»   » 'ಪದ್ಮಾವತಿ' ವಿವಾದಕ್ಕೆ ಬಾಂಬೆ ಹೈ-ಕೋರ್ಟ್ ಛೀಮಾರಿ

'ಪದ್ಮಾವತಿ' ವಿವಾದಕ್ಕೆ ಬಾಂಬೆ ಹೈ-ಕೋರ್ಟ್ ಛೀಮಾರಿ

Posted By:
Subscribe to Filmibeat Kannada

ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷೆಯ ಸಿನಿಮಾ 'ಪದ್ಮಾವತಿ' ಚಿತ್ರದ ವಿವಾದ ಸದ್ಯಕ್ಕೆ ತಣ್ಣಗಾಗಿದೆ. ಆದ್ರೆ, ಬಿಡುಗಡೆಯ ಭಾಗ್ಯ ಮಾತ್ರ ಇನ್ನು ಸಿಕ್ಕಿಲ್ಲ. ಹೀಗಿರುವಾಗ, ಬಾಂಬೆ ಹೈ ಕೋರ್ಟ್ 'ಪದ್ಮಾವತಿ' ಪ್ರಕರಣವನ್ನ ವಿಚಾರಣೆ ನಡೆಸಿದ್ದು, ಪ್ರತಿಭಟನೆಕಾರರಿಗೆ ಛೀಮಾರಿ ಹಾಕಿದೆ.

''ಯಾರಾದರೂ ಒಂದು ಚಿತ್ರವನ್ನು ಮಾಡಿದರೆ ಅದನ್ನು ಬಿಡುಗಡೆ ಮಾಡಬಾರದು ಎಂದು ಒಂದಷ್ಟು ಸಂಘಗಳು ಪ್ರತಿಭಟನೆ ನಡೆಸುತ್ತವೆ. ಚಿತ್ರದಲ್ಲಿ ನಟಿಸಿರುವವರನ್ನು, ನಿರ್ದೇಶನ ಮಾಡಿದವರ ತಲೆ ಕಡಿದರೆ ಇಂತಿಷ್ಟು ನಗದು ಬಹುಮಾನ ನೀಡುತ್ತೇವೆ ಎಂದು ಕೆಲವರು ಘೋಷಣೆ ಮಾಡುತ್ತಾರೆ. ಇನ್ನು ರಾಜ್ಯ ಸರಕಾರಗಳು ಕೂಡ ಚಿತ್ರ ಬಿಡುಗಡೆಗೆ ನಿಷೇಧ ಹೇರುತ್ತಿವೆ, ಎತ್ತ ಸಾಗಿದೆ ನಮ್ಮದೇಶ ಎಂದು ನ್ಯಾಯಮೂರ್ತಿ ಎಸ್‌.ಸಿ. ಧರ್ಮಾಧಿಕಾರಿ, ಭಾರತಿ ದಾಂಗ್ರೆ ನೇತೃತ್ವದ ನ್ಯಾಯಪೀಠ ಆಕ್ಷೇಪ ವ್ಯಕ್ತಪಡಿಸಿದೆ.

Padmavati to release on February 9

ಇನ್ನು 'ಪದ್ಮಾವತಿ' ಚಿತ್ರದ ವಿವಾದಕ್ಕೆ ಸಂಬಂಧಿಸಿದಂತೆ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್‌ 21ಕ್ಕೆ ಮುಂದೂಡಲಾಗಿದೆ. ಮತ್ತೊಂದೆಡೆ 'ಪದ್ಮಾವತಿ' ಸಿನಿಮಾದ ಬಿಡುಗಡೆ ದಿನಾಂಕದ ಬಗ್ಗೆ ಹೊಸ ಸುದ್ದಿ ಹೊರಬಿದ್ದಿದ್ದು, ಫೆಬ್ರವರಿ 9 ರಂದು ತೆರೆಕಾಣಲಿದೆ ಎನ್ನಲಾಗುತ್ತಿದೆ.

English summary
The Bombay high court on Thursday asked where the country was headed while alluding to "open threats" made to stall the release of the film Padmavati.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada