2 ದಿನದಲ್ಲಿ 'ಪ್ಯಾಡ್ ಮ್ಯಾನ್' ಮಾಡಿದ ಕಲೆಕ್ಷನ್ ಎಷ್ಟು?
ಅಕ್ಷಯ್ ಕುಮಾರ್ ಅವರ 'ಪ್ಯಾಡ್ ಮ್ಯಾನ್' ಸಿನಿಮಾ ಕಳೆದ ಶುಕ್ರವಾರ ರಿಲೀಸ್ ಆಗಿದೆ. ಸಿನಿಮಾಗೆ ಪಾಸಿಟಿವ್ ಆದ ರೆಸ್ಪಾನ್ಸ್ ಸಿಕ್ಕಿದ್ದು, ಚಿತ್ರ ಕಲೆಕ್ಷನ್ ಕೂಡ ಹೆಚ್ಚಾಗುತ್ತಿದೆ.
ಮೊದಲ ದಿನ ಅಂದರೆ ಶುಕ್ರವಾರ 10.26 ಕೋಟಿ ಗಳಿಸಿದ 'ಪ್ಯಾಡ್ ಮ್ಯಾನ್' ಸಿನಿಮಾ ಶನಿವಾರ 13.68 ಕಲೆಕ್ಷನ್ ಮಾಡಿದೆ. ಇಂದು ಭಾನುವಾರ ಆಗಿರುವ ಕಾರಣ ಚಿತ್ರದ ಕಲೆಕ್ಷನ್ ಮತ್ತಷ್ಟು ಜಾಸ್ತಿ ಆಗುವ ಸಾಧ್ಯತೆ ಇದೆ. ಸದ್ಯ ಚಿತ್ರದ ಖಾತೆಗೆ 23.94 ಕೋಟಿ ಸೇರಿದೆ. ಕಲೆಕ್ಷನ್ ಮಾತ್ರವಲ್ಲದೆ ಸಿನಿಮಾಗೆ ಎಲ್ಲರಿಂದ ಒಳ್ಳೆಯ ಮಾತುಗಳು ಕೇಳಿ ಬರುತ್ತಿದೆ. ಮೊದಲು ಸಿನಿಮಾದ ಬಿಡುಗಡೆ ಜನವರಿ 25ಕ್ಕೆ ಇತ್ತು. ಆದರೆ 'ಪದ್ಮಾವತ್' ಚಿತ್ರಕ್ಕಾಗಿ 'ಪ್ಯಾಡ್ ಮ್ಯಾನ್' ಸಿನಿಮಾ ಮುಂದಕ್ಕೆ ಹೋಗಿತ್ತು.

ಹೆಣ್ಣು ಮಕ್ಕಳ ನೈಸರ್ಗಿಕ ಪ್ರಕ್ರಿಯೆಯ ಬಗ್ಗೆ ಸಿನಿಮಾದ ಕಥೆ ಇದೆ. ಸಿನಿಮಾ ಕಥೆಯನ್ನು ಅಚ್ಚುಕಟ್ಟಾಗಿ ನಿರ್ದೇಶಕ ಬಾಲ್ಕಿ ಹೇಳಿದ್ದಾರೆ. ಅಕ್ಷಯ್ ಕುಮಾರ್ ಎಂದಿನಂತೆ ತಮ್ಮ ನಟನೆಯಲ್ಲಿ ಗಮನ ಸೆಳೆಯುತ್ತಾರೆ. ಟಿ ರಾಧಿಕಾ ಆಪ್ಟೆ ಅಭಿನಯ ತುಂಬಾ ಚೆನ್ನಾಗಿದೆ. ಸೋನಂ ಕಪೂರ್ ಪಾತ್ರ ಕೂಡ ಚೆನ್ನಾಗಿ ಮೂಡಿ ಬಂದಿದ್ದು ಇಬ್ಬರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಯಾವುದೇ ವೈಭವಿಕರಣವಿಲ್ಲದೆ ನ್ಯಾಚುರಲ್ ಆಗಿ ಸಿನಿಮಾ ಮೂಡಿ ಬಂದಿದೆ.


Click it and Unblock the Notifications











