ್ರ ಹುಟ್ಟುಹಾಕಿರುವ ಹೈಪ್‌ಗೆ ಇದೆ ಎಂದರೆ ತಪ್ಪಾಗಲಾರದು.

ಇನ್ನು ಈ ವರ್ಷ ಇಲ್ಲಿಯವರೆಗೂ ತೆರೆಗೆ ಬಂದಿರುವ ನಿರೀಕ್ಷೆ ಹುಟ್ಟುಹಾಕಿದ್ದ ಹಿಂದಿ ಚಿತ್ರಗಳ ಪೈಕಿ ಗೆಲುವಿಗಿಂತ ಸೋಲನ್ನೇ ಹೆಚ್ಚು ಚಿತ್ರಗಳು ಕಂಡಿವೆ. ಹೀಗೆ ಈ ವರ್ಷ ಬಾಲಿವುಡ್‌ನಲ್ಲಿ ಯಾವ ದೊಡ್ಡ ಚಿತ್ರಗಳು ಬಿಡುಗಡೆಯಾದವು ಹಾಗೂ ಈ ಪೈಕಿ ಯಾವ ಚಿತ್ರಗಳು ಎಂತಹ ಫಲಿತಾಂಶ ಪಡೆದುಕೊಂಡವು ಎಂಬ ಮಾಹಿತಿ ಈ ಕೆಳಕಂಡಂತಿದೆ..

* ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ಬಹು ನಿರೀಕ್ಷಿತ ಚಿತ್ರ ಪಠಾಣ್ ದಾಖಲೆಯ ಕಲೆಕ್ಷನ್ ಮಾಡಿ ಆಲ್ ಟೈಮ್ ಬ್ಲಾಕ್‌ಬಸ್ಟರ್ ಎನಿಸಿಕೊಂಡಿದೆ.

* ಅರ್ಜುನ್ ಕಪೂರ್, ರಾಧಿಕಾ ಮದನ್ ಹಾಗೂ ತಬು ನಟನೆಯ ಕುತ್ತೇ ಚಿತ್ರ ಡಿಸಾಸ್ಟರ್ ಎನಿಸಿಕೊಂಡಿತು. 3.5 ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿನ 4.65 ಕೋಟಿ ರೂಪಾಯಿಗಳನ್ನು ಗಳಿಸಿತ್ತು.

* ರಾಜ್‌ಕುಮಾರ್ ಸಂತೋಷಿ ನಿರ್ದೇಶನದ ಚಿತ್ರ ಗಾಂಧಿ ಗೂಡ್ಸೆ ಏಕ್ ಯುದ್ಧ್ ಮಕಾಡೆ ಮಲಗಿತ್ತು. ಚಿತ್ರ ನಷ್ಟವನ್ನು ಉಂಟು ಮಾಡಿತ್ತು.

* ಮಲಯಾಳಂನ ಸೂಪರ್ ಹಿಟ್ ಚಿತ್ರ ಡ್ರೈವಿಂಗ್ ಲೈಸೆನ್ಸ್‌ನ ಹಿಂದಿ ರಿಮೇಕ್ ಸೆಲ್ಫಿ ಮಲಯಾಳಂ ಚಿತ್ರದ ಹಾಗೆ ಸದ್ದು ಮಾಡುವಲ್ಲಿ ಯಶಸ್ವಿಯಾಗಲಿಲ್ಲ. ಅಕ್ಷಯ್ ಕುಮಾರ್ ಹಾಗೂ ಇಮ್ರಾನ್ ಹಶ್ಮಿ ಕಾಂಬಿನೇಶನ್‌ನ ಈ ಚಿತ್ರ 110 ಕೋಟಿ ವೆಚ್ಚದಲ್ಲಿ ತಯಾರಾಗಿ ಕೇವಲ 23 ಕೋಟಿ ಗಳಿಸಿತ್ತು.

