ಅಜಯ್ ದೇವಗನ್ ನೂರನೇ ಸಿನಿಮಾದಲ್ಲಿ ಅರುಂಧತಿ ನಾಗ್ ಸಹೋದರಿ

ನಟ ಶಂಕರ್ ನಾಗ್ ಪತ್ನಿ ಅರುಂಧತಿ ನಾಗ್ ಈಗಾಗಲೇ ಸಾಕಷ್ಟು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಸಹೋದರಿ ಪದ್ಮಾವತಿ ರಾವ್ ಕೂಡ ಬಾಲಿವುಡ್ ಜೊತೆಗೆ ನಂಟು ಹೊಂದಿದ್ದಾರೆ. ಇದೀಗ ಹೊಸ ಸಿನಿಮಾವೊಂದಲ್ಲಿ ಅವರು ನಟಿಸುತ್ತಿದ್ದಾರೆ.

ಅಮಿತಾಭ್ ಬಚ್ಚನ್ ರೊಂದಿಗೆ Te3N (ತೀನ್) ಸಿನಿಮಾದಲ್ಲಿ ನಟಿಸಿದ ಪದ್ಮಾವತಿ ರಾವ್ ಮತ್ತೆ ಹಿಂದಿ ಸಿನಿಮಾ ಮಾಡುತ್ತಿದ್ದಾರೆ. ಅಜಯ್ ದೇವಗನ್ ನೂರನೇ ಸಿನಿಮಾದ ಮುಖ್ಯ ಪಾತ್ರವೊಂದರಲ್ಲಿ ಪದ್ಮಾವತಿ ರಾವ್ ಕಾಣಸಿಕೊಳ್ಳುತ್ತಿದ್ದಾರೆ.

'ತಾನಾಜಿ' ಅಜಯ್ ದೇವಗನ್ ನೂರನೇ ಸಿನಿಮಾ. ಈ ಸಿನಿಮಾದ ಟೈಟಲ್ ಇತ್ತೀಚಿಗಷ್ಟೆ ಲಾಂಚ್ ಆಗಿತ್ತು. ಇಂದು ಸಿನಿಮಾದ ಕೆಲವು ಪಾತ್ರಗಳ ಪೋಸ್ಟರ್ ಬಿಡುಗಡೆಯಾಗಿದೆ. ಪದ್ಮಾವತಿ ರಾವ್ ಪಾತ್ರದ ಪೋಸ್ಟರ್ ಕೂಡ ಹೊರ ಬಂದಿದ್ದು, ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿವೆ.

Padmavati Rao Playing Jijabai Role In Tanhaji Movie

ಶಿವಾಜಿ ಮಹಾರಾಜನ ತಾಯಿ ಜೀಜಾಬಾಯಿ ಪಾತ್ರದಲ್ಲಿ ಪದ್ಮಾವತಿ ರಾವ್ ನಟಿಸುತ್ತಿದ್ದಾರೆ. ಈ ಸಿನಿಮಾ 17 ನೇ ಶತಮಾನದ ಕಥೆ ಹೊಂದಿದೆ. ಛತ್ರಪತಿ ಶಿವಾಜಿಯ ಆಸ್ಥಾನದ ವೀರ ಸೇನಾನಿ ತಾನಾಜಿ ಮಾಲುಸಾರೆ ಜೀವನಾಧಾರಿತ ಕಥೆಯಾಗಿದೆ. ಈ ಪಾತ್ರವನ್ನು ಅಜಯ್ ದೇವಗನ್ ನಿರ್ವಹಿಸಿದ್ದಾರೆ. ಅವರ ಪತ್ನಿ ನಟಿ ಕಾಜಲ್ ಸಿನಿಮಾದ ಒಂದು ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಅದ್ದೂರಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ತ್ರೀಡಿ ವರ್ಷನ್ ಸಿನಿಮಾ ಸಿನಿಮಾ ತೆರೆಗೆ ಬರುತ್ತಿದೆ. ಜನವರಿ 10, 2020 ರಂದು ಸಿನಿಮಾ ಬಿಡುಗಡೆ ಆಗುತ್ತಿದೆ.

More from Filmibeat

English summary
Actress Padmavati Rao playing 'Jijabai' role in 'Tanhaji' hindi movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X