ಬಾಲಿವುಡ್ ನಲ್ಲಿ ಯಾರು ನನಗೆ ಅವಕಾಶ ನೀಡಿಲ್ಲ: ಸತ್ಯ ಬಹಿರಂಗ ಪಡಿಸಿದ ಆಸ್ಕರ್ ವಿಜೇತ

ಬಾಲಿವುಡ್ ನಲ್ಲಿ ಸ್ವಜನ ಪಕ್ಷಪಾತದ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಸುಶಾಂತ್ ಸಿಂಗ್ ನಿಧನದ ಬಳಿಕ ಬಾಲಿವುಡ್ ನ ಕರಾಳ ಮುಖ ಬಹಿರಂಗವಾಗಿದೆ. ಬಾಲಿವುಡ್ ನಲ್ಲಿ ನಡೆಯುತ್ತಿರುವ ಒಳರಾಜಕೀಯಿಂದ ಬಾಲಿವುಡ್ ತನ್ನ ಘನತೆಯನ್ನು ಕಳೆದುಕೊಂಡಿದೆ. ಚಿತ್ರರಂಗದಲ್ಲಿ ನೋವು, ಅವಮಾನ ಎದುರಿಸಿದ ಬಗ್ಗೆ ಈಗಾಗಲೆ ಅನೇಕರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಇನ್ನೂ ಕೆಲವರು ಬಾಲಿವುಡ್ ತೊರೆದಿದ್ದಾರೆ.

Recommended Video

KGF 2 : 29ಕ್ಕೆ ರಿಲೀಸ್ ಆಗಲಿದೆ KGF 2 ಭಯಂಕರ ಅಪ್ಡೇಟ್ | Yash | PrashanthNeel | Filmibeat Kannada

ಇದೀಗ ಖ್ಯಾತ ಸೌಂಡ್ ಡಿಸೈನರ್, ಆಸ್ಕರ್ ವಿಜೇತ ರೆಸೂಲ್ ಪೂಕುಟ್ಟಿ ಬಾಲಿವುಡ್ ನ ಗುಂಪು ರಾಜಕೀಯದ ಬಗ್ಗೆ ಬಹಿರಂಗಪಡಿಸಿದ್ದಾರೆ. ಇತ್ತೀಚಿಗೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರಹಮಾನ್ ತನ್ನ ವಿರುದ್ಧ ಒಂದು ಗ್ಯಾಂಗ್ ಕೆಲಸ ಮಾಡುತ್ತಿದೆ, ಆದ್ದರಿಂದ ಒಳ್ಳೆಯ ಸಿನಿಮಾಗಳು ಕೈತಪ್ಪುತ್ತಿದೆ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೆ ರೆಸೂಲ್ ಪೂಕುಟ್ಟಿ ಬಾಲಿವುಡ್ ನಲ್ಲಾದ ಅವಮಾನದ ಬಗ್ಗೆ ಬಹಿರಂಗಪಡಿಸಿದ್ದಾರೆ. ಮುಂದೆ ಓದಿ...

ರೆಸೂಲ್ ಪೂಕುಟ್ಟಿ ಬೇಸರ

ರೆಸೂಲ್ ಪೂಕುಟ್ಟಿ ಬೇಸರ

ಈಗ ರೆಸುಲ್ ಪೂಕುಟ್ಟಿ ಸಹ ಬಾಲಿವುಡ್ ನಲ್ಲಿ ನಡೆಯುತ್ತಿರುವ ರಾಜಕೀಯ ಪಿತೂರಿಗಳ ಬಗ್ಗೆ ಮಾತನಾಡಿದ್ದಾರೆ. "ಹಿಂದಿ ಸಿನಿಮಾರಂಗದಲ್ಲಿ ಯಾರು ನನಗೆ ಕೆಲಸ ನೀಡಿದ ಕಾರಣ ನಾನು ಕುಸಿದುಹೋಗಿದ್ದೇನೆ. ಆಸ್ಕರ್ ಪ್ರಶಸ್ತಿ ಪಡೆದ ನಂತರ ಪ್ರಾದೇಶಿಕ ಸಿನಿಮಾಗಳು ನನ್ನನ್ನು ಬಿಗಿಯಾಗಿ ಹಿಡಿದುಕೊಂಡವು. ನೀವು ನಮಗೆ ಅಗತ್ಯವಿಲ್ಲ ಎಂದು ಅನೇಕ ಪ್ರೊಡಕ್ಷನ್ ಸಂಸ್ಥೆಗಳು ಮುಖಕ್ಕೆ ಹೊಡೆದ ಹಾಗೆ ಹೇಳಿದವು. ಆದರೂ ನಾನು ಸಿನಿಮಾರಂಗವನ್ನು ಪ್ರೀತಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.

