»   » 'ಲಂಡನ್'ನಲ್ಲೂ ಎದುರಾಯ್ತು 'ಪದ್ಮಾವತಿ' ಬಿಡುಗಡೆಗೆ ವಿಘ್ನ

'ಲಂಡನ್'ನಲ್ಲೂ ಎದುರಾಯ್ತು 'ಪದ್ಮಾವತಿ' ಬಿಡುಗಡೆಗೆ ವಿಘ್ನ

Posted By:
Subscribe to Filmibeat Kannada

ಭಾರತದಲ್ಲಿ 'ಪದ್ಮಾವತಿ' ಸಿನಿಮಾ ಬಿಡುಗಡೆಯಾಗುವುದು ಸದ್ಯಕ್ಕೆ ಕಷ್ಟ. ಆದ್ರೆ, ಲಂಡನ್ ನಲ್ಲಿ 'ಪದ್ಮಾವತಿ' ರಿಲೀಸ್ ಆಗಲಿದೆ ಎನ್ನಲಾಗಿತ್ತು. ಆದ್ರೀಗ, ಬ್ರಿಟನ್ ನಲ್ಲೂ ದೀಪಿಕಾ ಸಿನಿಮಾಗೆ ಸಂಕಷ್ಟ ಎದುರಾಗಿದೆ.

ಹೌದು, ಇತ್ತೀಚೆಗಷ್ಟೇ ಲಂಡನ್ ಸೆನ್ಸಾರ್ ಮಂಡಳಿಯಲ್ಲಿ ಸೆನ್ಸಾರ್ ಮುಗಿಸಿದ್ದ 'ಪದ್ಮಾವತಿ' ಯಾವುದೇ ಕಟ್ ಗಳಿಲ್ಲದೇ ಸಿನಿಮಾ ಬಿಡುಗಡೆಯಾಗಲು ಅನುಮತಿ ಪಡೆದುಕೊಂಡಿತ್ತು. ಹೀಗಾಗಿ, ನಿರೀಕ್ಷೆಯಂತೆ ಡಿಸೆಂಬರ್ 1 ರಂದು ತೆರೆ ಮೇಲೆ ಬರಬೇಕಿತ್ತು. ಇದೀಗ, ಅಲ್ಲಿಯೂ ರಿಲೀಸ್ ಆಗಲ್ಲ ಎಂದು ಚಿತ್ರತಂಡ ತಿಳಿಸಿದೆ.

Padmavati Cleared By UK Censor But Won't Release

ಭಾರತದಲ್ಲಿ ಈ ಸಿನಿಮಾ ಕುರಿತಾದ ವಿವಾದ ತಣ್ಣಗಾಗುವವರೆಗೆ ಬ್ರಿಟನ್‌ನಲ್ಲೂ ಈ ಸಿನಿಮಾ ಬಿಡುಗಡೆಯಾಗುವುದು ಬೇಡ ಎಂದು ಸಿನಿಮಾದ ನಿರ್ಮಾಪಕರು ನಿರ್ಧರಿಸಿದ್ದಾರಂತೆ.

ಭಾರತದಲ್ಲಿ 'ಪದ್ಮಾವತಿ' ಸಿನಿಮಾ ಯಾವಾಗ ಬಿಡುಗಡೆಯಾಗಲಿದೆ ಎಂಬ ಗೊಂದಲ ಸದ್ಯಕ್ಕೆ ಹಾಗೆಯೇ ಮುಂದುವರಿದಿದೆ. ಸೋ, ಪದ್ಮಾವತಿ ಚಿತ್ರವನ್ನ ನೋಡಲು ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳಿಗಂತೂ ದೊಡ್ಡ ನಿರಾಸೆ ಎದುರಾಗಿದೆ.

English summary
Padmavati was cleared for release in UK on December 1 but the filmmakers have no plan to release the film in UK before it opens in India. ಲಂಡನ್ ನಲ್ಲಿ ಸೆನ್ಸಾರ್ ಮಂಡಳಿಯಲ್ಲಿ ಪಾಸ್ ಆಗಿರುವ 'ಪದ್ಮಾವತಿ' ಸಿನಿಮಾ ಅಲ್ಲಿ ಬಿಡುಗಡೆಯಾಗುವುದಿಲ್ಲ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada