ಲೆಜೆಂಡ್ ಗಾಯಕಿಗೆ ಬಯೋಪಿಕ್ ಮಾಡುವ ಆಸೆ: ರೆಹಮಾನ್ ಬಿಚ್ಚಿಟ್ಟ ವಿಷಯ
ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಚೊಚ್ಚಲ ಬಾರಿಗೆ ಕಥೆ ರಚಿಸಿದ '99 ಸಾಂಗ್ಸ್' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ಸ್ವತಃ ರೆಹಮಾನ್ ನಿರ್ಮಿಸಿದರು. ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ 99 ಸಾಂಗ್ಸ್ ಮೂಡಿಬಂದಿತ್ತು.
ಈ ಚಿತ್ರವನ್ನು ವೀಕ್ಷಿಸಿದ ಲೆಜೆಂಡ್ ಗಾಯಕಿ ಪಿ ಸುಶೀಲಾ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕುರಿತು ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಎಆರ್ ರೆಹಮಾನ್ ''ಸುಶೀಲಾ ಅಮ್ಮನವರು '99 Song' ನೋಡಿ ಮೆಚ್ಚಿಕೊಂಡರು, ನನ್ನದು ಈ ರೀತಿ ಸಿನಿಮಾ ಮಾಡಲು ಸಹಾಯ ಮಾಡು'' ಎಂದು ಕೇಳಿದರು ಎಂಬ ವಿಚಾರ ಬಹಿರಂಗಪಡಿಸಿದರು. ನಿರ್ದೇಶಕ ವಿಶ್ವೇಷ ಕೃಷ್ಣಮೂರ್ತಿ ಜೊತೆಗಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಎಆರ್ ರೆಹಮಾನ್ ಈ ವಿಚಾರವನ್ನು ತಿಳಿಸಿದರು. ಮುಂದೆ ಓದಿ....

ದೂರವಾಣಿಯಲ್ಲಿ ಮಾತನಾಡಿದ ರೆಹಮಾನ್
ಪಿ ಸುಶೀಲಾ ಜೊತೆ ಎಆರ್ ರೆಹಮಾನ್ ದೂರವಾಣಿ ಮೂಲಕ ಮಾತನಾಡಿದ್ದು, ತಮ್ಮ 99 ಸಾಂಗ್ಸ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರಂತೆ. ಬಳಿಕ, 'ನನ್ನದು ಈ ರೀತಿ ಬಯೋಪಿಕ್ ಮಾಡಲು ಸಹಾಯ ಮಾಡು' ಎಂದು ಕೇಳಿದರಂತೆ. ಈ ವಿಷಯ ಕೇಳಿ ರೆಹಮಾನ್ ಥ್ರಿಲ್ ಆಗಿದ್ದಾರೆ.

ದಿಗ್ಗಜ ಗಾಯಕಿಯ ಬಯೋಪಿಕ್?
ಸಂಗೀತ ಲೋಕ ಕಂಡ ಅದ್ಭುತ ಗಾಯಕಿ ಸುಶೀಲಾ ಅವರು ತಮ್ಮದೇ ಜೀವನವನ್ನು ತೆರೆಮೇಲೆ ನೋಡುವ ಆಸೆ ವ್ಯಕ್ತಪಡಿಸಿದ್ದಾರೆ. ಸುಶೀಲಾರ ಬಯೋಪಿಕ್ ಮಾಡಬೇಕು ಎಂದುಕೊಂಡಿದ್ದವರಿಗೆ ಇದು ಬಹಳ ಖುಷಿಯ ಸಮಾಚಾರ. ಬಹುಶಃ ಶೀಘ್ರದಲ್ಲೇ ಸುಶೀಲಾ ಅವರ ಕಥೆ ಬೆಳ್ಳಿತೆರೆ ಮೇಲೆ ಬಂದರೂ ಅಚ್ಚರಿ ಇಲ್ಲ.

ಪಿ ಸುಶೀಲಾರ ಬಗ್ಗೆ.....
ಆರು ದಶಕಗಳಿಗೂ ಹೆಚ್ಚು ಕಾಲ ಪಿ.ಸುಶೀಲಾ ಸಂಗೀತ ಕ್ಷೇತ್ರದಲ್ಲಿದ್ದಾರೆ. ಮೂಲತಃ ಆಂಧ್ರಪ್ರದೇಶ ಆಗಿದ್ದರೂ ತಮಿಳು, ಕನ್ನಡ, ಮಲಯಾಳ, ಹಿಂದಿ, ಬೆಂಗಾಳಿ ಸೇರಿದಂತೆ ಭಾರತೀಯ ಪ್ರಮುಖ ಭಾಷೆಗಳಲ್ಲಿ ಹಾಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಹಾಗೂ ಹಲವು ರಾಜ್ಯ ಪ್ರಶಸ್ತಿ ಸಹ ಲಭಿಸಿದೆ. 50 ಸಾವಿರಕ್ಕೂ ಅಧಿಕ ಹಾಡು ಹಾಡಿದ್ದಾರೆ. ಗಿನ್ನಿಸ್ ದಾಖಲೆ, ಏಷ್ಯಾ ಬುಕ್ ದಾಖಲೆ ಸಹ ಇವರ ಹೆಸರಿನಲ್ಲಿದೆ. ಕನ್ನಡವೊಂದರಲ್ಲಿ 5 ಸಾವಿರ ಚಲನಚಿತ್ರಗೀತೆಗಳಿಗೆ ಕಂಠ ನೀಡಿದ್ದಾರೆ ಎಂದು ವರದಿಯಾಗಿದೆ.
Recommended Video

99 ಸಾಂಗ್ಸ್ ಕುರಿತು
99 ಸಾಂಗ್ಸ್ ಚಿತ್ರಕ್ಕೆ ರೆಹಮಾನ್ ಕಥೆ ಬರೆದಿದ್ದಾರೆ. ವಿಶ್ವೇಷ ಕೃಷ್ಣಮೂರ್ತಿ ಚಿತ್ರಕಥೆ ರಚಿಸಿ ನಿರ್ದೇಶಿಸಿದ್ದಾರೆ. ವಿಶೇಷ ಅಂದ್ರೆ ರೆಹಮಾನ್ ಸ್ವತಃ ಈ ಚಿತ್ರ ನಿರ್ಮಾಣ ಮಾಡಿದರು. ಸಂಗೀತ ಜೀವನದಲ್ಲಿ ಹೇಗೆ ಮುಖ್ಯ ಮತ್ತು ಒಂದು ಹಾಡು ಗಾಯಕನ ಜೀವನವನ್ನು ಹೇಗೆ ಬದಲಿಸುತ್ತದೆ ಎಂದು ಸಿನಿಮಾದಲ್ಲಿ ತೋರಿಸಲಾಗಿದೆ. ಇಹಾನ್ ಭಟ್ ಮತ್ತು ಇಡಿಲ್ಸಾ ವರ್ಗಿಸ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











