ಆಸ್ಕರ್‌ ರೇಸ್‌ನಲ್ಲಿರುವ 'ಲಾಪತಾ ಲೇಡೀಸ್​' ಟೈಟಲ್ ಬದಲಾವಣೆ; ಕಾರಣವೇನು?

ಆಮೀರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ನಿರ್ದೇಶನದ 'ಲಾಪತಾ ಲೇಡೀಸ್​' ಹಿಟ್ ಆಗಿದ್ದು ಗೊತ್ತೇಯಿದೆ. ಇದೇ ವರ್ಷ ಮಾರ್ಚ್‌ 1ರಂದು ಈ ಕಾಮಿಡಿ ಡ್ರಾಮಾ ಸಿನಿಮಾ ತೆರೆಗೆ ಬಂದಿತ್ತು. ಚಿತ್ರದ ಮುಖ್ಯಭೂಮಿಕೆಯಲ್ಲಿ ಸ್ಪರ್ಶ್​ ಶ್ರೀವಾಸ್ತವ್, ನಿತಾಂಶಿ ಗೋಯಲ್​, ಪ್ರತಿಭಾ ರಂಟಾ, ರವಿ ಕಿಶನ್ ಬಣ್ಣ ಹಚ್ಚಿದ್ದರು. ಈ ಬಾರಿ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಭಾರತದಿಂದ ಅಧಿಕೃತವಾಗಿ ಈ ಸಿನಿಮಾ ಆಯ್ಕೆ ಆಗಿದೆ.

ಮುಂದಿನ ವರ್ಷ ಮಾರ್ಚ್‌ನಲ್ಲಿ 97ನೇ ಅಕಾಡೆಮಿ(ಆಸ್ಕರ್ 2025) ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದೆ. ಹಾಗಾಗಿ 'ಲಾಪತಾ ಲೇಡೀಸ್​' ಸಿನಿಮಾ ಆಸ್ಕರ್ ಪ್ರಮೋಷನ್‌ಗೆ ಚಿತ್ರತಂಡ ಮುಂದಾಗಿದೆ. ಇದೇ ಕಾರಣಕ್ಕೆ ಚಿತ್ರದ ಟೈಟಲ್ ಅನ್ನು ಕೂಡ ಕೊಂಚ ಬದಲಿಸಲಾಗುತ್ತಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡಿದೆ.

oscars 2025 Why Kiran Rao s Laapataa Ladies title changed as Lost Ladies

'ಲಾಪತಾ ಲೇಡೀಸ್​' ಎನ್ನುವ ಚಿತ್ರದ ಹೆಸರನ್ನು 'ಲಾಸ್ಟ್ ಲೇಡೀಸ್' ಎಂದು ಬದಲಿಸಲಾಗಿದೆ. ಚಿತ್ರದ ಆಸ್ಕರ್ ಕ್ಯಾಂಪೇನ್‌ಗಾಗಿ ಹೀಗೆ ಟೈಟಲ್ ಬದಲಿಸಲಾಗಿದೆ. ಲಾಪತಾ ಎನ್ನುವುದು ಹಿಂದಿ ಪದ. ವಿದೇಶಗಳಲ್ಲಿ ಸಿನಿಮಾ ಪ್ರಚಾರಕ್ಕೆ ಇಂಗ್ಲೀಷ್ ಟೈಟಲ್ ಇದ್ದರೆ ಚೆನ್ನಾಗಿರುತ್ತದೆ ಎಂದು ಚಿತ್ರತಂಡ ಈ ನಿರ್ಧಾರಕ್ಕೆ ಬಂದಿದೆ. ಈಗಾಗಲೇ 'ಲಾಸ್ಟ್ ಲೇಡೀಸ್' ಚಿತ್ರ ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. 'ಆಸ್ಕರ್' ಗೌರವ ಕೂಡ ಸಿಗುತ್ತಾ ಕಾದು ನೋಡಬೇಕಿದೆ.

ಸುಪ್ರೀಂ ಕೋರ್ಟ್ 75ನೇ ಆವಿರ್ಭಾವ ಸಮಯದಲ್ಲಿ ಕೋರ್ಟ್ ಅಡ್ಮಿನಿಸ್ಟ್ರೇಟ್ ವೇದಿಕೆಗಳಲ್ಲಿ ಕೂಡ 'ಲಾಪತಾ ಲೇಡೀಸ್​' ಸಿನಿಮಾ ಪ್ರದರ್ಶನವಾಗಿತ್ತು. ನಮ್ಮ ಸಮಾಜದಲ್ಲಿ ಸಂಪ್ರದಾಯ ಹಾಗೂ ಕಟ್ಟುಪಾಡುಗಳ ಹೆಸರಿನಲ್ಲಿ ಮಹಿಳಾ ಸ್ವಾತಂತ್ರ್ಯ ಹಾಗೂ ಆಶಯಗಳನ್ನು ಹತ್ತಿಕ್ಕುವ ಪ್ರವೃತ್ತಿ ಇದೆ. ಅದೇ ವಿಚಾರದ ಬಗ್ಗೆ 'ಲಾಪತಾ ಲೇಡೀಸ್​' ಚರ್ಚಿಸಲಾಗಿದೆ. ಹಾಸ್ಯದ ಲೇಪನದೊಂದಿಗೆ ಒಂದು ಗಂಭೀರ ವಿಚಾರದ ಬಗ್ಗೆ ಚರ್ಚೆ ಮಾಡಲಾಗಿದೆ.