ಯಾರನ್ನು ದೂಷಿಸಲು ಇಷ್ಟಪಡುವುದಿಲ್ಲ

ಯಾರನ್ನು ದೂಷಿಸಲು ಇಷ್ಟಪಡುವುದಿಲ್ಲ

'ಅಪ್ರಸಿದ್ದ ಆಸ್ಕರ್ ಶಾಪ'ವನ್ನು ಎದುರಿಸುತ್ತಿದ್ದ ಪರಿಣಾಮ ನನ್ನನ್ನು ತಿರಸ್ಕರಿಸಿದ ಬಗ್ಗೆ ಯಾರನ್ನು ದೂಷಿಸಲು ಬಯಸುವುದಿಲ್ಲ. ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದವರು ತಮ್ಮ ವೃತ್ತಿ ಜೀವನದಲ್ಲಿ ಒಂದು ಸ್ಲೈಡ್ ಅನ್ನು ನೊಡುತ್ತಾರೆ. ಎಂದು ಹೇಳಿದ್ದಾರೆ. ಇಡೀ ನೆಪೋಟಿಸಂ ಚರ್ಚೆ ನಡೆಯುತ್ತಿರುವ ದಿಕ್ಕನ್ನು ನಾನು ಇಷ್ಟಪಡುವುದಿಲ್ಲ. ಹಾಗಾಗಿ ಶಾಂತಿಯಿಂದ ಇದ್ದೀನಿ. ಅವರ ಚಿತ್ರಗಳಲ್ಲಿ ನನ್ನನ್ನು ಕರೆದೊಯ್ಯದ ಕಾರಣ ನಾನು ಯಾರನ್ನು ದೂಷಿಸುವುದಿಲ್ಲ." ಎಂದು ರೆಸೂಲ್ ಪೂಕುಟ್ಟಿ ಬರೆದುಕೊಂಡಿದ್ದಾರೆ.

'ಸ್ಲಮ್ ಡಾಗ್ ಮಿಲಿಯನೇರ್' ಗೆ ಸೌಂಡ್ ಡಿಸೈನ್

'ಸ್ಲಮ್ ಡಾಗ್ ಮಿಲಿಯನೇರ್' ಗೆ ಸೌಂಡ್ ಡಿಸೈನ್

ರಸೂಲ್ ಪೂಕುಟ್ಟಿ 2008ರಲ್ಲಿ ಬಂದ ಸ್ಲಮ್ ಡಾಗ್ ಮಿಲಿಯನೇರ್ ಚಿತ್ರಕ್ಕೆ ರೆಸೂಲ್ ಸೌಂಡ್ ಡಿಸೈನಿಂಗ್ ಮಾಡಿದ್ದಾರೆ. ಎ. ಆರ್ ರಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸ್ಲಮ್ ಡಾಗ್ ಮಿಲಿಯನೇರ್ ಆಸ್ಕರ್ ಪ್ರಶಸ್ತಿಯ 10 ವಿಭಾಗಗಳಲ್ಲಿ ಮಾನನಿರ್ದೇಶನಗೊಂಡಿತ್ತು. 8 ವಿಭಾಗದಲ್ಲಿ ಪ್ರಶಸ್ತಿ ಬಾಚಿಕೊಂಡಿದೆ.

ಕನ್ನಡ ಸಿನಿಮಾಗೂ ಕೆಲಸ ಮಾಡಿದ್ದಾರೆ ರೆಸೂಲ್

ಕನ್ನಡ ಸಿನಿಮಾಗೂ ಕೆಲಸ ಮಾಡಿದ್ದಾರೆ ರೆಸೂಲ್

ರಸುಲ್ ಪೂಕುಟ್ಟಿ ಹಿಂದಿ ಇಂಗ್ಲೀಷ್ ಮಾತ್ರವಲ್ಲದೆ ಮಲಯಾಳಂ ಮತ್ತು ತಮಿಳು ಸಿನಿಮಾದಲ್ಲಿಯೂ ಕೆಲಸ ಮಾಡಿದ್ದಾರೆ. ವಿಶೇಷ ಅಂದರೆ ಕನ್ನಡದ ಒಂದು ಸಿನಿಮಾದಲ್ಲಿಯೂ ಕೆಲಸ ಮಾಡಿದ್ದಾರೆ. ಕನ್ನಡ ನಿರುತ್ತರ ಸಿನಿಮಾದಲ್ಲಿ ರೆಸೂಲ್ ಪೂಕುಟ್ಟಿ ಕೆಲಸ ಮಾಡಿದ್ದಾರೆ.

More from Filmibeat

English summary
Oscar winner famous sound designers Resul Pookutty says nobody was giving work in Bollywood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X