JNU ವಿದ್ಯಾರ್ಥಿಗಳಿಗೆ ದೀಪಿಕಾ ಬೆಂಬಲ: ಶ್ಲಾಘಿಸಿ ಟ್ವೀಟ್ ಡಿಲಿಟ್ ಮಾಡಿದ ಪಾಕ್ ಆರ್ಮಿ ವಕ್ತಾರ
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ದೆಹಲಿ ಜೆ ಎನ್ ಯುಗೆ (ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ) ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದಾರೆ. ಮಂಗಳವಾರ ರಾತ್ರಿ 7.30ರ ಸಮಯಕ್ಕೆ ಜೆ ಎನ್ ಯು ಕ್ಯಾಂಪಸ್ ಒಳಗೆ ಪ್ರವೇಶಿಸಿದ ನಟಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿದಂತೆ ಅನೇಕರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ದೀಪಿಕಾ ಪಡುಕೋಣೆ ಭಾಷಣ ಮಾಡಿಲ್ಲ. ಘಟನೆ ಕುರಿತು ಏನೂ ಮಾತನಾಡಿಲ್ಲ. 15 ನಿಮಿಷ ಅಲ್ಲೇ ಇದ್ದ ದೀಪಿಕಾ ಇಬ್ಬರು ವಿದ್ಯಾರ್ಥಿಗಳು ಮಾತನಾಡಿದ ಬಳಿಕ ಅಲ್ಲಿಂದ ತೆರಳಿದರು. ದೀಪಿಕಾ JNUನಲ್ಲಿ ಕಾಣಿಸಿಕೊಳ್ಳುತ್ತದ್ದಂತೆ ಸಾಕಷ್ಟು ಚರ್ಚೆ ಪ್ರಾರಂಭವಾಗಿದೆ.
ಅನೇಕರು ದೀಪಿಕಾ ಧೈರ್ಯ ಮೆಚ್ಚಬೇಕೆಂದು ಪ್ರಶಂಸಿಸುತ್ತಿದ್ದಾರೆ. ಜೊತೆಗೆ ದೀಪಿಕಾ ಸಿಕ್ಕಾಪಟ್ಟೆ ಟ್ರೋಲ್ ಗೂ ಗುರಿಯಾಗಿದ್ದಾರೆ. ಸಿನಿಮಾಗಳಲ್ಲಿ ಸದಾ ಬ್ಯುಸಿಯಾಗಿರುತ್ತಿದ್ದ ದೀಪಿಕಾ ಮೊದಲ ಬಾರಿಗೆ ಪ್ರತಿಭಟನೆಯಲ್ಲಿ ಭಾಗಿಯಾಗಿ ಅನೇಕರಿಗೆ ಅಚ್ಚರಿ ಮೂಡಿಸಿದೆ.

ಇದರ ನಡುವೆ ಈಗ ಪಾಕಿಸ್ತಾನ ಸೇನೆಯ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ದೀಪಿಕಾ ಪ್ರಶಂಸಿಸಿ ಟ್ವೀಟ್ ಮಾಡಿ ನಂತರ ದಿಢೀರ್ ಡಿಲಿಟ್ ಮಾಡಿದ್ದಾರೆ. ಆಸಿಫ್ ಡಿಲಿಟ್ ಮಾಡುವುದರೊಳಗೆ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸ್ಕ್ರೀನ್ ಶಾಟ್ ಎಲ್ಲಾ ಕಡೆ ಹರಿದಾಡುತ್ತಿದೆ.
ಅಂದ್ಹಾಗೆ ಆಸಿಫ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದು ಹೀಗೆ. "ದೀಪಿಕಾ ಪಡುಕೋಣೆ ಸತ್ಯ ಮತ್ತು ಯುವಜನತೆಯ ಪರ ನಿಂತಿದ್ದಾರೆ. ಈ ಮೂಲಕ ನೀವು ಧೈರ್ಯ ಶಾಲಿ ವ್ಯಕ್ತಿ ಎಂದು ಸಾಬೀತುಪಡಿಸಿದ್ದೀರಿ. ಎಲ್ಲದಕ್ಕಿಂತ ಹೆಚ್ಚಾಗಿ ಮಾನವೀಯತೆ ಮುಖ್ಯ" ಎಂದು ಹೇಳಿದ್ದಾರೆ.

ಈ ಟ್ವೀಟ್ ಮಾಡಿ ಕೆಲವೆ ಕ್ಷಣದಲ್ಲಿ ಡಿಲಿಟ್ ಮಾಡಿದ್ದಾರೆ. ಈ ಸ್ಕ್ರೀನ್ ಶಾಟ್ ಈಗ ಟ್ರೋಲ್ ಆಗುತ್ತಿದೆ. ಅಲ್ಲದೆ ಟ್ವೀಟ್ ಮಾಡುವ ಬರದಲ್ಲಿ ದೀಪಿಕಾ ಹೆಸರನ್ನು ತಪ್ಪಾಗಿ ಬರೆದಿದ್ದಾರೆ. ಈ ವಿಚಾರವನ್ನು ಇಟ್ಟುಕೊಂಡು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಇತ್ತ ದೀಪಿಕಾ ಕೂಡ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಜೊತೆಗೆ ದೀಪಿಕಾ ಅಭಿನಯದ ಚಪಾಕ್ ಸಿನಿಮಾ ಬ್ಯಾನ್ ಮಾಡಿ ಎಂದು ಟ್ವಿಟ್ಟರ್ ನಲ್ಲಿ ಅಭಿಯಾನ ನಡೆಯುತ್ತಿದೆ.


Click it and Unblock the Notifications