* ತೆಲುಗಿನಲ್ಲಿ ಬಿಡುಗಡೆಯಾಗಿ ಸೂಪರ್ ಬ್ಲಾಕ್‌ಬಸ್ಟರ್ ಎನಿಸಿಕೊಂಡಿದ್ದ ಅಲಾ ವೈಕುಂಪುರಂಲೋ ಚಿತ್ರದ ರಿಮೇಕ್ ಶೆಹ್ಜಾದಾ ಸಹ ಈ ವರ್ಷದ ಬಾಲಿವುಡ್ ಫ್ಲಾಪ್‌ಗಳಲ್ಲಿ ಒಂದು. 65 ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಈ ಚಿತ್ರ 47 ಕೋಟಿ ರೂಪಾಯಿಯನ್ನು ಮಾತ್ರ ಗಳಿಸಿತ್ತು.

* ರಣ್‌ಬೀರ್ ಕಪೂರ್ ಹಾಗೂ ಶ್ರದ್ಧಾ ಕಪೂರ್ ನಾಯಕ, ನಾಯಕಿಯಾಗಿ ನಟಿಸಿದ್ದ ತೂ ಜೂತಿ ಮೈನ್ ಮಕ್ಕರ್ ಚಿತ್ರ ಸಾಧಾರಣ ಹಿಟ್ ಎನಿಸಿಕೊಂಡಿತು. 200 ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಈ ಚಿತ್ರ 220 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.

* ರಾಣಿ ಮುಖರ್ಜಿ ನಟನೆಯ ಮಿಸಸ್ ಚಟರ್ಜಿ vs ನಾರ್ವೆ ಚಿತ್ರ ಸಹ ಸಾಧಾರಣ ಹಿಟ್ ಎನಿಸಿಕೊಂಡಿತು. 30 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಚಿತ್ರ 36 ಕೋಟಿ ಗಳಿಸಿತ್ತು.

* ರಾಜ್‌ಕುಮಾರ್ ರಾವ್ ಹಾಗೂ ಭೂಮಿ ಪಡ್ನೇಕರ್ ನಟನೆಯ ಭೀದ್ ಚಿತ್ರ ಈ ವರ್ಷ ಬಾಲಿವುಡ್ ಕಂಡ ಅತಿಕೆಟ್ಟ ಫ್ಲಾಪ್‌ಗಳಲ್ಲಿ ಒಂದು. 50 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರ ಕೇವಲ 3 ಕೋಟಿ ಗಳಿಸಿತ್ತು.

* ತಮಿಳಿನ ಸೂಪರ್ ಹಿಟ್ ಚಿತ್ರ ಖೈದಿಯ ರಿಮೇಕ್ ಭೋಲಾ ಚಿತ್ರ ಸಹ ಈ ಫ್ಲಾಪ್ ಪಟ್ಟಿ ಸೇರಿಕೊಂಡಿದೆ. ಅಜಯ್ ದೇವಗನ್ ನಟಿಸಿದ್ದ ಈ ಚಿತ್ರ ಬ್ರೇಕ್ ಈವನ್ ಕಲೆಕ್ಷನ್ ಮಾಡುವಲ್ಲಿ ಸೋತಿತ್ತು.

* ಆದಿತ್ಯ ರಾಯ್ ಕಪೂರ್ ಹಾಗೂ ಮೃನಾಲ್ ಠಾಕೂರ್ ನಟನೆಯ ಗುಮ್ರಾ ಸಹ ಈ ವರ್ಷ ಕೆಟ್ಟ ಸೋಲು ಕಂಡ ಚಿತ್ರಗಳಲ್ಲಿ ಒಂದು. 25 ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಈ ಚಿತ್ರ 10 ಕೋಟಿ ಗಳಿಸಿತ್ತು.

