For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನ 4 ಮಂದಿಗೆ ಒಲಿದ ಪ್ರತಿಷ್ಠಿತ ಪದ್ಮ ಪ್ರಶಸ್ತಿ: ಸಂತಸ ಹಂಚಿಕೊಂಡ ಸ್ಟಾರ್ಸ್

  |

  2020ನೇ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಅನೌನ್ಸ್ ಆಗಿದ್ದು ಬಾಲಿವುಡ್ ನ 4 ಮಂದಿಗೆ ಪದ್ಮ ಪ್ರಶಸ್ತಿ ಒಲಿದಿದೆ. ಖ್ಯಾತ ನಟಿ ಕಂಗನಾ ರಣಾವತ್, ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್, ನಿರ್ಮಾಪಕಿ ಏಕ್ತ ಕಪೂರ್ ಮತ್ತು ಗಾಯಕ ಅದ್ನಾನ್ ಸಮಿ ಈ ಬಾರಿಯ ಪದ್ಮ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

  ಪದ್ಮ ಶ್ರೀ ಪ್ರಶಸ್ತಿಗೆ ಪಡೆದ ನಟಿ ಕಂಗನಾ ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. "ನಾನು ಭಾರತ ಸರ್ಕಾರಕ್ಕೆ, ಅಭಿಮಾನಿಗಳಿಗೆ ಮತ್ತು ಸ್ನೇಹಿತರಿಗೆ ಕೃತಜ್ಞನಾಗಿದ್ದೀನೆ. ಪದ್ಮ ಶ್ರೀ ಪ್ರಶಸ್ತಿಗೆ ನನ್ನ ಆಯ್ಕೆ ಮಾಡಿದ ಭಾರತ ಸರ್ಕಾರಕ್ಕೆ ಧನ್ಯವಾದ ಹೇಳುತ್ತಾನೆ. ಈ ಪ್ರಶಸ್ತಿಯನ್ನು ನಾನು ಕನಸು ಕಾಣುವ ಧೈರ್ಯವಂತ ಪ್ರತಿಯೊಬ್ಬ ಮಹಿಳೆಯರಿಗೆ, ಪ್ರತಿಯೊಬ್ಬ ಮಗಳು, ತಾಯಿ ಮತ್ತು ದೇಶದ ಭವಿಷ್ಯವನ್ನು ರೂಪಿಸುವ ಮಹಿಳೆಯರಿಗೆ ಅರ್ಪಿಸುತ್ತೇನೆ" ಎಂದು ಹೇಳಿದ್ದಾರೆ.

  2020ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪ್ರಕಟ: ಇಲ್ಲಿದೆ ಪಟ್ಟಿ

  ಇನ್ನು ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಿರ್ದೇಶಕ ಕರಣ್ ಜೊಹರ್ "ಏನು ಹೇಳಬೇಕೆಂದು ತೋಚುತ್ತಿಲ್ಲ. ಯಾಕಂದರೆ ಇದು ಅಂತಹ ಒಂದು ಸಂದರ್ಭವಾಗಿದೆ. ಪದ್ಮ ಶ್ರೀ..ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದನ್ನು ಪಡೆದ ಗೌರವ. ಇದೀಗ ನನ್ನ ಮನ ಅನೇಕ ಭಾವನೆಗಳಿಂದ ತುಂಬಿದೆ. ವಿನಮ್ರ, ಉಲ್ಲಾಸ ಮತ್ತು ಪ್ರತಿದಿನ ನನ್ನ ಕನಸನ್ನು ಬದುಕಲು, ರಚಿಸಲು ಮತ್ತು ಮನರಂಜನೆಗಾಗಿ ಬದುವ ಅವಕಾಶಕ್ಕಾಗಿ ಧನ್ಯವಾದಗಳು. ನನ್ನ ತಂದೆ ಹೆಮ್ಮೆ ಪಡುತ್ತಾರೆ ಎಂದು ನನಗೆ ತಿಳಿದಿದೆ ಮತ್ತು ಈ ಕ್ಷಣವನ್ನು ನನ್ನೊಂದಿಗೆ ಹಂಚಿಕೊಳ್ಳಲು ಅವರು ಇಲ್ಲಿದ್ದಾರೆ ಎಂದು ನಾನು ಭಾವಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.

  ನಿರ್ಮಾಪಕಿ ಏಕ್ತ ಕಪೂರ್ ಕೂಡ ಈ ಬಗ್ಗೆ ಸಂತಸ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪತ್ರ ಬರೆದಿದ್ದಾರೆ. ಗಾಯಕ ಅದ್ನಾನ್ ಸಮಿ ಕೂಡ ಧನ್ಯವಾದ ತಿಳಿಸಿದ್ದಾರೆ. 2020ನೇ ಸಾಲಿನ ಪದ್ಮ ಪ್ರಶಸ್ತಿ ಒಟ್ಟು 141 ಮಂದಿಗೆ ಒಲಿದಿದೆ.

  English summary
  2020 Padma Shri for Actress Kangana Ranaut, Karan Johar, Ekta Kapoor and Adnan Sami.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X