ಮದುವೆ ಬಳಿಕ ಹೆಣ್ಣುಮಕ್ಕಳು ಗಂಡನ ಮನೆಯಲ್ಲಿ ಸೇವೆ ಮಾಡಿಕೊಂಡಿರಬೇಕು, ಅವರ ವೈಯಕ್ತಿಕ ಇಷ್ಟ ಕಷ್ಟಗಳ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುವುದಿಲ್ಲ ಎನ್ನುವ ಅಂಶದ ಬಗ್ಗೆ ನಿರ್ದೇಶಕಿ ಕಿರಣ್‌ ರಾವ್ ಚಿತ್ರದಲ್ಲಿ ಹೇಳಿದ್ದಾರೆ. 2001 ಇಸವಿಯಲ್ಲಿ ಚಿತ್ರದ ಕಥೆ ಆರಂಭವಾಗುತ್ತದೆ. ಹೊಸದಾಗಿ ಮದುವೆಯಾದ ನವ ವಧು-ವರರು ಒಟ್ಟೊಟ್ಟಿಗೆ ರೈಲಿನಲ್ಲಿ ಪ್ರಯಾಣಿಸುತ್ತಿರುತ್ತಾರೆ. ಆದರೆ ಆಕಸ್ಮಿಕವಾಗಿ ಇಬ್ಬರು ವಧು ಅದಲು ಬದಲು ಆಗಿಬಿಡುತ್ತಾರೆ. ಮುಂದೇನು? ಎನ್ನುವುದು ಸಿನಿಮಾ ಕಥೆ.

ಈ ಬಾರಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಳ್ಳಲು ಭಾರತ ಸಾಕಷ್ಟು ಚಿತ್ರಗಳು ಪ್ರಯತ್ನಿಸಿದ್ದವು. ಅಂತಿಮವಾಗಿ 'ಲಾಪತಾ ಲೇಡೀಸ್​' ಆಯ್ಕೆ ಆಗಿತ್ತು. ಒಂದೂವರೆ ತಿಂಗಳ ಹಿಂದೆ ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಈ ವಿಚಾರವನ್ನು ಹಂಚಿಕೊಂಡಿತ್ತು. ಒಟ್ಟು 12 ಚಿತ್ರಗಳು ಈ ರೇಸ್‌ನಲ್ಲಿದ್ದವು.
4 ಮಲಯಾಳಂ, 12 ಹಿಂದಿ ಚಿತ್ರಗಳು, 6 ತಮಿಳು ಚಿತ್ರಗಳನ್ನು ಹಿಂದಿಕ್ಕಿ 'ಲಾಪತಾ ಲೇಡೀಸ್​' ಆ ಅವಕಾಶ ಗಿಟ್ಟಿಸಿಕೊಂಡಿದೆ.

'ಜೋರಾಮ್', 'ಮೈದಾನ್', 'ಆರ್ಟಿಕಲ್ 370', 'ಆಟಂ', 'ಅನಿಮಲ್‌', 'ಕಿಲ್, ಕಲ್ಕಿ 2898 AD' ಈ ಬಾರಿ ಭಾರತದಿಂದ ಅತ್ಯುತ್ತಮ ವಿದೇಶಿ ಸಿನಿಮಾ ವಿಭಾಗದಲ್ಲಿ ಆಸ್ಕರ್‌ ಸ್ಪರ್ಧಿಗೆ ಹೋಗಲು ಪ್ರಯತ್ನಿಸಿದ್ದ ಚಿತ್ರಗಳು. ಎಫ್‌ಎಫ್‌ಐ ಸದಸ್ಯರು ಎಲ್ಲಾ ಸಿನಿಮಾಗಳನ್ನು ವೀಕ್ಷಿಸಿ ಕೊನೆಗೆ 'ಲಾಪತಾ ಲೇಡೀಸ್​' ಚಿತ್ರವನ್ನು ಆಯ್ಕೆ ಮಾಡಿದ್ದಾರೆ.

More from Filmibeat

English summary
Laapataa Ladies Renamed as Lost Ladies For 97th Academy Awards campaign
Read more about: oscar award bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X