twitter
    For Quick Alerts
    ALLOW NOTIFICATIONS  
    For Daily Alerts

    ಮೋದಿ ರಾಜ್ಯದಲ್ಲಿ 'ಪದ್ಮಾವತ್' ಸಿನಿಮಾ ನಿಷೇಧ

    By Bharath Kumar
    |

    ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತಿ' ಸಿನಿಮಾ 'ಪದ್ಮಾವತ್' ಎಂದು ಟೈಟಲ್ ಬದಲಾಯಿಸಿ ಜನವರಿ 25 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಆದ್ರೆ, ಒಂದೊಂದು ರಾಜ್ಯದಲ್ಲಿ ಸಿನಿಮಾವನ್ನ ಬ್ಯಾನ್ ಮಾಡಲಾಗುತ್ತಿದೆ.

    ಈಗಾಗಲೇ ರಾಜಸ್ತಾನದಲ್ಲಿ 'ಪದ್ಮಾವ'ತ್ ಚಿತ್ರವನ್ನ ಬ್ಯಾನ್ ಮಾಡಲಾಗಿದೆ. ಇದೀಗ, ಪ್ರಧಾನಿ ಮೋದಿ ಅವರ ತವರು ರಾಜ್ಯ ಗುಜರಾತ್ ನಲ್ಲಿ ಪದ್ಮಾವತ್ ಸಿನಿಮಾವನ್ನ ನಿಷೇಧ ಮಾಡಲಾಗಿದೆ. ದೀಪಿಕಾ ಪಡುಕೋಣೆ ಚಿತ್ರವನ್ನ ಬ್ಯಾನ್ ಮಾಡಲಾಗಿದೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅಧಿಕೃತವಾಗಿ ತಿಳಿಸಿದ್ದಾರೆ. ಮಧ್ಯಪ್ರದೇಶದಲ್ಲೂ ಪದ್ಮಾವತ್ ಚಿತ್ರವನ್ನ ಬ್ಯಾನ್ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘೋಷಣೆ ಮಾಡಿದ್ದಾರೆ.

    'ಪದ್ಮಾವತ್' ಬಿಡುಗಡೆಗೆ ಸೆನ್ಸಾರ್ ಒಪ್ಪಿದ್ರು, ಸರ್ಕಾರ ಒಪ್ಪುತ್ತಿಲ್ಲ'ಪದ್ಮಾವತ್' ಬಿಡುಗಡೆಗೆ ಸೆನ್ಸಾರ್ ಒಪ್ಪಿದ್ರು, ಸರ್ಕಾರ ಒಪ್ಪುತ್ತಿಲ್ಲ

    padmavat movie banned in Gujarat

    ಇನ್ನು ಗೋವಾದಲ್ಲಿ ಚಿತ್ರವನ್ನ ಬಿಡುಗಡೆ ಮಾಡಲು ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಸಮ್ಮತಿ ಸೂಚಿಸಿದ್ದಾರೆ. 'ಪದ್ಮಾವತ್' ಗೆ ಸೆನ್ಸಾರ್ ಮಂಡಳಿ ಪ್ರಮಾಣಪತ್ರ ನೀಡಿದ್ದರೆ ರಾಜ್ಯದಲ್ಲಿ ಚಿತ್ರ ಪ್ರದರ್ಶನಕ್ಕೆ ನಮ್ಯ ಅಭ್ಯಂತರ ಇಲ್ಲ ಎಂದು ಗೋವಾ ಮುಖ್ಯಮಂತ್ರಿ ಹೇಳಿದ್ದಾರೆ.

    ಕರ್ನಾಟಕದಲ್ಲಿ 'ಪದ್ಮಾವತ್' ಸಿನಿಮಾಗೆ ಯಾವುದೇ ಆತಂಕವಿಲ್ಲ. ಚಿತ್ರದ ಬಿಡುಗಡೆಗೆ ಸರ್ಕಾರದ ವಿರೋಧವಿಲ್ಲ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದ್ರೆ, ಜನವರಿ 25 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿರುವ ಹಿನ್ನೆಲೆ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೂ ಸಿನಿಮಾ ಪ್ರದರ್ಶನ ಸ್ಥಗಿತಗೊಳ್ಳಲಿದೆ.

    'ಪದ್ಮಾವತಿ' ಚಿತ್ರದ ವಿವಾದ ಏನಿದು? ವಿರೋಧ ಯಾಕೆ?'ಪದ್ಮಾವತಿ' ಚಿತ್ರದ ವಿವಾದ ಏನಿದು? ವಿರೋಧ ಯಾಕೆ?

    padmavat movie banned in Gujarat

    'ರಾಣಿ ಪದ್ಮಾವತಿ' ಬಗ್ಗೆ ಅವಹೇಳನ ಮಾಡಲಾಗಿದೆ ಎಂದು ದೇಶದಾದ್ಯಂತ ರಜಪೂತ್ ಕರಣಿ ಸೇನೆ ಕಾರ್ಯಕರ್ತರು ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದರು. ಸೆನ್ಸಾರ್ ಮಂಡಳಿ ಬದಲಾವಣೆಗಳೊಂದಿಗೆ ಚಿತ್ರದ ಬಿಡುಗಡೆ ಅನುಮತಿ ನೀಡಿದ್ದರು, ಈಗ ಕೆಲ ರಾಜ್ಯಗಳಲ್ಲಿ ವಿರೋಧ ವ್ಯಕ್ತವಾಗಿದೆ. ಅದರಲ್ಲೂ, ಬಿಜೆಪಿ ಸರ್ಕಾರವಿರುವ ಬಹುತೇಕ ರಾಜ್ಯಗಳಲ್ಲಿ 'ಪದ್ಮಾವತ್' ಸಿನಿಮಾ ಬಿಡುಗಡೆಯಾಗುವುದು ಅನುಮಾನವೆನ್ನಲಾಗುತ್ತಿದೆ.

    English summary
    More trouble for Padmavat, movie banned in Gujarat. Gujarat CM vijay rupani said that the padmaavat will not be released in the state.
    Friday, January 12, 2018, 15:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X