For Quick Alerts
  ALLOW NOTIFICATIONS  
  For Daily Alerts

  ಹಾಟ್ ತಾರೆ ವೀಣಾ ಮಲಿಕ್ ಗೆ 26 ವರ್ಷ ಜೈಲು

  By Rajendra
  |

  ಪಾಕಿಸ್ತಾನ ಮೂಲದ ಬಾಲಿವುಡ್ ತಾರೆ ವೀಣಾ ಮಲಿಕ್ ಹಾಗೂ ಆಕೆಯ ಪತಿ ಅಸದ್ ಬಷೀರ್ ಅವರಿಗೆ 26 ವರ್ಷಗಳ ಜೈಲು ಶಿಕ್ಷೆಯನ್ನು ಪಾಕಿಸ್ತಾನದ ಆಂಟಿ ಟೆರರಿಸಮ್ ಕೋರ್ಟ್ ಜಾರಿ ಮಾಡಿದೆ. ಇದಿಷ್ಟೇ ಅಲ್ಲದೆ ಇವರಿಬ್ಬರೊಂದಿಗೆ ಟಿವಿ ಮುಖ್ಯಸ್ಥ, ನಿರೂಪಕರಿಗೂ ಇದೇ ಶಿಕ್ಷೆ ನೀಡಲಾಗಿದೆ.

  ದೈವನಿಂದನೆಯಿಂದ ಕೂಡಿದ ಕಾರ್ಯಕ್ರಮ ಮಾಡಿದ ಕಾರಣಕ್ಕೆ ಇವರಿಗೆಲ್ಲಾ ಶಿಕ್ಷೆ ನೀಡಲಾಗಿದೆ. ಕಾರಾಗಾರ ಶಿಕ್ಷೆಯ ಜೊತೆಗೆ ರು.13 ಲಕ್ಷಗಳ ದಂಡ ಕಟ್ಟಲೂ ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ. ವೀಣಾ ಮಲಿಕ್ ಹಾಗೂ ಅಸದ್ ಅವರು ಜಿಯೋ ಟಿವಿ ಆಹ್ವಾನದ ಮೇರೆಗೆ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ['ಸಿಲ್ಕ್' ಖ್ಯಾತಿಯ ವೀಣಾ ಮಲಿಕ್ ಗೆ ಗಂಡು ಮಗು]

  ಈ ಸಂದರ್ಭದಲ್ಲಿ ಬ್ಯಾಕ್ ಗ್ರೌಂಡ್ ನಲ್ಲಿ ಒಂದು ಹಾಡನ್ನು ಹಾಕಲಾಗಿತ್ತು. ಆ ಹಾಡಿಗೆ ವೀಣಾ ಹಾಗೂ ಅಸದ್ ಅವರು ಡಾನ್ಸ್ ಸಹ ಮಾಡಿದರು. ಈ ಹಾಡು ಇಸ್ಲಾಂ ಧರ್ಮಕ್ಕೆ ಸೇರಿದ ಪವಿತ್ರವಾದ ಹಾಡಾಗಿತ್ತು. ಮಹಮದ್ ಕುಟುಂಬ ಸದಸ್ಯರನ್ನು ಅವಮಾನಿಸಲಾಯಿತು ಎಂದು ಆರೋಪಿಸಿದ ಕೆಲವರು ಇವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು.

  ಬಳಿಕ ಈ ಕಾರ್ಯಕ್ರಮವನ್ನು ಪ್ರಸಾರ ಮಾಡಿದ ಪಾಕ್ ಮೀಡಿಯಾ ಗ್ರೂಪ್ ಜಿಯೋ ಟಿವಿ ಮುಖ್ಯಸ್ಥ ಮೀರ್ ಷಕೀಲ್ ಉರ್ ರೆಹ್ಮಾನ್, ನಟಿ ವೀಣಾ ಮಲಿಕ್, ಆಕೆಯ ಪತಿ ಬಷೀರ್, ಟಿವಿ ನಿರೂಪಕ ಷಯಿ ಷ್ಟಾ ವಾಹಿದ್ ಅವರಿಗೆ 26 ವರ್ಷಗಳ ಜೈಲು ಶಿಕ್ಷೆಯನ್ನು ಜಾರಿ ಮಾಡುತ್ತಾ ಆಂಟಿ ಟೆರರಿಜಮ್ ನ್ಯಾಯಾಲಯ ತೀರ್ಪು ನೀಡಿದೆ.

  ಕನ್ನಡದ 'ಸಿಲ್ಕ್ ಸಖತ್ ಹಾಟ್' ಚಿತ್ರದಲ್ಲಿ ವೀಣಾ ಮಲಿಕ್ ಅಭಿನಯಿಸಿದ್ದಾರೆ. ಅದಾದ ಬಳಿಕ ಅವರು ಕನ್ನಡ ಚಿತ್ರರಂಗಕ್ಕೆ ಮತ್ತೆ ಮರಳಲೇ ಇಲ್ಲ. ವೀಣಾ ಮಲಿಕ್ ಅಭಿನಯದ ಸಿಲ್ಕ್ ಸಖತ್ ಹಾಟ್ ಚಿತ್ರ ಶತದಿನೋತ್ಸವ ಆಚರಿಸಿಕೊಂಡಿತ್ತು. ಈ ಚಿತ್ರದಲ್ಲಿ ಅವರದು ವೇಶ್ಯೆಯ ಪಾತ್ರ ಪೋಷಿಸಿದ್ದಾರೆ.

  ಬೆಂಗಳೂರಿನ ಕೈಲಾಶ್ ಚಿತ್ರಮಂದಿರದಲ್ಲಿ ನೂರು ದಿನಗಳನ್ನು ಪೂರೈಸಿತ್ತು ಸಿಲ್ಕ್ ಸಖತ್ ಹಾಟ್. ಒಂದಷ್ಟು ಮನರಂಜನೆ, ಇನ್ನೊಂದಿಷ್ಟು ಮನಕಲುಕುವ ಸನ್ನಿವೇಶಗಳನ್ನು ಬೆರೆಸಿ ನಿರ್ದೇಶಕ ತ್ರಿಶೂಲ್ ಅವರು ಚಿತ್ರವನ್ನು ತೆರೆಗೆ ತಂದಿದ್ದರು. ಆರ್ ವಿ ವೆಂಕಟಪ್ಪ ಚಿತ್ರಕ್ಕೆ ಭರ್ಜರಿ ಖರ್ಚು ಮಾಡಿ ತಮ್ಮ ಪುತ್ರ ಅಕ್ಷಯ್ ಅವರನ್ನು ಹೀರೋ ಮಾಡಿದ್ದರು. (ಏಜೆನ್ಸೀಸ್)

  English summary
  An anti-terrorism court in Pakistan on Tuesday sentenced 26-year jail term to the owner of Pakistan's biggest media group, Geo TV along with actor Veena Malik and her husband for allegedly airing a blasphemous programme.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X