* ತೆಲುಗಿನ ಛತ್ರಪತಿ ಚಿತ್ರವನ್ನು ಇದೇ ಹೆಸರಿನಲ್ಲಿ ಹಿಂದಿಗೆ ರಿಮೇಕ್ ಮಾಡಲಾಗಿತ್ತು. ನಾಯಕನ ಪಾತ್ರವನ್ನು ತೆಲುಗಿನ ನಟ ಬೆಲ್ಲಂಕೊಂಡ ಶ್ರೀನಿವಾಸ್ ನಿರ್ವಹಿಸಿದ್ದರು. ಈ ಚಿತ್ರ 50 ಕೋಟಿ ವೆಚ್ಚದಲ್ಲಿ ತಯಾರಾಗಿ ಕೇವಲ 2.5 ಕೋಟಿ ರೂಪಾಯಿಗಳನ್ನು ಗಳಿಸಿತ್ತು.

* ತಮಿಳಿನ ವೀರಂ ಚಿತ್ರವನ್ನು ಹಿಂದಿಗೆ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಎಂಬ ಶೀರ್ಷಿಕೆ ಅಡಿಯಲ್ಲಿ ರಿಮೇಕ್ ಮಾಡಲಾಯಿತು. ಸಲ್ಮಾನ್ ಖಾನ್ ಸ್ಟಾರ್‌ಡಂ ಸಹ ಈ ಚಿತ್ರವನ್ನು ಗೆಲ್ಲಿಸಲಿಲ್ಲ. ಈ ಚಿತ್ರ ಸಹ ಈ ವರ್ಷದ ಬಾಲಿವುಡ್ ಫ್ಲಾಪ್ ಎನಿಸಿಕೊಂಡಿದೆ.

* ಈ ವರ್ಷ ಪಠಾಣ್ ಚಿತ್ರವನ್ನು ಹೊರತುಪಡಿಸಿ ದೊಡ್ಡ ಮಟ್ಟದಲ್ಲಿ ಅಬ್ಬರಿಸಿ ಸ್ಪಷ್ಟ ಗೆಲುವು ಸಾಧಿಸಿದ ಚಿತ್ರ ಎನಿಸಿಕೊಂಡ ಹಿಂದಿ ಚಿತ್ರವೆಂದರೆ ಅದು 'ದ ಕೇರಳ ಸ್ಟೋರಿ'. ಈ ಚಿತ್ರ 20 ಕೋಟಿ ವೆಚ್ಚದಲ್ಲಿ ತಯಾರಾಗಿ 300 ಕೋಟಿ ಗಳಿಸುವತ್ತ ಸಾಗುತ್ತಿದೆ.

* ನವಾಜುದ್ದೀನ್ ಸಿದ್ದಿಕಿ ನಟನೆಯ ಅಫ್ವಾ ಚಿತ್ರ ಸಹ ಈ ವರ್ಷದ ಅತಿದೊಡ್ಡ ಬಾಲಿವುಡ್ ಫ್ಲಾಪ್‌ಗಳಲ್ಲಿ ಒಂದು. 20 ಕೋಟಿ ವೆಚ್ಚದಲ್ಲಿ ತಯಾರಾದ ಈ ಚಿತ್ರ ಕೇವಲ 30 ಲಕ್ಷ ಗಳಿಸಿತು.

* ವಿಕ್ಕಿ ಕೌಶಾಲ್ ಹಾಗೂ ಸಾರಾ ಅಲಿ ಖಾನ್ ನಟನೆಯ 'ಝರ ಹಟ್ಕೆ ಝರ ಬಚ್ಕೆ' ಚಿತ್ರ 40 ಕೋಟಿ ವೆಚ್ಚದಲ್ಲಿ ತಯಾರಾಗಿ 75 ಕೋಟಿ ಗಳಿಸಿ ಸೂಪರ್ ಹಿಟ್ ಎನಿಸಿಕೊಂಡಿದೆ.

More from Filmibeat

English summary
Only 2 bollywood films have become all time blockbuster in 2023 till May . Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X